ಮನೆಯಲ್ಲಿ ಎಷ್ಟು ಕಿಟಕಿ ಬಾಗಿಲುಗಳು ಇದ್ದರೆ ಲಕ್ಷ್ಮಿದೇವಿ ಸಂತೋಷವಾಗಿ ಆ ಗೃಹದಲ್ಲಿ ಸ್ಥಿರ ನಿವಾಸ ಮಾಡುತ್ತರೆ!

Written by Anand raj

Published on:

ವಾಸ್ತು ಶಾಸ್ತ್ರ ಎಂಬುದು ನಮ್ಮ ಹಿಂದಿನ ಕಾಲದಿಂದಲೂ ನಂಬಿ ಕೊಂಡು ಬಂದಿರುವುದು ಮನೆ ಕಟ್ಟುವುದಕ್ಕೆ ಆಗಲಿ ಬಾಡಿಗೆ ಮನೆಗೆ ಹೋಗುವಾಗ ಆಗಲಿ ಒಟ್ಟಿನಲ್ಲಿ ವಾಸ್ತು ಸರಿ ಇದೀಯಾ ಎಂದು ನೋಡುತ್ತಾರೆ ವಾಸ್ತು ಶಾಸ್ತ್ರ ಎಂದರೆ ಯಾವ ಯಾವ ದಿಕ್ಕಿನಲ್ಲಿ ಏನು ಇರಬೇಕು ಎಂಬದನ್ನು ಸೂಚಿಸುವ ಜೊತೆಗೆ ಒಂದು ಮನೆ ಅಂದ ಮೇಲೆ ಅಲ್ಲಿ ಯಾವುದೇ ಒಂದು ವಸ್ತುವನ್ನು ಇಡಲು ಅದಕ್ಕೆ ಸೂಕ್ತವಾದ ಜಾಗವನ್ನು ನೋಡಿ ಇಡಬೇಕು ಹಾಗೆ ಇಟ್ಟರೆ ಎಲ್ಲವೂ ಒಳ್ಳೆಯದು ಆಗುತ್ತದೆ,

ಮಾರುತಿ ಗುರೂಜಿ ಹಾಗೂ ಮನೆಯಲ್ಲಿ ಇರುವ ಕಿಟಕಿ ಬಾಗಿಲು ಗಳು ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಹೊರ ಹಾಕಿ ಸಕಾರಾತ್ಮಕ ಶಕ್ತಿಯನ್ನು ಮನೆಯ ಒಳಗೆ ಪ್ರವೇಶ ಮಾಡಿಕೊಳ್ಳಲು ಸರಿಯಾದ ದಿಕ್ಕಿಗೆ ಕಿಟಕಿ ಬಾಗಿಲುಗಳು ಇರಬೇಕು, ಅದೇ ರೀತಿಯಾಗಿ ವಾಸ್ತು ಶಾಸ್ತ್ರದ ಪ್ರಕಾರ ಒಂದು ಮನೆ ಅಂತ ನಿರ್ಮಾಣ ಆದ ಮೇಲೆ ಅದಕ್ಕೆ ಇಂತಿಷ್ಟು ಬಾಗಿಲು ಇಂತಿಷ್ಟು ಕಿಟಕಿಗಳು ಇರಬೇಕು ಎಂಬ ನಿಯಮ ಇದೆ ಆಗಿದ್ದರೆ ಎಷ್ಟು ಬಾಗಿಲುಗಳು ಎಷ್ಟು ಕಿಟಕಿಗಳು ಇದ್ದರೆ ಒಳ್ಳೆಯದು ಎಂಬದನ್ನು ತಿಳಿಯೋಣ.

ಮನೆಯ ಮುಖ್ಯ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆಗೆ ಇರಬೇಕು ಇದರಿಂದ ಮನೆಗೆ ಸದಾ ಒಳ್ಳೆಯದು ಆಗುತ್ತದೆ ನೆಮ್ಮದಿ ಸಂತೋಷ ಎಂಬುದು ಈ ಮನೆಯಲ್ಲಿ ಆವರಿಸುತ್ತದೆ, ಮನೆಗೆ ಯಾವುದೇ ದುಷ್ಟ ಶಕ್ತಿಗಳ ಪ್ರವೇಶ ಆಗುವುದಿಲ್ಲ.

ಅದೇ ರೀತಿಯಾಗಿ ಮನೆಯ ಮುಖ್ಯ ದ್ವಾರ ಮೂಲೆಯಲ್ಲಿ ಇರಬಾರದು ಹಾಗೂ ಮನೆಯಲ್ಲಿ ಮೂರು ಬಾಗಿಲುಗಳು ಇರಬಾರದು. ಇದರಿಂದ ಧನಾತ್ಮಕ ಶಕ್ತಿ ಎಂಬುದು ದೂರ ಆಗುತ್ತದೆ. ಹಾಗೆಯೇ ಮನೆಯಲ್ಲಿ ಆರು ಬಾಗಿಲುಗಳು ಇದ್ದರೆ ಮನೆಯಲ್ಲಿ ಶಾಂತಿ ಎಂಬುದು ನೆಲೆಸುತ್ತದೇ. ಹಾಗೆಯೇ ಮನೆಯಲ್ಲಿ ಐದು ಅಥವಾ ಏಳು ಬಾಗಿಲುಗಳು ಇದ್ದರೆ ಮನೆಗೆ ಕಳ್ಳರ ಕಾಟ ಹೆಚ್ಚು ಇರುತ್ತದೆ. ಮನೆಯಲ್ಲಿ ಒಂದಲ್ಲ ಒಂದು ವಸ್ತುವನ್ನು ಕಳೆದು ಕೊಳ್ಳುತ್ತ ಇರುತ್ತೇವೆ. ಹಾಗೂ ಮನೆಯ ಮುಖ್ಯ ದ್ವಾರದ ಬಾಗಿಲಿನಲ್ಲಿ ದೇವರ ವಿಗ್ರಹಗಳನ್ನು ಕೆತ್ತನೆ ಮಾಡಿಸ ಬಾರದು ಇದರಿಂದ ದೇವರನ್ನು ಮನೆಯಿಂದ ಹೊರಗೆ ಇಟ್ಟಿರುವ ಹಾಗೆ ಆಗುತ್ತದೆ.

ಮನೆಯಲ್ಲಿ ಬಾಗಿಲುಗಳು ಸಮ ಸಂಖ್ಯೆಯಲ್ಲಿ ಇರಬೇಕು ಯಾವುದೇ ಕಾರಣಕ್ಕೂ ಬೆಸ ಸಂಖ್ಯೆಯಲ್ಲಿ ಇರಬಾರದು. ಹಾಗೂ ಮನೆಯ ಕಿಟಕಿ ಹಾಗೂ ಬಾಗಿಲುಗಳು ಎರಡು ಸೇರಿ ಸಮ ಸಂಖ್ಯೆಯಲ್ಲಿ ಇರಬಾರದು. ಮನೆಯ ಯಾವುದೇ ಕಿಟಕಿಗಳು ಚೌಕಕಾರ ಅಥವಾ ಆಯಾತ ಕಾರದಲ್ಲಿ ಇರಬೇಕು. ಮನೆಯಲ್ಲಿ ಯಾವುದೇ ಬಾಗಿಲುಗಳು ಯಾವುದೇ ಕಿಟಕಿಗಳು ಹೊಡೆದು ಹೋಗಿರ ಬಾರದು ಆಗಿದ್ದರೆ ತಕ್ಷಣ ಅದನ್ನು ಸರಿ ಪಡಿಸಬೇಕು.

Related Post

Leave a Comment