ದೇವರ ಆರತಿ ವೇಳೆ ಶಂಖನಾದದ ಮಹತ್ವವೇನು ಗೊತ್ತಾ!

Written by Anand raj

Published on:

ಪೂಜೆಯಲ್ಲಿ ಶಂಖ ಊದುವುದು ಒಳ್ಳೆಯದು ಎಂದು ಕೇಳಿಬಹುದು. ಶಂಖವನ್ನು ಊದುವುದರಿಂದ ಮನೆಗೆ ಧನಾತ್ಮಕ ಶಕ್ತಿ ಆಕರ್ಷಿಸುತ್ತದೆ, ಋಣಾತ್ಮಕ ಶಕ್ತಿ ಹೊರಹಾಕುತ್ತದೆ ಎಂಬ ಕಾರಣಕ್ಕೆ ಶಂಖವನ್ನು ಊದುತ್ತೇವೆ. ಶಂಖವನ್ನು ಬಳಸುತ್ತಿರುವವರು ಅದರ ಫಲ ಪಡೆಯಲು ಕೆಲವೊಂದು ಪೂಜಾ ನಿಯಮಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಆ ಪೂಜಾ ನಿಯಮಗಳೇನು ಎಂದು ನೋಡೋಣ ಬನ್ನಿ

ಮೊದಲಿಗೆ ಶಂಖದ ಪೌರಾಣಿಕ ಮಹತ್ವವೇನು ಎಂದು ನೋಡೋಣ: ಶಂಖವು ಸಮುದ್ರಮಂಥನ ಸಮಯದಲ್ಲಿ ಉದ್ಭವವಾಯ್ತು. ಶ್ರೀ ವಿಷ್ಣು ಶಂಖವನ್ನು ಅಸ್ತ್ರವನ್ನಾಗಿ ಹಿಡಿದುಕೊಂಡಿದ್ದ. ಶಂಖವನ್ನು ಶ್ರೀ ವಿಷ್ಣು, ಗಂಗಾಮ ಸರಸ್ವತಿ ಪೂಜೆಯಲ್ಲಿ ಬಳಸಲಾಗುವುದು. ಶಂಖವನ್ನು ಊದಿದಾಗ ಬರುವ ಆ ವೈಬ್ರೇಷನ್‌ಗೆ ವಾತಾವರಣದಲ್ಲಿರುವ ಸೋಂಕಾಣುಗಳನ್ನು ಕೊಲ್ಲುವ ಶಕ್ತಿಯಿದೆ ಎಂದು ಹೇಳಲಾಗುವುದು. ಶಂಖವನ್ನು ಊದಿದಾಗ ವಾತಾವರಣದಲ್ಲಿ ರಾಜಸ, ತಾಮಸ ಶಕ್ತಿ ಕಡಿಮೆಯಾಗಿ ಸಾತ್ವಿಕ (ಸತ್ವ) ಶಕ್ತಿ ಹೆಚ್ಚಾಗುವುದು.

ಶಂಖದಂದ ಹೊರಬರುವ ಶಕ್ತಿ ಋಣಾತ್ಮಕ ಶಕ್ತಿಯನ್ನು ಹೊರಹಾಕಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶಂಖದ ಧ್ವನಿ ನಮ್ಮ ಕಿವಿಗೆ ಬಿದ್ದಾಗ ನಮ್ಮ ದೇಹದಲ್ಲಿ ಚೈತನ್ಯ ಮೂಡುತ್ತದೆ. ಪೂಜೆ ಪ್ರಾರಂಭ ಮಾಡುವ ಮುನ್ನ ಹಾಗೂ ಆರತಿ ಬೆಳಗುವ ಮುನ್ನ ಶಂಖವನ್ನು ಊದಲಾಗುವುದು. ಶಂಖದಲ್ಲಿ ಪ್ರಮುಖವಾಗಿ ಎರಡು ವಿಧ ಬಲಭಾಗ ಹಿಡಿಯ ಶಂಖ ಎಡಭಾಗ ಹಿಡಿಯ ಶಂಖ ಸಾಮಾನ್ಯವಾಗಿ ಬಲಭಾಗ ಹಿಡಿಯ ಶಂಖವನ್ನು ಪೂಜಾ ಕಾರ್ಯಗಳಿಗೆ ಬಳಸಲಾಗುವುದು.

