ರಥಸಪ್ತಮಿ ಯಾವಾಗ? ಮಹತ್ವವೇನು?ಫಲಾಫಲಗಳೇನು!

Written by Anand raj

Published on:

ರಥಸಪ್ತಮಿ ಎನ್ನುವುದು ದೇಶದ ಎಲ್ಲಾ ಕಡೆ ಧಾರ್ಮಿಕವಾದ ಹಬ್ಬದ ರೀತಿ ಆಚರಣೆ ಮಾಡುತ್ತಾರೆ. ರಥಸಪ್ತಮಿಯನ್ನು ಸೂರ್ಯ ಜಯಂತಿ ಎಂದು ಕೂಡ ಕರೆಯುತ್ತಾರೆ.ಕಾರಣ ಅವತ್ತಿನ ದಿನ ಸೂರ್ಯನ ಜನುಮ ದಿನವಾಗಿರುತ್ತದೆ. ಈ ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ಸಮುದ್ರ ಸರೋವರ ಸ್ನಾನವನ್ನು ಮಾಡಿಕೊಂಡು ಸೂರ್ಯನಿಗೆ ಅರ್ಘ್ಯವನ್ನು ನೀಡಬೇಕು.ಎಷ್ಟು ಸಾಧ್ಯವೋ ಅಷ್ಟು ಅವತ್ತಿನ ದಿನ ದಾನವನ್ನು ಮಾಡಬೇಕು.ಉಪ್ಪಿಲ್ಲದ ಆಹಾರವನ್ನು ಸೇವನೆ ಮಾಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ಪೂರ್ವ ಜನ್ಮದ ಪಾಪಗಳು ಸಕಲ ದುಃಖಗಳು ಪರಿಹಾರವಾಗುತ್ತವೆ. ಆಯಸ್ಸು ಸಂಪತ್ತು ಲಭಿಸುತ್ತದೆ.ಇದರ ಜೊತೆಯಲ್ಲಿ ಸೂರ್ಯನ ಅನುಗ್ರಹ ಕೂಡ ಸಿಗುತ್ತದೆ.

ರಥಸಪ್ತಮಿ ಮಾಘಮಾಸ ಶುಕ್ಲಪಕ್ಷ ಸಪ್ತಮಿಯಂದು ದಿನಾಂಕ ಫೆಬ್ರವರಿ 15ನೇ ತಾರೀಕು ಗುರುವಾರ ಬೆಳಗ್ಗೆ 10:13ನಿಮಿಷಕ್ಕೆ ಪ್ರಾರಂಭ ಅದರೆ ಮುಕ್ತಾಯ ಆಗುವುದು ದಿನಾಂಕ 16ನೇ ತಾರೀಕು ಫೆಬ್ರವರಿ ಶುಕ್ರವಾರ ಬೆಳಗ್ಗೆ 8:55ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಧರ್ಮ ಗ್ರಂಥಗಳ ಪ್ರಕಾರ ಈ ದಿನ ಸೂರ್ಯದೇವನನ್ನು ಪೂಜಿಸಿ ಉಪ್ಪನ್ನು ತಿನ್ನದೇ ಇಡಿ ದಿವಸ ಫಲಾಹಾರವನ್ನು ತೆಗೆದುಕೊಂಡು ಸೂರ್ಯದೇವನನ್ನು ಪೂಜಿಸಿ ಅರ್ಘ್ಯವನ್ನು ನೀಡುವುದರಿಂದ ಸೂರ್ಯನ ಸ್ಥಾನ ತುಂಬಾನೇ ಪ್ರಬಲವಾಗುತ್ತದೆ.ಹಾಗಾಗಿ ತುಂಬಾನೇ ಶುಭ ಫಲಿತಾಂಶವನ್ನು ನೀಡುತ್ತದೆ.

