ಹೆಣ್ಣುಮಕ್ಕಳ ದೇಹದ ಮೇಲೆ ಈ ಗುರುತು ಇದ್ದರೆ ಶ್ರೀಮಂತರಾಗ್ತಾರೆ!

Written by Anand raj

Published on:

ಅಂಗೈಯಲ್ಲಿರುವ ಪ್ರತಿಯೊಂದು ರೇಖೆಗಳ ಹಿಂದೆ ಒಂದೊಂದು ಲಕ್ಷಣ ಹುದುಗಿರುತ್ತದೆ. ಅದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ ಅಷ್ಟೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಹುಡುಗಿಯರ ಕೈಯಲ್ಲಿನ ಕೆಲವು ಗುರುತುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಅದರ ಪ್ರಕಾರ ಹುಡುಗಿಯರ ಕೈಯಲ್ಲಿ ಇರುವ ಕೆಲವು ಗುರುತುಗಳು ಅವರು ಜೀವನದಲ್ಲಿ ಸಾಕಷ್ಟು ಯಶಸ್ಸು, ಗೌರವವನ್ನು ಪಡೆಯುತ್ತಾರೆ ಎಂಬುದನ್ನು ಸೂಚಿಸುತ್ತವೆ ಎನ್ನಲಾಗಿದೆ. ಆ ಚಿಹ್ನೆಗಳು ಯಾವುದು ತಿಳಿಯೋಣ ಬನ್ನಿ.

ನಮ್ಮ ಅದೃಷ್ಟ ನಮ್ಮ ಅಂಗೈಯಲ್ಲಿಯೇ ಇದೆ. ನಮ್ಮ ಅಂಗೈಯಲ್ಲಿ ಅಡಗಿರುವ ಚಿಹ್ನೆಗಳು ನಮ್ಮ ಬದುಕಿನ ಸೋಲು ಗೆಲುವುಗಳನ್ನು ತಿಳಿಸುತ್ತದೆ. ಹೌದು, ನಮ್ಮ ಬದುಕಿನಲ್ಲಿ ಯಶಸ್ಸು ಬೇಕೆಂದರೆ ನಮ್ಮ ಅಂಗೈ ರೇಖೆಯನ್ನು ತಿಳಿದುಕೊಂಡರೆ ಸಾಕು. ಹಸ್ತಾಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿರುವ ಪ್ರತಿಯೊಂದು ರೇಖೆಗಳ ಹಿಂದೆ ಒಂದೊಂದು ಲಕ್ಷಣ ಹುದುಗಿರುತ್ತದೆ. ಅದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ ಅಷ್ಟೆ.

ಹಸ್ತಸಾಮುದ್ರಿಕ ಶಾಸ್ತ್ರದ ಮುಖೇನ ಕೈಯಲ್ಲಿ ಭದ್ರವಾಗಿ ಗೀಚಿರುವ ಗೆರೆಗಳ ಮುಖಾಂತರ ನಿರ್ಧರಿಸಬಹುದು. ಧನ, ದೌಲತ್ತು, ಆಯಸ್ಸು, ಮಾನ, ಸಮ್ಮಾನ, ನೌಕರಿ, ವಿವಾಹ, ವಿವಾಹ ಜೀವನ ಸಂಬಂಧೀ ವಿಷಯಗಳನ್ನು ಹೇಳಬಹುದು. ಇನ್ನು ಹಸ್ತಸಾಮುದ್ರಿಕ ಶಾಸ್ತ್ರದವರು ನಿಮ್ಮ ಕೈಯಲ್ಲಿನ ಗೆರೆಗಳನ್ನು ಅಳೆಯತೊಡಗಿದರೆ ನಿಮ್ಮ ಜೀವನದ ರಹಸ್ಯವನ್ನು ಸವಿಸ್ತಾರವಾಗಿ ತೆರೆದಿಡುತ್ತಾರೆ. ನಿಮ್ಮ ಜೀವನದ ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ತನ್ನು ತೆರೆದಿಡುತ್ತಾರೆ. ಹಾಗಾದರೆ ಹೆಣ್ಣು ಮಕ್ಕಳ ಕೈಯಲ್ಲಿ ಯಾವೆಲ್ಲಾ ಚಿಹ್ನೆಗಳಿದ್ದರೆ ಏನಲ್ಲಾ ಅದೃಷ್ಟವನ್ನು ಅನುಭವಿಸ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

​ಮಹಿಳೆಯರ ಅಂಗೈಯಲ್ಲಿ ಈ ಗುರುತುಗಳಿದ್ದರೆ ಅದೃಷ್ಟ!

