ನಿಮ್ಮ ಅಗೈಯಲ್ಲಿ ಈ ರೀತಿ ರೇಖೆ ಇದ್ದರೆ 2 ಮದುವೆ ಆಗುತ್ತೆ!

Written by Anand raj

Published on:

ಇನ್ನು ಹಸ್ತಸಾಮುದ್ರಿಕ ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಅವಿಭಾಜ್ಯ ಭಾಗವಾಗಿದೆ. ಮನುಷ್ಯನ ಭಾಗ್ಯದ ರೇಖೆಗಳು ಅವರವರ ಹಸ್ತದ ಮೇಲಿನ ರೇಖೆಗಳು ಮೊದಲೇ ನಿರ್ಧರಿಸಿರುತ್ತವೆ. ವ್ಯಕ್ತಿಯ ಅದೃಷ್ಟ/ದುರಾದೃಷ್ಟ ಆ ಕೈಯಲ್ಲಿನ ರೇಖೆಗಳು ನಿರ್ಧರಿಸಿಬಿಡುತ್ತವೆ. ಇದರಿಂದ ವ್ಯಕ್ತಿಯ ಜೀವನದ ಗತಿಯನ್ನು ತಿಳಿಯಬಹುದಾಗಿದೆ. ಹಾಗಾದರೆ ಇಲ್ಲಿ ವಿವಾಹಕ್ಕೆ ಸೀಮಿತಗೊಂಡು, ವಿವಾಹ ಸಂಬಂಧೀ ಹಸ್ತಸಾಮುದ್ರಿಕ ಶಾಸ್ತ್ರವನ್ನು ತಿಳಿದುಕೊಳ್ಳೋಣ.

ಕೆಲವರು ಕೈಯಾರೆ ತಮ್ಮ ವಿವಾಹ ಜೀವನವನ್ನು ಕಟ್ಟಿಕೊಳ್ಳತ್ತಾರೆ; ಇನ್ನು ಕೆಲವರು ಕೈಯಾರೆ ತಮ್ಮ ಮದುವೆ ಜೀವನವನ್ನು ಮುರಿದುಕೊಳ್ಳುತ್ತಾರೆ. ಈ ಮಧ್ಯೆ ಅದೇ ಕೈಯಲ್ಲಿನ ಹಸ್ತ ರೇಖೆಗಳೇ ಯಾವುದೇ ವ್ಯಕ್ತಿಯ ವಿವಾಹ ಜೀವನವನ್ನು ನಿರ್ಧರಿಸುತ್ತೆ ಅನ್ನುತ್ತದೆ ಹಸ್ತಸಾಮುದ್ರಿಕ ಶಾಸ್ತ್ರ (Palmistry). ಅಂದರೆ ಎಲ್ಲರ ಜೀವನದ ಶ್ರೇಯಸ್ಸು, ಅಪಯಶಸ್ಸು ತಮ್ಮ ಮುಷ್ಠಿಯಲ್ಲಿ ಭದ್ರವಾಗಿ ಉಳಿದಿರುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರ ಪ್ರಾಕಾರದಲ್ಲಿ ವ್ಯಕ್ತಿ ವೈವಾಹಿಕ (marriage) ಜೀವನದ ಗುಟ್ಟು ಅಡಗಿರುತ್ತದೆ. ಇನ್ನು ಕೆಲವರಿಗೆ ಒಂದಲ್ಲ; ಎರಡನೆಯ ವಿವಾಹ ಯೋಗ (second marriage) ಇದೆಯಾ ಎಂಬುದೂ ಹಸ್ತ ರೇಖೆ ಶಾಸ್ತ್ರದಲ್ಲಿ ಬರೆದಿಡಲ್ಪಡುತ್ತದೆ.

ಇನ್ನು ಹಸ್ತಸಾಮುದ್ರಿಕ ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಅವಿಭಾಜ್ಯ ಭಾಗವಾಗಿದೆ. ಮನುಷ್ಯನ ಭಾಗ್ಯದ ರೇಖೆಗಳು ಅವರವರ ಹಸ್ತದ ಮೇಲಿನ ರೇಖೆಗಳು ಮೊದಲೇ ನಿರ್ಧರಿಸಿರುತ್ತವೆ. ವ್ಯಕ್ತಿಯ ಅದೃಷ್ಟ/ದುರಾದೃಷ್ಟ ಆ ಕೈಯಲ್ಲಿನ ರೇಖೆಗಳು ನಿರ್ಧರಿಸಿಬಿಡುತ್ತವೆ. ಇದರಿಂದ ವ್ಯಕ್ತಿಯ ಜೀವನದ ಗತಿಯನ್ನು ತಿಳಿಯಬಹುದಾಗಿದೆ.

