ಬಿಪಿ ಸಮಸ್ಸೆಗೆ ಕೇವಲ ಜ್ಯೂಸ್ ಸಾಕು ನಿಮ್ಮ ಹತ್ತಿರನು ಸುಳಿಯಲ್ಲ!

Written by Anand raj

Published on:

ಜೀವನ ಶೈಲಿ ಬದಲಾದ ಹಾಗೆ ಆಹಾರ ಪದ್ಧತಿ ಕೂಡ ಬದಲಾಗುತ್ತಿದೆ. ಇಲ್ಲಿ ಕೇವಲ ನಾವು ರುಚಿಗೆ ಆದ್ಯತೆ ಕೊಡುತ್ತಿದ್ದೇವೆ. ಹೀಗಾಗಿ ಚಿಕ್ಕ ವಯಸ್ಸಿಗೆ ಬಿಪಿ ಶುಗರ್ ಸಮಸ್ಸೆ ಶುರುವಾಗುತ್ತಿದೆ. ವಯಸ್ಸಾದವರು ಮಾತ್ರ ತಿನ್ನುತ್ತಿದ್ದ ದಿನಗಳು ದೂರವಾಗಿ ಚಿಕ್ಕ ವಯಸ್ಸಿಗೆ ಬಿಪಿ ಮಾತ್ರೆಗಳನ್ನು ಪ್ರತಿ ದಿನ ತಿನ್ನುವ ಅಭ್ಯಾಸ ನಮ್ಮದಾಗಿದೆ. ಅದರೆ ವೈದ್ಯರು ಹೇಳಿದ ಹಾಗೆ ರಕ್ತದ ಒತ್ತಡವನ್ನು ಜಾಸ್ತಿ ಮಾಡಿಕೊಳ್ಳದೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ತೆಗೆದುಕೊಳ್ಳುವ ಔಷಧಿಗಳ ಜೊತೆಗೆ ಕೆಲವೊಂದು ಪಾನೀಯಗಳು ಕೂಡ ಅವಶ್ಯಕವಾಗಿದೆ.

ಕೊಬ್ಬು ಕಡಿಮೆ ಇರುವ ಹಾಲು

ಹಾಲು ತುಂಬಾ ಆರೋಗ್ಯಕಾರಿ ಪಾನೀಯ ಎಂದು ಪರಿಗಣಿಸಲಾಗಿದೆ. ಯಾಕೆಂದರೆ ಇದರಲ್ಲಿ ಪೊಟಾಶಿಯಂ, ಕ್ಯಾಲ್ಸಿಂ, ವಿಟಮಿನ್ ಡಿ ಮತ್ತು ಪೋಸ್ಪರಸ್ ಇದೆ.ಇಷ್ಟು ಮಾತ್ರವಲ್ಲದೆ ಇದರಲ್ಲಿ ಬೇರೆ ರೀತಿಯ ಹಲವಾರು ಪೋಷಕಾಂಶಗಳು ಕೂಡ ಇದೆ. ಕೊಬ್ಬು ಕಡಿಮೆ ಇರುವಂತಹ ಹಾಲು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಪರಿಹಾರ ನೀಡುವುದು.ಯಾಕೆಂದರೆ ಕೊಬ್ಬು ಇರುವಂತಹ ಹಾಲಿನ ಉತ್ಪನ್ನಗಳಲ್ಲಿ ಪಾಲ್ಮಿಟಿಕ್ ಆಮ್ಲ ಇದ್ದು, ಇದರಿಂದ ರಕ್ತನಾಳಗಳು ಬ್ಲಾಕ್ ಆಗುವುದು.

ಚಿಯಾ ಬೀಜ ಹಾಕಿದ ನೀರು

ಚಿಯಾ ಬೀಜದಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಇವೆ ಮತ್ತು ಇದು ರಕ್ತವನ್ನು ಶುದ್ಧೀಕರಿಸುವುದು ಮತ್ತು ರಕ್ತದೊತ್ತಡ ಕಡಿಮೆ ಮಾಡುವುದು. ಚಿಯಾ ಬೀಜಗಳು ಇರುವ ನೀರನ್ನು ಸೇವಿಸುವ ವಿಧಾನ.
ಅರ್ಧ ಗಂಟೆ ಕಾಳ ಚಿಯಾ ಬೀಜವನ್ನು ನೀರಿನಲ್ಲಿ ನೆನೆಸಲು ಹಾಕಿ.

ನೀರಿನಿಂದ ಬೀಜವನ್ನು ತೆಗೆಯಿರಿ.

