ಅಂತಿಮ ಸಂಸ್ಕಾರವನ್ನು ಮಗನೆ ಏಕೆ ಮಾಡಬೇಕು?

Written by Anand raj

Published on:

ರಾತ್ರಿ ಸಮಯದಲ್ಲಿ ಆ ವ್ಯಕ್ತಿಯು ಅವನತಿಯನ್ನು ಹೊಂದುತ್ತಾರೆ ಎಂದು ನಂಬಲಾಗಿದೆ. ಆತನಿಗೆ ಮೋಕ್ಷವು ಪ್ರಾಪ್ತಿಯಾಗುವುದಿಲ್ಲ. ಆತ ಪಿಶಾಚಿ ಆಗಿ ಸಾಯುವ ಸಾಧ್ಯತೆ ಇರುತ್ತದೆ. ಅಸುರ ಮನೆಯಲ್ಲಿ ಆತ ಜನ್ಮ ತಾಳುತ್ತಾನೆ ಎಂದು ಹೇಳಲಾಗುತ್ತದೆ. ಶವ ಸಂಸ್ಕಾರಕ್ಕೆ ಸಮಯ ಕೂಡ ಮುಖ್ಯವಾಗುತ್ತದೆ. ಪಂಚಕ ಕಾಲದಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಅಂತ್ಯ ಸಂಸ್ಕಾರವನ್ನು ಅವಧಿ ಮುಗಿದ ಮೇಲೆ ಮಾಡಲಾಗುತ್ತದೆ. ಪಂಚಕ ಕಾಲದಲ್ಲಿ ಯಾರನ್ನಾದರೂ ದಾನ ಮಾಡಿದರೆ ಆ ವ್ಯಕ್ತಿಯ ಕುಟುಂಬದಲ್ಲಿ ಯಾರಾದರೂ 5 ಜನ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಇದಕ್ಕೆ ಪರಿಹಾರವನ್ನು ಕೂಡ ಹೇಳಲಾಗಿದೆ.

ಮೃತ ದೇಹದ ಜೊತೆಗೆ 5 ಕಾಳು ಮತ್ತು ಒಣ ಹುಲ್ಲು ಇಟ್ಟು ವಿಧಿ ವಿಧಾನವಾಗಿ ಸುಡಬೇಕು.ಸಾವಿನ ನಂತರ ಆತ್ಮವು ಮನೆಯಲ್ಲಿ 13 ದಿನಗಳವರೆಗೆ ಇರುತ್ತದೆ. ಹಾಗಾಗಿ ಶವವನ್ನು ಅಂತ್ಯ ಸಂಸ್ಕಾರ ಮಾಡುವವರೆಗೂ ಒಂಟಿಯಾಗಿ ಬಿಡಬಾರದು. ಇದು ಆತ್ಮದ ನೋವಿಗೆ ಕಾರಣವಾಗುತ್ತದೆ.

ಮೃತ ದೇಹವನ್ನು ಒಂಟಿಯಾಗಿ ಬಿಟ್ಟಾಗ ವಾಸನೆ ಬರುವುದಕ್ಕೆ ಆರಂಭಿಸುತ್ತದೆ. ತಾಂತ್ರಿಕ ಚಟುವಟಿಕೆ ಪರಿಣಾಮವು ರಾತ್ರಿ ತೀವ್ರಗೊಳ್ಳುತ್ತದೆ. ಹಾಗಾಗಿ ಮೃತ ದೇಹವನ್ನು ಒಂಟಿಯಾಗಿ ಬಿಟ್ಟರೆ ಅದನ್ನು ತಂತ್ರ ಸಾಧನಕ್ಕಾಗಿ ಬಳಸುವ ಸಾಧ್ಯತೆ ಇರುತ್ತದೆ. ಇದರಿಂದ ಆತ್ಮಕ್ಕೆ ಹಾನಿ ಆಗಬಹುದು. ಹಿಂದೂ ಧರ್ಮದಲ್ಲಿ ಮೃತ ದೇಹದ ಅಂತ್ಯ ಸಂಸ್ಕಾರವನ್ನು ಸತ್ತವರ ಮಗ ಮಾತ್ರ ಮಾಡಬೇಕು ಅನ್ನುವ ನಂಬಿಕೆ ಇದೆ.

