ಚೈತ್ರ ಹುಣ್ಣಿಮೆ ಅನ್ನು ದವನ ಹುಣ್ಣಿಮೆ ಅಂತ ಕರೆಯಲಾಗುತ್ತದೆ. ಈ ದಿನ ಹನುಮನ ಜಯಂತಿ ಅನ್ನು ಆಚರಣೆ ಮಾಡಲಾಗುತ್ತದೆ. ಕಾರ್ತಿಕ ಮಾಸ ಹುಣ್ಣಿಮೆ ದಿನ ಕೂಡ ಹನುಮಾನ್ ಜಯಂತಿ ಅನ್ನು ಆಚರಣೆ ಮಾಡಲಾಗುತ್ತದೆ. ನಾವು ಈ ಚೈತ್ರ ಮಾಸದಲ್ಲಿ ಹನುಮಾನ್ ಜಯಂತಿ ಅನ್ನು ಆಚರಣೆ ಮಾಡುತ್ತೇವೆ.ಒಂದು ತಿಳಿದುಕೊಳ್ಳಿ ರಾಮ ಹುಟ್ಟಿದ ಮೇಲೆ ಹನುಮ ಹುಟ್ಟಿದ್ದು.
ಹನುಮ ಜಯಂತಿ ಮಂಗಳವಾರ ಅಥವಾ ಶನಿವಾರದ ದಿನ ಬಂದಾಗ ಅದರ ಪ್ರಾಮುಖ್ಯತೆ ಇನ್ನು ಕೂಡ ಹೆಚ್ಚಾಗುತ್ತದೆ. ಏಕೆಂದರೆ ಈ 2 ದಿನ ಕೂಡ ಆಂಜನೇಯ ಸ್ವಾಮಿಗೆ ಮೀಸಳಾಗಿರುವ ದಿನ ಹಾಗಾಗಿ 2024 ಏಪ್ರಿಲ್ 23 ಮಂಗಳವಾರ ಹನುಮ ಜಯಂತಿ ಅನ್ನು ಆಚರಣೆ ಮಾಡಲಾಗುತ್ತದೆ.
ಹುಣ್ಣಿಮೆ ತಿಥಿ ಏಪ್ರಿಲ್ 23 ಮಂಗಳವಾರ ಬೆಳಗ್ಗೆ 3:25 ನಿಮಿಷಕ್ಕೆ ಪ್ರಾರಂಭವಾಗಿ ಏಪ್ರಿಲ್ 24 ಬೆಳಗ್ಗೆ 5:05 ನಿಮಿಷಕ್ಕೆ ಮುಕ್ತಯವಾಗುತ್ತದೆ.ಸೂರ್ಯ ಉದಯಕಾಲ ನೋಡುವುದಾದರೆ ಏಪ್ರಿಲ್ 23ನೇ ತಾರೀಕು ಹನುಮ ಜಯಂತಿ ಆಚಾರಣೆ ಮಾಡಬೇಕು.
ಚೈತ್ರ ಮಾಸದ ಶುಕ್ಲ ಪಕ್ಷದ ದವನ ಹುಣ್ಣಿಮೆ ಚಿತ್ತಾ ನಕ್ಷತ್ರ ರಾತ್ರಿ 10:00 ಗಂಟೆವರೆಗೂ ಆ ದಿನ ಇರುತ್ತದೆ. ಕನ್ಯಾ ರಾಶಿಯವರಿಗೆ ತುಂಬಾ ವಿಶೇಷವಾದ ದಿನ ಎಂದು ಹೇಳಬಹುದು.ಈ ದಿನ ತಪ್ಪದೆ ಹನುಮ ಆರಾಧನೆ ಮತ್ತು ದೇವಸ್ಥಾನಕ್ಕೆ ಹೋಗಬೇಕು. ತುಳಸಿ ವೀಳ್ಯದೆಲೆ ಹಾರವನ್ನು ಕೊಡಬೇಕು.
ಪೂಜಾ ಸಮಯ
ಬೆಳಗ್ಗೆ ಬ್ರಾಹ್ಮೀ ಮುಹೂರ್ತಕ್ಕೆ ಹುಣ್ಣಿಮೆ ತಿಥಿ ಪ್ರಾರಂಭವಾಗುತ್ತದೆ. ಹಾಗಾಗಿ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆಯನ್ನು ಮಾಡಬಹುದು. ಈ ದಿನ ಬೆಳಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛ ಮಾಡಿ ಸ್ನಾನ ಮಾಡಿ ಕೇಸರಿ ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಧರಿಸಬೇಕು.ಈ ದಿನ ಮಲ್ಲಿಗೆ ಹಾಗು ತುಳಸಿ ಹೂವಿನಿಂದ ಪೂಜೆ ಸಲ್ಲಿಸಿದರೆ ತುಂಬಾ ಒಳ್ಳೆಯದು. ಬೆಣ್ಣೆ ಕೇಸರಿ ಯನ್ನು ಸಹ ದೇವರಿಗೆ ಕೊಡಬಹುದು.ಸೂರ್ಯೋದಯಕ್ಕೂ ಮುಂಚೆ ನೀವು ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡಬೇಕಾಗುತ್ತದೆ.
