What is your bath time :ನಿಮ್ಮ ಸ್ನಾನದ ಸಮಯ ಯಾವುದು!

Written by Anand raj

Published on:

What is your bath time :ಶಾಸ್ತ್ರವು ನಮಗೆ ಯಾವ ಸಮಯದಲ್ಲಿ ಏನು ಮಾಡಬೇಕು, ಯಾವ ರೀತಿ ಆಹಾರವನ್ನು ಸೇವಿಸಬೇಕು ಎನ್ನುವುದನ್ನು ಕಲಿಸುವುದರ ಜೊತೆಜೊತೆಗೆ ಸ್ನಾನವನ್ನು ಯಾವ ಸಮಯದಲ್ಲಿ ಮಾಡಬೇಕು ಎನ್ನುವುದನ್ನು ಕೂಡ ಹೇಳಿದೆ. ಹಿಂದೂ ಧರ್ಮದಲ್ಲಿ ವಿಶೇಷ ದಿನಗಳಾದ ಸಂಕ್ರಾಂತಿ, ಅಮಾವಾಸ್ಯೆ, ಪೂರ್ಣಿಮಾ ಇತ್ಯಾದಿ ದಿನಗಳಲ್ಲಿ ಪವಿತ್ರ ನದಿ ಸ್ನಾನವು ಪುಣ್ಯವನ್ನು ಕರುಣಿಸುತ್ತದೆ ಎನ್ನುವ ನಂಬಿಕೆಯಿದೆ. ಓರ್ವ ವ್ಯಕ್ತಿ ದೈಹಿಕವಾಗಿ ಶುದ್ಧನಾಗಲು ಪ್ರತಿಯೊಂದು ದಿನವೂ ಸ್ನಾನ ಮಾಡಬೇಕೆಂದು ಹೇಳಲಾಗಿದೆ. ಸ್ನಾನ ನಮಗೆ ದೈಹಿಕ ಆರೋಗ್ಯವನ್ನು ನೀಡುವುದು ಮಾತ್ರವಲ್ಲ, ಮಂಗಳಕರ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಮನಸ್ಸನ್ನು ಶುದ್ಧಗೊಳಿಸುತ್ತದೆ. ಹಾಗಾದರೆ, ನಾವು ಯಾವ ಸಮಯದಲ್ಲಿ ಸ್ನಾನ ಮಾಡಬೇಕು..?

ಹಿಂದೂ ಶಾಸ್ತ್ರಗಳಲ್ಲಿ ಸ್ನಾನ ಮಾಡುವುದಕ್ಕೆ ಬ್ರಹ್ಮ ಮುಹೂರ್ತವು ಅತ್ಯಂತ ಪ್ರಶಸ್ಥವಾದ ಸಮಯ ಎಂದು ಹೇಳಲಾಗಿದೆ. ಈ ಸಮಯವನ್ನು ಸ್ನಾನ ಮಾಡಲು, ಶುದ್ಧವಾದ ದೇಹ ಮತ್ತು ಮನಸ್ಸಿನೊಂದಿಗೆ ದೇವರ ಆರಾಧನೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಉತ್ತಮವೆಂದು ಹೇಳಲಾಗಿದೆ. ಒಂದು ವೇಳೆ ನಿಮಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಶಿವ ಅಥವಾ ಹರಿ ಮುಹೂರ್ತದಲ್ಲಿ ಸ್ನಾನ ಮಾಡಬಹುದು. ಬ್ರಹ್ಮ ಮುಹೂರ್ತದ ನಂತರ ಬರುವ ಸಮಯವೇ ಶಿವ ಮತ್ತು ಹರಿ ಸಮಯ. ಈ ಸಮಯ ಕೂಡ ಸ್ನಾನ ಮಾಡುವುದಕ್ಕೆ ಸೂಕ್ತವಾಗಿದೆ. ಆದರೆ, ಮಧ್ಯಾಹ್ನದ ಸಮಯದಲ್ಲಿ ಸ್ನಾನ ಮಾಡಬಾರದು. ಬದಲಾಗಿ ಸೂರ್ಯಾಸ್ತದ ಸಮಯದಲ್ಲಿ ಅಂದರೆ, ಸಂಜೆ ಸಮಯದಲ್ಲೂ ಸ್ನಾನ ಮಾಡಬಹುದು.

​ಸ್ನಾನ ಮಾಡಲು ಶುಭ ಸಮಯ​

ಈ ಮೇಲೆ ಹೇಳಿರುವಂತೆ, ಸ್ನಾನ ಮಾಡುವುದಕ್ಕೆ ಬ್ರಹ್ಮ ಮುಹೂರ್ತ, ಶಿವ ಮುಹೂರ್ತ ಮತ್ತು ಹರಿ ಮುಹೂರ್ತ ಮಂಗಳಕರ ಮುಹೂರ್ತವಾಗಿರುತ್ತದೆ. ಬ್ರಹ್ಮ ಮುಹೂರ್ತವು ಮುಂಜಾನೆ 3:30 ರಿಂದ ಆರಂಭವಾಗಿ ಮುಂಜಾನೆ 5:30 ಕ್ಕೆ ಮುಕ್ತಾಯಗೊಂಡರೆ, ಶಿವ ಮುಹೂರ್ತವು ಮುಂಜಾನೆ 6 ರಿಂದ ಬೆಳಗ್ಗೆ 8 ಗಂಟೆಯವರೆಗೆ ಇರುತ್ತದೆ. ಹಾಗೂ ಹರಿ ಮುಹೂರ್ತವು ಬೆಳಗ್ಗೆ 8 ರಿಂದ ಬೆಳಗ್ಗೆ 10 ಗಂಟೆಯವರೆಗೆ ಇರುತ್ತದೆ. ಈ ಮೂರು ಶುಭ ಮುಹೂರ್ತದಲ್ಲಿ ಸ್ನಾನ ಮಾಡುವುದು ನಿಮಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ.

