ಕನ್ನಡ ಕಿರುತೆರೆಯ ಲೋಕದಲ್ಲಿ ಮತ್ತೊಂದು ದಾಖಲೆ ಬರೆದ ಜೊತೆಜೊತೆಯಲಿ: ಯಾವ ಧಾರಾವಾಹಿಯೂ ಇಂತಾ ಸಾಧನೆ ಮಾಡಿಲ್ಲ‌

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸೀರಿಯಲ್ ಗಳು ಸಾಕಷ್ಟುವಸದ್ದು ಮಾಡುತ್ತಿವೆ. ಟಾಪ್ ಒನ್ ಸ್ಥಾನಕ್ಕಾಗಿ ಸ್ಪರ್ಧೆಯೊಂದು ನಡೆಯುತ್ತಿದೆ‌. ಧಾರಾವಾಹಿಗಳು ಜನರ ಮೆಚ್ಚುಗೆಯನ್ನು ಪಡೆದುಕೊಂಡಿವೆ. ಅದರಲ್ಲೂ ಕೆಲವು ಸೀರಿಯಲ್ ಗಳು ಕಿರುತೆರೆ ಪ್ರೇಕ್ಷಕರ ವಿಶೇಷ ಆದರ ಹಾಗೂ ಅಭಿಮಾನವನ್ನು ಪಡೆದುಕೊಂಡು ವರ್ಷಗಳಿಂದ ಯಶಸ್ಸಿನ ಉತ್ತುಂಗದಲ್ಲಿ ನಿಂತಿವೆ.

ಟಿ ಆರ್ ಪಿ ಗಳಿಕೆಯಲ್ಲಿಯೂ ಈ ದಾರವಾಹಿಗಳು ಅನ್ಯ ಧಾರಾವಾಹಿಗಳನ್ನು ಹಿಂದಕ್ಕೆ ಹಾಕುವ ಮೂಲಕ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿ ಸ್ಥಾನವನ್ನು ಪಡೆದುಕೊಂಡಿವೆ. ಆದರೆ ಒಂದೆರಡು ಧಾರಾವಾಹಿಗಳು ಕಿರುತೆರೆಯಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದಿವೆ. ಇಂತಹ ಅದ್ಭುತ ದಾಖಲೆಗಳ ಮೂಲಕ ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸ ಸಾಧನೆಯೊಂದನ್ನು ಮಾಡಿದ ಧಾರಾವಾಹಿ ಎಂದರೆ ಅದು ಜೀ ಕನ್ನಡ ವಾಹಿನಿಯಲ್ಲಿ ನಟ ಅನಿರುದ್ಧ್ ಅವರು ನಾಯಕನಾಗಿ ನಟಿಸುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ.

ಜೊತೆ ಜೊತೆಯಲಿ ಧಾರಾವಾಹಿ ಕನ್ನಡ ಕಿರುತೆರೆಗೆ ಎಂಟ್ರಿ ನೀಡಿದ ಅಲ್ಪಸಮಯದಲ್ಲೇ ಪ್ರೇಕ್ಷಕರ ಅಪಾರವಾದ ಆದರವನ್ನು ತನ್ನದಾಗಿಸಿಕೊಂಡಿತು. ಅಲ್ಲದೆ ಕಿರುತೆರೆಯಲ್ಲಿ ಹಿಂದೆಂದೂ ಕಾಣದಂತಹ ದೊಡ್ಡ ಮಟ್ಟದ ಯಶಸ್ಸನ್ನು ಕಂಡಂತಹ ಮೊದಲ ಸೀರಿಯಲ್ ಆಯಿತು.

