ತಿರುಪತಿ ಹರಕೆ ಮುಡಿಯ ಅಸಲಿ ರಹಸ್ಯ!ನಿಲಾದ್ರಿ ಬೆಟ್ಟದ ಮಹಿಮೆ…

Written by Anand raj

Published on:

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳು ಹಾಗೂ ಸಂಪ್ರದಾಯಗಳು ಇವೆ. ಪ್ರತಿಯೊಂದು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಕೆಲವೊಮ್ಮೆ ಅವುಗಳನ್ನು ಕೇಳಲು ಮತ್ತು ನೋಡಲು ಆಶ್ಚರ್ಯವನ್ನು ಸೂಚಿಸಬಹುದು, ಆದರೆ ಅದರ ಹಿಂದೆ ಅನೇಕ ಹಿನ್ನೆಲೆಗಳು ಹಾಗೂ ಕಥೆ ಪುರಾಣಗಳು ಹೊಸೆದು ಕೊಂಡಿರುತ್ತವೆ. ದೇವರಿಗಾಗಿ ಮಾಡುವ ಕೆಲವು ಪದ್ಧತಿಗಳು ಮನುಷ್ಯನ ಜೀವನದಲ್ಲಿ ಬದಲಾವಣೆ ಹಾಗೂ ಶ್ರೇಯಸ್ಸನ್ನು ತಂದುಕೊಡುವುದು ಎನ್ನುವ ಪವಿತ್ರ ನಂಬಿಕೆ ಇರುವುದು ವಿಶೇಷ. ಇಂತಹ ನಂಬಿಕೆಗಳ ಬಗ್ಗೆ ಅನುಮಾನ ಹಾಗೂ ತಾತ್ಸಾರವನ್ನು ತೋರುವವರಿಗೆ ಕೆಲವು ಸಂಭವಿತ ಘಟನೆಗಳು ನಡೆಯುವುದರ ಮೂಲಕ ವಿಷಯಗಳನ್ನು ಒಪ್ಪಿಕೊಂಡ ಪುರಾವೆಗಳು ಇವೆ.

ಅನೇಕ ಸುಪ್ರಸಿದ್ಧ ದೇವಾಲಯಗಳಲ್ಲಿ ಜನರು ಕೆಲವು ಸಂಪ್ರದಾಯಗಳನ್ನು ಮಾಡುವುದು ಸುಪ್ರಸಿದ್ಧಿಯಾಗಿವೆ. ಅದರಲ್ಲಿ ತಿರುಪತಿ ಶ್ರೀನಿವಾಸ/ಬಾಲಾಜಿ ದೇವರಿಗೆ ಮುಡಿ ಕೊಡುವ ಪದ್ಧತಿಯೂ ಒಂದು. ಮುಡಿಕೊಡುವ ಸಂಪ್ರದಾಯವು ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ಧತಿ ಎನ್ನಬಹುದು. ಜನರು ತಮ್ಮ ಕಷ್ಟಗಳ ನಿವಾರಣೆಗಾಗಿ ದೇವರಲ್ಲಿ ಬೇಡಿಕೊಳ್ಳುವುದು, ತಮ್ಮ ಆಶಯಗಳನ್ನು ದೇವರು ಈಡೇರಿಸಿದ ಬಳಿಕ ತಿರುಪತಿಯ ಸನ್ನಿಧಿಗೆ ಬಂದು ತಮ್ಮ ಮುಡಿಯನ್ನು ಒಪ್ಪಿಸುವುದು ಒಂದು ಸಂಪ್ರದಾಯ ಹಾಗೂ ನಂಬಿಕೆಯಿಂದ ಕೂಡಿರುವ ಪದ್ಧತಿಯಾಗಿದೆ.

