ಕೆಲವು ಕಡೆ ದೀಪಾವಳಿ ಅಮಾವಾಸ್ಯೆ ದಿನ ನೋಂಬು ಆಚರಣೆ ಮಾಡುತ್ತಾರೆ.ನೋಂಬು ಎಂದರೆ ವ್ರತದ ದಾರ. ಇದಕ್ಕೆ ಮೊದಲು ಎರಡು ಮರವನ್ನು ತೆಗೆದುಕೊಳ್ಳಬೇಕು. ನಂತರ ಸ್ವಚ್ಛ ಮಾಡಿ ಅರಿಶಿಣ ಕುಂಕುಮವನ್ನು ಹಚ್ಚಬೇಕು. ನಂತರ ಮರದ ಮೇಲೆ ಬಾಳೆ ಎಲೆ ಹಾಕಬೇಕು.ನಂತರ ಕೆಂಪು ನೋಂಬು ದಾರವನ್ನು ತೆಗೆದುಕೊಳ್ಳಬೇಕು.ಒಂದು ಕವಳೇ ವಿಳೇದೆಲೆ ತೆಗೆದುಕೊಳ್ಳಬೇಕು ಮತ್ತು ಬೋಟ್ಟಲು ಆಡಿಕೆ, ಅರಿಶಿಣ ಕೊಬ್ಬು, ನೋಂಬು ದಾರವನ್ನು ಎಲೆಯ ಮೇಲೆ ಇಟ್ಟು 11 ರೂಪಾಯಿ ದಕ್ಷಿಣೆ ಇಡಬೇಕು.ಅರಿಶಿಣ ಕುಂಕುಮ, ಊದುಬತ್ತಿ, ಕರ್ಪೂರ, ಎರಡು ಬಾಳೆ ಹಣ್ಣು, ಸೇಬು, ಕಿತ್ತಳೆ,ದಾಳಿಂಬೆ ಮತ್ತು 9 ಕಜ್ಜಾಯ ಇಡಬೇಕು. ನಂತರ ಹೂವು, ಕಾಯಿ ಇಟ್ಟು ಇನ್ನೊಂದು ಬಾಳೆ ಎಲೆಯಿಂದ ಮುಚ್ಚಬೇಕು. ಬಾಳೆ ಎಲೆ ಮೇಲೆ ಅಕ್ಷತೆ, ಹೂವು ಹಾಕಿ ಇನ್ನೊಂದು ಮರವನ್ನು ಮುಚ್ಚಿ ತೆಗೆದುಕೊಂಡು ಹೋಗಬೇಕು.
ಇದರ ಪದ್ಧತಿ ಏನೆಂದರೆ ದೇವಸ್ಥಾನದಲ್ಲಿ ಸಾಮಾನ್ಯವಾಗಿ ನೋಂಬು ಆಚರಣೆ ಇರುವ ದೇವಸ್ಥಾನಕ್ಕೆ ಹೋಗಿ ಇದನ್ನು ಕೊಟ್ಟು ಅಲ್ಲಿ ಕೇದಾರೇಶ್ವರ ವ್ರತ ಹೇಳಿ ಆಚರಣೆ ಮಾಡುತ್ತಾರೆ.ಕೆಲವೊಂದು ಮನೆಯಲ್ಲಿ ಈ ಪದ್ಧತಿ ಆಚರಣೆ ಮಾಡುತ್ತಾರೆ.ನಂತರ ಅವರು ದೇವಸ್ಥಾದಲ್ಲಿ ಅದನ್ನು ತೆಗೆದುಕೊಳ್ಳುತ್ತಾರೆ ಮತ್ತು ನೋಂಬು ದಾರವನ್ನು ಪೂಜೆ ಮಾಡುವ ದಿನ ಕೈಗೆ ಕಟ್ಟಿಕೊಂಡು ಪೂಜೆ ಮಾಡಿದರೆ ನಿಮಗೆ ದೀಪಾವಳಿ ಅಮಾವಾಸ್ಯೆ ಪೂಜೆ ಅಯ್ತು ಅಂತ ಅರ್ಥ.