ಹಸ್ತಸಾಮುದ್ರಿಕ ತಜ್ಞರು ಹೇಳುವಂತೆ ಅಂಗೈಯ ರೇಖೆಗಳು ಜೀವನದಲ್ಲಿ ಬರುವ ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳ ಬಗ್ಗೆ ಹೇಳುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಹುಡುಗಿಯರ ಕೈಗಳ ಕೆಲವು ವಿಶೇಷ ಚಿಹ್ನೆಗಳು ಮಂಗಳಕರವಾಗಿರುತ್ತವೆ. ಇದು ಜೀವನದಲ್ಲಿ ಪ್ರಗತಿಯ ಸಂಕೇತಗಳನ್ನು ನೀಡುತ್ತದೆ. ಹುಡುಗಿಯ ಕೈ ಮಣಿಕಟ್ಟಿನ ಮಧ್ಯದಲ್ಲಿ ಯಾವುದೇ ಕಡಿತವಾಗದ ಅಥವಾ ಮುರಿದಿಲ್ಲದ ಮೂರು ಗೆರೆಗಳಿದ್ದರೆ, ಅಂತಹ ಮಹಿಳೆಯರು ಅದೃಷ್ಟವಂತರು. ಅಂತಹ ಮಹಿಳೆಯರು ಸದಾ ತಮ್ಮ ಕೈಯಲ್ಲಿ ಹೆಚ್ಚಿನ ರತ್ನಗಳನ್ನು ಅಥವಾ ಕೆಲವು ಆಭರಣಗಳನ್ನು ಧರಿಸುತ್ತಾರೆ.

​ಈ ರೇಖೆ ಇದ್ದರೆ ಶ್ರೀಮಂತ ಪತಿ ಪಡೆಯುವ ಯೋಗವಿರುತ್ತೆ!

ಮಹಿಳೆಯ ಕೈಯಲ್ಲಿ ಅದೃಷ್ಟ ರೇಖೆಯು ಚಂದ್ರನ ಪರ್ವತದಿಂದ ಹುಟ್ಟಿಕೊಂಡರೆ ಮತ್ತು ಗುರುವಿನ ಪರ್ವತಕ್ಕೆ ಹೋಗುತ್ತಿದ್ದರೆ, ಅಂತಹ ಹುಡುಗಿ ಶ್ರೀಮಂತ ವ್ಯಕ್ತಿಯನ್ನು ಗಂಡನ ರೂಪದಲ್ಲಿ ಪಡೆಯುತ್ತಾಳೆ. ಅಲ್ಲದೆ, ಅಂತಹ ಹುಡುಗಿ ಸಂತೋಷ, ಕೀರ್ತಿ ಇತ್ಯಾದಿ ಲಾಭಗಳನ್ನು ಪಡೆಯುತ್ತಾಳೆ. ಗಂಡನ ಮನೆಯಲ್ಲಿ ಸಕಲ ಸೌಭಾಗ್ಯಗಳನ್ನು ಅನುಭಿವಿಸುತ್ತಾಳೆ.

​ಇಂತಹ ಹುಡುಗಿಯರು ಬಹಳ ಪ್ರಸಿದ್ಧರಾಗುತ್ತಾರೆ

ಮೊದಲ ಬೆರಳಿನ ಮೇಲೆ ವೃತ್ತದ ಗುರುತು ಇದ್ದರೆ, ಅಂತಹ ಹುಡುಗಿಯರು ಜೀವನದಲ್ಲಿ ಬಹಳ ಪ್ರಸಿದ್ಧರಾಗುತ್ತಾರೆ ಎಂಬ ನಂಬಿಕೆ ಇದೆ. ಶ್ರೀಮಂತರಾಗುವುದರ ಜೊತೆಗೆ, ಅವರು ಬುದ್ಧಿವಂತರು ಮತ್ತು ಹೆಚ್ಚಿನ ಗೌರವವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ತಮ್ಮ ಅಂಗೈಯಲ್ಲಿ ಚಕ್ರದ ಗುರುತುಗಳನ್ನು ಹೊಂದಿರುವ ಹುಡುಗಿಯರು ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ಪಡೆಯುತ್ತಾರೆ. ತಮ್ಮ ಬೆರಳುಗಳ ಮೇಲೆ ವೃತ್ತದ ಗುರುತು ಹೊಂದಿರುವ ಹುಡುಗಿಯರು, ಜೀವನದಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆಯುತ್ತಾರೆ. ಈ ಹುಡುಗಿಯರು , ತುಂಬಾ ಬುದ್ಧಿವಂತರಾಗಿರುತ್ತಾರೆ. ಅವರ ಎಲ್ಲಾ ಆಸೆಗಳು ಈಡೇರುತ್ತವೆ. ಅಷ್ಟೇ ಅಲ್ಲ ಈ ಹೆಣ್ಣುಮಕ್ಕಳು ಸಮಾಜದಲ್ಲಿ ಹೆಮ್ಮೆಯಿಂದ ಬದುಕುತ್ತಾರೆ.

