ಅಡುಗೆ ಮನೆಯಲ್ಲಿ ಈ ತಪ್ಪು ಮಾಡಿದರೆ ಸಾಲ ತಿರೋದಿಲ್ಲ?

Written by Anand raj

Published on:

ಅಡುಗೆ ಮನೆಯಲ್ಲಿ ಅನೇಕ ಪದಾರ್ಥಗಳಿವೆ. ಅವು ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಇವು ಮನೆಗೆ ಸಂತೋಷ ಮತ್ತು ಸಮೃದ್ಧಿ ತರುತ್ತವೆ. ಅಂತಹ ಸ್ಥಿತಿಯಲ್ಲಿ ನೀವು ಈ ವಸ್ತುಗಳನ್ನು ನೆರೆ ಹೊರೆಯವರಿಗೆ ನೀಡಿದರೆ ನಿಮ್ಮ ಮನೆಯ ಸಂತೋಷ ಮತ್ತು ಶಾಂತಿ ದೂರವಾಗಿ ಸಮಸ್ಯೆಗಳು ಕಾಡುತ್ತವೆ.

ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಸದಾ ನೆಲೆಸಲಿ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಬಯಕೆ. ಅದಕ್ಕಾಗಿ ಜನರು ಸಾಕಷ್ಟು ಪೂಜೆ-ಪುನಸ್ಕಾರ ಮಾಡುತ್ತಾರೆ. ಅದರಲ್ಲೂ ಮನೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಮುಖ್ಯವಾಗಿ ಕಾಳಜಿ ವಹಿಸಬೇಕು. ಗ್ರಹಗಳ ಅನುಸಾರ ವಾಸ್ತು ಶಾಸ್ತ್ರವು ಕೆಲವು ಸಲಹೆ ನೀಡುತ್ತದೆ. ಅದನ್ನು ಫಾಲೋ ಮಾಡುವುದು ತುಂಬಾ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಯಾರೇ ಕೇಳಿದ್ರೂ ಕೊಡಬಾರದು ಮತ್ತು ದಾನ ಮಾಡಬಾರದು ಎಂಬ ಸಾರ್ವತ್ರಿಕ ಗ್ರಹಶಾಂತಿಯ ನಿಯಮ ಜ್ಯೋತಿಷ್ಯ ಶಾಸ್ತ್ರದಲ್ಲಿದೆ. ಹಾಗಾದ್ರೆ ಯಾವೆಲ್ಲಾ ಪದಾರ್ಥಗಳ ದಾನ ಮಾಡಬಾರದು ಎಂದು ನೋಡೋಣ.

ಮನೆಯಲ್ಲಿರುವ ಕೆಲ ವಸ್ತುಗಳ ದಾನ ಮಾಡಬೇಡಿ ಎನ್ನುತ್ತೆ ವಾಸ್ತುಶಾಸ್ತ್ರ
ಮನೆಯಲ್ಲಿರುವ ಹಾಲು, ಮೊಸರು, ಬೆಳ್ಳಿ ವಸ್ತುಗಳು, ಬಿಳಿ ಬಟ್ಟೆ ಇತ್ಯಾದಿಗಳನ್ನು ದಾನ ಮಾಡಬಾರದು ಎನ್ನುತ್ತೆ ವಾಸ್ತುಶಾಸ್ತ್ರ. ಹಾಗೆಯೇ ಅಡುಗೆ ಮನೆಯಲ್ಲಿ ಅನೇಕ ಪದಾರ್ಥಗಳಿವೆ. ಅವು ಗ್ರಹಗಳೊಂದಿಗೆ ಸಂಬಂಧ ಹೊಂದಿವೆ.

ಇವು ಮನೆಗೆ ಸಂತೋಷ ಮತ್ತು ಸಮೃದ್ಧಿ ತರುತ್ತವೆ. ಅಂತಹ ಸ್ಥಿತಿಯಲ್ಲಿ ನೀವು ಈ ವಸ್ತುಗಳನ್ನು ನೆರೆ ಹೊರೆಯವರಿಗೆ ನೀಡಿದರೆ, ನಿಮ್ಮ ಮನೆಯ ಸಂತೋಷ ಮತ್ತು ಶಾಂತಿ ದೂರವಾಗಿ ಸಮಸ್ಯೆಗಳು ಕಾಡುತ್ತವೆ.