​ಮಧ್ಯಾಹ್ನ ಸ್ನಾನವನ್ನೇಕೆ ಮಾಡಬಾರದು..?​

ಬೆಳಗ್ಗೆ 8 ರಿಂದ 10 ಗಂಟೆಯ ಸಮಯವು ಸ್ನಾನ ಮಾಡುವುದಕ್ಕೆ ಶುಭ ಸಮಯವಾದರೆ ಅದರ ನಂತರದ ಸಮಯ ಅಂದರೆ, ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರವರೆಗಿನ ಸಮಯವನ್ನು ಸ್ನಾನ ಮಾಡುವುದಕ್ಕೆ ಅಶುಭ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ಓರ್ವ ವ್ಯಕ್ತಿಯು ಅನಾರೋಗ್ಯಕ್ಕೆ ಗುರಿಯಾಗುತ್ತಾನೆ. ಅನಾರೋಗ್ಯದಿಂದ ಮುಕ್ತರಾಗುವುದಕ್ಕಾಗಿ ನೀವು ಈ ಮುಹೂರ್ತದಲ್ಲಿ ಸ್ನಾನ ಮಾಡಬಾರದು.

​ಸಂಜೆಯ ಸ್ನಾನ ಪ್ರಯೋಜನವೇ..?​

ಕೆಲವೊಮ್ಮೆ ಒಂದಲ್ಲ ಒಂದು ಕಾರಣಕ್ಕಾಗಿ ನಮಗೆ ಮಧ್ಯಾಹ್ನದ ಸಮಯದಲ್ಲೂ ಸ್ನಾನ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ಒಂದು ವೇಳೆ ಇಂತಹ ಪರಿಸ್ಥಿತಿ ಎದುರಾದರೆ, ಆಗ ನೀವು ಮಧ್ಯಾಹ್ನ ಸ್ನಾನದ ನಂತರ ಸಂಧ್ಯಾ ವಂದನೆ, ಆರತಿ ಮತ್ತು ಗಾಯತ್ರಿ ಮಂತ್ರವನ್ನು ಜಪಿಸಿ. ಇದರಿಂದ ನಿಮಗೆ ಯಾವುದೇ ಆರೋಗ್ಯದ ಸಮಸ್ಯೆಗಳಾಗಲಿ ಅಥವಾ ದೋಷಗಳಾಗಲಿ ಎದುರಾಗುವುದಿಲ್ಲ. ಮುಂಜಾನೆ ಸ್ನಾನ ಮಾಡಲು ಸಾಧ್ಯವಾಗದೇ ಇರುವವರು ಮಧ್ಯಾಹ್ನವನ್ನು ಬಿಟ್ಟು ಸಂಜೆ ಕೂಡ ಸ್ನಾನ ಮಾಡಬಹುದು. ಸಂಜೆ ನೀವು ಸ್ನಾನ ಮಾಡುವುದಾದರೆ, ಸಂಜೆ 4 ರಿಂದ 7 ಗಂಟೆಯವರೆಗೆ ಸ್ನಾನ ಮಾಡಬಹುದು. ಇದರ ನಂತರ ಸಂಧ್ಯಾ ವಂದನೆಯನ್ನು ಮಾಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

​ಸ್ನಾನ ಮಾಡುವುದರ ಪ್ರಯೋಜನಗಳು​

  • ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡುವ ವ್ಯಕ್ತಿಯು ಬುದ್ಧಿವಂತಿಕೆಯನ್ನು, ಅಪಾರ ಜ್ಞಾನವನ್ನು, ಉತ್ತಮ ಆರೋಗ್ಯವನ್ನು, ಜೀವನದಲ್ಲಿ ಸುಖ, ಶಾಂತಿ, ಶಕ್ತಿಯನ್ನು ಪಡೆದುಕೊಳ್ಳುತ್ತಾನೆ.
  • ಶಿವ ಮತ್ತು ಹರಿ ಮುಹೂರ್ತದಲ್ಲಿ ಸ್ನಾನ ಮಾಡುವವರು ಸಮಾಜದಲ್ಲಿ ಗೌರವ, ಕೀರ್ತಿ, ಯಶಸ್ಸು, ಸಂಪತ್ತು, ಸಂತೋಷ, ನೆಮ್ಮದಿ, ಆರೋಗ್ಯವನ್ನು ಹೊಂದುತ್ತಾರೆ.

Related Post

Leave a Comment