ತಿರುಪತಿ ಪ್ರಪಂಚದಾದ್ಯಂತ ಹೆಸರು ಪಡೆದುಕೊಂಡಿರುವ ದೇವಾಲಯ

ತಿರುಪತಿ ದೇವಸ್ಥಾನವು ಪ್ರಪಂಚದಾದ್ಯಂತ ಹೆಸರು ಪಡೆದುಕೊಂಡಿರುವ ದೇವಾಲಯ. ಅತ್ಯಂತ ಶಕ್ತಿಯುತವಾದ ಹಾಗೂ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿದರೂ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಕರಗಿಹೋಗುತ್ತವೆ. ಬದುಕಲ್ಲಿ ಭರವಸೆ ಹಾಗೂ ಸಂತೋಷದ ಆಶಾಕಿರವು ಮೂಡುವುದು. ಅದೇ ತಮ್ಮ ಸಮಸ್ಯೆಗಳ ಪರಿಹಾರವನ್ನು ಕೋರಿ ವಿಶೇಷ ಪೂಜೆ ಹಾಗೂ ತ್ಯಾಗವನ್ನು ಮಾಡುತ್ತೇನೆ ಎಂದು ಹೇಳಿ ಕೊಂಡರೆ ತಿರುಪತಿಯ ಶ್ರೀನಿವಾಸ ದೇವರು ಸಮಸ್ಯೆಯನ್ನು ಬಹುಬೇಗ ನಿವಾರಿಸುವನು. ಭಕ್ತನ ಜೀವನದಲ್ಲಿ ಸಾಕಷ್ಟು ನೆಮ್ಮದಿ ಹಾಗೂ ಆನಂದವನ್ನು ಕರುಣಿಸುವನು ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ.

ಶ್ರೀನಿವಾಸ ದೇವನು ಕಲಿಯುಗದ ಪ್ರತ್ಯಕ್ಷ ದೈವ

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ, ಸಪ್ತಗಿರಿ ವಾಸ ಶ್ರೀನಿವಾಸ ದೇವನು ಕಲಿಯುಗದ ಪ್ರತ್ಯಕ್ಷ ದೈವ. ತಿರುಪತಿಯಲ್ಲಿ ನೆಲೆಸಿ ಭಕ್ತರ ಉದ್ಧಾರ ಮಾಡುತ್ತಿರುವ ದಯಾಮಯಿ. ತಿರುಪತಿಯ ದೇವಸ್ಥಾನವವು ಭಾರತದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯ ಗಳಲ್ಲಿ ಒಂದು ಎಂದು ಹೇಳಗಾಗುವುದು. ಈದೇವಾಲಯದಲ್ಲಿ ಬಾಗಿಲನ್ನು ತೆಗೆಯುವುದರಿಂದ ಹಿಡಿದು ದೇವರಿಗೆ ಅಭಿಷೇಕ, ಪೂಜೆ, ಆರತಿಗಳನ್ನು ಮುಗಿಸಿ ಬಾಗಿಲನ್ನು ಮುಚ್ಚುವವರೆಗೂ ವಿಶೇಷವಾದ ಪಾರಂಪರಿಕ ವಿಧಿ-ವಿಧಾನಗಳಲ್ಲಿ ನೆರವೇರುತ್ತವೆ. ಇಲ್ಲಿ ನಡೆಯುವ ಪೂಜಾ ಪದ್ಧತಿಯು ಆಗಮ ಶಾಸ್ತ್ರದ ಪ್ರಕಾರ ನೆರವೇರುವುದು ಎನ್ನಲಾಗುವುದು.

