ಪಂಚಮುಖಿ ಆಂಜನೇಯನ ರಹಸ್ಯ ಆರಾಧನೆಯಿಂದ ಏನೆಲ್ಲಾ ಲಾಭ ಗೊತ್ತಾ?

Written by Anand raj

Published on:

ರಾಮನ ಭಕ್ತ ಹನುಮನನ್ನು ಕಲಿಯುಗದ ದೇವರು ಎಂದು ಪರಿಗಣಿಸಲಾಗುತ್ತದೆ. ಪಂಚಮುಖಿ ಹನುಮಂತನು ತನ್ನ ಭಕ್ತರ ಎಲ್ಲಾ ನೋವುಗಳನ್ನು ನಾಶಪಡಿಸುತ್ತಾನೆ ಮತ್ತು ಅವರಿಗೆ ಶಕ್ತಿ, ಬುದ್ಧಿವಂತಿಕೆ ಮತ್ತು ಕಲಿಕೆಯ ಜ್ಞಾನವನ್ನು ಒದಗಿಸುತ್ತಾನೆ ಎಂದು ಹೇಳಲಾಗುತ್ತದೆ. ಭಗವಾನ್ ಹನುಮಂತನನ್ನು ಪಂಚಮುಖಿ ಆಂಜನೇಯನೆಂದು ಕರೆಯಲು ಕಾರಣವೇನು..? ಭಗವಾನ್‌ ಹನುಮನು ಪಂಚಮುಖಿ ರೂಪವನ್ನು ತೆಗೆದುಕೊಳ್ಳಲು ಕಾರಣವೇನು..? ಇಲ್ಲಿದೆ ಹನುಮನು ಪಂಚಮುಖಿ ಹನುಮನೆನಿಸಿಕೊಳ್ಳಲು ಕಾರಣ.

ಈ ಕಾರಣದಿಂದಾಗಿ, ಭಗವಾನ್‌ ಹನುಮಂತನು ಪಂಚಮುಖಿ ರೂಪವನ್ನು ಧರಿಸಿದನು:

ಒಂದು ದಂತಕಥೆಯ ಪ್ರಕಾರ, ಪ್ರಭು ಶ್ರೀರಾಮ ಮತ್ತು ರಾವಣನ ನಡುವೆ ಯುದ್ಧ ನಡೆಯುತ್ತಿರುವಾಗ, ಸೋಲಿನಿಂದ ತನ್ನನ್ನು ತಪ್ಪಿಸಿಕೊಳ್ಳಲು ರಾವಣನು ತನ್ನ ಸಹೋದರ ಅಹಿರಾವನನ ಸಹಾಯವನ್ನು ಕೋರಿದನು. ರಾವಣನ ಸಹೋದರ ಅಹಿರಾವನ ತನ್ನ ತಂತ್ರದ ಮೂಲಕ ಪ್ರಭು ಶ್ರೀರಾಮನ ಸೈನ್ಯವನ್ನು ನಿದ್ರೆಗೆ ಜಾರುವಂತೆ ಮಾಡುತ್ತಾನೆ. ರಾಮ-ಲಕ್ಷ್ಮಣ ಒತ್ತೆಯಾಳುಗಳಂತೆ ತೆಗೆದುಕೊಂಡು ಪಾತಾಳ ಲೋಕಕ್ಕೆ ಕರೆದೊಯ್ದನು. ಈ ಸಂದರ್ಭದಲ್ಲಿ ಭಗವಾನ್‌ ಹನುಮಂತನು ಪಂಚಮುಖಿ ಅವತಾರವನ್ನು ಧರಿಸಿದ್ದರು. ರಾಮ – ಲಕ್ಷ್ಮಣರನ್ನು ಪಾತಾಳ ಲೋಕಕ್ಕೆ ಕರೆದುಕೊಂಡು ಹೋದ ನಂತರ, ಭಗವಾನ್‌ ಹನುಮನು ತನ್ನ ಪಂಚಮುಖಿ ರೂಪದಲ್ಲಿ ರಾವಣನ ಸಹೋದರ ಅಹಿರಾವನನ್ನು ಕೊಂದು ಭಗವಾನ್ ಶ್ರೀ ರಾಮನನ್ನು ಮತ್ತು ಲಕ್ಷ್ಮಣರನ್ನು ಪಾತಾಳ ಲೋಕದಿಂದ ಬಿಡುಗಡೆ ಮಾಡಿದರು.