ಇನ್ನು ಮನೆಯ ಅಡುಗೆ ಮನೆಯಲ್ಲಿ ಇರಿಸಲಾದ ಕೆಲವು ವಸ್ತುಗಳು ಅದೃಷ್ಟದ ಸಂಕೇತ. ಹಾಗಾಗಿ ಅವುಗಳನ್ನು ಬೇರೆಯವರಿಗೆ ಕೊಡಬಾರದು. ವಾಸ್ತು ಪ್ರಕಾರ ಅವುಗಳು ಉತ್ತಮ ವಾತಾವರಣ ಒದಗಿಸುತ್ತವೆ. ಯಾವ ವಸ್ತುಗಳನ್ನು ದಾನ ಮಾಡಬಾರದು ನೋಡೋಣ.
ಅರಿಶಿನ

ಇದು ಅಡುಗೆಗೆ ಬಳಸುವ ಅಗತ್ಯ ಮಸಾಲೆ ಪದಾರ್ಥವಾಗಿದೆ. ಇದು ಆಯುರ್ವೇದ ಔಷಧ. ಅಲರ್ಜಿ ವಿರೋಧಿ ಗುಣದಿಂದಾಗಿ ಇದನ್ನು ಹಲವು ವಿಧಗಳಲ್ಲಿ ಬಳಸುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಅರಿಶಿನವು ಗುರು ಗ್ರಹಕ್ಕೆ ಸಂಬಂಧಿಸಿದೆ. ಅರಿಶಿನವನ್ನು ದಾನ ಮಾಡಿದರೆ ಗುರು ದೋಷ ಉಂಟಾಗುತ್ತದೆ.

ಜ್ಯೋತಿಷ್ಯದಲ್ಲಿ ಗುರುವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಇದರಿಂದ ವ್ಯಕ್ತಿ ಸಂಪತ್ತು, ವಿದ್ಯೆ, ಗೌರವ ಮತ್ತು ಕೀರ್ತಿ ಪಡೆಯುತ್ತಾನೆ. ಗುರುವಿನ ದೋಷದಿಂದ ಮನೆಯಲ್ಲಿ ಹಣದ ಕೊರತೆ, ಗೌರವ ಕಡಿಮೆಯಾಗುವುದು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಮಸ್ಯೆ ಹೆಚ್ಚುತ್ತವೆ. ಹಾಗಾಗಿ ಅಡುಗೆ ಮನೆಯಲ್ಲಿಟ್ಟಿರುವ ಅರಿಶಿನವನ್ನು ಯಾರಿಗೂ ದಾನ ಮಾಡಬೇಡಿ.

ಅಕ್ಕಿ

ಬಡವರಿಗೆ, ಬ್ರಾಹ್ಮಣರು ಮತ್ತು ಅನ್ನ ಪ್ರಸಾದಕ್ಕಾಗಿ ದೇವಸ್ಥಾನಗಳಲ್ಲಿ ದಾನ ಮಾಡುತ್ತಾರೆ. ಆದರೆ ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೆ ಮನೆಯಲ್ಲಿಟ್ಟಿರುವ ಅಕ್ಕಿಯನ್ನು ಬೇರೆಯವರಿಗೆ ನೀಡುವುದು ಶುಭವಲ್ಲ. ಅಕ್ಕಿ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಜ್ಯೋತಿಷ್ಯದಲ್ಲಿ ಶುಕ್ರ ಗ್ರಹವನ್ನು ಐಶ್ವರ್ಯ ಮತ್ತು ಭೌತಿಕ ಸಂತೋಷಗಳ ಅಂಶವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಅಕ್ಕಿ ಖಾಲಿಯಾಗುವುದು ಅಥವಾ ನೆರೆ ಹೊರೆಯವರಿಗೆ ಸಾಲ ನೀಡುವುದು ಶುಕ್ರ ದೋಷಕ್ಕೆ ಕಾರಣವಾಗುತ್ತದೆ.

ಶುಕ್ರ ದೋಷ ಉಂಟಾದರೆ ಕುಟುಂಬದಲ್ಲಿ ಕಲಹ, ಜೀವನದಲ್ಲಿ ಅಸಂತೋಷ, ಮನಸ್ಸು ಸದಾ ದುಃಖಿತವಾಗಿರುತ್ತದೆ. ಹಾಗಾಗಿ ಮನೆಯಲ್ಲಿರುವ ಅಕ್ಕಿ ಕೊಡಬೇಡಿ. ದಾನ ಮಾಡಲು ಬಯಸಿದರೆ, ಅದನ್ನು ಮೊದಲು ಮನೆಯಲ್ಲಿ ದೇವರಿಗೆ ಅರ್ಪಿಸಿ. ನಂತರ ಅಗತ್ಯವಿರುವವರಿಗೆ ದಾನ ಮಾಡಿ.

