ತಿರುಪತಿಯಲ್ಲಿ ಈ ಜಾಗ ನೀವ್ಯಾರು ನೋಡಿಲ್ಲ!ಮುಪ್ಪು ದೂರ ಮಾಡೋ ನೀರಿದೆ ಅಂದ್ರೆ ನಂಬ್ತೀರ!

Written by Anand raj

Published on:

ತಿರುಮಲ ಕೆಲವು ಸಾವಿರ ವರ್ಷಗಳ ಹಿಂದೆ ನಾಲ್ಕು ಅದ್ಬುತ ರಹಸ್ಯಗಳು ಇದ್ದವು. ಈ ರಹಸ್ಯಗಳನ್ನು ಭೇದಿಸಬೇಕು ಎಂದು ಎಷ್ಟೋ ಜನರು ಪ್ರಯತ್ನಪಟ್ಟರು ಆಗಲೇ ಇಲ್ಲ. ಅತ್ಯಂತ ರಹಸ್ಯಕರವಾದ ಈ ರಹಸ್ಯಗಳ ಬಗ್ಗೆ ತಿಳಿಸಿಕೊಡುತ್ತೇವೆ.

1, ಕಾಯರಸಯನ ತೀರ್ಥ–ಕಾಯರಸಯನ ತೀರ್ಥಂ ಸನಕ ಸನಾಧನ ತೀರ್ಥಂ ಬಳಿ ಇದೆ. ಈ ತೀರ್ಥದ ನೀರನ್ನು ಕುಡಿಯುವವರ ದೇಹವು ತಕ್ಷಣವೇ ಶುದ್ಧವಾಗುತ್ತದೆ ಎಂದು ಹೇಳಲಾಗುತ್ತದೆ. ಅದರ ನೀರಿಗೆ ಎಸೆದ ಹಳದಿ ಬಣ್ಣದ ಕೊಳೆಯುತ್ತಿರುವ ಎಲೆ ಕೂಡ ಒಮ್ಮೆಗೆ ಹಸಿರು ಬಣ್ಣಕ್ಕೆ ತಿರುಗುತ್ತದೆ ಎಂದು ಹೇಳಲಾಗುತ್ತದೆ.

ಕಾಯರಸಯನ ತೀರ್ಥವು ಜನಸಾಮಾನ್ಯರ ಕಣ್ಣಿಗೆ ಕಾಣದಂತೆ ಮರೆಯಾಗಿದೆ ಮತ್ತು ಮಹಾತ್ಮರಿಗೆ ಮಾತ್ರ ಗೋಚರಿಸುತ್ತದೆ. ಈ ತೀರ್ಥದ ಮೂಲವನ್ನು ಸನಕ ಮತ್ತು ಇತರ ಋಷಿಗಳು ಕಲ್ಲುಗಳಿಂದ ನಿರ್ಬಂಧಿಸಿದ್ದಾರೆ ಎಂದು ನಂಬಲಾಗಿದೆ.

ಅದರೆ ಇದರ ಪಕ್ಕವೇ ಸನಕಸಂಧನ ತೀರ್ಥ ಎಂದು ನಂಬಲಾಗಿದೆ. ಪಾಪ ನಾಶ ತೀರ್ಥದ ಬಳಿ ಸ್ವಲ್ಪ ಕಷ್ಟ ಪಟ್ಟು ಬೆಟ್ಟ ಹತ್ತಿದರೆ ಮೇಲೆ ಸನಕಸಂಧನ ತೀರ್ಥ ಸಿಗುತ್ತದೆ. ಇದರ ಹತ್ತಿರವೆ ಕಾಯರಸಯನ ತೀರ್ಥ ಸಿಗುತ್ತದೆ ಎನ್ನುವ ನಂಬಿಕೆ.

