ಇಂಜಿನಿಯರಿಂಗ್ ಓದುತ್ತಿದ್ದ ರಘುವೀರ್ ಅವರ ತಂದೆ ಮುನಿಯಲ್ಲಪ್ಪ ದೊಡ್ಡ ಬಿಲ್ಡಿಂಗ್ ಕಾಂಟ್ರಾಕ್ಟರ್ ಆಗಿದ್ದ ಕಾರಣ ತಂದೆಯ ಹಾದಿಯಲ್ಲಿ ನಡೆಯಲು ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದರು.ಅಂಬರೀಶ್ ಅವರ ಮನೆ ಕಟ್ಟುವ ಕಾಂಟ್ರಾಕ್ಟ್ ರಘುವೀರ್ ಅವರ ತಂದೆಗೆ ಸಿಕ್ಕಿತ್ತು.ಆಗ ಪ್ರಾಕ್ಟಿಕಲ್ ಎಕ್ಸ್ ಪೀರ್ಯನ್ಸ್ ಪಡೆಯಲು ಅಲ್ಲಿಗೆ ಹೋಗುತ್ತಿದ್ದ ರಘುವೀರ್ ಗೆ ಅಂಬರೀಶ್ ಅವರ ಪರಿಚಯವಾಗಿ ಅವರ ಗತ್ತು ಮತ್ತು ಸ್ಟೈಲ್ ನೋಡಿ ನಾನು ಹೀರೋ ಆಗಬೇಕು ಎಂದುಕೊಂಡರು ರಘುವೀರ್.
ಕೊನೆಗೆ ಅದನ್ನು ತಂದೆಗೆ ಹೇಳಿದಾಗ ಅವರು ಒಪ್ಪಿದರು.ರಘುವೀರ್ ಬಗ್ಗೆ ಅತಿಯಾದ ಪ್ರೀತಿ ಬೆಳೆಸಿಕೊಂಡಿದ್ದ ಅವರ ತಂದೆ ಮಗ ಹೀರೋ ಆಗಲು ಆಸೆ ಪಡುತ್ತಿದ್ದಾನೆ ಎಂದು ಕೇಳಿ , ಮಗನನ್ನು ಚೆನ್ನೈಗೆ ಕಳುಹಿಸಿ ನಟನೆ , ಡ್ಯಾನ್ಸ್ ಎಲ್ಲಾ ಕಲಿಯುವಂತೆ ಹೇಳಿದರು.ನಂತರ ತಾವೆ ಅಜಯ್ ವಿಜಯ್ ಎನ್ನುವ ಚಿತ್ರಕ್ಕೆ 30 ಲಕ್ಷ ಬಂಡವಾಳ ಹಾಕಿದ ರಘುವೀರ್ ಅವರ ತಂದೆ ಮಗನನ್ನು ಹೀರೋ ಮಾಡಿದರು ಆದರೆ ಆ ಚಿತ್ರ ಅಷ್ಟೊಂದು ಸಕ್ಸಸ್ ಆಗಲಿಲ್ಲ ನಂತರ ಹುಟ್ಟಿದ್ದೇ ಚೈತ್ರದ ಪ್ರೇಮಾಂಜಲಿ.
ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಎಸ್ ನಾರಾಯಣ್ ಅವರಿಗೆ ಅವಕಾಶ ಕೊಟ್ಟ ರಘುವೀರ್ ಚೈತ್ರದ ಪ್ರೇಮಾಂಜಲಿ ಯಲ್ಲಿ ಫುಲ್ ಟೈಮ್ ಹೀರೊ ಆದರು.ಚಿತ್ರದ ಶೂಟಿಂಗ್ ಎಲ್ಲ ಮುಗಿದ ಮೇಲೆ ವಿತರಕರಿಗೆ ಸಿನಿಮಾ ತೋರಿಸಿದಾಗ ಎಲ್ಲರೂ ನಗಾಡಿದರು.ಈ ಚಿತ್ರದ ಮೈನಸ್ ಪಾಯಿಂಟ್ ರಘುವೀರ್ ಎಂದು ಹೇಳಿದರು.ಹಾಗೆ ಖರೀದಿ ಮಾಡಲು ಯಾವ ವಿತರಕರು ಕೂಡ ಮುಂದೆ ಬರಲಿಲ್ಲ.ಆಗ ಮುಂದೆ ಬಂದ ರಾಮು ಅವರು ಚೈತ್ರದ ಪ್ರೇಮಾಂಜಲಿ ರಿಲೀಸ್ ಮಾಡಿದರು.ಯಾರೂ ಊಹಿಸದ ರೀತಿಯಲ್ಲಿ ಚೈತ್ರದ ಪ್ರೇಮಾಂಜಲಿ ದೊಡ್ಡ ಹಿಟ್ ಆಯ್ತ.ರಘುವೀರ್ ಅವರನ್ನು ಅವಮಾನಿಸಿದವರೆ ಆತನ ಡೇಟ್ಸ್ ಗಾಗಿ ಮನೆ ಮುಂದೆ ಕ್ಯೂ ನಿಂತರೂ.
ಸಕ್ಸಸ್ ಕಂಡ ರಘುವೀರ್ ಶೃಂಗಾರ ಕಾವ್ಯ ಚಿತ್ರವನ್ನು ಕೈಗೆತ್ತಿಕೊಂಡರು.ಈ ಚಿತ್ರಕ್ಕೆ ಹೀರೋಯಿನ್ ಆಗಿ ಚೆನ್ನೈನಿಂದ ನಟಿ ಸಿಂಧು ಅವರು ಬಂದರೂ.ಶೃಂಗಾರ ಕಾವ್ಯ ಕೂಡ ಸೂಪರ್ ಹಿಟ್ ಆಯ್ತು ಹಾಗೆ ರಘುವೀರ್ ಮತ್ತು ಸಿಂಧು ಮಧ್ಯೆ ಪ್ರೇಮಾಂಕುರವಾಗಿ ಮದುವೆಯಾಗಲು ನಿರ್ಧರಿಸಿದ್ದರು ಆದರೆ ಈ ಮದುವೆ ರಘುವೀರ್ ಅವರ ತಂದೆಗೆ ಸುತಾರಾಂ ಇಷ್ಟ ಇರಲಿಲ್ಲ.ಕೊನೆಗೆ ತಂದೆಯ ಮಾತನ್ನೇ ಧಿಕ್ಕರಿಸಿ ನಟಿ ಸಿಂಧು ಅವರನ್ನು ಮದುವೆಯಾದರೂ ರಘುವೀರ್ .ಆಗ ತಂದೆ ಮತ್ತು ಮಗನ ಮಧ್ಯೆ ಮನಸ್ತಾಪ ಬಂದು ತಂದೆಯ ಮನೆ ಬಿಟ್ಟು ಹೊರಬಂದ ರಘುವೀರ್ ಮನೆಯವರ ಜೊತೆ ಮಾತನ್ನು ನಿಲ್ಲಿಸಿದರು .