ಸತ್ತವರ ಸಂಬಂಧಿಕರು ಅವರು ದೂರ ಇದ್ದರೆ ಅವರು ಬರುವವರೆಗೂ ಮೃತ ದೇಹವನ್ನು ಇಟ್ಟು ಕಾಯುತ್ತಾರೆ. ಅಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮೃತ ದೇಹವನ್ನು ಇಡೀ ರಾತ್ರಿ ಇಡಬೇಕಾಗುತ್ತದೆ. ಮೃತನ ಅಂತ್ಯ ಕ್ರಿಯೆಯನ್ನು ಮಗನ ಕೈಯಿಂದಲೇ ಮಾಡಬೇಕು ಅನ್ನುವ ನಂಬಿಕೆ.ಪುತ್ರನ ಅಂತಿಮ ಸಂಸ್ಕಾರ ನೆರವೇರಿದರೆ ಮಾತ್ರ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇಲ್ಲದಿದ್ದರೆ ಆತ್ಮವು ಪುನರ್ ಜನ್ಮ ಅಥವಾ ಮೋಕ್ಷ ಧರ್ಮ ಹುಡುಕಾಟದಲ್ಲಿ ಅಲೆದಾಡುತ್ತದೆ ಅಂತಾ ನಂಬಲಾಗಿದೆ.

ಮನೆಯಲ್ಲಿ ಯಾರಾದರೂ ಸತ್ತಾಗ ಅಂತಿಮ ಸಂಸ್ಕಾರವನ್ನು ನೆರವೇರಿಸವರೆಗೆ ಆ ಮನೆಯಲ್ಲಿ ಪೂಜೆ ಮಾಡಬಾರದು ಅಥವಾ ಒಲೆ ಹಚ್ಚಬಾರದು ಎಂದು ಉಲ್ಲೆಕಿಸಲಾಗಿದೆ. ಏಕೆಂದರೆ ಗರುಡ ಪುರಾಣದ ಪ್ರಕಾರ ಸತ್ತ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ನೆರವೇರಿಸುವವರೆಗೆ ಅವನ ಆತ್ಮವು ಲೌಕಿಕ ಮೌಲ್ಯಗಳಿಂದ ಮುಕ್ತಿ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ ಮತ್ತು ಮರಣದ ನಂತರ ಆತ್ಮವು ಅಲೆದಾಡುತ್ತ ಇರುತ್ತದೆ.

ಸನಾತ ಧರ್ಮದ ಪ್ರಕಾರ ಸತ್ತ ವ್ಯಕ್ತಿಯ ಅಂತಿಮ ಸಂಸ್ಕಾರ ಮಾಡುವವರೆಗೂ ಅವನ ದೇಹವನ್ನು ಯಾವುದೇ ಪ್ರೇತ ಪಿಶಾಚಿಗಳು ನಿಯಂತ್ರಿಸಬಾರದು ಅನ್ನುವ ಕಾರಣಕ್ಕೆ ಶವದ ಕೈ ಮತ್ತ್ಯಾ ಕಾಲುಗಳನ್ನು ಕಟ್ಟಲಾಗುತ್ತದೆ.

ಗರುಡ ಪುರಾಣದ ಪ್ರಕಾರ ಇದು ಆದ ನಂತರ ಆತ್ಮವು ದೇಹದೊಂದಿಗೆ ಬಾಂದವ್ಯವನ್ನು ಹೊಂದಿರುತ್ತದೆ ಅನ್ನುವ ನಂಬಿಕೆ ಇದೆ. ಮೃತ ದೇಹದ ಆತ್ಮವು ಸಂಸ್ಕಾರದ ಬಳಿಕ ಹಿಂತಿರುಗಿ ಹೋಗುವುದಕ್ಕೆ ಬಯಸುತ್ತದೆ. ಇದೆ ಕಾರಣಕ್ಕೆ ಶವ ಸಂಸ್ಕಾರ ಮಾಡಿದಾಗ ಹಿಂದೆ ತಿರುಗಿ ನೋಡಿದಗ ಆತ್ಮಕ್ಕೆ ಇನ್ನು ಯಾರೋ ತನ್ನ ದೇಹಕ್ಕೆ ಅಂಟಿಕೊಂಡಿರುವುದು ಗೊತ್ತಾಗುತ್ತದೆ. ಆತ್ಮವು ದೇಹದ ಬಾಂದವ್ಯದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ. ಅದರಿಂದ ಬರುವುದಕ್ಕೆ ಕಷ್ಟ ಆಗುತ್ತದೆ. ಹಾಗಾಗಿ ಸಂಸ್ಕಾರದ ನಂತರ ಯಾರು ಕೂಡ ಹಿಂದೆ ತಿರುಗಿ ನೋಡದೆ ಇರುವುದಕ್ಕೆ ಇದು ಒಂದು ಕಾರಣ.

