ಸಾಮಾನ್ಯವಾಗಿ ಕೆಲವರಲ್ಲಿ ಮುಖದ ಮೇಲೆ ಬಂಗುಗಳು ಕಪ್ಪು ಕಲೆಗಳು ಬಂದಿರುತ್ತವೆ ಸಾಕಷ್ಟು ಪ್ರಯತ್ನ ಪಟ್ಟರೂ ಸಹ ಅವುಗಳನ್ನು ಹೋಗಿಸಲು ಸಾಧ್ಯವಾಗುವುದಿಲ್ಲ ಹಲವಾರು ವರ್ಷಗಳವರೆಗೆ ಮುಖದ ಮೇಲೆ ಹಾಗೆಯೇ ಉಳಿದುಬಿಡುತ್ತದೆ, ಇಂತಹ ಬಂಗುಗಳು ಮುಖದ ಮೇಲೆ ಬರಲು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಕಾರಣಗಳೂ ಇವೆ, ಬಂಗು ಏನಾದರೂ ಒಮ್ಮೆ ಬಂದರೆ ಅವು ಎಷ್ಟು ವರ್ಷಗಳ ಕಾಲದವರೆಗೆ ಇರುತ್ತವೆ ಮತ್ತು ಇದರಿಂದ ಆಗುವ ಪರಿಣಾಮಗಳು ಏನು ಮತ್ತು ಇದಕ್ಕೆ ಶಾಶ್ವತ ಪರಿಹಾರಗಳು ಇವೆಯೇ ಎಂಬುದರ ಬಗ್ಗೆ ನಾವು ಇಂದು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ.
ಒಮ್ಮೆ ಏನಾದರೂ ಬಂಗು ಮುಖದ ಮೇಲೆ ಬಂದರೆ ಅದು ಕೆಲವರಿಗೆ ಎರಡು ವರ್ಷಗಳ ಕಾಲ ಇರುತ್ತದೆ ಇನ್ನು ಕೆಲವರಿಗೆ ಏಳು ವರ್ಷಗಳ ಕಾಲದವರೆಗೂ ಇರುತ್ತದೆ ಇನ್ನು ಕೆಲವರಿಗೆ ಹದಿನೈದು ವರ್ಷ ಹಾಗೂ 18 ವರ್ಷಗಳ ಕಾಲ ಮುಖದ ಮೇಲೆ ಬಂಗುವಿನ ಸಮಸ್ಯೆ ಇರುತ್ತದೆ, ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯನ್ನು ಪಡೆದರೂ ಸಹ ಎಲ್ಲ ರೀತಿಯ ಪ್ರಯತ್ನ ಪಟ್ಟರೂ ಸಹ ಬಂಗುವಿನ ಸಮಸ್ಯೆಯು ನಿವಾರಣೆಯಾಗುವುದಿಲ್ಲ. ಇನ್ನು ಮುಖದ ಮೇಲೆ ಬಂಗು ಇರುವವರಿಗೆ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆ.
ಎಂದರೆ ಕೋರ್ಟುಗಳು ಕೇಸುಗಳು ಅಪವಾದಗಳ ಮೇಲೆ ಅಪವಾದಗಳು ಬರುತ್ತಿರುತ್ತವೆ, ಇನ್ನು ಬಂಗು ಇದ್ದವರ ಮನೆಯಲ್ಲಿ ಏಳಿಗೆಯು ಸಹ ಉಂಟಾಗುವುದಿಲ್ಲ, ಯಾವುದೇ ಕೆಲಸ ಕಾರ್ಯಗಳಿಗೆ ಕೈಹಾಕಿದರೂ ಕೂಡ ಅದರಲ್ಲಿ ಭಂಗಗಳು ಉಂಟಾಗುತ್ತಿರುತ್ತದೆ ಯಾವುದೇ ಕೆಲಸಗಳು ಪೂರ್ಣಗೊಳ್ಳುವುದಿಲ್ಲ, ಮನೆಯಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳು ನಡೆಯುವುದಿಲ್ಲ. ಇನ್ನು ಬಂಗು ಬರಲು ಮತ್ತು ಅದರ ಕಲೆ ಮುಖದ ಮೇಲೆ ದೀರ್ಘಕಾಲದವರೆಗೆ ಉಳಿದುಕೊಳ್ಳಲು ಮುಖ್ಯ ಕಾರಣ ಎಂದರೆ ಬಾಲ್ಯದಲ್ಲಿ ಅಥವಾ ಬುದ್ಧಿ ಬಂದಮೇಲು ಸಹ ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದು ಹೊಸ್ತಿಲನ್ನು ತುಳಿಯುವುದು ಕಾಲಿನಿಂದ ಒದೆಯುವುದು ಈ ರೀತಿಯಾದ ತಪ್ಪುಗಳನ್ನು ಮಾಡಿರುವುದರಿಂದ ಇಂತಹ ಸಮಸ್ಯೆಗಳು ಅಂದರೆ ಬಂಗುವಿನ ಸಮಸ್ಯೆಗಳು ಎದುರಾಗುತ್ತವೆ, ಇದೊಂದು ಸಮಸ್ಯೆ ಬಂದರೆ ಅದು ದೀರ್ಘಕಾಲದವರೆಗೂ ಉಳಿದು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ನೋವುಗಳನ್ನು ಉಂಟುಮಾಡುತ್ತದೆ. ಇನ್ನು ಇದಕ್ಕೆ ಪರಿಹಾರಗಳು ಏನು ಎಂಬುದನ್ನು ನೋಡುವುದಾದರೆ ಬಂಗುವಿನ ಸಮಸ್ಯೆಯನ್ನು ರಾಹುವಿನ ದೋಷ ಎಂದು ಹೇಳಲಾಗುತ್ತದೆ, ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪವಾದ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದು
ಕಾಲಿನಿಂದ ಓದೆಯುವುದು ತುಳಿಯುವುದು ಈ ರೀತಿಯಾದ ತಪ್ಪುಗಳನ್ನು ಮಾಡುವುದರಿಂದ ರಾಹುವಿನ ದೋಷ ಶನಿ ದೋಷ ಎಲ್ಲಾ ದೋಷಗಳು ಉಂಟಾಗುತ್ತದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದಕ್ಕೆ ಪರಿಹಾರ ಏನು ಎಂದರೆ ಪ್ರತಿನಿತ್ಯವೂ ಮನೆಯ ಹೊಸ್ತಿಲಿಗೆ ದೀಪಗಳನ್ನು ಹಚ್ಚಬೇಕು, ಮಣ್ಣಿನ ದೀಪವನ್ನು ಹಚ್ಚುವುದಾದರೆ ಎರಡು ದೀಪಗಳನ್ನು ಹಚ್ಚಬೇಕು, ಒಂದು ವೇಳೆ ನಿಂಬೆಹಣ್ಣಿನ ದೀಪವನ್ನು ಹಚ್ಚುವುದಾದರೆ ಹಚ್ಚಬಹುದು ಆದರೆ ನಿಂಬೆಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕೂ ಮನೆಯ ಒಳಗಡೆ ಹಚ್ಚಬಾರದು, ಮುಖ್ಯವಾಗಿ ಬಂಗುವಿನ ಸಮಸ್ಯೆ ಇದ್ದವರು ಮನೆಯ ಹೊರಗಡೆ ಅಂದರೆ ಹೊಸ್ತಿಲಿಗೆ ಮಣ್ಣಿನ ದೀಪಗಳನ್ನು ಎರಡು ದೀಪಗಳನ್ನು ಹಚ್ಚಬೇಕು ನಿಂಬೆಹಣ್ಣಿನ ದೀಪವನ್ನು ಹಚ್ಚುವುದಾದರೆ ಒಂದು ನಿಂಬೆಹಣ್ಣನ್ನು ಎರಡು ಭಾಗ ಮಾಡಿ ಅದರಿಂದ ಎರಡು ದೀಪವನ್ನು ಮನೆಯ ಹೊಸ್ತಿಲಿನ ಹೊರಭಾಗದಲ್ಲಿ ಹಚ್ಚಿ ಹೊಸ್ತಿಲನ್ನು ನಮಸ್ಕರಿಸಬೇಕು ಇದರ ಜೊತೆಗೆ ಮನೆದೇವರ ಸಂಕಲ್ಪವನ್ನು ಮಾಡಬೇಕು. ಇದನ್ನು ಕೇವಲ ಕೆಲವು ದಿನಗಳ ಕಾಲದ ವರೆಗೆ ಮಾಡಿದರೆ ಸಮಸ್ಯೆಯು ಬಗೆಹರಿಯುವುದಿಲ್ಲ ನಿಮಗೆ ಬಂಗುಗಳ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುವ ವರೆಗೂ ಈ ರೀತಿಯಾಗಿ ಪ್ರತಿನಿತ್ಯವೂ ಮಾಡುತ್ತಾ ಬಂದರೆ