ಈ ಸನ್ನಿಧಿಯಲ್ಲಿ ನಡೆಯುವ ವಿಸ್ಮಯಗಳು ಒಂದೆರಡಲ್ಲ. ಇಲ್ಲಿ ನಡೆದ ಪವಾಡ ಹಾಗೂ ಇತಿಹಾಸಗಳನ್ನು ಕೇಳಿದರೆ ರೋಮಾಂಚನವಾಗುವುದರಲ್ಲಿ ಸಂಶಯವಿಲ್ಲ. ಇಂತಹ ಒಂದು ಪವಾಡ ಕಥೆಗಳು ಹಾಗೂ ಹಿನ್ನೆಲೆಯನ್ನು ಹೊಂದಿರುವ ಪದ್ಧತಿಯೆಂದರೆ ಶ್ರೀನಿವಾಸನಿಗೆ ಮುಡಿಕೊಡುವುದು. ಪುರಾತನ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಈ ಪದ್ಧತಿಯು ಇಂದಿಗೂ ಇರುವುದನ್ನು ನಾವು ನೋಡಬಹುದು. ವ್ಯಕ್ತಿ ಸ್ವಯಂ ಇಚ್ಛೆಯಿಂದ ನೀಡುವ ಮುಡಿಯು ದೇವರಿಗೆ ಸಲ್ಲುತ್ತದೆ. ದೇವರು ಅವನಿಗಾಗಿ ಸಾಕಷ್ಟು ವಿಷಯದಲ್ಲಿ ಸಂತೋಷವನ್ನು ನೀಡುವನು ಎನ್ನುವ ನಂಬಿಕೆಯೂ ಇದೆ.

ಮುಡಿಕೊಡುವ ಪದ್ಧತಿ

ಈ ಒಂದು ಪದ್ಧತಿ ನಡೆದುಕೊಂಡು ಬರಲು ವಿಶೇಷವಾದ ಕಥೆ-ಪುರಾಣಗಳಿರುವುದು ವಿಶೇಷ. ಶ್ರೀನಿವಾಸನ ಸನ್ನಿಧಿಯಲ್ಲಿ ಜನರು ಏಕೆ ಇಂದಿಗೂ ಮುಡಿಕೊಡುವ ಪದ್ಧತಿಯನ್ನು ಮುಂದುವರಿಸಿ ಕೊಂಡು ಬರುತ್ತಿದ್ದಾರೆ? ಇದರ ಹಿಂದಿರುವ ಹಿನ್ನೆಲೆಯನ್ನು ಏನು ಎನ್ನುವುದಕ್ಕೆ ಒಂದು ಸುಂದರವಾದ ಕಥೆಯಿದೆ. ಈ ಕಥೆಯನ್ನು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ವಿವರರಣೆಯನ್ನು ಪರಿಶೀಲಿಸಿ.

ಮುಡಿ ನೀಡುವುದರ ಹಿಂದೆ ಇರುವ ಒಂದು ಪ್ರಸಿದ್ಧ ಕಥೆ

ತಿರುಪತಿ ಶ್ರೀನಿವಾಸ ದೇವರ ಮೂರ್ತಿಯನ್ನು ಯಾರೂ ಸ್ಥಾಪನೆ ಮಾಡಿರುವುದಲ್ಲ. ಅದು ಸ್ವಯಂ ಉದ್ಭವ ಮೂರ್ತಿ. ತಿರುಮಲ ಬೆಟ್ಟದಲ್ಲಿರುವ ಒಂದು ಹುತ್ತದೊಳಗೆ ಶ್ರೀನಿವಾಸ ದೇವರು ಇದ್ದನು. ಆಗ ಹಸುವೊಂದು ಅಲ್ಲಿಗೆ ಬಂದು ಹಾಲನ್ನು ಎರೆಯುತ್ತಿತ್ತು. ಶಿವನು ಹಸುವಿನ ರೂಪದಲ್ಲಿ ಬರುತ್ತಿದ್ದ ಎಂದು ಹೇಳಲಾಗುವುದು. ರಾಜ ಚೋಳ ಅರಸನ ಹಸುಗಳಲ್ಲಿ ಒಂದಾಗಿತ್ತು. ಅಲ್ಲಿರುವ ಹಸುಗಳನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ನೇಮಿಸಲಾಗುತ್ತಿತ್ತು. ಆ ದನ ಕಾಯುವವನು ಗಮನಿಸಿದಂತೆ ಕಾಮಧೇನು ಎನ್ನುವ ಹೆಸರಿನ ಹಸು ನಿತ್ಯವೂ ಹಾಲನ್ನು ನೀಡುತ್ತಿರಲಿಲ್ಲ. ಆ ಹಸು ಹಾಲನ್ನು ನೀಡದೆ ಇರುವುದಕ್ಕೆ ದನಕಾಯುವವನಿಗೆ ಅನುಮಾನ ಕಾಡಲು ಪ್ರಾರಂಭಿಸಿತು.

