ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ನೀವು ಎಷ್ಟು ಕಷ್ಟಪಟ್ಟರು ಕೂಡ ಧನವಂತರಾಗುವುದಿಲ್ಲ!

Written by Anand raj

Published on:

ಒಂದು ವೇಳೆ ಉಪಯೋಗವಿಲ್ಲದ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.ಈ ಕೆಲವು ವಸ್ತುಗಳು ಉಪಯೋಗ ಇಲ್ಲದಿದ್ದರೆ ಮೊದಲು ಮನೆಯಿಂದ ಹೊರಗೆ ಹಾಕಿ.ಯಾಕೆಂದರೆ ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

1 , ಮನೆಯಲ್ಲಿ ಮುರಿದ ಕುರ್ಚಿ, ಟೇಬಲ್ ಇದ್ದಾರೆ ಅದನ್ನು ಮನೆಯಿಂದ ಹೊರಗೆ ಹಾಕಿ. ಮುರಿದ ಕುರ್ಚಿ ಟೇಬಲ್ ಇರುವುದರಿಂದ ಆದಾಯ ಕೂಡ ಬರುವುದಿಲ್ಲ. ಧನ ಸಂಪತ್ತಿನಲ್ಲಿ ಕೊರತೆಗಳು ಕಾಡುತ್ತವೆ.ಯಾವುದೇ ರೀತಿಯ ಮುರಿದ ವಸ್ತುವನ್ನು ಇಟ್ಟುಕೊಳ್ಳಬಾರದು.ಇವುಗಳಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇಂತಹ ವಸ್ತುಗಳು ಮನೆಯಲ್ಲಿರುವುದರಿಂದ ಮಾನಸಿಕ ತೊಂದರೆಗಳು ಉಂಟಾಗುತ್ತದೆ.

2, ಮುರಿದು ಹೋದ ಕನ್ನಡಿ,ಹರಿದು ಹೋದ ಫೋಟೋಗಳನ್ನು ಅಂಟಿಸಬಾರದು.

3, ಮುರಿದುಹೋದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.

4, ಬಳಸಿದ ಹಳೆಯ ಬಟ್ಟಲುಗಳನ್ನು, ಮುರಿದ ಟೀ ಕಪ್ ಗಳು ಮನೆಯಲ್ಲಿ ಇರಬಾರದು.

5, ಮನೆಯಲ್ಲಿ ಯಾವುದೇ ರೀತಿಯಾಗಿ ಯುದ್ಧದ ಚಿತ್ರಗಳನ್ನು ಅಂಟಿಸಬಾರದು ಮತ್ತು ಹರಿಯುತ್ತಿರುವ ನೀರಿನ ಚಿತ್ರವನ್ನು, ಮುಳುಗುತ್ತಿರುವ ಹಡಗಿನ ಚಿತ್ರವನ್ನು , ಕ್ರೂರ ಪ್ರಾಣಿಗಳ ಚಿತ್ರವನ್ನು, ಮುಳ್ಳು ಇರುವ ಚಿತ್ರವನ್ನು ಆಂಟಿಸಬಾರದು. ವಾಸ್ತುಶಾಸ್ತ್ರದ ಅನುಸಾರವಾಗಿ ಮನೆಯಲ್ಲಿ ಇಂತಹ ಚಿತ್ರಗಳನ್ನು ಇಟ್ಟುಕೊಳ್ಳುವುದರಿಂದ ಇವುಗಳ ಕೆಟ್ಟ ಪ್ರಭಾವ ಮನುಷ್ಯನ ಜೀವನದ ಮೇಲೆ ಬೀರುತ್ತದೆ. ವಿಶೇಷವಾಗಿ ಮಕ್ಕಳ ಮೇಲೆ ಬೀರುತ್ತದೆ.

6, ಕಾರಂಜಿ ಚಿತ್ರ ಮನೆಯಲ್ಲಿದ್ದರೆ ಹಣ ಬರುತ್ತದೆ ಆದರೆ ಅದು ವ್ಯರ್ಥವಾಗಿ ಹೋಗುತ್ತದೆ.

7, ಮನೆಯಲ್ಲಿ ಒಣಗಿದ ಸಸ್ಯಗಳು ಮರಗಳು ಇರಬಾರದು. ಗಿಡಗಳು ಒಣಗದಂತೆ ನೀವು ನೋಡಿಕೊಳ್ಳಬೇಕು ಹಾಗೂ ಮನೆಯೊಳಗೆ ತುಳಸಿ ಸಸ್ಯವನ್ನು ಇಡಬಾರದು.

8, ಮನೆಯಲ್ಲಿ ಒಡೆದುಹೋದ ಭಗವಂತನ ಫೋಟೋಗಳನ್ನು ಮತ್ತು ಮೂರ್ತಿಗಳನ್ನು ಇಟ್ಟುಕೊಳ್ಳಬಾರದು.ಇದರಿಂದ ಆರ್ಥಿಕ ಸಮಸ್ಯೆ ಎದುರಾಗುತ್ತದೆ.

9, ದೇವರ ಚಿತ್ರಗಳನ್ನು ಕೇವಲ ದೇವರಕೋಣೆಯಲ್ಲಿ ಅಂಟಿಸಬೇಕು ಮತ್ತು ಬೆಡ್ ರೂಮ್ ಗಳಲ್ಲಿ ದೇವರ ಚಿತ್ರವನ್ನು ಆಂಟಿಸಬಾರದು.

10, ಕಸವನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬಾರದು. ಇದರಿಂದ ಆರ್ಥಿಕ ಸ್ಥಿತಿಗಳು ತೊಂದರೆಗೆ ಒಳಗಾಗುತ್ತವೆ. ಆದ್ದರಿಂದ ಉಪಯೋಗ ಮಾಡದೇ ಇರುವ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿದರೆ ಒಳ್ಳೆಯದು.

Related Post

Leave a Comment