ಕ್ರಮೇಣವಾಗಿ ಬಂಗುವಿನ ಸಮಸ್ಯೆಗಳು ದೂರವಾಗುತ್ತವೆ, ನೀವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುವುದಿಲ್ಲ, ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಬಂಗಿನ ಸಮಸ್ಯೆ ಇದ್ದರೆ ಅದು ಸಂಪೂರ್ಣವಾಗಿ ಮನೆಯ ಮೇಲೆ ಪರಿಣಾಮ ಬೀರುತ್ತದೆ ಮನೆಯಲ್ಲಿರುವ ಇತರೆ ಸದಸ್ಯರಿಗೂ ನಷ್ಟಗಳು ತೊಂದರೆಗಳು ಉಂಟಾಗುತ್ತವೆ ಆದ್ದರಿಂದ ಮನೆಯಲ್ಲಿ ಯಾರಿಗೆ ಬಂಗಿನ ಸಮಸ್ಯೆ ಬಂದಿದೆ ಅವರ ಕೈಯಲ್ಲಿ ಈ ಒಂದು ಕೆಲಸವನ್ನು ಪ್ರತಿನಿತ್ಯವೂ ಮಾಡಿಸುತ್ತಾ ಬಂದರೆ ಇದರಿಂದ ಆಗುವ ಕೆಟ್ಟ ಪರಿಣಾಮಗಳು ಕ್ರಮೇಣವಾಗಿ ದೂರವಾಗುತ್ತದೆ. ಇನ್ನೂ ಇದರ ಜೊತೆಗೆ ಯಾರಿಗೆ ಬಂಗುವಿನ ಸಮಸ್ಯೆ ಇದೆಯೋ ಅವರು ತುಳಸಿ ದೇವಿಯ ಆರಾಧನೆಯನ್ನು ಮಾಡಬೇಕು ಹೀಗೆ ಮಾಡಿದರೆ ಆದಷ್ಟು ಬೇಗ ಬಂಗುವಿನ ಸಮಸ್ಯೆಯು ದೂರವಾಗುತ್ತದೆ. ಇನ್ನು ಇದರ ಜೊತೆಗೆ ಬಂಗುವಿನ ಸಮಸ್ಯೆ ಇರುವವರು ಕಷ್ಟಗಳು ಅಪವಾದಗಳು ಸಮಸ್ಯೆಗಳು ದೂರವಾಗಬೇಕು ಎಂದರೆ ಅತಿಮುಖ್ಯವಾಗಿ ಸೌಂದರ್ಯ ಲಹರಿಯನ್ನು ಪಾರಾಯಣ ಮಾಡುತ್ತಿರಬೇಕು.
ಈ ರೀತಿಯಾಗಿ ಲಕ್ಷ್ಮೀದೇವಿ ತುಳಸಿ ದೇವಿಯನ್ನು ಆರಾಧಿಸಿಕೊಂಡು ಮನೆಯ ಹೊಸ್ತಿಲಿನ ಹೊರಭಾಗ ದೀಪವನ್ನು ಹಚ್ಚಿ ಸೌಂದರ್ಯ ಲಹರಿಯನ್ನು ಪಾರಾಯಣ ಮಾಡಿಕೊಂಡು ಬಂದರೆ ಆದಷ್ಟು ಬೇಗ ಬಂಗುವಿನ ಸಮಸ್ಯೆಯು ದೂರವಾಗುತ್ತದೆ ರಾಹುವಿನ ದೋಷ ಶನಿಯ ದೋಷಗಳು ದೂರವಾಗುತ್ತವೆ. ಇನ್ನು ಅತಿಮುಖ್ಯವಾಗಿ ಜೀವನದಲ್ಲಿ ಬಂಗುವಿನ ಸಮಸ್ಯೆ ಬರಬಾರದು ಎಂದರೆ ಯಾರು ಸಹ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದು ನಿಂತುಕೊಳ್ಳುವುದು ಕಾಲಿನಿಂದ ಒದೆಯುವುದನ್ನು ಮಾಡಬಾರದು, ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದರೆ ಅವರಿಗೆ ಈಗಿನಿಂದಲೇ ಎಚ್ಚರಿಸಿ ಹೊಸ್ತಿಲನ್ನು ತುಳಿಯದೆ ಕುಳಿತುಕೊಳ್ಳದೇ ಇರುವ ರೀತಿಯಲ್ಲಿ ನೋಡಿಕೊಳ್ಳಿ ಒಂದು ವೇಳೆ ಅವರು ಚಿಕ್ಕವಯಸ್ಸಿನಲ್ಲಿ ಗೊತ್ತು ಗೊತ್ತಿಲ್ಲದೆಯೋ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ನಂತರ ಅವರು ಈ ರೀತಿಯಾದ ಬಂಗುವಿನ ದೋಷಗಳಿಗೆ ಒಳಗಾಗಬೇಕಾಗುತ್ತದೆ, ಒಮ್ಮೆ ಏನಾದರೂ ಬಂಗುವಿನ ಸಮಸ್ಯೆ ಬಂದರೆ ಅದು ದೀರ್ಘಕಾಲದವರೆಗೆ ಕಾಡದೆ ಬಿಡದು ಆದ್ದರಿಂದ ಎಚ್ಚರಿಕೆಯನ್ನು ವಹಿಸುವುದು ಉತ್ತಮ.