ತುರಿಕೆ ಶಕುನಗಳು ನಿಜವಾಗುತ್ತ? ನಂಬಿಕೆಗಳು ಹೇಳೋದೇನು?

Written by Anand raj

Published on:

ತುರಿಕೆ ಎನ್ನುವುದು ತುಂಬಾ ಕಿರಿಕಿರಿ ಉಂಟು ಮಾಡುವುದು. ಇದರಿಂದಾಗಿ ದೈನಂದಿನ ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದೇ ಇಲ್ಲ. ಅದರಲ್ಲೂ ಕೈ ಹಾಗೂ ಕಾಲುಗಳಲ್ಲಿ ತುರಿಕೆ ಕಾಣಿಸಿಕೊಂಡರೆ ಆಗ ಯಾವುದೇ ಕೆಲಸ ಮಾಡಲು ಕಷ್ಟವಾಗುತ್ತದೆ ಮತ್ತು ಕಿರಿಕಿರಿ ಉಂಟಾಗುವುದು. ಪದೇ ಪದೇ ತುರಿಸಿಕೊಳ್ಳುವ ಕಾರಣದಿಂದ ಚರ್ಮದಲ್ಲಿ ಗಾಯವಾಗಬಹುದು ಮತ್ತು ಅದರಿಂದ ನಿದ್ರೆಗೂ ತೊಂದರೆ ಆಗಬಹುದು.ಕೈಗಳು ಮತ್ತು ಕಾಲುಗಳು ತುರಿಸುವುದು ಚರ್ಮದ ಅಲರ್ಜಿ ಅಥವಾ ಬೇರೆ ಯಾವುದೇ ರೀತಿಯ ಕಾಯಿಲೆಯ ಲಕ್ಷಣಗಳು ಆಗಿರಲೂಬಹುದು. ಆದ್ರೆ ಹಸ್ತ  ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ನಮ್ಮ ಕೈ ಕಾಲು ಕೆಲವೊಂದು ಸಂಧರ್ಭದಲ್ಲಿ ತುರಿಕೆ ಕಾಣಿಸಿಕೊಳ್ಳುವುದಕ್ಕೆ ಶುಭ ಹಾಗೂ ಅಶುಭದ ಕಾರಣ ಇದೆಯಂತೆ.. ಹಾಗಿದ್ರೆ ಅದೇನು ಎನ್ನುವ ಮಾಹಿತಿ ಇಲ್ಲಿದೆ..

ಜ್ಯೋತಿಷ್ಯ ಮತ್ತು ಸಮುದ್ರ ಶಾಸ್ತ್ರದಲ್ಲಿ ದೇಹದ ವಿವಿಧ ಭಾಗಗಳಲ್ಲಿ ತುರಿಕೆ ಕಂಡುಬಂದರೆ ಅದಕ್ಕೆ ವಿಶೇಷ ಅರ್ಥವನ್ನು ನೀಡಲಾಗಿದೆ. ದೇಹದ ಯಾವುದೇ ಭಾಗಗಳಲ್ಲಿ ತುರಿಕೆ ಕಂಡುಬಂದರೆ ಅದು ಶುಭ ಮತ್ತು ಅಶುಭವನ್ನು ಸೂಚಿಸುತ್ತದೆ. ಅವುಗಳ ಫಲಿತಾಂಶವು ಶೀಘ್ರದಲ್ಲಿಯೇ ಲಭ್ಯವಾಗುತ್ತದೆ

