ಬುಗಾಟ್ಟಿ ಚಿರೋನ್ ಪುರ್ ಸ್ಪೋರ್ಟ್ ಕಾರು ಹಾಗು ಡಸಾಲ್ಟ್ ರಾಫೆಲ್ ಫೈಟರ್ ಜೆಟ್‌ನೊಂದಿಗೆ ಡ್ರ್ಯಾಗ್ ರೇಸ್ ಇತ್ತೀಚೆಗೆ ಫ್ರಾನ್ಸ್‌ನ ಡಸಾಲ್ಟ್‌ನ ಪ್ರಧಾನ ಕಚೇರಿಯಲ್ಲಿ ನಡೆದಿರುವ ವಿಡಿಯೋ ಮತ್ತು ಹಲವಾರು ಚಿತ್ರಗಳನ್ನು ಬುಗಾಟ್ಟಿ ಬಹಿರಂಗಪಡಿಸಿದ್ದಾರೆ.
ಡ್ರ್ಯಾಗ್ ರೇಸ್‌ನಲ್ಲಿ ಭಾಗಿಯಾಗಿರುವ ಚಿರೋನ್ ಪುರ್ ಸ್ಪೋರ್ಟ್‌ನ 8.0-ಲೀಟರ್ ಡಬ್ಲ್ಯು 16 ಎಂಜಿನ್ ಹೊಂದಿರುವ ಸೀಮಿತ ಆವೃತ್ತಿಯಾಗಿದ್ದು, ಇದು 1,500 ಎಚ್‌ಪಿ ಮತ್ತು 1,600 ಎನ್‌ಎಂ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯ ಹೊಂದಿದೆ. ಮತ್ತೊಂದೆಡೆ ಫ್ರೆಂಚ್ ನೌಕಾಪಡೆಯ ಡಸಾಲ್ಟ್ ರಾಫೆಲ್ ಫೈಟರ್ ಜೆಟ್ ಇತ್ತು. ಫೈಟರ್ ಪ್ಲೇನ್‌ನ ಎರಡು ಟರ್ಬೋಜೆಟ್‌ಗಳು ಸುಮಾರು 58,550 ನ್ಯೂಟನ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ, ಇದು ಸರಿಸುಮಾರು 5,727 ಎಚ್‌ಪಿಗೆ ಸಮಾನವಾಗಿರುತ್ತದೆ. ಇದುವರೆಗೆ ನಿರ್ಮಿಸಲಾದ ಅತ್ಯಂತ ಶಕ್ತಿಶಾಲಿ ಹೈಪರ್ಕಾರ್‌ಗಳಿಗೆ ಹೋಲಿಸಿದರೆ ಇದು ಅತ್ಯುಮ ಶಕ್ತಿಯನ್ನ ಹೊಂದಿದೆ.
ತನ್ನ 16 ಸಿಲಿಂಡರ್‌ಗಳನ್ನು ಹೊಂದಿರುವ ಬುಗಾಟ್ಟಿ ಚಿರೋನ್ ಪುರ್ ಸ್ಪೋರ್ಟ್ ತನ್ನ ಉನ್ನತ ವೇಗವಾಗಿ ಸುಮಾರು 490 ಕಿ.ಮೀ ವೇಗವನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ. ಆದರೆ ಮ್ಯಾಕ್ 1.8 ಅಥವಾ 1,912 ಕಿ.ಮೀ ವೇಗದಲ್ಲಿ ತಲುಪಬಹುದಾದ ಡಸಾಲ್ಟ್ ರಾಫೆಲ್ ಫೈಟರ್ ಜೆಟ್
ಪ್ರಾರಂಭವಾದ ಸ್ವಲ್ಪ ಸಮಯದ ನಂತರ, ಬುಗಾಟ್ಟಿ ಚಿರೋನ್ ಸ್ಪೋರ್ಟ್ ಮುನ್ನಡೆ ಸಾಧಿಸಿತು.ಬುಗಾಟ್ಟಿ ಚಿರೋನ್ ಸ್ಪೋರ್ಟ್‌ನ ಪೈಲಟ್ ಕೇವಲ 2.4 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗದಲ್ಲಿ ಹೋಗಿ ಕೇವಲ 6.1 ಸೆಕೆಂಡುಗಳಲ್ಲಿ 200 ಕಿ.ಮೀ ವೇಗವನ್ನು ತಲುಪಿತು. ನಂತರ ಅದು 13 ಸೆಕೆಂಡುಗಳಲ್ಲಿ 300 ಕಿ.ಮೀ ವೇಗವನ್ನು ಮತ್ತು ಸುಮಾರು ಅರ್ಧ ನಿಮಿಷದಲ್ಲಿ 400 ಕಿ.ಮೀ ವೇಗವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.
ರಫೇಲ್‌ಗೆ ಸಂಬಂಧಿಸಿದಂತೆ, ಇದು ನಿರೀಕ್ಷೆಯಂತೆ ವಿಭಿನ್ನ ಕಥೆಯಾಗಿದೆ. 150 ಮೀಟರ್ ನಂತರ, ಫೈಟರ್ ಜೆಟ್ 165 ಕಿ.ಮೀ ವೇಗವನ್ನು ತಲುಪಿದರೂ ಹಿಂದೆ ಉಳಿಯಿತು. ಇದು ಟಾರ್ಮ್ಯಾಕ್‌ನಲ್ಲಿ 350 ಮೀಟರ್ ಗಡಿಯನ್ನು ತಲುಪಿದಾಗ, ಅದು ತನ್ನ ವೇಗವನ್ನು 210 ಕಿ.ಮೀ.ಗೆ ಏರಿಸಿತು ಮತ್ತು ಅಂತಿಮವಾಗಿ 450 ಮೀಟರ್ ನಂತರ ಸುಮಾರು 260 ಕಿ.ಮೀ ವೇಗದಲ್ಲಿ ಚಿರೋನ್ ಅನ್ನು ಹಿಂದಿಕ್ಕಿತ್ತು
ಈ video ತಪ್ಪದೇ ನೋಡಿ