ಹೊಸ ಮನೆ ಗೃಹಪ್ರವೇಶದಲ್ಲಿ ಸಂಪ್ರದಾಯಿಕವಾಗಿ ಹಾಲು ಉಕ್ಕಿಸುವ ವಿಧಾನ ಸರಿಯಾದ ವಿಧಾನ!

Written by Anand raj

Published on:

ಮನೆ ಕಟ್ಟಿ ನೋಡು.. ಒಂದು ಮದುವೆ ಮಾಡಿ ನೋಡು.. ಎನ್ನುವ ಗಾದೆಯನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ಆದರೆ ಈ ಗಾದೆಯ ಅರ್ಥ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಒಂದು ಮದುವೆ ಮಾಡಲು ಮುಂದಾದಾಗ ಎಷ್ಟೆಲ್ಲಾ ಕಷ್ಟಗಳು ಎದುರಾಗುತ್ತವೆಯೋ ಹಾಗೇ ಒಂದು ಮನೆಯನ್ನು ಕಟ್ಟಿ ಅದನ್ನು ಪ್ರವೇಶಿಸುವವರೆಗೂ ಒಂದಲ್ಲ ಒಂದು ಕಷ್ಟ ಎದುರಗೋದು ಸಾಮಾನ್ಯ. ಹೊಸ ಮನೆಯನ್ನು ಕಟ್ಟುವಾಗ ಆ ಮನೆಯ ಕುರಿತು ಸಾವಿರಾರು ಕನಸುಗಳನ್ನು ಕಾಣುತ್ತೇವೆ.

ಹೊಸ ಮನೆಗೆ ಪ್ರವೇಶಿಸುವ ಸಮಯದಲ್ಲಿ, ನಮ್ಮ ಮನಸ್ಸಿನಲ್ಲಿ ನಿರೀಕ್ಷೆಗಳ ಅಲೆಯೇ ಸೃಷ್ಟಿಯಾಗಿರುತ್ತದೆ. ಹೊಸ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಂಪತ್ತಿನ ಕೊರತೆ ಇರಬಾರದು ಎಂದು ಎಲ್ಲರೂ ಬಯಸುತ್ತಾರೆ. ಹಿಂದೂ ಧರ್ಮದಲ್ಲಿ ಹೊಸ ಗೃಹವನ್ನು ಪ್ರವೇಶಿಸುವಾಗ, ಮನೆಯ ಸಂತೋಷ ಮತ್ತು ಶಾಂತಿಗೆ ಅಗತ್ಯವಾದ ಅನೇಕ ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆ. ವಿಧಿ – ವಿಧಾನಗಳ ಮೂಲಕ ಗ್ರಹಪ್ರವೇಶವನ್ನು ಮಾಡಲಾಗುತ್ತದೆ. ಗೃಹ ಪ್ರವೇಶ ಮಾಡುವಾಗ ಒಂದು ಹೆಜ್ಜೆ ತಪ್ಪಾಗಿಟ್ಟರೂ ಆ ವ್ಯಕ್ತಿ ಮತ್ತು ಆತನ ಕುಟುಂಬ ಸಾಯುವ ತನಕ ನೋವಿನಲ್ಲೇ, ಕಷ್ಟದಲ್ಲೇ ಸಾಯಬೇಕಾಗುತ್ತದೆ.

ಗೃಹ ಪ್ರವೇಶವನ್ನು ಮಾಡುವ ಮುನ್ನ ಯೋಗ್ಯ ಜ್ಯೋತಿಷಿಗಳ ಬಳಿ ಶುಭ ಮುಹೂರ್ತವನ್ನು ಕೇಳಿ ನಿರ್ಧರಿಸುವುದು ಉತ್ತಮ. ಗೃಹ ಪ್ರವೇಶಕ್ಕಾಗಿ ಶುಭ ದಿನ, ಶುಭ ತಿಥಿ, ವಾರ ಹಾಗೂ ನಕ್ಷತ್ರ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮಾಘ, ವೈಶಾಖ, ಜ್ಯೇಷ್ಠ ಹಾಗೂ ಫಾಲ್ಗುಣ ಮಾಸಗಳಲ್ಲಿ ಗೃಹ ಪ್ರವೇಶ ಮಾಡುವುದು ಶುಭಕರ. ಆಷಾಢ, ಭಾದ್ರಪದ, ಅಶ್ವಿನಿ, ಪುಷ್ಯ ಹಾಗೂ ಶ್ರಾವಣ ಮಾಸಗಳಲ್ಲಿ ಗೃಹ ಪ್ರವೇಶ ಮಾಡುವುದು ಶುಭಕರವಲ್ಲ.