ನೀರನ್ನು ಬೀಜಗಳು ಇಲ್ಲದೆ ಕುಡಿಯಿರಿ.ಇದನ್ನು ನೀವು ಒಂದು ತಿಂಗಳ ಕಾಲ ಮಾಡಿದರೆ ಅದರಿಂದ ಒಳ್ಳೆಯ ಫಲಿತಾಂಶ ಸಿಗುವುದು ಮತ್ತು ರಕ್ತದೊತ್ತಡ ಕೂಡ ಕಡಿಮೆ ಆಗುವುದು.

ದಾಳಿಂಬೆ ಜ್ಯೂಸ್

ಕೆಂಪು ಬೀಜಗಳಿರುವಂತಹ ಹಣ್ಣಿನಲ್ಲಿ ಪೊಟಾಶಿಯಂ ಅತ್ಯಧಿಕ ಮಟ್ಟದಲ್ಲಿದೆ ಮತ್ತು ಪೊಟಾಶಿಯಂ ಅಧಿಕವಾಗಿ ಇರುವಂತಹ ಆಹಾರವು ಅಧಿಕ ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.ಗ್ರೀನ್ ಟೀಗಿಂತಲೂ ಮೂರು ಪಟ್ಟು ಅಧಿಕ ಆಂಟಿಆಕ್ಸಿಡೆಂಟ್ ದಾಳಿಂಬೆ ಜ್ಯೂಸ್ ನಲ್ಲಿದೆ. ಪ್ರತಿನಿತ್ಯವೂ ದಾಳಿಂಬೆ ಜ್ಯೂಸ್ ಕುಡಿದರೆ ಅದರಿಂದ ಅಧಿಕ ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ.

ಆಪಲ್ ಸೀಡರ್ ವಿನೇಗರ್ ಪಾನೀಯ

ಆಪಲ್ ಸೀಡರ್ ವಿನೇಗರ್ ನಲ್ಲಿ ಇರುವಂತಹ ಆರೋಗ್ಯ ಲಾಭಗಳು ಪ್ರತಿಯೊಬ್ಬರಿಗೂ ತಿಳಿದೇ ಇದೆ. ಇದರಲ್ಲಿ ಪೊಟಾಶಿಯಂ ಸಹಿತ ಹಲವಾರು ಪೋಷಕಾಂಶಗಳು ಇವೆ.ಆಪಲ್ ಸೀಡರ್ ವಿನೇಗರ್ ಅನಗತ್ಯ ಸೋಡಿಯಂ ಮತ್ತು ವಿಷಕಾರಿ ಅಂಶವನ್ನು ದೇಹದಿಂದ ಹೊರಗೆ ಹಾಕುವುದು. ಈ ಪಾನೀಯದಲ್ಲಿ ಇರುವ ಕಿಣ್ವಗಳು ರಕ್ತದೊತ್ತಡ ಸಮತೋಲನದಲ್ಲಿ ಇಡುತ್ತದೆ.ಆಪಲ್ ಸೀಡರ್ ವಿನೇಗರ್ ಗೆ ಕೆಲವು ಹನಿ ಜೇನುತುಪ್ಪ ಹಾಕಿಕೊಳ್ಳಿ. ಇದನ್ನು ಬಿಸಿ ನೀರಿಗೆ ಹಾಕಿಕೊಂಡು ಕುಡಿದರೆ ಅದ್ಭುತವಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದು.ಇದನ್ನು ನೀವು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದಕ್ಕೆ ಸ್ವಲ್ಪ ಲಿಂಬೆರಸ ಹಾಕಿಕೊಂಡು ಕುಡಿದರೆ ಅದರಿಂದ ನಿಮಗೆ ಮತ್ತಷ್ಟು ಒಳ್ಳೆಯ ಆರೋಗ್ಯ ಲಾಭಗಳು ಸಿಗುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಮೆಂತೆ ಕಾಳುಗಳು

ನಾರಿನಾಂಶವು ಇರುವಂತಹ ಪಾನೀಯವು ರಕ್ತದೊತ್ತಡ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.ರಾತ್ರಿ ಸ್ವಲ್ಪ ಮೆಂತೆ ಕಾಳುಗಳನ್ನು ನೀರಿನಲ್ಲಿ ನೆನೆಯಲು ಹಾಕಿ ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.ಹೀಗೆ ಕೆಲವು ದಿನಗಳ ಕಾಲ ಮಾಡಿದರೆ ಅದರಿಂದ ರಕ್ತದೊತ್ತಡವು ನಿಯಂತ್ರಣಕ್ಕೆ ಬರುವುದು ಮತ್ತು ಇತರ ಕೆಲವು ಕಾಯಿಲೆಗಳನ್ನು ಕೂಡ ಇದು ತಡೆಯುತ್ತದೆ.

Related Post

Leave a Comment