ತುಲಾರಾಶಿಯವರು ತುಂಬಾ ನಿಷ್ಠವಂತರು ಆದ್ರೂ ಅರೋಗ್ಯ ಸಮಸ್ಸೆ ಕಟ್ಟಿಟ್ಟ ಬುತ್ತಿ!ಈ ಬಣ್ಣದಿಂದ ಲಾಭ ಆಗುತ್ತದೆ!

Written by Anand raj

Published on:

ದ್ವಾದಶಿ ರಾಶಿಯಲ್ಲಿ 7ನೇ ರಾಶಿ ತುಲಾ ರಾಶಿ ಆಗಿದೆ. ತುಲಾ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಹಾಗು ಗಂಡು ಮಕ್ಕಳು ಅವರಲ್ಲಿ ಇರುವ ಗುಣ ಸ್ವಭಾವ ದಿಕ್ಕು ಶುಭ ಸಂಖ್ಯೆ ಹಾಗು ಶುಭವಾದ ಬಣ್ಣ ಎಲ್ಲಾವು ಕೂಡ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ತುಲಾ ರಾಶಿ ಎಂದು ನೋಡುವುದಾದರೆ ಪ್ರಮುಖವಾಗಿ ಬರುವುದು ಶುಕ್ರ ಅಧಿಪತಿ ಆಗುತ್ತಾನೆ. ಏಕೆಂದರೆ ಶುಕ್ರ ವಿಶೇಷವಾಗಿರುವಂತ ಪ್ರಬಲವಾಗಿರುವ ಗ್ರಹ ಆಗಿರುವುದರಿಂದ ತುಲಾ ರಾಶಿಯವರ ಗುಣ ಸ್ವಭಾವದಲ್ಲಿ ಇವರು ತುಂಬಾ ಬುದ್ದಿವಂತರು ಹಾಗು ಇವರು ತುಂಬಾ ವಾದ ಮಾಡುವ ಗುಣವನ್ನು ಹೊಂದಿರುತ್ತಾರೆ. ಯಾವುದೇ ಒಂದು ವಿಷಯವಾದರೂ ಅದನ್ನು ಪೂರ್ಣವಾಗಿ ಜೂಡ್ಜ್ ಮೆಂಟ್ ಮಾಡುವುದು ಅಧಿಕವಾಗಿರುತ್ತದೆ. ಆದರೂ ಕೂಡ ಇವರು ಬಹಳ ಶಾಂತಿ ಸ್ವಭಾವದವರು ಆಗಿರುತ್ತಾರೆ. ಇವರಿಗೆ ಇರುವ ಬುದ್ದಿವಂತಿಕೆ ತಾಳ್ಮೆ ಸಹನೆ ಬಹಳಷ್ಟು ಎತ್ತರ ಸ್ಥಾನ ಘಳಿಸುತ್ತಾರೆ. ಇವರು ಬಹಳ ಕ್ರಿಯಾಶೀಲರು ಆಗಿರುತ್ತಾರೆ.

ಇವರು ಲೀಡರ್ ಶಿಪ್ ಮಾಡುವುದು ಜಾಸ್ತಿ. ಇನ್ನು ಜಾತಕದಲ್ಲಿ 7ನೇ ಮನೆಯಲ್ಲಿ ರಾಹು ಇರುವ ಸಮಯದಲ್ಲಿ ಇವರಿಗೆ ಹೃದಯ ಸಂಬಂಧಪಟ್ಟ ಕೆಲವು ಅರೋಗ್ಯ ಸಮಸ್ಸೆಗಳು ಕಾಡುತ್ತವೆ. ಏಕೆಂದರೆ ರಾಹು 7ನೇ ಮನೆಯಲ್ಲಿ ನೀಚ ಸ್ಥಾನದಲ್ಲಿ ಇದ್ದಾಗ ಅಧಿಕವಾದ ಇವರಲ್ಲಿ ತೊಂದರೆಗಳು ಆಗುವಂತಹದ್ದು ಇರುತ್ತದೆ. ತುಲಾ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು ಹಾಗು ರಾಹು ನೀಚ ಸ್ಥಾನದಲ್ಲಿ ಇದ್ದಾಗ ಇಷ್ಟ ಪಟ್ಟವರಿಂದ ದೂರ ಆಗುವ ಸಾಧ್ಯತೆ ಕೂಡ ಇರುತ್ತದೆ.

ತುಲಾ ರಾಶಿಯವರ ಶುಭ ಸಂಖ್ಯೆ 5 ಮತ್ತು 9. ಇವರಿವೇ ಶುಕ್ರವಾರ ತುಂಬಾ ಒಳ್ಳೆಯ ಶುಭ ದಿನವಾಗಿದೆ. ಶುಕ್ರವಾರ ಯಾವುದೇ ಒಂದು ಕೆಲಸ ಮಾಡಿದರು ಯಶಸ್ಸು ಸಿಗುತ್ತದೆ. ತುಲಾ ರಾಶಿಯವರಿಗೆ ಅದೃಷ್ಟ ಕೊಡುವ ಬಣ್ಣ ಎಂದರೆ ಬಿಳಿ, ಹಸಿರು ಕೂಡ ತುಂಬಾ ಒಳ್ಳೆಯದು. ತುಲಾ ರಾಶಿಯವರಿಗೆ ಶುಭವಾದ ದಿಕ್ಕು ಪಶ್ಚಿಮ ದಿಕ್ಕಾಗಿದೆ.

Related Post

Leave a Comment