ನವೆಂಬರ್ ತಿಂಗಳಲ್ಲಿ ಜನಿಸಿದವರ ಗುಣಲಕ್ಷಣಗಳು!

Written by Anand raj

Published on:

ಪ್ರತಿಯೊಂದಕ್ಕೂ ಅದರದ್ದೇ ಆದ ವಿಶೇಷತೆ ಇರುತ್ತದೆ. ಅದು ವ್ಯಕ್ತಿಯಾಗಲಿ ಅಥವಾ ವಸ್ತುವಾಗಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುವುದು ಸತ್ಯ. ಹಾಗೆಯೇ ಪ್ರತಿ ತಿಂಗಳಿಗು ಅದರದ್ದೇ ಆದ ವಿಶೇಷತೆ ಇದೆ. ಆಯಾ ತಿಂಗಳಿನಲ್ಲಿ ಹುಟ್ಟಿದವರು ಆ ತಿಂಗಳಿನ ವಿಶೇಷತೆಯಿಂದ ಪ್ರಭಾವಿತರಾಗಿರುತ್ತಾರೆ. ಆಯಾ ತಿಂಗಳಿಗನುಗುಣವಾಗಿ ವಿಶೇಷವಾದ ಗುಣ ಮತ್ತು ವೈಶಿಷ್ಟ್ಯತೆಯನ್ನು ಹೊಂದಿರುತ್ತಾರೆ. ಹಾಗಾದರೆ ನವೆಂಬರ್ ತಿಂಗಳಿನಲ್ಲಿ ಜನಿಸಿದವರ ವಿಶೇಷ ಗುಣಗಳೇನು? ಎಂಬುದನ್ನು ತಿಳಿಯೋಣ….

ಪ್ರತಿ ದಿನಕ್ಕೂ ಒಂದೊಂದು ವಿಶೇಷತೆ ಇರುತ್ತದೆ. ಹಾಗೆಯೇ ಪ್ರತಿ ತಿಂಗಳು ಸಹ ಅದರದ್ದೇ ಆದ ಮಹತ್ವವನ್ನು ಹೊಂದಿರುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಗುಣ, ಸ್ವಭಾವಗಳು ಭಿನ್ನವಾಗಿರುತ್ತವೆ. ವ್ಯಕ್ತಿಯ ಗುಣ, ಸ್ವಭಾವಗಳು ರಾಶಿ, ನಕ್ಷತ್ರ, ಗ್ರಹಗಳ ಮತ್ತು ಪ್ರಭಾವಕ್ಕೆ ಒಳಗಾಗಿರುತ್ತದೆ ಎಂದರೆ ತಪ್ಪಾಗಲಾರದು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕವನ್ನು ಬರೆಯುವಾಗ ಮಗು ಜನಿಸಿದ ಸಮಯ, ದಿನಾಂಕ, ಸ್ಥಳ, ತಿಂಗಳು, ವರ್ಷ, ವಾರ ಪ್ರತಿಯೊಂದನ್ನೂ ಗಣನೆಗೆ ತೆಗೆದುಕೊಂಡು ಜಾತಕವನ್ನು ಮಾಡಲಾಗುತ್ತದೆ. ಪ್ರತಿ ತಿಂಗಳಿನಲ್ಲಿ ಜನಿಸಿದವರು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಒಂದೊಂದು ತಿಂಗಳ ವಿಶೇಷತೆ ಬೇರೆಯದ್ದೇ ಆಗಿರುತ್ತದೆ. ಹಾಗಾಗಿ ನವೆಂಬರ್‌ನಲ್ಲಿ ಹುಟ್ಟಿದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ..

ಉತ್ಸಾಹ ಮತ್ತು ಧೈರ್ಯ–ನವೆಂಬರ್‌ನಲ್ಲಿ ಜನಿಸಿದವರು ಹೆಚ್ಚು ಉತ್ಸಾಹವನ್ನು ಹೊಂದಿದವರು. ಯಾವುದೇ ಕೆಲಸವನ್ನು ಉತ್ಸಾಹದಿಂದ, ಧೈರ್ಯದಿಂದ ಮಾಡಿ ಮುಗಿಸುವ ಸ್ವಭಾವವನ್ನು ಹೊಂದಿರುತ್ತಾರೆ. ವೃತ್ತಿ ಕ್ಷೇತ್ರದಲ್ಲಾಗಲಿ, ಖಾಸಗಿ ಜೀವನದಲ್ಲಾಗಲಿ ಉತ್ಸಾಹದ ಕೊರತೆ ನವೆಂಬರ್‌ನಲ್ಲಿ ಜನಿಸಿದವರಲ್ಲಿ ಕಂಡುಬರುವುದಿಲ್ಲ. ಎಷ್ಟೇ ಬಾರಿ ಸೋತರೂ ಮತ್ತೆ ಛಲದಿಂದ, ಅದೇ ಹುಮ್ಮಸ್ಸಿನಿಂದ ಕಾರ್ಯ ನಿರ್ವಹಿಸುವ ಉತ್ತಮ ಗುಣವನ್ನು ಈ ವ್ಯಕ್ತಿಗಳು ಹೊಂದಿರುತ್ತಾರೆ.