ಆದಷ್ಟು ಬೆಳಗ್ಗೆ ಬೇಗಾ ಎದ್ದು ಮನೆಯನ್ನು ಸ್ವಚ್ಛ ಮಾಡಿ ಸ್ನಾನವನ್ನು ಮಾಡಿ.ಆ ದಿನ ವಿಶೇಷವಾಗಿ ಕೇಸರಿ ಬಣ್ಣದ ಬಟ್ಟೆಯನ್ನು ಹಾಕಿಕೊಂಡು ಪೂಜೆಯನ್ನು ಮಾಡಬೇಕು.ಈ ದಿನ ಹನುಮನ ಪೂಜೆ ಮಾಡಿದರೆ ದ್ವಿಗುಣ ಫಲ ನಿಮಗೆ ಸಿಗುತ್ತದೆ.ಈ ದಿನ ಹನುಮ ಜಯಂತಿ ಆಚರಣೆ ಮಾಡಿದರೆ ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು. ಪೂಜೆ ಮಾಡುವ ಮೊದಲು ಸಂಕಲ್ಪವನ್ನು ಮಾಡಿಕೊಳ್ಳಬೇಕು.ಇಡೀ ದಿನ ಉಪವಾಸ ಇದ್ದು ಈ ಹನುಮ ಜಯಂತಿ ಪೂಜೆಯನ್ನು ಮಾಡಬೇಕು. ಆಂಜನೇಯ ವಿಗ್ರಹ ಇಟ್ಟು ಪೂಜೆಯನ್ನು ಮಾಡಬೇಕು.
ಪೂಜೆ ಮುಗಿದ ನಂತರ ಮನೆಯ ಕೆಟ್ಟ ದೃಷ್ಟಿಯನ್ನು ಹೋಗಲಾಡಿಸಲು ಆಂಜನೇಯ ಸ್ವಾಮಿಗೆ ನಮಸ್ಕಾರ ಮಾಡಿಕೊಂಡು ಕೇಸರಿ ಸಿಂಧೂರಕ್ಕೆ ಸ್ವಲ್ಪ ತುಪ್ಪ ಬೆರೆಸಿ ಮುಖ್ಯ ದ್ವಾರದ ಮೇಲೆ ಒಂದು ಸ್ವಸ್ತಿಕ್ ಚಿಹ್ನೆಯನ್ನು ಬರೆಯಿರಿ.ಈ ರೀತಿ ಬರೆಯುವುದರಿಂದ ನಿಮ್ಮ ಮನೆಗೆ ಆಗುವ ಕೆಟ್ಟ ದೃಷ್ಟಿ ನಿವಾರಣೆ ಆಗುತ್ತದೆ.
ಇನ್ನು ಪ್ರಸಾದಕ್ಕೆ ಬೊಂದಿ ಲಡ್ಡು ಮತ್ತು ಬೆಲ್ಲದಲ್ಲಿ ಮಾಡಿರುವ ಪ್ರಸಾದ, ಬಾಳೆ ಹಣ್ಣಿನ ರಾಸಾಯನವನ್ನು ಕೂಡ ಪ್ರಸಾದಕ್ಕೆ ಇಡಬಹುದು.ಒಂದು ನಿಮಗೆ ಉಪವಾಸ ಇರಲು ಸಾಧ್ಯ ಆಗದೆ ಇದ್ದಾರೆ ಅವಲಕ್ಕಿ ಉಪ್ಪಿಟ್ಟು ಸೇವನೆ ಮಾಡಬಹುದು.ಆದಷ್ಟು ಕೆಂಪು ಹೂವಿನಿಂದ ಅಲಂಕಾರವನ್ನು ಮಾಡಿ ಮತ್ತು ತುಳಸಿ ಮಾಲೆಯನ್ನು ಹಾಕುವುದನ್ನು ಮರೆಯಬೇಡಿ.ಈ ದಿನ ದಾನ ಮಾಡಿದರೆ ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ.ಇನ್ನು ದೀಪಕ್ಕೆ ಸಾಸಿವೆ ಎಣ್ಣೆ ಮಲ್ಲಿಗೆ ಎಣ್ಣೆ ತುಪ್ಪವನ್ನು ಕೊಬ್ಬರಿ ಎಣ್ಣೆ ಎಳ್ಳು ಎಣ್ಣೆಯನ್ನು ಬಳಸಬಹುದು.ತುಪ್ಪದ ದೀಪರಾಧನೆ ಮಾಡಿದರೆ ನಿಮಗೆ ಶೀಘ್ರ ಫಲ ಸಿಗುತ್ತದೆ.ಇನ್ನು 11 ಅರಳಿ ಎಲೆ ತೆಗೆದುಕೊಂಡು ಸ್ವಚ್ಛ ಮಾಡಿ ಶ್ರೀರಾಮ ಎಂದು ಬರೆಯಿರಿ.ಇದನ್ನು ಆಂಜನೇಯ ಸ್ವಾಮಿಗೆ ಅರ್ಪಣೆ ಮಾಡುವುದರಿಂದ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು.ಆದಷ್ಟು ಹನುಮನ್ ಚಾಲೀಸಾವನ್ನು 5 ಬಾರಿ ಹೇಳಿಕೊಳ್ಳಿ.