ಆಂಜನೇಯ ಸ್ವಾಮಿಯ ಕವಚ ಧರಿಸುವ ಚಮತ್ಕರಿಕ ಲಾಭ ತಿಳಿದರೆ ಅಚ್ಚರಿ ಪಡುವಿರಿ! ಎಲ್ಲಾ ಸಂಕಟಗಳ ನಿವಾರಣೆ..

Written by Anand raj

Published on:

ಆಂಜನೇಯ ಸ್ವಾಮಿಯ ಕವಚವು ನಿಮ್ಮ ಶರೀರದಲ್ಲಿ ರಕ್ಷ ಕವಚವಾಗಿ ತನ್ನ ಕಾರ್ಯವನ್ನು ಮಾಡುತ್ತದೆ. ನಿಮ್ಮನ್ನ ಪ್ರತಿ ಕ್ಷಣ ರಕ್ಷ ಕವಚವು ಒಬ್ಬ ಸಹಾಯಕ ರೀತಿಯಲ್ಲಿ ನಿಮ್ಮನ್ನು ಕಾಪಾಡುತ್ತದೆ. ದೊಡ್ಡದಾಗಿರುವ ಸಂಕಟಗಳು ಕೂಡ ದೂರ ಆಗುತ್ತವೆ. ಮಂಗಳವಾರದ ದಿನ ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ನಿಮ್ಮ ಪೂಜೆ ಸ್ಥಾನ ದೇವರ ಕೋಣೆಯ ಹತ್ತಿರಕ್ಕೆ ಹೋಗೀ ಒಂದು ಕಟ್ಟಿಗೆಯ ಮಣೆ ಇಟ್ಟು ಅದರ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹಾಸಿ ಆಂಜನೇಯ ಸ್ವಾಮಿಯ ಫೋಟೋವನ್ನು ಇಡಬೇಕು.

ಒಂದು ಮೌಲಿ ದಾರವನ್ನು ತೆಗೆದುಕೊಳ್ಳಬೇಕು. ಆಂಜನೇಯ ಸ್ವಾಮಿ ಫೋಟೋ ಮುಂದೆ ಒಂದು ತುಪ್ಪದ ಅಥವಾ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಬೇಕು.ಆಂಜನೇಯ ಸ್ವಾಮಿಗೆ ನೈವೇದ್ಯವನ್ನು ಅರ್ಪಿಸಬೇಕು. ಹಣ್ಣು ಅಥವಾ ಮಿಠಾಯಿ ಅನ್ನು ಯಾವುದಾದರು ನೈವೇದ್ಯ ವನ್ನು ಅರ್ಪಿಸಬೇಕು. ನಂತರ ಹನುಮಾನ್ ಚಾಲೀಸಾವನ್ನು 21 ಬಾರಿ ಜಪ ಮಾಡಬೇಕು.

ನಂತರ ಮೌಲಿ ದಾರದಲ್ಲಿ ಒಂದು ಗಂಟ್ಟನ್ನು ಕಟ್ಟಬೇಕು. ಈ ರೀತಿಯಾಗಿ 21 ದಿನಗಳ ತನಕ ಮಾಡಬೇಕು. ನೀವು 21 ಬಾರಿ ಧ್ಯಾನ ಮಾಡುತ್ತಲೇ ಮೌಲಿ ದಾರದಲ್ಲಿ ಒಂದೊಂದು ಗಂಟನ್ನು ಕಟ್ಟುತ್ತಾ ಹೋಗಬೇಕು. ಇಲ್ಲಿ 21 ದಿನಕ್ಕೆ ಬೇಕಾಗುವಷ್ಟು ದಾರವನ್ನೇ ನೀವು ತೆಗೆದುಕೊಂಡಿರಬೇಕು. ಇನ್ನು 21 ದಿನಗಳ ಕಾಲ ಈರುಳ್ಳಿ ಬೆಳ್ಳುಳ್ಳಿ ಮಾಂಸಹರ ಮಧ್ಯಾಪನವನ್ನು ಸೇವನೆ ಮಾಡಬಾರದು. ಇಲ್ಲಿ ಬ್ರಹ್ಮಚಾರ್ಯ ಪಾಲನೆ ಮಾಡಬೇಕು. 21 ಬಾರಿ ಹನುಮಾನ್ ಚಾಲೀಸಾ ಜಪ ಮಾಡಿದ ನಂತರವೆ 108 ಬಾರಿ ಜೈ ಶ್ರೀರಾಮ್ ಎಂದು ಜಪ ಮಾಡಿ ಒಂದು ಗಂಟು ಕಟ್ಟಬೇಕು. 21 ದಿನಗಳಲ್ಲಿ 21 ಗಂಟು ಪೂರ್ತಿಯಾದ ನಂತರ ಆಂಜನೇಯ ಸ್ವಾಮಿಗೆ ಒಂದು ತೆಂಗಿನಕಾಯಿ ಅಥವಾ ಮಿಠಾಯಿ ಅನ್ನು ನೈವೇದ್ಯ ಅರ್ಪಿಸಬೇಕು.

21 ಗಂಟು ಆದ ಬಳಿಕ ಅದನ್ನು ನಿಮ್ಮ ಬಲಗೈಗೆ ಕಟ್ಟಿಕೊಳ್ಳಬೇಕು. ಕವಚ ಕಟ್ಟುವ ಸಮಯದಲ್ಲಿ ನೀವು ಈ ರೀತಿಯಾಗಿ ಬೇಡಿಕೊಳ್ಳಬೇಕು. ಹೇ ಆಂಜನೇಯ ಸ್ವಾಮಿಯೇ ಹೇ ಭಗವಂತನೇ ನಾನು ನಿಮ್ಮ ನೆರಳಲ್ಲಿ ಇದ್ದೇನೆ ಯಾವತ್ತಿಗೂ ನನನ್ನು ನೀವು ರಕ್ಷಣೆ ಮಾಡಿರಿ ನೆರಳಾಗಿ ನನ್ನ ಜೊತೆ ಇರಿ ಎಂದು ಬೇಡಿಕೊಳ್ಳಬೇಕು. ನಂತರ ಮನೆಯಲ್ಲಿ ಇರುವವರಿಗೆ ತೆಂಗಿನಕಾಯಿ ಪ್ರಸಾದವನ್ನು ಕೊಡಬೇಕು. ಈ ರೀತಿ ಮಾಡಿ ನೋಡಿ ನಿಮ್ಮಲ್ಲಿ ನೀವು ಬದಲಾವಣೆ ಆಗುವುದನ್ನು ನೀವೇ ಕಾಣುತ್ತಿರಿ.

Related Post

Leave a Comment