ಮುಡಿ ನೀಡುವುದರ ಹಿಂದೆ ಇರುವ ಒಂದು ಪ್ರಸಿದ್ಧ ಕಥೆ

ನಿಜವನ್ನು ತಿಳಿದುಕೊಳ್ಳುವ ಉದ್ದೇಶದಿಂದ ದನಕಾಯುವವನು ಹಸುವನ್ನು ಹಿಂಭಾಲಿಸಿದನು. ಮರೆಯಿಂದಲೇ ಹಸುವನ್ನು ಹಿಂಭಾಲಿಸುತ್ತಾ ಸಾಗಿದಾಗ ಅವನಿಗೊಂದು ಆಶ್ಚರ್ಯ ಕಾದಿತ್ತು. ಕಾಮಧೇನು ಹಸು ಹುತ್ತವೊಂದರ ಮೇಲೆ ಹಾಲನ್ನು ಸೊರೆಯುತ್ತಿತ್ತು. ಹಸುವು ಮಾಡುತ್ತಿರುವುದನ್ನು ಕಂಡ ದನಗಾಹಿಗೆ

ಕೋಪ ನಿಯಂತ್ರಿಸಿಕೊಳ್ಳಲು ಆಗಲಿಲ್ಲ. ತನ್ನ ಕೈಯಲ್ಲಿದ್ದ ಕೊಡಲಿಯಿಂದ ಹಸುವನ್ನು ಹೊಡೆಯಲು ಮುಂದಾದನು. ಹಸುವಿಗೆ ಹೊಡೆದ ಏಟು ತಪ್ಪಿ ಶ್ರೀನಿವಾಸನ ತಲೆಗೆ ತಗುಲಿತು. ಕೊಡಲಿ ತಾಗಿರುವ ತಲೆಯ ಭಾಗಕ್ಕೆ ಕೂದಲು ಹೋಯಿತು. ನಂತರ ಶ್ರೀನಿವಾಸನ ಪರಮ ಭಕ್ತೆ ನೀಲಾದೇವಿ ತನ್ನ ಕೂದಲನ್ನು

ನೀಲಾದೇವಿಯ ಭಕ್ತಿ ಹಾಗೂ ಕೆಲಸಕ್ಕೆ ಮೆಚ್ಚಿ ಶ್ರೀನಿವಾಸನು ನೀಲಾದೇವಿಗೆ ಒಂದು ವರವನ್ನು ನೀಡಿದನು. ಕಲಿಯುಗದಲ್ಲಿ ಭಕ್ತರು ನನ್ನ ಕ್ಷೇತ್ರಕ್ಕೆ ಬಂದು ಮುಡಿಯನ್ನು ನೀಡುತ್ತಾರೆ. ಆ ಮುಡಿಗಳು ನಿನ್ನ ಮೂಲಕವೇ ನನಗೆ ಅರ್ಪಣೆಯಾಗಲಿ ಎಂದು ಹೇಳಿದನು. ಈ ಹಿನ್ನೆಲೆಯಲ್ಲಿಯೇ ಭಕ್ತರು ಈಗಲೂ ತಲೆ ಕೂದಲು ಅಥವಾ ಮುಡಿಯನ್ನು ದೇವನಿಗೆ ಅರ್ಪಿಸುತ್ತಾರೆ. ಅದು ನೀಲಾದೇವಿಯ ಮೂಲಕವೇ ಪರಮಾತ್ಮನಾದ ಶ್ರೀನಿವಾಸನಿಗೆ ಅರ್ಪಣೆಯಾಗುತ್ತದೆ.

