ನಾವು ಯಾವುದಾದರೂ ಕೆಲಸದಲ್ಲಿ ಹಿನ್ನಡೆ ಹೊಂದಿದರೆ, ಎಲ್ಲದಕ್ಕೂ ಯೋಗ ಬೇಕು ಎಂದು ಹಿರಿಯರು ಹೇಳಿದ್ದನ್ನ ಕೇಳಿದ್ದೇವೆ. ಇಂಥ ಯೋಗದಲ್ಲಿ ಲಕ್ಷ್ಮೀ ನಾರಾಯಣ ಯೋಗ ಕೂಡ ಒಂದು ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಜಾತಕದಲ್ಲಿ ಬುಧ ಮತ್ತು ಶುಕ್ರಗಳ ಸಂಯೋಗದಿಂದ ಲಕ್ಷ್ಮೀ ನಾರಾಯಣ ಯೋಗ ಬರುತ್ತದೆ. ಬುಧನು ವಿಷ್ಣು ಸ್ಥಾನದಲ್ಲಿದ್ದರೆ, ಶುಕ್ರ ಲಕ್ಷ್ಮೀ ಸ್ಥಾನದಲ್ಲಿರುತ್ತದೆ. ಹಾಗಾಗಿ ಈ ಯೋಗವನ್ನು ಲಕ್ಷ್ಮೀ ನಾರಾಯಣ ಯೋಗ ಎಂದು ಕರೆಯಲಾಗುತ್ತದೆ.
ಇದೊಂಥರ ರಾಜಯೋಗವಿದ್ದಂತೆ. ಈ ಸಮಯದಲ್ಲಿ ವ್ಯಕ್ತಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಸಫಲನಾಗುತ್ತಾನೆ. ಬುದ್ಧಿವಂತಿಕೆ ಹೆಚ್ಚಾಗುತ್ತದೆ. ಕಲೆಯಲ್ಲಿ ಆಸಕ್ತಿ ಬರುತ್ತದೆ. ಯಾವುದಾದರೂ ಕಲೆಯಲ್ಲಿ ಆತನಿಗೆ ಆಸಕ್ತಿ ಇದ್ದರೆ, ಆತ ಉತ್ತಮ ಕಲಾವಿದನಾಗುತ್ತಾನೆ. ಬದುಕಿನಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಉದ್ಯೋಗದಲ್ಲಿ ಉನ್ನತಿ ಕಾಣುತ್ತಾನೆ. ಧನ ಧಾನ್ಯ ಅವನ ಪಾಲಾಗುತ್ತದೆ.
ಆದರೆ ಈ ಯೋಗವಿದ್ದರೂ ಕೂಡ, ಜಾತಕದಲ್ಲಿ ಶುಕ್ರ ದುರ್ಬಲನಾಗಿದ್ದರೆ, ಎಲ್ಲವೂ ಉಲ್ಟಾ ಆಗುತ್ತದೆ. ಅನಾರೋಗ್ಯ, ಯಾವ ಕೆಲಸಕ್ಕೆ ಕೈ ಹಾಕಿದರೂ ಹಿನ್ನಡೆ, ಮನೆಯಲ್ಲಿ ಎಂದಿಗೂ ಕಲಹ, ಉದ್ಯೋಗದಲ್ಲಿ ಕಿರಿಕಿರಿ, ಇತ್ಯಾದಿ ಸಮಸ್ಯೆಗಳು ತಲೆದೂರುತ್ತದೆ.