ಟಿ ಆರ್ ಪಿ ಗಳಿಕೆಯಲ್ಲಿ ಹೊಚ್ಚ ಹೊಸ ದಾಖಲೆಯನ್ನೇ ಬರೆಯುತ್ತಾ, ಜೊತೆ ಜೊತೆಯಲಿ ಧಾರಾವಾಹಿ ನಾಡಿನ ಮನೆ ಮನೆಮಾತಾಯಿತು. ಹಿರಿಯರು, ಕಿರಿಯರು ಎಲ್ಲರೂ ಈ ದಾರಾವಾಹಿಯನ್ನು ಮೆಚ್ಚಿ ನೋಡಲು ಆರಂಭಿಸಿದರು. ಟಾಪ್ ಒನ್ ಧಾರವಾಹಿ ಯಾಗಿ ಯಶಸ್ಸನ್ನು ತನ್ನದಾಗಿಸಿಕೊಂಡು, ಜೊತೆ ಜೊತೆಯಲಿ ಜನರಿಗೆ ಮನರಂಜನೆಯನ್ನು ನೀಡುತ್ತಾ ಬರುತ್ತಿದೆ.

ಈಗಾಗಲೇ ಕಿರುತೆರೆ ಲೋಕದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿರುವ ಜೊತೆ ಜೊತೆಯಲಿ ಧಾರಾವಾಹಿ ಇದೀಗ ಮತ್ತೊಂದು ಹೊಸ ದಾಖಲೆಯನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದೇನೆ. ಇದು ಕೂಡಾ ಕನ್ನಡ ಕಿರುತೆರೆಯಲ್ಲಿ ಈ ಹಿಂದೆ ಯಾವ ಧಾರಾವಾಹಿಯೂ ಮಾಡಿರದಂತಹ ಹೊಸ ದಾಖಲೆ ಎನ್ನಲಾಗಿದೆ.

ಇನ್ನು ಈಗ ಜೊತೆ ಜೊತೆಯಲಿ ಬರೆದ ಹೊಸ ದಾಖಲೆ ಏನು ಎನ್ನುವುದಾದರೆ, ಅದು ಈ ಧಾರಾವಾಹಿಯ ಟೈಟಲ್ ಟ್ರಾಕ್. ಹೌದು ಜೀ ಕನ್ನಡ ವಾಹಿನಿಯು ಕಳೆದ ವರ್ಷ ತನ್ನ ಯೂಟ್ಯೂಬ್ ನಲ್ಲಿ ಜೊತೆ ಜೊತೆಯಲಿ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಅನ್ನು ಶೇರ್ ಮಾಡಿಕೊಂಡಿತ್ತು.

ವಾಹಿನಿಯು ಶೇರ್ ಮಾಡಿಕೊಂಡ ಟೈಟಲ್ ಟ್ರ್ಯಾಕ್ ಈವರೆಗೆ 25 ಮಿಲಿಯನ್ ಗಿಂತಲೂ ಅಧಿಕ ಜನರಿಂದ ವೀಕ್ಷಿಸಲ್ಪಟ್ಟಿದೆ. ಇಷ್ಟೊಂದು ಸಂಖ್ಯೆಯಲ್ಲಿ ಸೀರಿಯಲ್ ಒಂದರ ಟೈಟಲ್ ಟ್ರಾಕ್ ವೀಕ್ಷಣೆ ಆಗಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.

ಈ ಸಂಭ್ರಮದ ವಿಷಯವನ್ನು ನಟ ಅನಿರುದ್ಧ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಹಂಚಿಕೊಂಡು, ಅಭಿಮಾನಿಗಳಿಗೆ ಈ ಸಂತಸದ ವಿಚಾರವನ್ನು ತಿಳಿಸಿದ್ದಾರೆ. ಒಟ್ಟಾರೆ ಜೊತೆ ಜೊತೆಯಲ್ಲಿ ದಾರವಾಹಿ ಜನರ ಮನಸ್ಸನ್ನು ಗೆಲ್ಲುವ ಜೊತೆಗೆ ಕಿರುತೆರೆ ಲೋಕದಲ್ಲಿ ಹೊಸ ದಾಖಲೆಗಳನ್ನು ಬರೆಯುವಲ್ಲಿಯೂ ಮುಂದೆ ಇದೆ.

Leave A Reply

Your email address will not be published.