ಇವು ಪಂಚಮುಖಿ ಹನುಮನ ಐದು ಮುಖಗಳು ಮತ್ತು ಅವುಗಳ ಪ್ರಾಮುಖ್ಯತೆ:

  1. ಪಂಚಮುಖಿ ಹನುಮಂತನ ಮೊದಲ ರೂಪ ಕೋತಿಯ ಬಾಯುಳ್ಳ ರೂಪ. ಈ ರೂಪದಿಂದ ಹನುಮಂತನು ಶತ್ರುಗಳ ವಿರುದ್ಧ ಗೆಲುವನ್ನು ಸಾಧಿಸುತ್ತಾನೆ.
  2. ಪಂಚಮುಖಿ ಹನುಮನ ಎರಡನೇ ರೂಪ ಗರುಡನ ಮುಖವುಳ್ಳ ರೂಪ. ಹನುಮನ ಈ ರೂಪವು ನಮ್ಮ ಜೀವನದ ಎಲ್ಲಾ ನೋವುಗಳನ್ನು ತೆಗೆದುಹಾಕುತ್ತದೆ.
  3. ಪಂಚಮುಖಿ ಹನುಮಂತನ ಮೂರನೇ ರೂಪವು ವರಹಾ ರೂಪವಾಗಿದ್ದು, ಇದು ಖ್ಯಾತಿ, ಅಪಾರ ಶಕ್ತಿ ಮತ್ತು ದೀರ್ಘಾಯುಷ್ಯವನ್ನು ಜೀವನಕ್ಕೆ ತರುತ್ತದೆ.
  4. ಪಂಚಮುಖಿ ಹನುಮಂತನ ನಾಲ್ಕನೇ ರೂಪವು ನರಸಿಂಹ ರೂಪವಾಗಿದ್ದು, ಈ ಮುಖವು ಒಬ್ಬರ ಭಯ ಮತ್ತು ಉದ್ವೇಗವನ್ನು ಕೊನೆಗೊಳಿಸುತ್ತದೆ.
  5. ಪಂಚಮುಖಿ ಹನುಮನ ಐದನೇ ರೂಪವು ಅಶ್ವ ರೂಪವಾಗಿದ್ದು, ಈ ರೂಪವು ವ್ಯಕ್ತಿಯ ಎಲ್ಲಾ ಆಸೆಗಳನ್ನು ಬಹುಬೇಗ ಈಡೇರಿಸುತ್ತದೆ.

ಪಂಚಮುಖಿ ಹನುಮಂತನನ್ನು ಪೂಜಿಸುವ ಪ್ರಯೋಜನಗಳು:

  1. ಮನೆಯಲ್ಲಿ ವಾಸ್ತು ದೋಷವಿದ್ದರೆ ಆಗ ನೀವು ಮನೆಯಲ್ಲಿ ಪಂಚಮುಖಿ ಹನುಮಂತನ ವಿಗ್ರಹವನ್ನು ಮನೆಯ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯ ವಾಸ್ತು ದೋಷವು ಕೊನೆಗೊಳ್ಳುತ್ತದೆ.
  2. ಮನೆಯಲ್ಲಿ ನಡೆಯುತ್ತಿರುವ ಯಾವುದೇ ರೀತಿಯ ಕೋರ್ಟು – ಕಛೇರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಗೆಲುವನ್ನು ಸಾಧಿಸಲು, ಪಂಚಮುಖಿ ಹನುಮನ ವಿಗ್ರಹದ ಮುಂದೆ ತುಪ್ಪದ ದೀಪವನ್ನು ಬೆಳಗಿ ಹನುಮಂತನನ್ನು ಪೂಜಿಸಬೇಕು. ಇದರಿಂದ ಗೆಲುವು ನಿಮ್ಮದಾಗುತ್ತದೆ.
  3. ಯಾವುದೇ ಪರೀಕ್ಷೆಯಲ್ಲಿ ಅಥವಾ ಸಂದರ್ಶನದಲ್ಲಿ ಯಶಸ್ಸನ್ನು ಪಡೆಯಲು ಪಂಚಮುಖಿ ಹನುಮಂತನಿಗೆ ಲಡ್ಡುಗಳನ್ನು, ದಾಳಿಂಬೆ ಅಥವಾ ಇನ್ನಿತರ ಹಣ್ಣುಗಳನ್ನು ನೀಡಬೇಕು.

ಪಂಚಮುಖಿ ಹನುಮನ ವಿಗ್ರಹಗಳು ತುಂಬಾ ವಿರಳ. ಅದರೆ ಪಂಚಮುಖಿ ಹನುಮನನ್ನು ಪೂಜಿಸುವುದರಿಂದ ನಾವು ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಿಮಗೂ ಪಂಚಮುಖಿ ಹನುಮನ ಆಶಿರ್ವಾದ ಬೇಕೆಂದಾದಲ್ಲಿ ಇಂದಿನಿಂದಲೇ ಪಂಚಮುಖಿ ಹನುಮನನ್ನು ಪೂಜಿಸಲು ಆರಂಭಿಸಿ.

Related Post

Leave a Comment