10 ವರ್ಷ ಪ್ರೇಯಸಿ ಯನ್ನು ಮನೆಯವರಿಗೆ ತಿಳಿಯದಂತೆ ಮನೆಯಲ್ಲೇ ಇಟ್ಟಿದ್ದ ಭೂಪ: ವಿಷಯ ಹೊರ ಬಂದ ಮೇಲೆ ಎಲ್ಲರಿಗೂ ಶಾಕ್

Written by Anand raj

Published on:

ಪ್ರೇಮ ಅನ್ನೋದು ಯೌವ್ವನದ ಹೊಸ್ತಿಲಿಗೆ ಅಡಿಯಿಟ್ಟ ಹುಡುಗ ಹುಡುಗಿಯರ ನಡುವೆ ಆಗೋದು ಸಾಮಾನ್ಯ. ಕೆಲವರದ್ದು ನಿಜವಾದ ಪ್ರೇಮ ಆದರೆ, ಇನ್ನೂ ಕೆಲವರದ್ದು ಕೈ ಕೈ ಹಿಡಿದು ಒಂದಷ್ಟು ದಿನ ಸುತ್ತಿ, ಒಬ್ಬರ ಮೇಲೆ ಇನ್ನೊಬ್ಬರಿಗೆ ಬೇಸರ ಆದ ಮೇಲೆ ದೂರಾಗೋ ಪ್ರೇಮ ಅನ್ನೋ ಹೆಸರಿನ ವಾಂಚೆ ಕೂಡಾ ಆಗಿರುತ್ತೆ. ಆದರೆ ಕೆಲವು ಪ್ರೇಮಿಗಳು ಮದುವೆ ವರೆಗೆ ಹೋಗೋದು ಉಂಟು. ಆಗ ತಂದೆ ತಾಯಿ ಒಪ್ಪದೇ ಹೋದರೆ ಓಡಿ ಹೋಗಿ ಮದುವೆ ಆಗ್ತಾರೆ. ಆದ್ರೆ ಕೇರಳದ ಪಾಲಕ್ಕಾಡ್ ನ ಆಯಲೂರ್ ನಲ್ಲಿ ನಡೆದಿರುವ ಘಟನೆ ಮಾತ್ರ ಇದೆಲ್ಲದಕ್ಕೂ ವಿಭಿನ್ನ ಹಾಗೂ ವಿಚಿತ್ರ ಮಾತ್ರವೇ ಅಲ್ಲದೇ ಶಾಕಿಂಗ್ ಕೂಡಾ ಆಗಿದೆ. ಈ ಪ್ರೇಮ ಕಥೆ ಸಿನಿಮಾ ಕಥೆಗಿಂತ ರೋಚಕವಾಗಿದೆ ಅಂದ್ರೆ ನಂಬಲೇಬೇಕು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.

2010 ಫೆಬ್ರವರಿ ತಿಂಗಳಲ್ಲಿ ಆಯಲೂರು ಹಳ್ಳಿಯ 18 ವರ್ಷದ ಸಜೀತಾ ರಿಲೇಟಿವ್ಸ್ ಮನೆಗೆ ಹೋಗಿ ಬರ್ತೀನಿ ಅಂತ ಮಳೆಯಿಂದ ಹೊರಟವಳು ಮರಳಿ ಬರಲೇ ಇಲ್ಲ‌. ಭ ಯ ಗೊಂಡು ಅವರ ಕುಟುಂಬದ ಸದಸ್ಯರು ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದರು. ಆದ್ರೆ ಪ್ರಯೋಜನ ಆಗಲೇ ಇಲ್ಲ. ಸಜೀತಾ ಸಿಗಲೇ ಇಲ್ಲ. ತಿಂಗಳು, ವರ್ಷಗಳೇ ಕಳೆದರೂ ಆಕೆ ಬರಲಿಲ್ಲ, ಆಗ ನಿಧಿ ಇಲ್ದೇ ಎಲ್ಲರೂ ಬಹುಶಃ ಅವಳು ಸತ್ತೇ ಹೋಗಿರ್ಬೇಕು ಅನ್ಕೊಂಡ್ರು. ಆದ್ರೆ ಅಲ್ಲಿ ನಡೆದಿದ್ದೆ ಬೇರೆ. ಮಗಳು ತಮ್ಮ ಮನೆ ಹತ್ರಾನೇ ಇದ್ರು ತಂದೆ ತಾಯಿಗಾಗಲೀ, ಸಜೀತಾ ಬಗ್ಗೆ ಗ್ರಾಮದ ಜನರಿಗಾಗಲೀ ಗೊತ್ತಾಗಲೇ ಇಲ್ಲ. ಅದು ಕೂಡಾ ಬರೋಬ್ಬರಿ ಹತ್ತು ವರ್ಷಗಳು.

