ದೇವಸ್ಥಾನದಲ್ಲಿ ಕನಿಷ್ಠ ಇಷ್ಟು ಪ್ರದಕ್ಷಿಣೆ ತಪ್ಪದೆ ಮಾಡಿ!

Written by Anand raj

Published on:

ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಪಡೆದು, ಪ್ರದಕ್ಷಿಣೆ ಹಾಕಿ ಬರ್ತೇವೆ. ಆದ್ರೆ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕ್ಬೇಕು, ಹಾಕೋವಾಗ ಏನು ಮಾಡ್ಬೇಕು ಎಂಬುದು ನಮಗೆ ತಿಳಿದಿರೋದಿಲ್ಲ. ಇದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಹಿಂದೂ ಧರ್ಮದಲ್ಲಿ ದೇವಸ್ಥಾನಗಳಿಗೆ ವಿಶೇಷ ಮಹತ್ವವಿದೆ. ಜನರು ತಮ್ಮ ಕಷ್ಟಗಳನ್ನು ತೋಡಿಕೊಂಡು ಆಸೆ ಈಡೇರಿಸುವಂತೆ ದೇವರನ್ನು ಪ್ರಾರ್ಥಿಸುವ ಜಾಗವಿದು. ದುಃಖದಲ್ಲಿರುವ ಜನರಿಗೆ ನೆಮ್ಮದಿ ನೀಡುವ ತಾಣ ದೇವಸ್ಥಾನ. ಕೆಲವರು ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಬರ್ತಾರೆ. ಮತ್ತೆ ಕೆಲವರು ಹಬ್ಬದ ಸಂದರ್ಭದಲ್ಲಿ ಅಥವಾ ವಿಶೇಷ ದಿನದಂದು ದೇವಸ್ಥಾನಕ್ಕೆ ಹೋಗ್ತಾರೆ. ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ಪ್ರದಕ್ಷಿಣೆ ಮಾಡುವ ಪದ್ಧತಿ ಹಿಂದೂ ಧರ್ಮದಲ್ಲಿದೆ. ದೇವಸ್ಥಾನಕ್ಕೆ ಹೋದ್ಮೇಲೆ ಪ್ರಸಾದ ಸ್ವೀಕರಿಸಿ, ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಕುಳಿತು, ಪ್ರದಕ್ಷಿಣೆ ಹಾಕದೆ ಬಂದ್ರೆ ಅದು ಮನಸ್ಸಿಗೆ ನೆಮ್ಮದಿ ನೀಡೋದಿಲ್ಲ.

ದೇವಸ್ಥಾನ ದಲ್ಲಿ ಮಾತ್ರವಲ್ಲ ಅಶ್ವತ್ಥ ಮರಕ್ಕೆ ಹಾಗೂ ತುಳಸಿ ಗಿಡಕ್ಕೆ ಕೂಡ ಪ್ರದಕ್ಷಿಣೆ ಹಾಕಲಾಗುತ್ತದೆ. ಅನೇಕರಿಗೆ ದೇವಸ್ಥಾನದಲ್ಲಿ ಎಷ್ಟು ಪ್ರದಕ್ಷಿಣೆ ಹಾಕ್ಬೇಕು ಎಂಬುದು ತಿಳಿದಿಲ್ಲ. ಕೆಲವರ ದು ಸುತ್ತು ಸುತ್ತಿ ಬಂದ್ರೆ ಮತ್ತೆ ಕೆಲವರು ಮೂರು ಸುತ್ತು ಸುತ್ತುತ್ತಾರೆ. ಇನ್ನು ಕೆಲವರು ಎರಡು ಸುತ್ತು ಸುತ್ತುತ್ತಾರೆ. ಬೇರೆ ಬೇರೆ ದೇವರಿಗೆ ಪ್ರದಕ್ಷಿಣೆ ಹಾಕುವ ವಿಧಾನ ಬೇರೆ ಬೇರೆಯಿದೆ. ನಾವಿಂದು ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ.

ಪ್ರದಕ್ಷಿಣೆ ನಿಯಮ : ಮೊದಲನೇಯದಾಗಿ ದೇವಸ್ಥಾನದ ಪ್ರದಕ್ಷಿಣೆ ನಿಯಮ ತಿಳಿದುಕೊಳ್ಳಿ. ಎಡದಿಂದ ಬಲಕ್ಕೆ ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆ ಹಾಕುವ ವೇಳೆ ಎರಡು ಕೈಗಳನ್ನು ನಮಸ್ಕಾರ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಭಕ್ತಿಯಿಂದ ಯಾವುದೇ ದುರಾಲೋಚನೆ ಮಾಡದೆ ಶಾಂತ ಮನಸ್ಸಿನಿಂದ ದೇವರ ಪ್ರದಕ್ಷಣೆ ಮಾಡ್ಬೇಕು. ದೇವರ ನಾಮ ಜಪಿಸ್ತಾ ಪ್ರದಕ್ಷಿಣೆ ಹಾಕ್ಬೇಕು. ಒಂದು ಪ್ರದಕ್ಷಿಣೆಯ ನಂತರ ದೇವರಿಗೆ ನಮಸ್ಕರಿಸಿ ನಂತರ ಮುಂದಿನ ಪ್ರದಕ್ಷಿಣೆಯನ್ನು ಪ್ರಾರಂಭಿಸಬೇಕು.  