ವಾರದ ದಿನಗಳಲ್ಲಿ ಮಂಗಳವಾರವನ್ನು ಬಿಟ್ಟು ಯಾವುದೇ ದಿನಗಳಲ್ಲೂ ಕೂಡ ಗೃಹ ಪ್ರವೇಶವನ್ನು ನೀವು ಮಾಡಬಹುದು. ಆದರೆ ಕೆಲವೊಂದು ವಿಶಿಷ್ಟ ಸನ್ನಿವೇಶಗಳಲ್ಲಿ ಶನಿವಾರ ಮತ್ತು ಭಾನುವಾರ ಕೂಡ ಗೃಹ ಪ್ರವೇಶ ಮಾಡುವುದು ಸೂಕ್ತವಲ್ಲವೆಂದು ಹೇಳಲಾಗಿದೆ. ನೂತನ ಗೃಹವನ್ನು ಪ್ರವೇಶಿಸುವಾಗ ಬ್ರಾಹ್ಮಿ ಮುಹೂರ್ತದಲ್ಲಿ ಪ್ರವೇಶ ಮಾಡುವುದು ಶುಭ. ಅಕ್ಷಯ ತೃತೀಯ ಮತ್ತು ವಿಜಯ ದಶಮಿಗಳಂತಹ ಶುಭ ದಿನಗಳಲ್ಲೂ ಕೂಡ ಗೃಹ ಪ್ರವೇಶವನ್ನು ಮಾಡಬಹುದು.

ಕಲಶ, ತೆಂಗಿನಕಾಯಿ, ದೀಪ, ಪುಷ್ಪಗಳು, ಶುದ್ಧ ಜಲ, ಕುಂಕುಮ, ಅಕ್ಕಿ, ಧೂಪ ಬತ್ತಿ, ಐದು ಶುಭ ಮಂಗಳ ವಸ್ತುಗಳು, ತೋರಣಕ್ಕೆ ಮಾವು ಅಥವಾ ಅಶೋಕ ಮರದ ಎಲೆಗಳು, ಅರಿಶಿಣ, ಬೆಲ್ಲ, ಹಾಲು, ಗಣಪತಿ ವಿಗ್ರಹ, ವಿವಿಧ ಬಗೆಯ ಹಣ್ಣುಗಳು, ಸಿಹಿ ತಿನಿಸು ಹಾಗೂ ದೇವರಿಗೆ ನೈವೇದ್ಯ. ಹೋಮವನ್ನು ಮಾಡುವುದಕ್ಕಾಗಿ ಹೋಮ ಕುಂಡ, ಮರದ ಚಕ್ಕೆ ಅಥವಾ ಕಟ್ಟಿಗೆ, ಬೆಂಕಿ ಪೊಟ್ಟಣ, ತುಪ್ಪ, ಹವನದ ಪುಡಿ ಇತ್ಯಾದಿಗಳು.

ಗೋ ಪೂಜೆ–ಗೃಹ ಪ್ರವೇಶವನ್ನು ಮಾಡುವಾಗ ಮೊದಲು ಗೋ ಪೂಜೆಯನ್ನು ಮಾಡಲಾಗುತ್ತದೆ. ಯಾಕೆಂದರೆ ಗೋವನ್ನು ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರ ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ. ಗೃಹ ಪ್ರವೇಶದ ದಿನದಂದು ಗೋವನ್ನು ಅಲಂಕರಿಸಿ, ಹೂವಿನ ಹಾರವನ್ನು ಹಾಕಿ, ಹಸುವಿನ ಜೊತೆ ಕರುವಿದ್ದರೆ ಮತ್ತಷ್ಟು ಶುಭ ಎನ್ನುವ ನಂಬಿಕೆಯಿದೆ. ಗೋವನ್ನು ಮತ್ತು ಅದರ ಕರುವನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ ಅದಕ್ಕೆ ಸಿಹಿ ನೀಡುವ ಸಂಪ್ರದಾಯವಿದೆ.

ಹೊಸ್ತಿಲು ಪೂಜೆ:ಎರಡನೇ ಬಹುಮುಖ್ಯ ಅಂಶವೆಂದರೆ ಅದುವೇ ಈ ಹೊಸ್ತಿಲು ಪೂಜೆ. ಹೊಸ್ತಿಲಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎನ್ನುವ ಕಾರಣದಿಂದ ಗೃಹ ಪ್ರವೇಶದ ದಿನ ಹೊಸ್ತಿಲನ್ನು ಪೂಜಿಸಲಾಗುತ್ತದೆ. ಮನೆಯ ಹೊಸ್ತಿಲಿನಲ್ಲಿ ಗಣಪತಿ, ಲಕ್ಷ್ಮೀ ಮತ್ತು ಸರಸ್ವತಿಯರನ್ನು ಪೂಜಿಸಿ ದುಷ್ಟ ಶಕ್ತಿಗಳಿಂದ ಮನೆಯನ್ನು ರಕ್ಷಿಸುವಂತೆ ಪ್ರಾರ್ಥಿಸುತ್ತಾರೆ.