ನೀಲಾದೇವಿ ಜೋಡಿಸಿದ ಕೂದಲುಗಳೇ ಈಗಲೂ ಪರಮಾತ್ಮನ ಹಿಂಭಾಗದ ತಲೆಯಲ್ಲಿ ಇದೆ ಎಂದು, ದೇವಸ್ಥಾನದ ಆರಂಭದಲ್ಲಿ ಮಹಾದ್ವಾರದ ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಗೆ ತಲೆಯ ಮೇಲೆ ಹೊಡೆದಿರುವ ಗಾಯಗಳು ಇವೆ. ಹಾಗಾಗಿಯೇ ಶ್ರೀನಿವಾಸ ದೇವರಿಗೆ ತಲೆಯ ಆ ಭಾಗದಲ್ಲಿ ಗಂಧವನ್ನು ಹಚ್ಚುವ ಸಂಪ್ರದಾಯ ಕೂಡ ನಡೆದುಕೊಂಡು ಬಂದಿದೆ. ಇಂತಹ ಅನೇಕ ಅಚ್ಚರಿ ಸಂಗತಿಗಳು ಈ ದೇವಾಲಯದ ಕಥೆ ಹಾಗೂ ಇತಿಹಾಸದಲ್ಲಿ ಅಡಗಿವೆ. ಈ ಹಿನ್ನೆಲೆ

ಹಾಗೂ ನಂಬಿಕೆಯಿಂದಲೇ ಇಂದಿಗೂ ಜನರು ತಮ್ಮ ಇಷ್ಟಾರ್ಥ ಸಿದ್ಧಿಸಲಿ ಎಂದು ದೇವರ ದರ್ಶನಕ್ಕಾಗಿ ತೀರ್ಥ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಜೊತೆಗೆ ತಮ್ಮ ಮುಡಿಯನ್ನು ದೇವರಿಗೆ ಅರ್ಪಿಸುವುದರ ಮೂಲಕ ಪಾವನರಾಗುತ್ತಾರೆ.

ಆಧ್ಯಾತ್ಮಿಕ ಕಾರಣಗಳು

ದೇವರಿಗೆ ಮುಡಿ ಅರ್ಪಿಸುವುದಕ್ಕೆ ಆಧ್ಯಾತ್ಮಿಕ ಕಾರಣಗಳು ಇವೆ. ಕೂದಲು ವ್ಯಕ್ತಿಗೆ ನೈಸರ್ಗಿಕವಾಗಿ ಬಂದಿರುವ ಸೌಂದರ್ಯ ಎನಿಸಿಕೊಳ್ಳುತ್ತದೆ. ಸೌಂದರ್ಯದಲ್ಲಿ ಕುಂದುಂಟಾಗುವುದು ಅಥವಾ ಕುಂದುಂಟಾಗುವಂತೆ ಮಾಡಿಕೊಳ್ಳುವುದು ಎಂದರೆ ಅದು ಇಷ್ಟವಿರದ ಸಂಗತಿ ಎನಿಸಿಕೊಳ್ಳುವುದು. ತನ್ನ ಕೂದಲನ್ನು ತೆಗೆದು ಕೊಂಡರೆ ಸೌಂದರ್ಯ ಹಾಳಾಗುವುದು ಎನ್ನುವುದು ಎಲ್ಲರ ಮನಸ್ಸಿನಲ್ಲೂ ಇರುವ ಒಂದು ಸತ್ಯ. ಹಾಗಾಗಿ ಕೂದಲನ್ನು ಅಹಂನ ಸಂಕೇತ ಎಂದು ಹೇಳಲಾಗುವುದು. ಕೆಲವು ಸಾಮಾಜಿಕ ಶಿಕ್ಷೆಯಲ್ಲಿ ಕೂದಲು ತೆಗೆಯುವುದು ಆ ವ್ಯಕ್ತಿಗೆ ಮಾಡುವ ಶಿಕ್ಷೆ ಎಂದು ಪರಿಗಣಿಸಲಾಗುವುದು. ವ್ಯಕ್ತಿ ಸಾಮಾನ್ಯವಾಗಿ ಕೂದಲನ್ನು ಸಂಪೂರ್ಣ ವಾಗಿ ಕತ್ತರಿಸಿಕೊಳ್ಳುವುದಿಲ್ಲ. ಹಾಗೊಮ್ಮೆ ಕತ್ತರಿಸಿ ಕೊಂಡಿದ್ದಾನೆ ಅಥವಾ ಬೋಳಿಸಿಕೊಂಡಿದ್ದಾನೆ ಎಂದರೆ ಅದರ ಹಿಂದೆ ಒಂದು ಮಹತ್ತರವಾದ ಕಾರಣಗಳಿರುತ್ತವೆ ಎಂದು ನಂಬಲಾಗಿದೆ.