1)ಬೆಳಗ್ಗೆ ಅಂಗೈನಲ್ಲಿ ತುರಿಕೆ ಕಾಣಿಸಿಕೊಂಡ್ರೆ: ಮುಂಜಾನೆ ನಿಮಗೆ ನಿಮ್ಮ ಅಂಗೈಗಳು ತುರಿಸುತ್ತಿದೆ ಎಂದು ಎನಿಸಿದರೆ, ಅದು ಹಣಕಾಸಿನ ಲಾಭದ ಪ್ರಮುಖ ಲಕ್ಷಣವಾಗಿದೆ. ಮಹಿಳೆಯರಿಗೆ ತಮ್ಮ ಎಡಗೈಯಲ್ಲಿ ತುರಿಕೆ ಇದ್ದರೆ, ಅವರು ಹಣವನ್ನು ಪಡೆಯುತ್ತಾರೆ, ಆದರೆ ಪುರುಷರು ತಮ್ಮ ಬಲಗೈಯಲ್ಲಿ ತುರಿಕೆ ಹೊಂದಿದ್ದರೆ ಹಣವನ್ನು ಪಡೆಯುತ್ತಾರೆ. ಬೆಳಿಗ್ಗೆ ಅಂಗೈ ಮೇಲೆ ತುರಿಕೆ ಇರುವುದು ಹಗಲಿನಲ್ಲಿ ನೀವು ಪಡೆಯುವ ಪ್ರಯೋಜನಗಳ ಬಗ್ಗೆ ಹೇಳುತ್ತದೆ.

2)ಎದೆಯ ಭಾಗ ತುರಿಸುತ್ತಿದ್ದರೆ: ಬೆಳಿಗ್ಗೆ ನಿಮ್ಮ ಎದೆಯ ಭಾಗ ತುರಿಸುತ್ತಿದ್ದರೆ, ನೀವು ದೀರ್ಘಕಾಲದಿಂದ ಭೇಟಿಯಾಗುವ ಬಗ್ಗೆ ಯೋಚಿಸುತ್ತಿದ್ದ ಯಾರನ್ನಾದರೂ ಇಂದು ನೀವು ಭೇಟಿಯಾಗಲಿದ್ದೀರಿ ಎಂದು ಅರ್ಥಮಾಡಿಕೊಳ್ಳಿ. ಈ ವ್ಯಕ್ತಿಯನ್ನು ಭೇಟಿ ಮಾಡುವುದರಿಂದ ನಿಮಗೆ ಸಂತೋಷವಾಗುತ್ತದೆ ಮತ್ತು ನಿಮ್ಮ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ.

3)ಎರಡೂ ಅಂಗೈಯಲ್ಲೂ ತುರಿಕೆ ಕಂಡು ಬಂದರೆ: ಎರಡೂ ಅಂಗೈಯಲ್ಲೂ ತುರಿಕೆ ಕಂಡು ಬಂದರೆ ನೀವು ಶ್ರೀಮಂತರಾಗಲಿದ್ದೀರಿ ಎನ್ನುವ ಸೂಚನೆಯಂತೆ. ಅದೃಷ್ಟ ಹಾಗೂ ನೀವು ಪಟ್ಟ ಶ್ರಮಕ್ಕೆ ಪ್ರತಿಫಲದ ದಿನಗಳು ಮುಂದೆ ಕಾಣಿಸಿಕೊಳ್ಳಲಿದೆ ಎನ್ನುವುದು ಎರಡೂ ಅಂಗೈ ತುರಿಕೆಯ ಅರ್ಥ. ಎರಡೂ ಅಂಗೈ ತುರಿಕೆ ಕಂಡುಬಂದರೆ ನಿಮ್ಮ ಎರಡೂ ಕೈಗಳನ್ನು ಜೇಬಿಗೆ ಉಜ್ಜಿಕೊಂಡರೆ ಜೇಬು ತುಂಬ ಹಣ ಹರಿದು ಬರುವುದು. ಚೀನೀಯರ ನಂಬಿಕೆಯಂತೆ ಎರಡೂ ಅಂಗೈ ತುರಿಕೆ ಕಂಡು ಬಂದರೆ ದುರಾದೃಷ್ಟ ಸಮೀಪಿಸುತ್ತಿದೆ ಎಂದರ್ಥ. ಹೀಗಾಗಿ ಆದಷ್ಟು ಬೇಗ ಕೆರೆದುಕೊಂಡು ತುರಿಕೆ ಕಡಿಮೆ ಮಾಡಿಕೊಳ್ಳಬೇಕು ಎನ್ನಲಾಗುತ್ತದೆ.