ದೇವಾಲಯದಲ್ಲಿ ಎಷ್ಟು ಸುತ್ತು ಪ್ರದಕ್ಷಿಣೆ ಮಾಡ್ಬೇಕು? : ಶಾಸ್ತ್ರಗಳ ಪ್ರಕಾರ, ದೇವಾಲಯದಲ್ಲಿ ಪ್ರದಕ್ಷಿಣೆಯ ಸರಿಯಾದ ನಿಯಮವೆಂದರೆ ಎಲ್ಲಾ ಪುರುಷ ದೇವರಿಗೆ ಪ್ರದಕ್ಷಿಣೆಗಳ ಸಂಖ್ಯೆಯು ಸಮ ಸಂಖ್ಯೆ ಆಗಿರುತ್ತದೆ. ಅಂದರೆ 0, 2, 4, 6 ಆಗಿರಬೇಕು. ದೇವತೆಗಳಿಗೆ ಪ್ರದಕ್ಷಿಣೆ ಸಂಖ್ಯೆ ಬೆಸ ಸಂಖ್ಯೆಯಾಗಿರಬೇಕು. ಅಂದ್ರೆ 1, 3, 5, 7 ಆಗಿರಬೇಕು. ಸಮ ಸಂಖ್ಯೆಯು ಶೂನ್ಯದೊಂದಿಗೆ ಸಂಬಂಧಿಸಿದೆ. ಹಾಗಾಗಿ ದೇವರ  ಪ್ರದಕ್ಷಿಣೆಯನ್ನು ಸಮ  ಸಂಖ್ಯೆಯಲ್ಲಿ ಮಾತ್ರ ಮಾಡಬೇಕು ಎನ್ನಲಾಗುತ್ತದೆ. ಆದ್ರೆ ಎಲ್ಲ ದೇವರಿಗೆ ಈ ನಿಯಮ ಪಾಲನೆಯಾಗೋದಿಲ್ಲ. ಕೆಲ ದೇವರ ಪ್ರದಕ್ಷಿಣೆ ಸಂಖ್ಯೆ ಬದಲಾಗುತ್ತದೆ. ಅದರಲ್ಲೂ ಉದ್ದೇಶಕ್ಕೆ ತಕ್ಕಂತೆ ಪ್ರದಕ್ಷಿಣೆ ಸಂಖ್ಯೆ ಬದಲಾಗುತ್ತದೆ. 

ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕ್ಬೇಕು ? : ನೀವು ಸೂರ್ಯದೇವನಿಗೆ ಪ್ರದಕ್ಷಿಣೆ ಹಾಕ್ತಿದ್ದರೆ ಏಳು ಬಾರಿ ಪ್ರದಕ್ಷಿಣೆ ಮಾಡ್ಬೇಕು. ಭಕ್ತರು ಭದ್ರಕಾಳಿಗೆ ಎರಡು ಬಾರಿ ಪ್ರದಕ್ಷಿಣೆ ಹಾಕಬೇಕು. ಮಾತೆ ಭಗವತಿ ಮತ್ತು ಮಾತೆ ದುರ್ಗೆಗೆ 7 ಪರಿಕ್ರಮಗಳನ್ನು ಮಾಡಬೇಕು. ಒಂಬತ್ತು ನವಗ್ರಹಗಳಿವೆ. ಹಾಗಾಗಿ ನವಗ್ರಹ ಪ್ರದಕ್ಷಿಣೆ ವೇಳೆ ನೀವು  ಕನಿಷ್ಠ 9 ಪ್ರದಕ್ಷಿಣೆ ಹಾಕ್ಬೇಕು. ಆಲದ ಮರ ಅಥವಾ ಅಶ್ವತ್ಥ ಮರಗಳಿಗೆ ಪರಿಕ್ರಮದ ಸಂಖ್ಯೆ ಏಳಾಗಿರುತ್ತದೆ.ಶಿವನಿಗೆ ನೀವು ಪ್ರದಕ್ಷಿಣೆ ಹಾಕಬಾರದು. ಶಿವಲಿಂಗವನ್ನು ಎಂದೂ ಪ್ರದಕ್ಷಿಣೆ ಹಾಕಬಾರದು. ಶಿವಲಿಂಗದ ಅರ್ಧ ಪರಿಕ್ರಮವನ್ನು ಮಾಡಿದ ನಂತರ ರಿಕ್ರಮವನ್ನು ಪ್ರಾರಂಭಿಸಿದ ಅದೇ ಸ್ಥಳಕ್ಕೆ ಹಿಂತಿರುಗಬೇಕು.

ಪ್ರದಕ್ಷಿಣೆ ಹಾಕುವುದ್ರಿಂದ ಆಗುವ ಲಾಭಗಳು : ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವುದ್ರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಇದು ಒಳ್ಳೆಯದು. ಅಲ್ಲದೆ, ಮನಸ್ಸಿನಲ್ಲಿ ಧನಾತ್ಮಕ ಶಕ್ತಿ ನೆಲೆಸಲು ಇದು ಸಹಕಾರಿಯಾಗಿದೆ. ದೇವಸ್ಥಾನದಲ್ಲಿ ಪ್ರದಕ್ಷಿಣೆ ಮಾಡುವುದು ದೇವರ ಮೇಲೆ ನಿಮ್ಮ ನಂಬಿಕೆಯನ್ನು ತೋರಿಸುತ್ತದೆ. ನೀವು ಉತ್ತಮ ಮಾರ್ಗದಲ್ಲಿ ನಡೆಯಲು ಸಹಕಾರಿ. ನಿಮ್ಮ ಇಷ್ಟದ ದೇವರನ್ನು ನೆನೆದು, ಪ್ರಾರ್ಥನೆ ಮಾಡ್ತಾ, ಮಂತ್ರ ಹೇಳ್ತಾ ನೀವು ಪ್ರದಕ್ಷಿಣೆ ಹಾಕಿದ್ರೆ ಮನೆಯಲ್ಲಿ  ಸುಖ-ಸಮೃದ್ಧಿ ಸದಾ ನೆಲೆಸಿರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. 

Related Post

Leave a Comment