​ಅಂಗೈಯಲ್ಲಿ ವೃತ್ತದ ಗುರುತು

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ತನ್ನ ಎಡಗೈಯ ಅಂಗೈಯಲ್ಲಿ ಚಕ್ರದ ಗುರುತು ಹೊಂದಿರುವ ಮಹಿಳೆ ತುಂಬಾ ಮಂಗಳಕರ. ಅಂತಹ ಮಹಿಳೆಯರು ತಮ್ಮ ಜೀವನವನ್ನು ಉತ್ತಮವಾಗಿ ಮುನ್ನಡೆಸುತ್ತಾರೆ. ಸುಖ ಸಂಸಾರ ಜೀವನವನ್ನು ಅನುಭಿಸ್ತಾರೆ. ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ಪ್ರತಿ ಸಮಸ್ಯೆಗೂ ಸುಲಭವಾಗಿ ಪರಿಹಾರ ಕಂಡುಕೊಳ್ಳುತ್ತಾರೆ.

​ಅಂಗೈ ಮೇಲೆ ಧ್ವಜದ ಚಿಹ್ನೆ

ಮಹಿಳೆಯ ಕೈಯಲ್ಲಿ ಧ್ವಜದ ಚಿಹ್ನೆ ಇದ್ದರೆ, ಆ ಮಹಿಳೆ ತನ್ನ ಜೀವನದಲ್ಲಿ ಉನ್ನತ ಸ್ಥಾನವನ್ನು ಸಾಧಿಸುತ್ತಾಳೆ. ಅವರಿಗೆ ಸಮಾಜದಲ್ಲಿ ಗೌರವ ಹೆಚ್ಚು. ಒಂದು ವೇಳೆ ಇಂತಹ ಗುರುತು ಅದೃಷ್ಟ ರೇಖೆಯ ಬಳಿ ಇದ್ದರೆ ಅದು ಹೆಚ್ಚು ಪರಿಣಾಮ ಬೀರುತ್ತದೆ. ಇದರ ಜೊತೆಗೆ ಜೀವನದಲ್ಲಿ ಅಪಾರ ಯಶಸ್ಸು ಸಾಕಷ್ಟು ಖ್ಯಾತಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

​ಅಂಗೈ ಮೇಲೆ ಮೀನಿನ ಗುರುತು

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಮೀನಿನ ಚಿಹ್ನೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮೀನನ್ನು ವಿಷ್ಣುವಿನ ಸಂಕೇತವೆಂದು ಹೇಳಲಾಗುತ್ತದೆ. ಯಾರ ಕೈಯಲ್ಲಿ ಜೀವನ ರೇಖೆಯಲ್ಲಿ ಮೀನಿನ ಚಿಹ್ನೆ ಇರುತ್ತದೆಯೋ, ಅವರ ಅದೃಷ್ಟ ಬೆಳಗುತ್ತದೆ. ಅಂಗೈಯಲ್ಲಿ ಮೀನಿನ ಗುರುತು ಇರುವ ಮಹಿಳೆಯರು, ಅವರ ವೈವಾಹಿಕ ಜೀವನವು ತುಂಬಾ ಸಂತೋಷದಿಂದ ಸಾಗುತ್ತದೆ. ಅಂತಹ ಹೆಂಗಸರು ತಮ್ಮ ಪತಿಯಿಂದ ಮತ್ತು ಅತ್ತೆಯ ಮನೆಯವರೆಲ್ಲರಿಂದ ಪ್ರೀತಿಯನ್ನು ಪಡೆಯುತ್ತಾರೆ.

Related Post

Leave a Comment