ಆಧ್ಯಾತ್ಮಿಕ ಕಾರಣಗಳು

ಕೂದಲು ಕತ್ತರಿಸುವುದು ಕಲ್ಯಾಣ ಕಟ್ಟ ಎಂದು ಕರೆಯಲಾಗುವುದು. ಅದನ್ನು ಅಂಹಂಕಾರವನ್ನು ತೊರೆಯುವ ಅಥವಾ ತ್ಯಾಗ ಮಾಡುವ ಒಂದು ಪರಿ ಮತ್ತು ಸಮರ್ಪಣೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ತಿರುಪತಿಯಲ್ಲಿ ಕೂದಲನ್ನು ತೆಗೆಸುವುದು ಅಥವಾ ದೇವರಿಗೆ ಮುಡಿ ನೀಡುವುದು ಎಂದರೆ ವ್ಯಕ್ತಿ ತನ್ನ ಅಹಂಅನ್ನು ಮತ್ತು ಅಹಂಕಾರವನ್ನು ತೊರೆದು ದೇವರಿಗೆ ಶರಣಾಗುವುದು ಎನ್ನುವ ಸಂದೇಶವನ್ನು ನೀಡುತ್ತದೆ. ಹಾಗಾಗಿ ದೇವರಿಗೆ ಮುಡಿ ನೀಡುವುದು ಒಂದು ಪವಿತ್ರವಾದ ಪದ್ಧತಿ ಅಥವಾ ನಂಬಿಕೆ ಎಂದು ಪರಿಗಣಿಸಲಾಗುವುದು. ತಿರುಪತಿಯಲ್ಲಿ ಕ್ಷೌರ ಅಥವಾ ಮುಡಿ ನೀಡಲು ಬಯಸಿದರೆ ದೇವರ ದರ್ಶನ

ಪುರುಷರು ಮತ್ತು ಮಹಿಳೆಯರು ಎನ್ನುವ ಬೇಧವಿಲ್ಲ

ಮುಡಿ ನೀಡಲು ಪುರುಷರು ಮತ್ತು ಮಹಿಳೆಯರು ಎನ್ನುವ ಬೇಧವಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರು ಬೇಕಾದರೂ ನೀಡಬಹುದು. ದೇವಾಲಯಕ್ಕೆ ಹೋಗುವ ಮುನ್ನ ನೀವು ಬ್ಲೇಡ್‍ಅನ್ನು ಕೊಂಡೊಯ್ದರೆ ಸಾಕು. ನೀವು ದೇವಾಲಯದ ಅಧಿಕಾರಿಗಳಿಗೆ ಅನುಮತಿ ಪಡೆದು ಉಚಿತವಾಗಿ ಕ್ಷೌರ ಮಾಡುವವರ ಮುಂದೆ ಇರುವ ಜನರ ಸಾಲಲ್ಲಿ ನಿಂತು ಕೂದಲು ಅರ್ಪಿಸ ಬಹುದು. ಕೂದಲು ಕತ್ತರಿಸಿದ ನಂತರ ಕ್ಷೌರಿಕನಿಗೆ ನೀವು ಹಣವನ್ನು ದಾನಮಾಡಬಹುದು. ಕೂದಲನ್ನು ತೆಗೆಸಿದ ನಂತರ ಸ್ನಾನ ಮಾಡಿ, ಬೇರೆ ಬಟ್ಟೆಯನ್ನು ತೊಟ್ಟು ದೇವರ ದರ್ಶನವನ್ನು ಪಡೆಯಬೇಕು.

Related Post

Leave a Comment