ಹೌದು ಇದೇ ಗ್ರಾಮದ 24 ವರ್ಷದ ರೆಹಮಾನ್ ಆಕೆಯ ಗೆಳೆಯ. ಇಬ್ಬರು ಪ್ರೀತಿಸ್ತಾ ಇದ್ದರು. ಆದ್ರೆ ಅವರ ಪ್ರೀತಿ ವಿಷಯ ಯಾರಿಗೂ ಗೊತ್ತಿರಲಿಲ್ಲ. ಆ ದಿನ ಸಜೀತಾ ಮನೆಯಿಂದ ಹೊರ ಬಂದಾಗ ರೆಹಮಾನ್ ಆಕೆಯನ್ನು ಬಹಳ ರಹಸ್ಯವಾಗಿ ತನ್ನ ಮನೆಲಿ ತನ್ನ ಕೋಣೆಗೆ ಕರ್ಕೊಂಡು ಹೋಗಿ ಇಟ್ಟಿದ್ದಾನೆ. ಅಲ್ಲೇ ಆಕೆ ಹತ್ತು ವರ್ಷ ಕಳೆದಿದ್ದಾಳೆ. ಹೊರಗೆ ಹೋಗೋಕೆ ಎಲ್ಲರೂ ಮಲಗಿದ ಮೇಲೆ ಆ ಕೋಣೆಯ ಕಿಟಕಿಯಿಂದ ಇಬ್ಬರೂ ಹೊರಗೆ ಬರ್ತಾ ಇದ್ರಂತೆ. ಇನ್ನು ರೆಹಮಾನ್ ಎಲೆಕ್ಟ್ರಿಕ್ ವರ್ಕ್ ಕಲಿತಿದ್ದ ಕಾರಣ ಕೋಣೆಗೆ ಆಟೋಮ್ಯಾಟಿಕ್ ಲಾಕ್, ಮುಟ್ಟಿದ್ರೆ ಶಾಕ್ ಹೊಡೆಯೋ ಹಾಗೆ ಮಾಡಿ ಕೆಲಸಕ್ಕೆ ಹೋಗ್ತಾ ಇದ್ದ.

ಪ್ರತಿ ದಿನ ತನ್ನ ಕೋಣೇಲೇ ಊಟ, ತಿಂಡಿ ಎಲ್ಲಾ ಮಾಡೋಕೆ ಶುರು ಮಾಡಿದ‌. ಯಾರನ್ನೂ ಕೋಣೆ ಕಡೆ ಬಿಡ್ತಾ ಇರ್ಲಿಲ್ಲ. ಯಾರಾದ್ರೂ ಬರುವ ಪ್ರಯತ್ನ ಮಾಡಿದ್ರೆ ಹು ಚ್ಚ ನ ತರ ಆಡ್ತಿದ್ದ. ಅದು ನೋಡಿ ಮನೆಯವರು ಮಾನಸಿಕ ಸ್ಥಿತಿ ಸರಿಯಿಲ್ಲ ಅಂತ ಅವನ ಕೋಣೆ ಹತ್ರ ಯಾರೂ ಸುಳಿಯೋಕೆ ಹೋಗಲಿಲ್ಲ. ಹೀಗೆ ಹತ್ತು ವರ್ಷ ಕಳೆದ ಮೇಲೆ ಮೂರು ತಿಂಗಳ ಹಿಂದೆ ರೆಹಮಾನ್ ಮನೆಯಿಂದ ನಾಪತ್ತೆಯಾದ. ಎಲ್ಲಿ ಹೋದ ಅಂತ ಮನೆಯವರಿಗೂ ಗೊತ್ತಾಗಲಿಲ್ಲ. ಆದ್ರೆ ಒಂದು ವಾರದ ಹಿಂದೆ ಅವರ ಅಣ್ಣ ಟ್ರಕ್ ಚಾಲಕ ಬಶೀರ್ ಗೆ ರೆಹಮಾನ್ ಬೈಕಲ್ಲಿ ಹೋಗೋದು ಕಂಡು ಪೋಲಿಸರ ಸಹಾಯದಿಂದ ಅವನನ್ನು ಹಿಂಬಾಲಿಸಿ ಹಿಡಿದಿದ್ದಾರೆ.