ಆಗ ಗಾಂಧಿನಗರದಲ್ಲಿ ಗಾಳಿ ಸುದ್ದಿಗಳು ಸಕತ್ ಹರಿದಾಡಿತ್ತು.ರಘುವೀರ್ ಮನೆ ಬಿಟ್ಟಿದ್ದಾನೆ , ಅವನ ಹತ್ತಿರ ಒಂದು ನಯಾ ಪೈಸೆ ಇಲ್ಲ ತಂದೆ ಮನೆಯಿಂದ ಓಡಿಸಿದ್ದಾರೆ ಎಂದೆಲ್ಲ ಸುದ್ದಿ ಹರಿದಾಡಿತ್ತು.ಆನಂತರ ರಘುವೀರ್ ಗೆ ಯಾವ ಸಿನಿಮಾ ಅವಕಾಶ ಕೂಡ ಸಿಗಲಿಲ್ಲ.ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ರಘುವೀರ್ ಅವರನ್ನು ಕೇಳುವವರು ಯಾರು ಇಲ್ಲದಂತಾಯಿತು.ಆರ್ಥಿಕ ಸಂಕಷ್ಟದಲ್ಲಿದ್ದ ರಘುವೀರ್ ಗೆ 2003 ರಲ್ಲಿ ಮತ್ತೊಂದು ದೊಡ್ಡ ಆಘಾತ.ಸುನಾಮಿ ಸಂತ್ರಸ್ತರ ನೆರವಿಗೆ ಹೋದ ಪತ್ನಿ ಸಿಂಧು ಸುಂಟರ ಗಾಳಿಗೆ ಸಿಲುಕಿಕೊಂಡು ಮೂಗಿನೊಳಗೆ ಅತಿಯಾದ ಧೂಳು ಹೋಗಿದ್ದರಿಂದ 2003ರಲ್ಲಿ ಕೋಮಾಗೆ ಜಾರಿದ ಸಿಂಧು ನಂತರ ಮರಣ ಹೊಂದಿದರು.
ಅಲ್ಲಿಗೆ ಎಲ್ಲರನ್ನು ಕಳೆದುಕೊಂಡ ರಘುವೀರ್ ಮಾನಸಿಕ ಖಿನ್ನತೆಗೆ ಒಳಗಾಗಿ ಮುಂಬೈಗೆ ಹೋದರೂ.ಅಲ್ಲಿ ಬೀದಿ ಬೀದಿಗಳಲ್ಲಿ ರಘುವೀರ್ ತಿರುಗಾಡುತ್ತಿದ್ದಾರೆ ಎಂದು ತಿಳಿದ ಅವರ ತಂದೆ ಎಲ್ಲವನ್ನು ಮರೆತು ಮುಂಬೈಗೆ ಹೋಗಿ ಮಗನನ್ನು ಕರೆತಂದು ಮತ್ತೆ ಇನ್ನೊಂದು ಮದುವೆ ಮಾಡಿದರು.ಮತ್ತೆ ರಘುವೀರ್ ಹಲವಾರು ಚಿತ್ರಗಳಲ್ಲಿ ನಟಿಸಿದ್ದರಾದರೂ ಅವು ಬಿಡುಗಡೆಯಾಗಲಿಲ್ಲ.8 ಮೇ 2014 ರಂದು ಎದೆ ನೋವು ಕಾಣಿಸಿಕೊಂಡ ತಕ್ಷಣ ರಘುವೀರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು
ಆದರೆ ಅಷ್ಟೊತ್ತಿಗಾಗಲೇ ಚೈತ್ರದ ಪ್ರೇಮಾಂಜಲಿ ರಘುವೀರ್ ಇಹಲೋಕ ತ್ಯಜಿಸಿದ್ದರು.
ಹೀಗೆ ಪ್ರೀತಿ ಎನ್ನುವ ಪದ ರಘುವೀರ್ ಜೀವನದಲ್ಲಿ ಶಾಪವಾಗಿ ಪರಿಣಮಿಸಿತ್ತು.ಪ್ರೀತಿ ಜೀವನವನ್ನು ನಾಶ ಮಾಡುವಂತಿದ್ದರೆ ಅದನ್ನು ಪಡೆಯುವುದಕ್ಕಿಂತ ತ್ಯಾಗ ಮಾಡುವುದೇ ಉತ್ತಮ ಯಾಕಂದ್ರೆ ಪ್ರೀತಿಗಿಂತ ಜೀವನ ದೊಡ್ಡದು ಅಲ್ಲವೇ…
ಧನ್ಯವಾದಗಳು.