4)ಪಾದದಲ್ಲಿ ತುರಿಕೆ: ನೀವು ಕುಳಿತುಕೊಂಡಿದ್ದಾಗ ತುರಿಕೆಯಾದರೆ, ಒಂದೇ ಸ್ಥಿತಿಯಲ್ಲಿ ಕುಳಿತುಕೊಳ್ಳಬಾರದು. ಕೆಲವರ ನಂಬಿಕೆಯಂತೆ ಕಾಲಿನಲ್ಲಿ ತುರಿಕೆ ನೀವು ದೂರ ಪ್ರಯಾಣ ಅಥವಾ ವಿಶೇಷ ಪ್ರಯಾಣ ಮಾಡಲಿದ್ದೀರಿ ಎನ್ನುವುದರ ಸೂಚನೆಯಂತೆ.  ಬಲಗಾಲಿನ ಪಾದದಲ್ಲಿ ತುರಿಕೆಯಾದರೆ ನೀವು ಯಾವ ಸ್ಥಳಕ್ಕೆ ಪ್ರಯಾಣಿಸಬೇಕೆಂದುಕೊಂಡಿದ್ದೀರೋ ಆ ಸ್ಥಳವೇ ನಿಮ್ಮನ್ನು ಸ್ವಾಗತಿಸಲಿದೆ. ಎಡಗಾಲಿನ ಪಾದದಲ್ಲಿ ತುರಿಕೆ ಕಂಡುಬಂದರೆ ನಿಮ್ಮ ಪ್ರಯಾಣ ಅಂತಿಮವಾಗಿ ಸುಖಕರವಾಗಿರಲಾರದು. ಕೆಲವರು ಹೇಳುವಂತೆ ಕಾಲಿನಲ್ಲಿ ತುರಿಕೆಯಾದರೆ ದುಃಖದ ಘಟನೆ ನಡೆಯುವುದು.

5)ಮೂಗಿನ ಹೊರಗೆ ತುರಿಕೆ: ನಿಮಗೆ ಕೋಪ ಬರುವ ಸಂಭವವಿದೆ, ಅಥವಾ ಶಾಪಕ್ಕೊಳಗಾಗಲಿದ್ದೀರಿ ಅಥವಾ ಮೂರ್ಖರನ್ನು ಭೇಟಿಯಾಗಲಿದ್ದೀರಿ.

6) ಹೊಟ್ಟೆಯ ಮೇಲೆ ತುರಿಕೆ: ಹೊಟ್ಟೆಯ ಮೇಲೆ ತುರಿಕೆ ಅಂದರೆ ಅದು ಅಶುಭ ಸೂಚಕವಂತೆ. ಸಂಬಂಧಗಳ ದೃಷ್ಟಿಯಿಂದ ಇದು ಉತ್ತಮವಾದ ಸೂಚನೆಯಲ್ಲ ಎಂದು ಹೇಳಲಾಗುತ್ತದೆ. ಅಂದರೆ ಯಾರೊಂದಿಗಾದರೂ ಸಂಬಂಧ ಮುರಿದು ಬೀಳುವ ಸೂಚನೆಯನ್ನು ನೀಡುತ್ತದೆಯಂತೆ.

7)ತುಟಿಗಳಲ್ಲಿ ತುರಿಕೆ ಕಂಡುಬಂದರೆ: ಬೆಳಿಗ್ಗೆ ತುಟಿಗಳಲ್ಲಿ ತುರಿಕೆ ಕಂಡುಬಂದರೆ ಆ ದಿನ ನೀವು ರುಚಿಕರವಾದ ತಿನ್ನಿಸುಗಳನ್ನು ತಿನ್ನುತ್ತೀರಿ ಎಂಬುದನ್ನು ಸೂಚಿಸುತ್ತದೆ

Related Post

Leave a Comment