ಗೋಧಿ, ಎಳ್ಳು, ಅಕ್ಕಿ, ಬೆಲ್ಲ ಹಾಗೂ ಹಣ್ಣುಗಳನ್ನು ದಾನ ಮಾಡಬಹುದು. ಅದರಲ್ಲೂ ದೀಪವನ್ನು ದಾನಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ದಾನ ಮಾಡುವುದರಿಂದ ಮೋಕ್ಷ ಕೂಡ ಸಿಗುತ್ತದೆ. ಸಂತಾನಪ್ರಾಪ್ತಿ ಬಯಸುವವರು ರಥಸಪ್ತಮಿ ದಿವಸ ಬೂದುಕುಂಬಳಕಾಯಿ ದಾನ ಮಾಡುವುದರಿಂದ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು. ಸೂರ್ಯನನ್ನು ಜಪ ಮಾಡುವುದರಿಂದ ಹಿಂದಿನ ಪಾಪವನ್ನೂ ನಿವಾರಣೆ ಮಾಡಿಕೊಂಡು ಮೋಕ್ಷವನ್ನು ಪಡೆಯಬಹುದು ಮತ್ತು ಉತ್ತಮ ಆರೋಗ್ಯವನ್ನು ಪಡೆಯಬಹುದು.

ರಥಸಪ್ತಮಿಯಂದು ಸ್ನಾನಕ್ಕೆ ಅಷ್ಟೇ ಪ್ರಾಮುಖ್ಯತೆಯಿದೆ. ಸ್ನಾನ ಮಾಡುವಾಗ 7 ಎಕ್ಕದ ಎಲೆ ತೆಗೆದುಕೊಂಡು ಸ್ನಾನ ಮಾಡುವುದರಿಂದ ಸೂರ್ಯನಾರಾಯಣ ಅನುಗ್ರಹದ ಜೊತೆಗೆ ಸರ್ವ ವ್ಯಾಧಿಗಳ ನಿವಾರಣೆ ಆಗುತ್ತದೆ. ಸಪ್ತ ಜನ್ಮದ ದುಷ್ಟ ಕರ್ಮಗಳು ಕೂಡ ನಾಶವಾಗುತ್ತದೆ. ಸ್ನಾನವನ್ನು ಮಾಡುವಾಗ ಮಂತ್ರವನ್ನು ಹೇಳಿಕೊಂಡು ಸ್ನಾನವನ್ನು ಮಾಡಬೇಕು. ಬೆಳಗಿನ ಜಾವ ಪೂರ್ವಾಭಿಮುಖವಾಗಿ ನಿಂತುಕೊಂಡು ತಲೆ ಭುಜ ಕತ್ತು ತೊಡೆ ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟು ಸ್ನಾನವನ್ನು ಮಾಡಬೇಕು. ನಂತರ ಪೂರ್ವಾಭಿಮುಖವಾಗಿ ನಿಂತು ಸೂರ್ಯನಿಗೆ ನಮಸ್ಕಾರ ಮಾಡಬೇಕು. ಸೂರ್ಯನ 108 ಹೆಸರುಗಳನ್ನು ಹೇಳುತ್ತಾ ಮತ್ತು ಅಷ್ಟೋತ್ತರವನ್ನು ಹೇಳುತ್ತಾ ನಮಸ್ಕಾರ ಮಾಡಬಹುದು. ಸೂರ್ಯನಿಗೆ ಪ್ರಿಯವಾದ ಪಾಯಸ ಎಂದರೆ ಗೋಧಿ ರವೆ ಪಾಯಸ. ಹಾಗಾಗಿ ರಥಸಪ್ತಮಿಯಂದು ಗೋಧಿ ರವೆಯ ಪಾಯಸವನ್ನು ಮಾಡಿ ನೈವೇದ್ಯವನ್ನು ಮಾಡಿ ಪೂಜೆಯನ್ನು ಮಾಡಿಕೊಳ್ಳಬಹುದು.ಈ ರೀತಿ ಮಾಡಿದರೆ ಖಂಡಿತ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.

Related Post

Leave a Comment