ಸಂಸ್ಕಾರದ ನಂತರ ಹಿಂದೆ ತಿರುಗಿ ನೋಡಿದರೆ ಆತ್ಮವು ತನ್ನ ಬಾಂದವ್ಯದಲ್ಲಿ ದೇಹವಿಲ್ಲ ಎನ್ನುವ ಸಂದೇಶವನ್ನು ಪಡೆಯುತ್ತದೆ ಎನ್ನುವ ನಂಬಿಕೆ. ಒಂದು ವೇಳೆ ಯಾರಾದರೂ ನೋಡಿದರೆ ಆತ್ಮವು ಆ ವ್ಯಕ್ತಿಯ ದೇಹವನ್ನು ಪ್ರವೇಶ ಮಾಡುತ್ತದೆ.ಆತ್ಮವು ಇನ್ನೊಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸಿದ ನಂತರ ಅದು ಆ ವ್ಯಕ್ತಿಯನ್ನು ತುಂಬಾ ಹಿಂಸೆಸುತ್ತದೆ. ಅಂತ್ಯ ಕ್ರಿಯೆ ನಂತರ ಆತ್ಮವು ಹೆಚ್ಚಾಗಿ ಚಿಕ್ಕ ಮಕ್ಕಳ ಮತ್ತು ದುರ್ಬಲ ದೇಹದವರನ್ನು ಪ್ರವೇಶಿಸುವುದಕ್ಕೆ ಪ್ರಯತ್ನಿಸುತ್ತದೆ.

ಅದರಿಂದ ಚಿಕ್ಕ ಮಕ್ಕಳನ್ನು ದುರ್ಬಲ ಹೃದಯದವರನ್ನು ಶವ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕರೆದೋಯ್ಯಬಾರದು. ಒಂದು ವೇಳೆ ಹೋದರು ಅವರನ್ನು ಹಿಂದೆ ತಿರುಗಿ ನೋಡದೆ ಮುಂಭಾಗದಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಹಿಂದೂ ಧರ್ಮದ ಪ್ರಕಾರ ಮೃತ ವ್ಯಕ್ತಿಗೆ ಗರುಡ ಪುರಾಣದಲ್ಲಿ ಬರುವ ಶ್ಲೋಕವನ್ನು ಹೇಳಿ ಸ್ನಾನ ಮಾಡಿಸಲಾಗುತ್ತದೆ. ಜೊತೆಗೆ ಮಂತ್ರಚ್ಚರಣೆ ಮಾಡುತ್ತ ಗಂಗಾಜಲವನ್ನು ನೀರಿಗೆ ಸೇರಿಸಿ ಸ್ನಾನ ಮಾಡಿಸಲಾಗುತ್ತದೆ. ಇದರಿಂದ ವಾತಾವರಣ ಶುದ್ಧವಾಗುತ್ತದೆ. ಮೃತ ವ್ಯಕ್ತಿಯ ದೇಹದಿಂದ ಕೀಟಣುಗಳು ಹೊರಗೆ ಬರುತ್ತಿರುತ್ತವೆ.ಹಾಗಾಗಿ ಮೃತ ದೇಹಕ್ಕೆ ಸ್ನಾನ ಮಾಡಿಸಿ ಹೊಸ ವಸ್ತ್ರವನ್ನು ಹಾಕಲಾಗುತ್ತದೆ ಹಾಗು ಶವ ಸಂಸ್ಕಾರಕ್ಕೆ ಬಂದವರು ಕೂಡ ಮನೆಗೆ ಹೋಗೀ ಶುದ್ಧವಾಗವೇಕು ಅನ್ನೋದು ಕೂಡ ಇದೆ ಕಾರಣಕ್ಕೆ.

Related Post

Leave a Comment