ಮಹಿಳೆಯರಿಗೆ ಕೇಶ ಬಹಳಷ್ಟು ಮುಖ್ಯ ಮತ್ತು ಇಷ್ಟ ಕೂಡ ಹೌದು. ಯಾಕೆ ಅಂದರೆ ನಾವು ಬಹಳಷ್ಟು ಚೆಂದವಾಗಿ ಶೃಂಗಾರ ಮಾಡಿಕೊಂಡು ಸುಂದರವಾಗಿ ಹೋದರೆ ಅದು ಬೋಳು ತಲೆ ಅಂದುಕೊಳ್ಳಲು ಸಾಧ್ಯವಿಲ್ಲ. ನಾವು ಸುಂದರವಾಗಿ ಕಾಣಬೇಕು ಅಂದ್ರೆ ನಮ್ಮ ಕೂದಲು ಬಹಳಷ್ಟು ಮುಖ್ಯ. ಜೊತೆಗೆ ಮನೆಯಲ್ಲಿ ಇರುವ ಹೆಂಗಸರ ಕೂದಲು ಮನೆಯ ಪರಿಸ್ಥಿತಿಯನ್ನು ಮತ್ತು ಮನೆಯಲ್ಲಿ ಆಗುವಂತಹ
ಕೆಡಕೂ ಮತ್ತು ಒಳಿತುಗಳನ್ನು ನಿರ್ಧಾರ ಮಾಡುತ್ತದೆ. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ಮನೆಯ ಹೆಂಗಸರ ಕೂದಲು ನಿಮ್ಮ ಮನೆಯ ಬಗ್ಗೆ ಏನೆಲ್ಲ ಸೂಚನೆಯನ್ನು ನೀಡುತ್ತದೆ ಅಂತ ತಿಳಿಯೋಣ. ಮನೆಯಲ್ಲಿ ಇರುವ ಹೆಂಗಸರು ಲಕ್ಷ್ಮೀಯ ಸ್ವರೂಪ. ಲಕ್ಷ್ಮೀದೇವಿ ಪ್ರಸನ್ನಳು ಆದರೆ ಮನೆ ಬಹಳಷ್ಟು ನೆಮ್ಮದಿಯಿಂದ ಇರುತ್ತದೆ. ಅದೇ ರೀತಿ ಮನೆಯಲ್ಲಿ ಇರುವ ಮಹಿಳೆಯರ ಆರೋಗ್ಯದ ಜೊತೆಗೆ ಮನೆಯ ಒಳಿತು ಕೆಡುಕುಗಳು ಅವರ
ಕೂದಲಿನ ಶೈಲಿ ಮೇಲೆ ನಿಂತಿರುತ್ತದೆ. ಅದು ಹೇಗೆ ಅಂದ್ರೆ ಮೊದಲನೆಯದು ಮನೆಯಲ್ಲಿ ಇರುವ ಹೆಣ್ಣು ಮಕ್ಕಳ ಕೂಡ ತೆಳ್ಳಗೆ ಮತ್ತು ಬಹಳಷ್ಟು ಕಡಿಮೆ ಇದ್ದರೆ ಅದು ನಿಮ್ಮ ಮನೆಯ ಅಶುಭದ ಸಂಕೇತ. ಮನೆಯಲ್ಲಿ ಏನೋ ತೊಂದರೆಗಳು ಇವೆ ಸಮಸ್ಯೆಗಳು ಇವೆ ಮತ್ತು ಆ ವ್ಯಕ್ತಿಗಳಿಗೆ ಅನಾರೋಗ್ಯ ಕಾಡುತ್ತದೆ. ಮನೆಯಲ್ಲಿ ವಿನಾ ಕಾರಣ ಹಣವೂ ವ್ಯರ್ಥ ಆಗುವುದನ್ನು ಸೂಚಿಸುತ್ತದೆ. ಇನ್ನೂ ಎರಡನೆಯದು ಅತಿ ಉದ್ದನೆಯ ಕೂದಲು
ಸರಳವಾದ ಕೂದಲು ಈ ರೀತಿ ಕೂದಲು ಇರುವ ಹೆಂಗಸರು ಮನೆಯಲ್ಲಿ ಶುಭ ವಿಚಾರವನ್ನು ತರುತ್ತಾರೆ. ಮನೆಯಲ್ಲಿ ಈ ಬಗೆಯ ಹೆಂಗಸರು ಇದ್ದರೆ ಅಂದರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳಗಳು ಆಗುವುದಿಲ್ಲ. ಮನೆಯಲ್ಲಿ ಸದಾ ಕಾಲ ಶಾಂತಿ ನೆಮ್ಮದಿ ನೆಲೆ ನಿಲ್ಲುವಂತೆ ನೋಡಿಕೊಳ್ಳುತ್ತಾರೆ. ಇನ್ನೂ ಉದ್ದಕ್ಕೆ ಗುಂಗುರು ಕೂದಲು ಇರುವ ಹೆಂಗಸರು ನೋಡಲು ಬಹಳಷ್ಟು ಆಕರ್ಷಕವಾಗಿ ಕಾಣುತ್ತಾರೆ ಜೊತೆಗೆ ಇವರು