ಹಸ್ತಸಾಮುದ್ರಿಕ ಶಾಸ್ತ್ರದ ಮುಖೇನ ಕೈಯಲ್ಲಿ ಭದ್ರವಾಗಿ ಗೀಚಿರುವ ಗೆರೆಗಳ ಮುಖಾಂತರ ನಿರ್ಧರಿಸಬಹುದು. ಧನ, ದೌಲತ್ತು, ಆಯಸ್ಸು, ಮಾನ, ಸಮ್ಮಾನ, ನೌಕರಿ, ವಿವಾಹ, ವಿವಾಹ ಜೀವನ ಸಂಬಂಧೀ ವಿಷಯಗಳನ್ನು ಹೇಳಬಹುದು. ಇನ್ನು ಹಸ್ತಸಾಮುದ್ರಿಕ ಶಾಸ್ತ್ರದವರು ನಿಮ್ಮ ಕೈಯಲ್ಲಿನ ಗೆರೆಗಳನ್ನು ಅಳೆಯತೊಡಗಿದರೆ ನಿಮ್ಮ ಜೀವನದ ರಹಸ್ಯವನ್ನು ಸವಿಸ್ತಾರವಾಗಿ ತೆರೆದಿಡುತ್ತಾರೆ. ನಿಮ್ಮ ಜೀವನದ ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ತನ್ನು ತೆರೆದಿಡುತ್ತಾರೆ.

ಹಾಗಾದರೆ ಇಲ್ಲಿ ವಿವಾಹಕ್ಕೆ ಸೀಮಿತಗೊಂಡು, ವಿವಾಹ ಸಂಬಂಧೀ ಹಸ್ತಸಾಮುದ್ರಿಕ ಶಾಸ್ತ್ರವನ್ನು ತಿಳಿದುಕೊಳ್ಳೋಣ. ಕೈಯಲ್ಲಿನ ರೇಖೆಗಳ ಮೂಲಕ ನಿಮ್ಮ ವಿವಾಹ ಜೀವನದ ಮೌಲ್ಯಮಾಪನ ಮಾಡುವುದಾದರೆ,

ಹಸ್ತಸಾಮುದ್ರಿಕ ಶಾಸ್ತ್ರದ ಮುಖೇನ ಕೈಯಲ್ಲಿ ಭದ್ರವಾಗಿ ಗೀಚಿರುವ ಗೆರೆಗಳ ಮುಖಾಂತರ ನಿರ್ಧರಿಸಬಹುದು.

ಕೈಯಲ್ಲಿನ ಕಿರು ಬೆರಳು ಅತ್ಯಂತ ಚಿಕ್ಕದಾದರೂ ವಿವಾಹ ಸಂಬಂಧಿ ಬುಧನ ಸ್ಥಾನಮಾನವನ್ನು ನಿರ್ಧರಿಸುತ್ತದೆ. ಇದರ ಮುಖೇನ ಹಸ್ತದ ಹೊರ ಭಾಗದಿಂದ ಮೂಡಿರುವ ರೇಖೆಯನ್ನು ವಿವಾಹ ಸಂಬಂಧಿ ರೇಖೆ ಎಂದು ಕರೆಯುತ್ತಾರೆ. ಈ ವಿವಾಹ ರೇಖೆಯು ಎಷ್ಟು ಸ್ಪಷ್ಟವಾಗಿ ಮೂಡಿರುತ್ತದೋ ಆ ವ್ಯಕ್ತಿಯ ವಿವಾಹ ಜೀವನ ಅಷ್ಟು ಸುಸ್ಪಷ್ಟವಾಗಿ ಮೂಡಿರುತ್ತದೆ. ಅಂದರೆ ಉದ್ದನೆಯ, ಸ್ಪಷ್ಟ ವಿವಾಹ ರೇಖೆಯು ವ್ಯಕ್ತಿಯ ವಿವಾಹ ಜೀವನವನ್ನುನಿರ್ಧರಿಸುತ್ತದೆ. ಕೆಲವರಿಗೆ ಇಲ್ಲಿ ಒಂದೇ ರೇಖೆ ಇರುವುದಿಲ್ಲ. ಇದು ಟಿಸಿಲೊಡೆದು ಇನ್ನೂ ಕೆಲ ರೇಖೆಗಳು ಅಂಟಿಕೊಂಡಿರುತ್ತದೆ. ಅಂದರೆ ಅವರ ವಿವಾಹ ಜೀವನ ಒಂದೇ ವ್ಯಕ್ತಿಯೊಂದಿಗೆ ಇರುವುದಿಲ್ಲ. ಟಿಸಿಲೊಡೆದ ಆ ರೇಖೆಗಳ ಮಾದರಿ ಅವರ ವಿವಾಹ ಜೀವನವೂ ನಾನಾ ರೀತಿಯದ್ದಾಗಿರುತ್ತದೆ.

