ಮನೆಯ ಸಂಸ್ಕಾರಗಳು!

Written by Anand raj

Published on:

ಮನೆಯ ಸಂಸ್ಕಾರಗಳು ಯಾವುದು ಎಂದರೆ

-ಮದುವೆಯಾದ ಹೆಣ್ಣು ಮುತೈದೆ ಭಾಗ್ಯ ಪಡೆದುಕೊಂಡಿದ್ದು ಕಾಲುಂಗುರ ಮತ್ತು ಮಾಂಗಲ್ಯವನ್ನು ತೆಗೆದು ಇಡಬಾರದು ಹಾಗೆಯೇ ಮನೆಯಿಂದ ಹೊರಗಡೆ ಹೋಗಬಾರದು. ಇದರಿಂದ ಲಕ್ಷ್ಮಿ ಕೃಪೆ ಸಿಗುವುದಿಲ್ಲ.

-ದೇವರಿಗೆ ಉಪಯೋಗಿಸುವ ಕುಂಕುಮ ಮತ್ತು ಅರಿಶಿನವನ್ನು ಮನೆಗೆ ಬಂದ ಮಹಿಳೆಯರಿಗೆ ಕೊಡಬಾರದು. ಏಕೆಂದರೆ ದೇವರಿಗೆ ಹಚ್ಚುವ ಕುಂಕುಮ ಮಡಿಯಲ್ಲಿರಬೇಕು.

-ಮನೆಯೊಳಗೆ ಹೆಣ್ಣು ಕೂದಲು ಕಾದರಿಕೊಂಡು ಇರಬಾರದು. ಇದರಿಂದ ದರಿದ್ರ ಲಕ್ಷ್ಮೀಯು ಮನೆಯ ಒಳಗಡೆ ಪ್ರವೇಶ ಮಾಡುತ್ತಳೆ. ಕೂದಲು ಕೆದರಿಕೊಂಡು ಇರುವುದು ದರಿದ್ರ ಲಕ್ಷ್ಮಿಯ ಸಂಕೇತ.

–ಅಡುಗೆ ಮನೆ ಮತ್ತು ದೇವರ ಮನೆ ಪಕ್ಕದಲ್ಲಿ. ಒಂದು ವೇಳೆ ಮನೆಯಲ್ಲಿ ಊಟ ಮಾಡುತ್ತಿದ್ದಾರೆ ಆ ಸಮಯದಲ್ಲಿ ಯಾರಾದರೂ ಬಂದರೆ ಎಂಜಲು ಕೈಯಿಂದ ಯಾರಿಗೂ ಏನು ಕೊಡಬಾರದು. ಕೈ ತೊಳೆದುಕೊಂಡು ಕೋಡಿ ಹಾಗೆ ಎಂಜಲು ಕೈಯಿಂದ ಊಟದ ತಟ್ಟೆ ಮತ್ತು ಎಲೆಯನ್ನು ತೆಗೆಯಬಾರದು. ಕೈ ತೊಳೆದುಕೊಂಡು ತೆಗೆಯಬೇಕು.

-ಹೊಸ ಬಟ್ಟೆಯನ್ನು ಮನೆಗೆ ತಂದು ಬೆರಿಸದೆ ಯಾವುದೇ ಕಾರಣಕ್ಕೂ ಹಾಗೆ ಇಟ್ಟಿರಬಾರದು.

-ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋದಾಗ ಅರಿಶಿನ ಕುಂಕುಮ ಮತ್ತು ಹೂವು ಮುಡಿದುಕೊಳ್ಳದೆ ಹಾಗೆ ಮನೆಗೆ ಬರಬಾರದು. ಇದಕ್ಕೆ ಹಿಂದೂ ಸಂಸ್ಕೃತಿಯಲ್ಲಿ ಅಪಾರವಾದ ಮನ್ನಣೆ ಇದೆ.

-ಮನೆಯಲ್ಲಿ ಹೆಣ್ಣು ಮಕ್ಕಳು ಕೆಟ್ಟ ಮಾತುಗಳಿಂದ ಜಗಳ ಆಡಬಾರದು. ಕಣ್ಣೀರು ಹಾಕಬಾರದು ಹೆಣ್ಣು ಮಕ್ಕಳನ್ನು ಕೆಟ್ಟ ಪದಗಳಿಂದ ಮನೆಯಲ್ಲಿ ಬೈಯಬಾರದು.

-ಮನೆಯಲ್ಲಿ ದಿನನಿತ್ಯ ಗಂಟನಾದ ಕೇಳುತ್ತಿದ್ದರೆ ಸಾಕಾರತ್ಮಕ ಶಕ್ತಿಯು ಪ್ರಭಾಲವಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

-ಅನ್ನವನ್ನು ಯಾವುದೇ ಕಾರಣಕ್ಕೂ ಕಾಲಿನಿಂದ ತುಳಿಯಬಾರದು. ಊಟ ಮಾಡಿದ ನಂತರ ಊಟ ಮಾಡಿದ ತಟ್ಟೆಯನ್ನು ಸ್ವಚ್ಛ ಮಾಡಿ ಇಡಬೇಕು.

-ಅಡುಗೆ ಮನೆಯನ್ನು ಯಾವಾಗಲು ಶುಚಿಯಾಗಿ ಇಟ್ಟುಕೊಳ್ಳಬೇಕು. ಏಕೆಂದರೆ ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ದೇವಿಯು ಅನ್ನದ ರೂಪದಲ್ಲಿ ಅಡುಗೆ ಮನೆಯಲ್ಲಿ ನೆಲೆಸುರುತ್ತಾಳೆ.

-ಮನೆಯಲ್ಲಿ ಗಿರಿಯರಿಗೆ ಮತ್ತು ತಂದೆ ತಾಯಿಯಂದಿರಿಗೆ ಯಾವಾಗಲು ಗೌರವವನ್ನು ಕೊಡಬೇಕು. ಇದು ಅತೀ ಮುಖ್ಯವಾದ ಸಂಸ್ಕಾರ.

https://www.youtube.com/watch?v=mWpR7eey0_o&pp=wgIGCgQQAhgB

Related Post

Leave a Comment