ಮಹಾ ಶಿವರಾತ್ರಿಯ ದಿನ ಶಿವನಿಗೆ ಈ ಹೂ ಅರ್ಪಿಸಿದರೆ ಆಸ್ತಿ ಹಣ ಹುಡುಕಿ ಬರುತ್ತೆ!

Written by Anand raj

Published on:

ಪ್ರತಿಯೊಬ್ಬ ದೇವರಿಗೂ ಅವರಿಗೆ ಇಷ್ಟವಾದ ಹೂವಿದೆ. ಲಕ್ಷ್ಮಿ ಪೂಜೆಗೆ ಕಮಲದ ಹೂವನ್ನು ಮಾತ್ರ ಅರ್ಪಿಸಲಾಗುತ್ತದೆ, ಅದೇ ರೀತಿ ಭಗವಾನ್ ಕೃಷ್ಣನಿಗೆ ತುಳಸಿ, ಗಣೇಶನಿಗೆ ಬಿಳಿದಾಸವಾಳ ಎಂದರೆ ತುಂಬಾ ಇಷ್ಟ. ಅದೇ ರೀತಿ ಭಕ್ತರ ಕಷ್ಟಕ್ಕೆ ಕರಗುವ ಶಿವನಿಗೆ ಹಲವು ಹೂವುಗಳು ಬಹಳ ಇಷ್ಟ

ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಅನೇಕ ಕಥೆಗಳಿವೆ. ​ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಹೇಳಲಾಗುತ್ತದೆ. ಅಲ್ಲದೆ, ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಜತೆಗೆ, ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ.

ಇನ್ನು, ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ. ಹೀಗಾಗಿ ಭಕ್ತರು ಮಹಾ ಶಿವರಾತ್ರಿಯಂದು ಶಿವನನ್ನು ಮೆಚ್ಚಿಸಲು ಆತನಿಗೆ ಪ್ರಿಯವಾದ ಕೆಲಸಗಳನ್ನು ಮಾಡುತ್ತಾರೆ.. ಅದರಲ್ಲೂ ಬಹುಮುಖ್ಯವಾಗಿ ಮಹಾಶಿವರಾತ್ರಿಯಂದು ಶಿವನಿಗೆ ಇಷ್ಟವಾದ ಹೂವುಗಳನ್ನು ಅರ್ಪಿಸಿ ಪೂಜೆ ಸಲ್ಲಿಸುವುದರಿಂದ ಮನವೊಲಿಸಬಹುದು ಎಂಬ ಪ್ರತೀತಿ ಇದೆ.. ಹಾಗಿದ್ರೆ ಶಿವನಿಗೆ ಪ್ರಿಯವಾದ ಹೂವುಗಳು ಯಾವುದು ಎನ್ನುವುದನ್ನು ನೋಡೋಣ.

ಶಿವನಿಗೆ ಪ್ರಿಯವಾದ ಹೂವುಗಳು ಯಾವುದು..?

ಪ್ರತಿಯೊಬ್ಬ ದೇವರಿಗೂ ಅವರಿಗೆ ಇಷ್ಟವಾದ ಹೂವಿದೆ. ಲಕ್ಷ್ಮಿ ಪೂಜೆಗೆ ಕಮಲದ ಹೂವನ್ನು ಮಾತ್ರ ಅರ್ಪಿಸಲಾಗುತ್ತದೆ, ಅದೇ ರೀತಿ ಭಗವಾನ್ ಕೃಷ್ಣನಿಗೆ ತುಳಸಿ, ಗಣೇಶನಿಗೆ ಬಿಳಿದಾಸವಾಳ ಎಂದರೆ ತುಂಬಾ ಇಷ್ಟ. ಅದೇ ರೀತಿ ಭಕ್ತರ ಕಷ್ಟಕ್ಕೆ ಕರಗುವ ಶಿವನಿಗೆ ಹಲವು ಹೂವುಗಳು ಬಹಳ ಇಷ್ಟ..