ಸಾಸಿವೆ ಎಣ್ಣೆ

ಅಡುಗೆ ಮನೆಯಲ್ಲಿ ಇಟ್ಟಿರುವ ಸಾಸಿವೆ ಎಣ್ಣೆ ಖಾಲಿಯಾಗಬಾರದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಸಿವೆ ಎಣ್ಣೆ ಶನಿ ಗ್ರಹಕ್ಕೆ ಸಂಬಂಧ ಪಟ್ಟಿದೆ. ಶನಿಯ ಕೋಪ ತಪ್ಪಿಸಲು ಮನೆಯ ಅಡುಗೆ ಮನೆಯಲ್ಲಿ ಸಾಸಿವೆ ಎಣ್ಣೆ ಖಾಲಿಯಾಗದಂತೆ ನೋಡಿಕೊಳ್ಳಿ. ನೆರೆ ಹೊರೆಯವರಿಗೆ ನೀಡಬೇಡಿ. ಶನಿ ದೇವರ ದೇವಸ್ಥಾನ ಮತ್ತು ನೈವೇದ್ಯ ಹಾಗೂ ದೀಪ ಹಚ್ಚುವಾಗ ಮಾತ್ರ ಮನೆಯಿಂದ ಹೊರಗೆ ಬಳಸಿ.

ಮನೆಯಲ್ಲಿಟ್ಟಿರುವ ಎಣ್ಣೆ ದಾನ ಮಾಡಿದರೆ ಶನಿಯ ಕೋಪಕ್ಕೆ ಬಲಿಯಾಗುತ್ತಾರೆ. ಶನಿಯ ಕೋಪದಿಂದ ಅನಗತ್ಯ ಉದ್ವೇಗ, ಪ್ರತಿ ಕೆಲಸದಲ್ಲಿ ಅಡೆತಡೆ, ಮಾಡಿದ ಕೆಲಸ ಹಾಳಾಗುತ್ತದೆ. ಹಾಗಾಗಿ ಶನಿ ಶಾಂತಿ ಮತ್ತು ಮನೆಯಲ್ಲಿ ಸಾಸಿವೆ ಎಣ್ಣೆ ಖಾಲಿಯಾಗದಂತೆ ನೋಡಿಕೊಳ್ಳಿ. ಮಂಗಳವಾರ ಮತ್ತು ಶನಿವಾರ ಸಾಸಿವೆ ಎಣ್ಣೆ ತರಬೇಡಿ.

ಉಪ್ಪು

ಅಡುಗೆ ಮನೆಯಲ್ಲಿಟ್ಟಿರುವ ಉಪ್ಪನ್ನು ಯಾರಿಗೂ ಕೊಡಬಾರದು. ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಪ್ಯಾಕೆಟ್ ಉಪ್ಪಿದ್ದರೆ ಖಂಡಿತಾ ಕೊಡಬಹುದು. ಆದರೆ ಅಡುಗೆ ಮನೆಯಲ್ಲಿ ಉಪಯೋಗಿಸುವ ಉಪ್ಪು ಕೊಡಬೇಡಿ. ಜ್ಯೋತಿಷ್ಯದಲ್ಲಿ ಉಪ್ಪನ್ನು ರಾಹುವಿಗೆ ಸಂಬಂಧಪಟ್ಟಿದೆ ಎಂದು ಪರಿಗಣಿಸಲಾಗುಗಿದೆ.

ಮನೆಯಲ್ಲಿ ಉಪ್ಪಿಲ್ಲದಿದ್ದರೆ ರಾಹು ಪ್ರಭಾವ ಬೀರುತ್ತದೆ. ರಾಹುವಿನ ಪ್ರಭಾವದಿಂದ ಬುದ್ಧಿ ಕೆಡುತ್ತದೆ, ಮನಸ್ಸಿನಲ್ಲಿ ತಪ್ಪು ಆಲೋಚನೆಗಳು ಬರುತ್ತವೆ, ಜೂಜು ಬೆಟ್ಟಿಂಗ್, ಕುಡಿತದ ಆಲೋಚನೆ ಬರುತ್ತವೆ. ಹಾಗಾಗಿ ಮನೆಯಲ್ಲಿರುವ ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳಿ.

Related Post

Leave a Comment