ಮನೆಯಲ್ಲಿ ಇರುವ ಎಲ್ಲ ವ್ಯಕ್ತಿಗಳ ಆರೋಗ್ಯವನ್ನು ನೋಡಿಕೊಳ್ಳುತ್ತಾರೆ. ಮನೆಯನ್ನು ಸದಾ ಕಾಲ ಶಾಂತಿಯಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಜೊತೆಗೆ ಇಂಥಹ ಸ್ತ್ರೀಯರು ಲಕ್ಷ್ಮೀದೇವಿಯ ಸ್ವರೂಪ ಇದ್ದು ಮನೆಯಲ್ಲಿ ಸದಾ ಕಾಲ ಲಕ್ಷ್ಮೀದೇವಿ ನೆಲೆಸಿರುವ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಇನ್ನೂ ನಾಲ್ಕನೆಯದು ನಿಮ್ಮ ಮನೆಯಲ್ಲಿ ಇರುವ ಹೆಂಗಸರ ಕೂದಲು ಪದೇ ಪದೇ ಉದುರುತ್ತಿದ್ದರೆ ಅಥವಾ ಕೂದಲು ತುಂಡು
ಆಗುತ್ತಿದ್ದರೆ ನಿಮ್ಮ ಮನೆಯಲ್ಲಿ ಏನೋ ತೊಂದರೆಗಳು ಬರುತ್ತಿದ್ದೆ ಯಾವುದೋ ಅಶುಭದ ಸಂಕೇತವನ್ನು ಇದು ಸೂಚಿಸುತ್ತದೆ. ಬಿಳಿ ಕೂದಲು ಆಗಿ ಉದುರುವುದು ಮನೆಯಲ್ಲಿ ತೊಂದರೆಯನ್ನು ಸೂಚಿಸುತ್ತದೆ. ಅನಾರೋಗ್ಯವನ್ನು ಸೂಚಿಸುತ್ತದೆ. ಮನೆಯಲ್ಲಿ ಖರ್ಚು ಹೆಚ್ಚುತ್ತದೆ. ನಷ್ಟಗಳು ಪ್ರಾಪ್ತಿಯಾಗುತ್ತದೆ ನಕಾರಾತ್ಮಕ ಶಕ್ತಿಗಳು ಹೆಚ್ಚುತ್ತದೆ ಅಂತ ಇದು ಸೂಚಿಸುತ್ತದೆ. ಇನ್ನೂ ಯಾವುದೇ ಕಾರಣಕ್ಕೂ ಹೆಂಗಸರು ಮಲಗುವ
ಸಮಯದಲ್ಲಿ ಕೂದಲನ್ನು ಬಿಟ್ಟು ಮಲಗಬಾರದು. ಕೂದಲನ್ನು ಹಾಗೆ ಬಿಟ್ಟು ಮಲಗುವುದರಿಂದ ಮನೆಯಲ್ಲಿ ಕೆಟ್ಟ ದೃಷ್ಟಿಗಳ ಆಹ್ವಾನೆ ಆಗುತ್ತದೆ. ಜೊತೆಗೆ ಅನಾರೋಗ್ಯ ಬರುತ್ತದೆ. ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಆದ ಕಾರಣವೇ ಸ್ತ್ರೀಯರು ಕೂದಲನ್ನು ಸದಾ ಕಾಲ ಗಂಟು ಹಾಕಿರಬೇಕು ಅಥವಾ ಜಡೆ ಹಾಕಬೇಕು. ಕೂದಲನ್ನು ಹಾಗೆ ಬಿಡುವುದರಿಂದ ಮನೆಯಲ್ಲಿ ಕೆಟ್ಟ ದೃಷ್ಟಿ ಕಾಡುತ್ತದೆ. ಜೊತೆಗೆ ಉದುರುವ ಕೂದಲು ಅಥವಾ ತಲೆ
ಬಾಚದೆ ಇರುವ ಕೂದಲು ಯಾವುದೇ ಕಾರಣಕ್ಕೂ ಬೇರೆಯವರ ಕೈಗೆ ಸಿಗದಂತೆ ನೋಡಿಕೊಳ್ಳಬಾರದು. ಅಂಥಹ ಕೂದಲನ್ನು ಒಂದು ಕಡೆ ಕೂಡಿಟ್ಟು ಏನಾದರೂ ಮಾಡಿ ಬಿಡಬೇಕು ಅಥವಾ ಎಸೆದು ಬಿಡಬೇಕು. ಯಾವುದೇ ಕಾರಣಕ್ಕೂ ದಾರಿಯಲ್ಲಿ ಹೋಗುವ ಜನರಿಗೆ ಸಿಗದಂತೆ ನೋಡಿಕೊಳ್ಳಬೇಕು. ಇದರಿಂದ ನಿಮಗೆ ಕಷ್ಟಗಳು ಬರುತ್ತದೆ. ಇದರಿಂದ ಉದ್ದ ಕೂದಲು ಬಿಡುವುದರಿಂದ ನಿಮಗೆ ದೃಷ್ಟಿ ತಾಗುತ್ತದೆ. ಕೆಟ್ಟ ದೃಷ್ಟಿ ತಾಗುವುದರಿಂದ ನಿಮ್ಮ ಮನೆಗೆ ಕೆಟ್ಟ ದೃಷ್ಟಿ ತಾಗುತ್ತದೆ ಆದ ಕಾರಣವೇ ಯಾವುದೇ ಕಾರಣಕ್ಕೂ ಉದ್ದ ಕೂದಲು ಇರುವ ವ್ಯಕ್ತಿಗಳು ಹಾಗೆ ಹಾರಾಡಲು ಬಿಡದೆ ಜಡೆಯನ್ನು ಹಾಕಿಕೊಳ್ಳಬೇಕು.