ನಾಗಶಿವಲಿಂಗ ಪುಷ್ಪ

ಶಿವಕಮಲ ಹಾಗು ಮಲ್ಲಿಕಾರ್ಜುನ ಪುಷ್ಪ ಎಂದು ಕೂಡ ಕರೆಯಲಾಗುತ್ತದೆ.ಈ ಒಂದು ನಾಗಶಿವಲಿಂಗ ಪುಷ್ಪವು ಪ್ರಾಚೀನ ಕಾಲದಲ್ಲಿ ಕಾಡಿನ ಪ್ರದೇಶಗಳಲ್ಲಿ ಪವಿತ್ರವಾದ ಸ್ಥಳಗಳಲ್ಲಿ ಕಂಡು ಬರುತ್ತದೆ. ಈ ಪುಷ್ಪವು ಶಿವಲಿಂಗದ ಮೇಲೆ ಸರ್ಪವು ಎಡೆ ಎತ್ತಿರುವ ಹಾಗೆ ಕಾಣಿಸುತ್ತದೆ.ಈ ಬಾರಿ ಶಿವರಾತ್ರಿ ದಿನ ಈ ಒಂದು ಪುಷ್ಪವನ್ನು ಶಿವನಿಗೆ ಅರ್ಪಿಸಿದರೆ ಜನ್ಮ ಜನ್ಮದ ಪಾಪ ಕರ್ಮಗಳು ದರಿದ್ರ ದೋಷಗಳು ನಾಶಿಸಿ ಹೋಗುತ್ತವೆ.

ಕಾಡು ಕಣಗಿಲೆ: ಕಾಡು ಕಣಗಿಲೆ ಅಥವಾ ಕನೆರ್ ಎಂದು ಕರೆಯುವರು ಮಹಾ ಶಿವನಿಗೆ ಪ್ರಿಯವಾದ ಅವುಗಳಲ್ಲಿ ಒಂದು.. ಮಹಾಶಿವರಾತ್ರಿಯಂದು ಶಿವನಿಗೆ ಈ ಹೂವುಗಳನ್ನು ನೀಡಿ ಪ್ರಾರ್ಥನೆ ಸಲ್ಲಿಕೆ ಮಾಡುವುದರಿಂದ ಆಭರಣಗಳ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.ಅಲ್ಲದೆ ಶಿವಲಿಂಗದ ಮೇಲೆ ಕನೇರ್ ಹೂವುಗಳನ್ನು ಅರ್ಪಿಸುವ ಮೂಲಕ, ಉತ್ತಮ ಬಟ್ಟೆಯನ್ನು ಪಡೆಯುವ ಬಯಕೆ ನೆರವೇರುತ್ತದೆ.

ಗರಿಕೆ ಮತ್ತು ಪಾರಿಜಾತ: ಸಾಮಾನ್ಯವಾಗಿ ಗರಿಕೆ ಗಣೇಶನಿಗೆ ಪ್ರಿಯವಾದ ಹೂವು ಎಂದು ಹೇಳಲಾಗುತ್ತದೆ.. ಆದರೆ ಗರಿಕೆ ಗಣೇಶನ ಜೊತೆಗೆ ಶಿವನಿಗೆ ಅತ್ಯಂತ ಪ್ರಿಯ.. ಹೀಗಾಗಿ ಮಹಾ ಶಿವರಾತ್ರಿಯಂದು ಶಿವನ ಆರಾಧನೆ ಮಾಡುವ ವೇಳೆ ಪಾರಿಜಾತದ ಅವುಗಳ ಜೊತೆಗೆ ಗರಿಕೆಯನ್ನು ಅರ್ಪಿಸಿ ಪೂಜೆ ಸಲ್ಲಿಸುವುದರಿಂದ ಶಿವ ಇಷ್ಟಾರ್ಥಗಳನ್ನು ಈಡೇರಿಸುವ ಎಂಬ ನಂಬಿಕೆ.. ಇನ್ನು ಶಿವಲಿಂಗದ ಮೇಲೆ ಪಾರಿಜಾತ ಹೂವುಗಳನ್ನು ಅರ್ಪಿಸುವುದರಿಂದ ಸಂಪತ್ತು ಮತ್ತು ವೈಭವವನ್ನು ಹೆಚ್ಚಿಸುತ್ತದೆ. ಆದರೆ ಭೋಲಾನಾಥನಿಗೆ ಗರಿಕೆ ಅರ್ಪಿಸುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ

ಕಮಲ, ಶಂಖ ಪುಷ್ಪಾ ಮತ್ತು ಬಿಲ್ವಪತ್ರೆ: ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಕಮಲ, ಶಂಖಪುಷ್ಪ ಮತ್ತು ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಹಣಕಾಸಿನ ತೊಂದರೆ ನಿವಾರಣೆ ಯಾಗುತ್ತದೆ. ಒಂದು ಲಕ್ಷ ಹೂವುಗಳನ್ನು ಶಿವನಿಗೆ ಅರ್ಪಿಸಿದರೆ ಪಾಪಗಳು ನಾಶವಾಗುತ್ತವೆ ಎಂದು ಹೇಳಲಾಗುತ್ತದೆ.