2, ತಿರುಮಲದಲ್ಲಿ ರಹಸ್ಯವಾದ ದೇಗುಲ–ಪದ್ಮವತಿ ಜೊತೆ ವಿವಾಹವಾಗಿ ಸ್ವಾಮಿ ಬೆಟ್ಟದ ಮೇಲೆ ನೆಲೆಸುವುದಕ್ಕೆ ಬಂದಾಗ ಆಗ ಸ್ವತಃ ಶ್ರಿವರಿ ವಿಶ್ವ ಕರ್ಮನಿಗೆ ಸೂಚನೆ ಕೊಟ್ಟು ಸಾವಿರ ಕಂಬಗಳಿರುವ ಆಲಯಗಳನ್ನು ನಿರ್ಮಾಣ ಮಾಡುವುದಕ್ಕೆ ಹೇಳಿದ್ರಂತೆ. ವಿಶ್ವ ಕರ್ಮ ನಿರ್ಮಿಸಿರುವ ಈ ವಿಶೇಷ ಭಾವನದಲ್ಲಿ ಶ್ರೀನಿವಾಸ ಸ್ವಾಮಿ ಪದ್ಮವತಿ ಅಮ್ಮನವರ ಜೊತೆ ನೆಲೆಸಿದ್ರು ಎಂದು ಹೇಳುತ್ತದೆ ಪುರಾಣ. ತೊಂಡಮನ ಚಕ್ರವರ್ತಿ ಯಡವಟ್ಟಿನಿಂದ ಸ್ವಾಮಿ ಬೆಟ್ಟದ ಮೇಲೆ ಕಲ್ಲಾಗಿ ಹೋದ ಎನ್ನುವುದು ನಂಬಿಕೆ. ನಂತರ ರಾಜರು ದೇಗುಲವನ್ನು ಕಟ್ಟಿದರು. ಅದರೆ ವಿಶ್ವ ಕರ್ಮ ಕಟ್ಟಿರುವ ಮೂಲ ದೇಗುಲ ಇದೆಯಲ್ವಾ ಅದು ಹೀಗಿರುವ ದೇಗುಲ ಕೆಳಗೆ ಇದೆ ಎನ್ನುವ ನಂಬಿಕೆ. ಇವಾಗಿರುವ ದೇಗುಲದಿಂದ ಸುರಂಗ ಮರ್ಗ ಕೂಡ ಇದೆ. ಇದನ್ನು ರಹಸ್ಯವಾಗಿ ಇಡಲಾಗಿದೆ. ಇದರ ವಾದ ನಡೆಯುತ್ತಿರುವಗಲೇ ಇಲ್ಲಿ ರಹಸ್ಯವಾದ ದೇಗುಲವಿದೆ ಇದನ್ನು ನಮ್ಮ ಪೂರ್ವಿಕರು ನೋಡಿದ್ರು ಇದನ್ನು ಇವಗೆ ತೆಗೆಯುವುದು ಬೇಡ ರಹಸ್ಯವಾಗಿಯೇ ಇರಲೇ ಎಂದು ಹೇಳಿದ್ದಾರೆ.

3, ಬೆಟ್ಟದ ಮೇಲೆ ಎರಡು ಸ್ಟಾರ್ ಗೇಟ್ ಇದೆ ಎನ್ನುವುದು.–ಅಂದರೆ ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಹೋಗುವ ಅನ್ಯಾಗ್ರಹದ ತರ ತಿರುಮಲದಲ್ಲಿ ಇರುವ ಸ್ಟಾರ್ ಗೇಟ್.

4, ಕರಾರು ತಾಮ್ರ ಪತ್ರ–ಮೊಟ್ಟ ಮೊದಲು ಶ್ರೀನಿವಾಸ ಸ್ವಾಮಿ ತಿರುಮಲದ ಮೇಲೆ ಬಂದಾಗ ವರಾಹ ಸ್ವಾಮಿ ಬಳಿ 100 ಅಡಿ ಜಾಗ ಕೇಳಿದಾಗ ಆಗ ಬರೆದುಕೊಟ್ಟ ಪತ್ರ ಇದು. ಈ ಪತ್ರದ ಪ್ರಕರವೇ ವೆಂಕಟೇಶ್ವರನಿಗೂ ಮೊದಲು ವರಾಹ ಸ್ವಾಮಿ ದರ್ಶನ ಆಗಬೇಕು ವರಾಹ ಸ್ವಾಮಿಗೆ ನೈವೇದ್ಯ ಆಗಬೇಕು ಎನ್ನುವ ಒಪ್ಪದ ಆಗಿದೆ. ಒಟ್ಟಾರೆ ತಿರುಮಲದಲ್ಲಿ ಈ ನಾಲ್ಕು ವಿಚಾರಗಳು ಇವತ್ತಿಗೂ ಕೂಡ ಅತೀ ದೊಡ್ಡ ರಹಸ್ಯಗಳಾಗಿ ಉಳಿದುಕೊಂಡಿದೆ.

Related Post

Leave a Comment