ಕೇದಾರೇಶ್ವರ ಕಥೆ ಏನು ಎಂದರೆ ಒಂದು ಸಾರಿ ಕೈಲಾಸದಲ್ಲಿ ಶಿವ ಪಾರ್ವತಿ ಬೃಂಗಿ ಅವರ ನಾಟ್ಯ ಚಾತುರ್ಯವನ್ನು ನೋಡಿ ಶಿವನು ಇಷ್ಟವಾಗಿ ಅರಸುತ್ತಾರೆ.ಬೃಂಗಿಗೆ ಇಷ್ಟವಾಗಿ ಶಿವನಿಗೆ ಪ್ರದಕ್ಷಿಣೆ ಹಾಕುತ್ತಾರೆ ಆದರೆ ಪಾರ್ವತಿಗೆ ಬಿಟ್ಟು ಬಿಡುತ್ತಾರೆ. ಆಗ ಪಾರ್ವತಿಗೆ ಸಿಟ್ಟುಬಂದು ಶಿವನಲ್ಲಿ ಕೇಳಿಕೊಳ್ಳುತ್ತಾಳೆ ಅವರು ನನಗೆ ನಮಸ್ಕಾರ ಮಾಡಿಲ್ಲವೆಂದು.ಆಗ ಶಿವನು ಬೃಂಗಿಗೆ ಏನು ತಪ್ಪಿಲ್ಲ ಎಂದಾಗ ಪಾರ್ವತಿಗೆ ಸಿಟ್ಟು ಬರುತ್ತದೆ. ನಂತರ ಪಾರ್ವತಿ ಕೈಲಾಸದಿಂದ ಕೆಳಗೆ ಇಳಿದು ಬೃಂಗಿಯಲ್ಲಿ ಇದ್ದ ಶಕ್ತಿಯನ್ನು ತನ್ನ ಹತ್ತಿರ ಸೆಳೆದುಕೊಳ್ಳುತ್ತಾಳೆ.
ನಂತರ ಬೃಂಗಿ ಶಕ್ತಿಹೀನವಾದಾಗ ಆಗ ಶಿವನು ಒಂದು ಶಕ್ತಿಯನ್ನು ಕೊಡುತ್ತಾರೆ.ಬೀಳದೆ ಹಾಗೆ ನಿಂತಿರುವ ಹಾಗೆ. ನಂತರ ಪಾರ್ವತಿಗೆ ಸಿಟ್ಟು ಬಂದು ಕೈಲಾಸದಿಂದ ಹೊರಹೋಗುವುದಕ್ಕೆ ನಿಂತುಬಿಡುತ್ತಾರೆ. ನಂತರ ಸಭೆಯಲ್ಲಿದ್ದ ದೇವಾನುದೇವತೆಗಳು ಎಷ್ಟೇ ಕೇಳಿಕೊಂಡರು ಕೂಡ ಪ್ರಾರ್ಥನೆ ಮಾಡಿದರು ಕೂಡ ಪಾರ್ವತಿದೇವಿ ಅದನ್ನು ಕೇಳುತ್ತಿರಲಿಲ್ಲ. ಕೋಪ ಕಡಿಮೆಯಾದ ನಂತರ ಪಾರ್ವತಿದೇವಿಗೆ ಕೈಲಾಸ ಯಾಕೆ ಬಿಟ್ಟುಬಂದೆ ಎಂದು ಅನಿಸುತ್ತದೆ. ಬೇಜಾರು ಮಾಡಿಕೊಂಡು ಹೋಗುವಾಗ ಅರಣ್ಯದಲ್ಲಿ ಒಬ್ಬ ಋಷಿ ಸಿಗುತ್ತಾರೆ.ಆಗ ಪಾರ್ವತಿ ಋಷಿಯ ಹತ್ತಿರ ನನ್ನಿಂದ ತಪ್ಪಾಗಿದೆ ಮತ್ತೆ ನಾನು ಕೆಲಸಕ್ಕೆ ಹೋಗಬೇಕು ಶಿವನ ಅರ್ಧನಾರೇಶ್ವರಿ ಯಾಗಬೇಕು ಎಂದಾಗ ಈ ವ್ರತ ಮಾಡಬೇಕು ಎಂದು ಗೌತಮ ಋಷಿ ಅವರು ಇದನ್ನು ಹೇಳಿಕೊಡುತ್ತಾರೆ.21 ನೂಲಿನ ದಾರವನ್ನು ಕೈಗೆ ಕಟ್ಟಿಕೊಂಡು ಉಪವಾಸವಿದ್ದು ಈ ವ್ರತ ಆಚರಣೆ ಮಾಡಬೇಕು ಎಂದು ಹೇಳುತ್ತಾರೆ. ನಂತರ ಪಾರ್ವತಿ ವ್ರತವನ್ನು ಮಾಡಿ ಶಿವನ ಸಾನಿಧ್ಯವನ್ನು ಸೇರಿದ್ದರು ಎನ್ನುವ ಉಲ್ಲೇಖ ಇದೆ.