ಆಗಲೇ ಹತ್ತು ವರ್ಷದ ಎಲ್ಲಾ ರಹಸ್ಯ ಬಾಯಿ ಬಿಟ್ಟಿದ್ದಾರೆ ರೆಹಮಾನ್. ಮೂರು ತಿಂಗಳ ಹಿಂದೆ ಸಜೀತಾ ಜೊತೆ ಮನೆಯಿಂದ ಹೊರಗೆ ಬಂದು ಮದುವೆ ಆಗಿ, ಮನೆ ಮಾಡಿರೋದಾಗಿ ಹೇಳಿದ್ದಾನೆ‌. ಆಕೆ ಹತ್ತು ವರ್ಷದಿಂದ ತನ್ನ ಕೋಣೆಯಲ್ಲೇ ಇದ್ಲು ಅನ್ನೋ ಅವನ ಮಾತು ಕೇಳಿ ಎಲ್ಲಾ ಶಾ ಕ್ ಆಗಿದ್ದಾರೆ. ಸತ್ತೇ ಹೋ ದ್ಲು ಅನ್ಕೊಂಡವಳು ಬದುಕಿರೋದು ಒಂದು ಶಾ ಕ್ ನೀಡಿದೆ. ಇನ್ನು ಸಜೀತಾ ತಾನು ಕೋಣೆಯಿಂದ ಹೊರಗೆ ಅಪ್ಪ ಅಮ್ಮ ಓಡಾಡೋದು ನೋಡ್ತಾ ಇದ್ದೆ ಆದರೆ ಮಾತಾಡಿಸ್ತಾ ಇರ್ಲಿಲ್ಲ. ಅವರಿಗೆ ನಾನಿರೋದು ಗೊತ್ತಾಗುತ್ತೆ ಅಂತ ಸುಮ್ಮನಿದ್ದೆ ಅಂತ ಹೇಳಿದ್ದಾರೆ. ಆಗ ದುಡ್ಡಿಲ್ಲದ ಕಾರಣ ಅಲ್ಲೇ ಇದ್ವಿ.. ಈಗ ಸ್ವಲ್ಪ ದುಡ್ಡು ಕೂಡಿಟ್ಟ ಮೇಲೆ ಹೊರಗೆ ಬಂದು ಜೀವನ ಮಾಡ್ತಾ ಇರೋದಾಗಿ ಹೇಳಿದ್ದಾರೆ.

ಒಟ್ಟಾರೆ ಇವರ ಈ ವಿಶಿಷ್ಟ ಪ್ರೇಮ ಕಥೆ ನಿಜಕ್ಕೂ ಒಂದು ಸಿನಿಮಾ ಬೇಕಾದ್ರೂ ಆಗಬಹುದೇನೋ ಎನ್ನುವಷ್ಟು ರೋಚಕ ವಾಗಿದೆ. ಒಂದು ಕ್ಷಣ ನಂಬೋಕೆ ಕಷ್ಟ ಆಗುತ್ತೆ. ಹತ್ತು ವರ್ಷ ಒಂದು ಕೋಣೇಲಿ ಸಜೀತಾ ಇಡೀ ಕುಟುಂಬಕ್ಕೆ ತಿಳಿಯದೇ ಇದ್ದಿದ್ದು ಆಕೆಯನ್ನು ಅಲ್ಲಿರಿಸಿ ರೆಹಮಾನ್ ಎಚ್ಚರಿಕೆ ವಹಿಸಿದ್ದು ಅಬ್ಬಾ!!! ಎಂತ ಸಾಹಸ ಇವರದ್ದು ಅನ್ಸುತ್ತೆ ಅಲ್ವಾ..ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.

Related Post

Leave a Comment