ಮಾರ್ಕೆಟ್‌ನಲ್ಲಿ ಅನೇಕ ಬಗೆಯ ಶಂಖಗಳಿರುತ್ತದೆ, ಆದರೆ ನೀವು ಶಂಖವನ್ನು ಖರೀದಿಸುವಾಗ ಅದನ್ನು ಊದಿ ತೆಗೆದುಕೊಳ್ಳಬೇಡಿ, ಅದನ್ನು ಕಿವಿಯ ಬಳಿ ಹಿಡಿದರೆ ಅದರ ಒಂದು ಒಳ್ಳೆಯ ಶಬ್ದ ಬರುತ್ತದೆ, ಅದು ನಿಜವಾದ ಶಂಖವಾಗಿದೆ. ಶಂಖವನ್ನು ಊದುವುದು ಎಡಭಾಗ ಹಿಡಿ ಇರುವ ಶಂಖವನ್ನು ಪೂಜೆ ಮಾಡುವಾಗ ಊದಬೇಕು. ಇನ್ನು ಊದಲು ಬಳಸುವ ಶಂಖವನ್ನು ಪೂಜೆ ಮಾಡಲು ಬಳಸಬಾರದು. ವರಹ ಪುರಾಣದಲ್ಲಿ ಪೂಜೆಯನ್ನು ಮಾಡುವ ಮೊದಲು ಶಂಖವನ್ನು ಊದಬೇಕು ಎಂದು ಹೇಳುತ್ತದೆ.

ಶಂಖವನ್ನು ಹೇಗೆ ಊದಬೇಕು? ತಲೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿ, ದೀರ್ಘ ಉಸಿರು ತೆಗೆದು ಶಂಖವನ್ನು ಊದಬೇಕು. ಆವಾಗ ಹೊರಬರುವ ಶಬ್ದವು ಮೂರ್ತಿಯಲ್ಲಿನ ದೈವಿಕ ಶಕ್ತಿ ಹೆಚ್ಚಿಸುತ್ತದೆ, ಆ ಪರಿಸರ ಧನಾತ್ಮಕವಾಗಿರುತ್ತದೆ, ಪೂಜೆಯಲ್ಲಿ ಶ್ರದ್ಧೆ ಹೆಚ್ಚಾಗುವುದು. ಶಂಖವನ್ನು ಬಳಸುವಾಗ ಈ 5 ಅಂಶಗಳನ್ನು ಗಮನಿಸಲೇಬೇಕು * ಪೂಜೆಗೆ ಬಳಸಿದ ಶಂಖವನ್ನು ಊದಲು ಬಳಸಬಾರದು, ಎರಡು ಬೇರೆ-ಬೇರೆ ಶಂಖವಾಗಿರಬೇಕು * ಊದಲು ಬಳಸಿರುವ ಶಂಖದಿಂದ ದೇವರಿಗೆ ನೀರನ್ನು ಅರ್ಪಿಸಬಾರದು * ಪೂಜೆಗೆ ಎರಡು ಶಂಖವನ್ನು ಬಳಸಬಾರದು * ಶಂಖವನ್ನು ಶಿವಲಿಂಗಕ್ಕೆ ಮುಟ್ಟಿಸಬಾರದು * ಶಿವನ ಅಭಿಷೇಕದಲ್ಲಿ, ಸೂರ್ಯನಿಗೆ ಪೂಜೆ ಮಾಡುವಾಗ ಶಂಖವನ್ನು ಬಳಸಬಾರದು.

ಶಂಖವನ್ನು ಹೇಗೆ ಇಡಬೇಕು? ಶಂಖವನ್ನು ನೀವು ಶುದ್ಧವಾದ ಬಟ್ಟೆಯಲ್ಲಿ ಇಡಬೇಕು, ಅದರಲ್ಲೂ ಕೆಂಪು ಬಟ್ಟೆಯಲ್ಲಿ ಸುತ್ತಿಡಿ. ಕೆಲವರು ಶಂಖವನ್ನು ಬೆಳ್ಳಿಯ ಅಥವಾ ಮಣ್ಣಿನ ಪಾತ್ರೆಯಲ್ಲಿ ಇಡಿ. ಶಂಖದಲ್ಲಿ ನೀರನ್ನು ತುಂಬಿ ಪೂಜೆಗೆ ಬಳಸಲಾಗುವುದು. ಅದರಲ್ಲೂ ಲಕ್ಷ್ಮಿ ಪೂಜೆಯಲ್ಲಿ ಹಾಲನ್ನು ತುಂಬಿ ಬಳಸಲಾಗುವುದು.

Related Post

Leave a Comment