ಯಾರ ಕೈಯಲ್ಲಿ ವಿವಾಹ ರೇಖೆಯು ಹೃದಯ ರೇಖೆಯ ಸಮೀಪ ಇರುತ್ತದೋ ಅವರಿಗೆ ಮದುವೆ ಬೇಗನೇ ಆಗುತ್ತದೆ. ಅಂದರೆ 20 ವರ್ಷ ದಾಟುತ್ತಿದ್ದಂತೆ ಇವರಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ.

ಒಂದು ವೇಳೆ ವಿವಾಹ ರೇಖೆಯು ಆರಂಭದಲ್ಲಿಯೇ ಟಿಸಿಲೊಡೆದು ಎರಡು ಭಾಗವಾಗಿ ಮೂಡಿದ್ದರೆ ಇದರರ್ಥ ಆ ವ್ಯಕ್ತಿಯ ವಿವಾಹ ಜೀವನ ಮುರಿದುಬೀಳುತ್ತದೆ ಎಂದರ್ಥ. ಇನ್ನು ವಿವಾಹ ರೇಖೆ ಆರಂಭದಲ್ಲಿಯೇ ತುಂಡಾಗಿದ್ದರೆ ಆ ವ್ಯಕ್ತಿಗೆ ವಿವಾಹ ವಿಚ್ಛೇದವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮುಂದೆ ಆ ವ್ಯಕ್ತಿಗೆ ಎರಡನೆಯ ವಿವಾಹವಾಗುವ ಯೋಗವೂ ಇರುತ್ತದೆ.

ಇನ್ನು ಕೆಲವರ ಕೈಯಲ್ಲಿ ಎರಡು ವಿವಾಹ ರೇಖೆಗಳು ಇರುತ್ತವೆ. ಅದರಲ್ಲೊಂದು ಹೃದಯ ರೇಖೆಯ ಜೊತೆ ಮಿಲನಗೊಂಡಿರುತ್ತದೆ. ಅಂತಹ ವ್ಯಕ್ತಿಯೂ ಸ್ವಯಂ ಬಹು ವಿವಾಹಕ್ಕೆ ಹಾತೊರೆಯುತ್ತಾರೆ. ಮತ್ತು ಅದು ಅವರಿಗೆ ಕೈಗೂಡುತ್ತದೆ.

ಇನ್ನು, ಕೆಲವರ ಕೈಯಲ್ಲಿ ವಿವಾಹ ರೇಖೆ ಸ್ಪಷ್ಟವಾಗಿ ಮೂಡಿರುತ್ತದೆ. ಇದು ಶುಭದ ಸಂಕೇತ. ಉತ್ತಮ ವೈವಾಹಿಕ ಜೀವನದ ಸಂಕೇತವಾಗಿರುತ್ತದೆ. ಅದೇ ವಿವಾಹ ರೇಖೆಯು ಸೂರ್ಯ ರೇಖೆಯವರೆಗೂ ಲಂಬವಾಗಿ ಮೂಡಿದ್ದರೆ ಆ ವ್ಯಕ್ತಿಯ ವಿವಾಹವು ಸಮೃದ್ಧ ಮತ್ತು ಸುಖ ಸಂಪನ್ನ ಪರಿವಾರದೊಂದಿಗೆ ನೆರವೇರುತ್ತದೆ ಎಂದು ಹೇಳಬಹುದು.

Related Post

Leave a Comment