ಮನೆಯ ಒಡತಿ – ಒಡೆಯನ ಪ್ರವೇಶ:ಆ ಮನೆಯ ಒಡತಿ ಮೊದಲು ಕೈಯಲ್ಲಿ ತುಂಬಿದ ಕೊಡವನ್ನು ಹಿಡಿದು ಮನೆಯೊಳಗೆ ಪ್ರವೇಶಿಸಬೇಕು. ಆಕೆಯನ್ನು ಅನುಸರಿಸಿ ಮನೆಯ ಒಡೆಯ ಗಣಪತಿ ವಿಗ್ರಹವನ್ನು ಹಿಡಿದುಕೊಂಡು ಮನೆಯನ್ನು ಪ್ರವೇಶಿಸಬೇಕು. ನಂತರ ಮನೆಯ ಮಕ್ಕಳು ಐಶ್ವರ್ಯ, ಸಂಪತ್ತನ್ನು ಸೂಚಿಸುವ ವಸ್ತುಗಳನ್ನು ಹಿಡಿದುಕೊಂಡು ಮನೆಯನ್ನು ಪ್ರವೇಶಿಸಬೇಕು. ಕೊನೆಯದಾಗಿ ಸಂಬಂಧಿಕರು, ಬಂಧು – ಮಿತ್ರರು ಮನೆಯನ್ನು ಪ್ರವೇಶಿಸಬೇಕು.

ಗಣಪತಿ ಪೂಜೆ, ಲಕ್ಷ್ಮಿ ಪೂಜೆ ಮತ್ತು ನವಗ್ರಹ ಪೂಜೆ:ಮನೆಯನ್ನು ಪ್ರವೇಶಿಸಿದ ನಂತರ ಮನೆಯೊಳಗೆ ಗಣಪತಿ ಪೂಜೆಯನ್ನು ಮಾಡಲಾಗುತ್ತದೆ. ಮೊದಲು ಗಣಪತಿಯನ್ನು ಆಹ್ವಾನಿಸಿ ಪೂಜೆಯನ್ನು ಸಲ್ಲಿಸುತ್ತಾರೆ. ಮನೆಯ ಎಲ್ಲಾ ವಿಘ್ನಗಳನ್ನು ನಿವಾರಿಸಿ, ಮನೆಯ ನಿವಾಸಿಗರಿಗೆ ಶುಭವನ್ನು ತಾರೆಂದು ಗಣೇಶ ಹೋಮವನ್ನು ಮಾಡುವ ಮೂಲಕ ಭಕ್ತಿಯಿಂದ ಗಣೇಶನನ್ನು ಪೂಜಿಸಲಾಗುತ್ತದೆ. ಗಣಪತಿ ಹೋಮದ ನಂತರ ನವಗ್ರಹ ಹೋಮವನ್ನು ಮತ್ತು ಲಕ್ಷ್ಮಿ ಹೋಮವನ್ನು ಆಯೋಜಿಸಲಾಗುತ್ತದೆ.

ಹಾಲುಕ್ಕಿಸುವ ವಿಧಾನ:ಗೃಹ ಪ್ರವೇಶ ಪೂಜೆಯ ನಂತರ ಮನೆಯಲ್ಲಿ ಮೊದಲ ಬಾರಿಗೆ ಒಲೆ ಹೊತ್ತಿಸಿ ಹಾಲುಕ್ಕಿಸುವ ಸಂಪ್ರದಾಯವಿದೆ. ಪೂಜೆ ಮುಗಿದ ನಂತರ ಹಾಲನ್ನು ಕುದಿಸಿ, ಉಕ್ಕಿಸಿ ನಂತರ ಆ ಹಾಲನ್ನು ಮನೆಯ ಸದಸ್ಯರೆಲ್ಲರಿಗೂ ನೀಡಲಾಗುತ್ತದೆ. ಗೃಹ ಪ್ರವೇಶ ಮಾಡಿದ 24 ಗಂಟೆಗಳವರೆಗೆ ಆ ಮನೆಯನ್ನು ಖಾಲಿ ಬಿಡಬಾರದು.

ಎಲ್ಲಾ ಧರ್ಮಗಳಲ್ಲೂ ಅವರವರ ಧರ್ಮಕ್ಕೆ ಅನುಗುಣವಾಗಿ ಗೃಹ ಪ್ರವೇಶವನ್ನು ಮಾಡುತ್ತಾರೆ. ಆದರೆ ಈ ಮೇಲಿನ ಕ್ರಮಗಳನ್ನು ಹಿಂದೂ ಧರ್ಮದಲ್ಲಿ ಅನುಸರಿಸಲಾಗುತ್ತದೆ.

Related Post

Leave a Comment