ಮಲ್ಲಿಗೆ ಹೂವು : ಮಲ್ಲಿಗೆ ಹೂಗಳಿಂದ ಶಿವನನ್ನು ಪೂಜಿಸುವುದರಿಂದ ವಾಹನ ಯೋಗ ಪ್ರಾಪ್ತಿಯಾಗುತ್ತದೆ. ಅಲ್ಲದೆ ಪರಿಮಳಯುಕ್ತ ಹೂವುಗಳಿಂದ ಶಿವನನ್ನು ಪೂಜಿಸುವುದರಿಂದ, ಕಂಕಣ ಭಾಗ್ಯ ಕೂಡಿ ಬರುತ್ತದೆ.

ಶಮಿ ಮತ್ತು ಅಗಸೆ ಹೂವು: ಶಮಿ ಮತ್ತು ಅಗಸೆ ಹೂವುಗಳು ಭಗವಾನ ವಿಷ್ಣುವಿಗೆ ಪ್ರೀಯವಾದ ಹೂವುಗಳು.. ಮಹಾಶಿವರಾತ್ರಿಯಂದು ಶಿವನ ಜೊತೆಗೆ ವಿಷ್ಣುವಿನ ಅನುಗ್ರಹ ಸಹ ಬೇಕು ಎಂದರೆ ಶಮಿ ಮತ್ತು ಅಗಸೆ ಹೂವುಗಳನ್ನು ಶಿವಲಿಂಗಕ್ಕೆ ಅರ್ಪಿಸಿ ಪೂಜೆ ಸಲ್ಲಿಸುವುದು ಉತ್ತಮ.ಇನ್ನು ಅಗಸೆ ಹೂವುಗಳಿಂದ ಶಿವನನ್ನು ಪೂಜಿಸುವವರಿಗೆ ವಿಷ್ಣುವಿನ ಅನುಗ್ರಹವೂ ದೊರೆಯುತ್ತದೆ. ಮಹಾಶಿವರಾತ್ರಿಯ ದಿನದಂದು ಶಿವಲಿಂಗದ ಮೇಲೆ ಶಮೀಪತ್ರವನ್ನು ಅರ್ಪಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ.

ಎಕ್ಕ ಮತ್ತು ದತುರಾ ಹೂವು: ಧಾತುರಾ ಹೂ ಶಿವನಿಗೆ ಪ್ರಿಯವಾದುದು. ಆದರೆ ಧಾತುರಾವನ್ನು ಹೊರತುಪಡಿಸಿ, ಅಕಂಡದ ಹೂವು ಶಿವನಿಗೆ ಹೆಚ್ಚು ಇಷ್ಟ. ಇದನ್ನು ಕಿರೀಟ ಹೂವು ಎಂದು ಕರೆಯಲಾಗುತ್ತದೆ. ಭಕ್ತರು ಈ ಹೂವನ್ನು ಭಗವಂತನಿಗೆ ವಿಶೇಷವಾಗಿ ಅರ್ಪಿಸುತ್ತಾರೆ. ಮಹಾಶಿವರಾತ್ರಿಯ ದಿನದಂದು ಶಿವಲಿಂಗದ ಮೇಲೆ ಧಾತುರ ಮತ್ತು ಅದರ ಹೂವುಗಳನ್ನು ಅರ್ಪಿಸುವುದರಿಂದ ವಿಷಕಾರಿ ಜೀವಿಗಳ ಅಪಾಯ ನಾಶವಾಗುತ್ತದೆ. ಮತ್ತೊಂದೆಡೆ, ಶಿವಲಿಂಗದ ಮೇಲೆ ಎಕ್ಕದ ಹೂವುಗಳನ್ನು ಅರ್ಪಿಸುವುದರಿಂದ ಕಣ್ಣಿನ ರೋಗಗಳು ದೂರವಾಗುತ್ತವೆ.

Related Post

Leave a Comment