ಮಧುಮೆಹಿಗಳಿಗೆ ಹಲಸಿನ ಹಣ್ಣು ಹೇಗೆ ಉಪಯುಕ್ತ!

Written by Anand raj

Published on:

ಮಧುಮೇಹದಿಂದ ಬಳಲುತ್ತಿರುವ ಅಥವಾ ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯದಲ್ಲಿರುವ ಜನರು ಸಾಮಾನ್ಯವಾಗಿ ಕೆಲವು ಪದಾರ್ಥಗಳ ಸೇವನೆ ಮತ್ತು ಜೀವನಶೈಲಿಯಲ್ಲಿ ಮಾಡಿಕೊಳ್ಳಬಹುದಾದ ಬದಲಾವಣೆಗಳ ಬಗ್ಗೆ ತಜ್ಞರು ಸಲಹೆ ನೀಡುತ್ತಾರೆ.

ಭಾರತದ ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಹೃದ್ರೋಗ, ಮಧುಮೇಹ, ಹೊಟ್ಟೆ ಸಂಬಂಧಿ ಕಾಯಿಲೆಗಳು ಸೇರಿವೆ. ಅದರಲ್ಲೂ ಮಧುಮೇಹ ಭಾರತದಲ್ಲಿ ವೇಗಗತಿಯಲ್ಲಿ ಹೆಚ್ಚುತ್ತಿದೆ. ಮಕ್ಕಳು, ವೃದ್ಧರು, ಹದಿಹರೆಯದವರು, ವಯಸ್ಕರರು ಹೀಗೆ ಎಲ್ಲಾ ವರ್ಗದ ಜನರೂ ಸಹ ಈ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದರ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಭಾರತದಲ್ಲಿ ಮಧುಮೇಹ ಜನಸಂಖ್ಯೆಯ ಶೇಕಡಾ 8.7 ರಷ್ಟು ಜನರು 20 ರಿಂದ 70 ವರ್ಷ ವಯಸ್ಸಿನವರಾಗಿದ್ದಾರೆ. ಮಧುಮೇಹದಿಂದ ಬಳಲುತ್ತಿರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ.

ಸಮಯಕ್ಕೆ ಸರಿಯಾಗಿ ಮಧುಮೇಹ ಕಾಯಿಲೆಗೆ ಚಿಕಿತ್ಸೆ ಅಗತ್ಯ

ಸಮಯಕ್ಕೆ ಮಧುಮೇಹ ಕಾಯಿಲೆಗೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಕಣ್ಣು, ಹೃದಯ, ಮೂತ್ರಪಿಂಡ ಮತ್ತು ದೇಹದ ಇತರ ಭಾಗಗಳ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ.

ಮಧುಮೇಹದಿಂದ ಬಳಲುತ್ತಿರುವ ಅಥವಾ ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯದಲ್ಲಿರುವ ಜನರು ಸಾಮಾನ್ಯವಾಗಿ ಕೆಲವು ಪದಾರ್ಥಗಳ ಸೇವನೆ ಮತ್ತು ಜೀವನಶೈಲಿಯಲ್ಲಿ ಮಾಡಿಕೊಳ್ಳಬಹುದಾದ ಬದಲಾವಣೆಗಳ ಬಗ್ಗೆ ತಜ್ಞರು ಸಲಹೆ ನೀಡುತ್ತಾರೆ.

ಮಧುಮೇಹಿಗಳು ಹಲಸಿನ ಹಣ್ಣು ಸೇವಿಸಬೇಕು

ಕೆಲವು ಆಹಾರಗಳನ್ನು ತ್ಯಜಿಸುವಂತೆ ಮತ್ತು ಕೆಲವು ಪದಾರ್ಥಗಳನ್ನು ಸೇವನೆ ಮಾಡುವಂತೆ ಹೇಳಲಾಗುತ್ತದೆ. ಅದು ವ್ಯಕ್ತಿಯು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಲಸಿನ ಹಣ್ಣು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಇದು ಮಧುಮೇಹದಿಂದ ಬಳಲುತ್ತಿರುವವರಿಗೆ ಬಹಳಷ್ಟು ಪ್ರಯೋಜನ ನೀಡುತ್ತದೆ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಜೊತೆಗೆ ರೈಬೋಫ್ಲಾವಿನ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್ ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ.

ಹಲಸಿನ ಹಣ್ಣು ಸೇವಿಸುವುದರಿಂದ ಸಿಗುವ ಪ್ರಯೋಜನಗಳು

ಮುಂಬೈನ ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆಯ ಆಹಾರ ತಜ್ಞ ಡಾ. ಜಿನಾಲ್ ಪಟೇಲ್ ಹೇಳುವ ಪ್ರಕಾರ, ಹಲಸಿನ ಹಣ್ಣಿನಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇದೆ. ಹಲಸಿನ ಹಣ್ಣಿನ ಗ್ಲೈಸೆಮಿಕ್ ಸೂಚ್ಯಂಕವು ಒಂದರಿಂದ 100 ರ ಪ್ರಮಾಣದಲ್ಲಿ ಸುಮಾರು 50-60 ಆಗಿದೆ.

ಮಧುಮೇಹದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಹಸಿ ಹಲಸಿನ ಹಣ್ಣನ್ನು ತಿನ್ನಬೇಕು. ಇದು ಕಡಿಮೆ ಗ್ಲೈಸೆಮಿಕ್ ಅಂಶ ಹೊಂದಿದೆ. ಇದು ದೇಹದ ರಕ್ತದ ಸಕ್ಕರೆಯ ಮಟ್ಟ ಸಮತೋಲನದಲ್ಲಿಡಲು ಸಹಕಾರಿಯಾಗಿದೆ. ಹಲಸಿನ ಹಣ್ಣಿನಲ್ಲಿ ಕ್ಯಾಲೋರಿ ಕೂಡ ಕಡಿಮೆ ಇದೆ. ಆದಾಗ್ಯೂ ತಜ್ಞರು ಹೆಚ್ಚಿನ ಪ್ರಮಾಣದಲ್ಲಿ ಹಲಸಿನ ಹಣ್ಣನ್ನು ತಿನ್ನದಂತೆ ಎಚ್ಚರಿಸುತ್ತಾರೆ.

ಮಧುಮೇಹ ಇದ್ದವರು ಅತಿಯಾಗಿ ಹಸಿ ಹಲಸಿನ ಹಣ್ಣನ್ನು ಸೇವಿಸುವುದನ್ನು ತಪ್ಪಿಸಬೇಕು. ಹಲಸಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಇದೆ. ಇದು ದೇಹದ ದೈನಂದಿನ ಅಗತ್ಯಗಳನ್ನು ಪೂರೈಸುತ್ತದೆ. ಸಕ್ಕರೆ ಮತ್ತು ಕ್ಯಾಲೋರಿ ಕಡಿಮೆ ಇದೆ. ಹಾಗಾಗಿ ಬೇಯಿಸಿದ ಹಲಸಿನ ಹಣ್ಣಿಗಿಂತ ಹಸಿ ಹಲಸು ಮಧುಮೇಹ ರೋಗಿಗಳಿಗೆ ಉತ್ತಮ.ಆದರೆ ಹಸಿ ಹಲಸು ತಿಂದ ನಂತರ ದೇಹದ ಸಕ್ಕರೆ ಅಂಶದ ಮೇಲೆ ರೋಗಿಗಳು ನಿಗಾ ಇಡಬೇಕು ಎನ್ನುತ್ತಾರೆ ವೈದ್ಯರು. ಪ್ರಸಿದ್ಧ ಬಾಣಸಿಗ ಸಂಜೀವ್ ಕಪೂರ್ ಕೂಡ ಹಲಸಿನ ಹಣ್ಣಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪ್ರಯೋಜನಗಳನ್ನು ಶೇರ್ ಮಾಡಿದ್ದಾರೆ.

ಹಲಸು ತಿನ್ನುವುದನ್ನು ಯಾರು ತಪ್ಪಿಸಬೇಕು?

ಯಾವುದೇ ಪದಾರ್ಥವಿರಲಿ ಅದು ಎಷ್ಟು ಪ್ರಯೋಜನ ನೀಡುತ್ತದೆಯೋ ಅಷ್ಟೇ ಕೆಲ ಅಡ್ಡ ಪರಿಣಾಮ ಬೀರುತ್ತದೆ. ಹಲಸು ಕೆಲವು ಜನರಿಗೆ ಹಾನಿಕಾರಕವಾಗಿದೆ. ವಿಶೇಷವಾಗಿ ಬರ್ಚ್ ಪೋಲ್ ಅಲರ್ಜಿ ಹೊಂದಿರುವವರಿಗೆ ಇದರ ಸೇವನೆ ಪರಿಣಾಮ ಬೀರುತ್ತದೆ. ಬರ್ಚ್ ಪೋಲ್ ಅಲರ್ಜಿ ಇದು ವಸಂತ ಋತುವಿನಲ್ಲಿ ಬೀರುವ ಗಾಳಿಯ ಅಲರ್ಜಿ ಆಗಿದೆ.

ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇರುವವರು ಹಲಸು ತಿನ್ನುವುದನ್ನು ತಪ್ಪಿಸಬೇಕು. ಇದರ ಹೊರತಾಗಿ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೆ ಮುನ್ನ ಅಥವಾ ನಂತರ ಹಲಸು ತಿನ್ನಬಾರದು. ಕಿಡ್ನಿ ಸಮಸ್ಯೆಯಿದ್ದರೂ ಹಲಸು ತಿನ್ನಬಾರದು.ಹಲಸಿನ ಹಣ್ಣಿನಲ್ಲಿ ಪೊಟ್ಯಾಸಿಯಮ್ ಇದ್ದು ಅದು ರಕ್ತದಲ್ಲಿ ಸಂಗ್ರಹವಾಗುತ್ತದೆ. ಆಗ ನಿಮ್ಮ ನರಗಳು, ಜೀವಕೋಶಗಳು ಮತ್ತು ಸ್ನಾಯುಗಳು ಸರಿಯಾಗಿ ಕೆಲಸ ಮಾಡಲ್ಲ.

Related Post

Leave a Comment