ವೀಳ್ಯದೆಲೆ ಈ ಸಮಸ್ಸೆ ಇರೋರು ಬಳಸೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತೇ!

Written by Anand raj

Published on:

ಹಳ್ಳಿಗಳಲ್ಲಿ ಊಟ ಆದ ನಂತರ ವೀಳ್ಯದೆಲೆ ತಿನ್ನುವ ಅಭ್ಯಾಸವಿದೆ. ಈ ವೀಳ್ಯದೆಲೆಯನ್ನು ಕೆಲವರು ಹವ್ಯಾಸಕ್ಕೆ ತಿಂದರೆ, ಮತ್ತೆ ಕೆಲವರು ಆರೋಗ್ಯದ ದೃಷ್ಟಿಯಿಂದು ಸೇವನೆ ಮಾಡುತ್ತಾರೆ.

ವೀಳ್ಯದೆಲೆಯು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ವೀಳ್ಯದೆಲೆ ಸೇವನೆಯಿಂದ ಬಾಯಿಯಲ್ಲಿನ ಬ್ಯಾಕ್ಟೀರಿಯಾ ನಾಶ ಮಾಡುತ್ತದೆ. ಜೊತೆಗೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

ಊಟದ ನಂತರ ವೀಳ್ಯದೆಲೆಯನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿಯಾಗಿದೆ. ಚಯಾಪಚಯವನ್ನು ಹೆಚ್ಚಿಸುವುದರೊಂದಿಗೆ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ.

ವೀಳ್ಯದೆಲೆ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿವೆ.

ಉರಿಯೂತ ಮತ್ತು ಮಧುಮೇಹದಂತಹ ಮೆಲ್ಲಿಟಸ್ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲವೆಂದು ಕರೆಯಲ್ಪಡುತ್ತದೆ. ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ.

ವೀಳ್ಯದೆಲೆ ತಿಂದರೆ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ವಿಶೇಷವಾಗಿ ಹೊಟ್ಟೆಯು ತೆರವಾಗದಿದ್ದಲ್ಲಿ ವೀಳ್ಯದೆಲೆಗಳನ್ನು ತಿನ್ನಲು ಮರೆಯದಿರಿ.

ನಿಮ್ಮ ಬಾಯಿ ಅಥವಾ ತುಟಿಗಳಲ್ಲಿ ಹುಣ್ಣು ಇದ್ದರೆ, ಎಲೆಗಳು, ಕಾಂಡಗಳು ಮತ್ತು ವೀಳ್ಯದೆಲೆಗಳನ್ನು ತಿನ್ನಿರಿ. ವೀಳ್ಯದೆಲೆಯನ್ನು ಅಡಿಕೆಯೊಂದಿಗೆ ತಿನ್ನುವುದು ತುಂಬಾ ಒಳ್ಳೆಯದು.

ವೀಳ್ಯದೆಲೆ ಹಲ್ಲು ಕುಳಿಗಳನ್ನು ನಿವಾರಿಸಿ ಹಲ್ಲುಗಳನ್ನು ಬಲಪಡಿಸುತ್ತದೆ. ಹಲ್ಲುಗಳ ಹಳದಿ ಬಣ್ಣವನ್ನು ಸಹ ತೆಗೆದು ಹಾಕುತ್ತದೆ.

ವೀಳ್ಯದೆಲೆಯು ಹೊಟ್ಟೆಯನ್ನು ಶುಚಿಗೊಳಿಸಿ, ಸಮಸ್ಯೆಯನ್ನು ಕ್ಷಣಾರ್ಧದಲ್ಲಿ ಪರಿಹರಿಸುತ್ತದೆ. ಪ್ರತಿದಿನ 1-2 ವೀಳ್ಯದೆಲೆಯನ್ನು ಅಗಿಯಿರಿ. ದೇಹದಲ್ಲಿರುವ ವಿಷಕಾರಿ ಅಂಶಗಳೂ ಹೊರಬರುತ್ತವೆ.

ಊಟದ ನಂತರ ವೀಳ್ಯದ ಎಲೆ ಸೇವಿಸುವುದು ವಾಡಿಕೆ. ತಿಂದ ಆಹಾರ ಸುಲಭವಾಗಿ ಜೀರ್ಣಗೊಳ್ಳಲೆಂದು ಮನೆಯಲ್ಲಿ ಹಿರಿಯರು ವೀಳ್ಯದ ಎಲೆಯನ್ನು ಊಟದ ನಂತರ ದಿನನಿತ್ಯ ಸೇವಿಸುತ್ತಾರೆ. ಆದರೆ ವೀಳ್ಯದ ಎಲೆ ಜೀರ್ಣಕ್ರಿಯೆಗೆ ಮಾತ್ರವಲ್ಲದೆ, ಅನೇಕ ಕಾಯಿಲೆಗಳನ್ನು ಉಪಶಮನಗೊಳಿಸುವ ಶಕ್ತಿಯನ್ನೂ ಹೊಂದಿದೆ.

ಹಲ್ಲು ಕೊಳೆಯದಂತೆ, ಸವೆಯದಂತೆ ಮತ್ತು ಒಸಡುಗಳನ್ನು ಬಲಪಡಿಸಲು ವೀಳ್ಯದ ಎಲೆಯನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತದೆ. ಆದ್ದರಿಂದ ವೀಳ್ಯದ ಎಲೆಗಳನ್ನು ನೀರಿನಲ್ಲಿ ಕುದಿಸಿ, ತಣ್ಣಗಾದ ನಂತರ ಆ ನೀರಿನಲ್ಲಿ ನಿಮ್ಮ ಬಾಯಿಯನ್ನು ತೊಳೆಯಿರಿ. ಹಾಗೆಯೇ ಬಾಯಿಯಿಂದ ಕೆಟ್ಟ ದುರ್ವಾಸನೆ ಬರುತ್ತಿದ್ದರೆ ಊಟದ ನಂತರ ವೀಳ್ಯದ ಎಲೆ ಅಗಿಯಲು ಪ್ರಾರಂಭಿಸಿ. ಆಗ ಬಾಯಿ ರಿಫ್ರೆಶ್ ಆಗುತ್ತದೆ ಮತ್ತು ರೋಗಾಣುಗಳನ್ನು ಕೊಲ್ಲುತ್ತದೆ.

Related Post

Leave a Comment