ಸಂಯಮ–ನವೆಂಬರ್‌ನಲ್ಲಿ ಜನಿಸಿದವರಿಗೆ ಇರುವಷ್ಟು ತಾಳ್ಮೆ ಬೇರೆ ತಿಂಗಳಿನಲ್ಲಿ ಜನಿಸಿದವರಿಗೆ ಇರುವುದು ಅಸಾಧ್ಯವೆಂದು ಹೇಳಲಾಗುತ್ತದೆ. ಸಂಯಮದಿಂದ ಎಲ್ಲವನ್ನು ಸಹಿಸಿಕೊಳ್ಳುವ ಗುಣ ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಈ ತಿಂಗಳಿನಲ್ಲಿ ಜನಿಸಿದವರು ಸಂಯಮ ಮತ್ತು ಪರಿಶ್ರಮದಿಂದ ಅಂದುಕೊಂಡ ಗುರಿಯನ್ನು ಮುಟ್ಟುತ್ತಾರೆ.

ಆತ್ಮ ವಿಶ್ವಾಸ–ವೃತ್ತಿ ಕ್ಷೇತ್ರದ ಬಗ್ಗೆ ಹೇಳುವುದಾದರೆ ಹೆಚ್ಚು ಆತ್ಮ ವಿಶ್ವಾಸವನ್ನು ಹೊಂದಿರುತ್ತಾರೆ. ಯಾವ ಕ್ಷೇತ್ರದಲ್ಲಿ ಹೋದರೆ ಯಶಸ್ಸು ದೊರಕುತ್ತದೆ ಎಂಬುದನ್ನು ಚೆನ್ನಾಗಿ ಅರಿತಿರುತ್ತಾರೆ. ಸಾಮಾನ್ಯವಾಗಿ ನವೆಂಬರ್‌ನಲ್ಲಿ ಜನಿಸಿದವರು ಭಾವಾನಾತ್ಮಕ ಲೇಖಕರು, ಪೋಲಿಸ್, ಪತ್ರಿಕೋದ್ಯಮ, ಕಲಾಕಾರರು ಮತ್ತು ಗುಪ್ತಚರರು ಆಗಬಹುದೆಂದು ಹೇಳಲಾಗುತ್ತದೆ.

ಆಕರ್ಷಕ ವ್ಯಕ್ತಿತ್ವ -ನವೆಂಬರ್‌ನಲ್ಲಿ ಜನಿಸಿದವರು ಆಕರ್ಷಕವಾಗಿರುತ್ತಾರೆಂದು ಹೇಳಲಾಗುತ್ತದೆ. ಹಾಗಾಗಿ ಈ ವ್ಯಕ್ತಿಗಳು ಎಂಥವರನ್ನೂ ಸೆಳೆಯುವ ಆಯಸ್ಕಾಂತೀಯ ಗುಣವನ್ನು ಹೊಂದಿರುತ್ತಾರೆಂದು ಹೇಳಬುಹದಾಗಿದೆ. ಜೀವನ ಸಂಗಾತಿಯು ಆಕರ್ಷಕವಾಗಿರಬೇಕೆಂದು ನವೆಂಬರ್‌ನಲ್ಲಿ ಜನಿಸಿದವರು ಬಯಸುತ್ತಾರೆ.

ವಿಶ್ವಾಸಾರ್ಹರು–ನವೆಂಬರ್‌ನಲ್ಲಿ ಹುಟ್ಟಿದವರು ವಿಶ್ವಾಸಕ್ಕೆ ಅರ್ಹರಾಗಿರುತ್ತಾರೆ. ಯಾರನ್ನೂ ಬೇಗ ನಂಬದ ಇವರು ಒಮ್ಮೆ ನಂಬಿದರೆ ಅದನ್ನು ಜೀವನ ಪೂರ್ತಿ ಉಳಿಸಿಕೊಳ್ಳುತ್ತಾರೆ. ನಂಬಿದವರ ವಿಶ್ವಾಸ ಕಳೆದುಕೊಳ್ಳುವ ಕೆಲಸವನ್ನು ಇವರು ಮಾಡುವುದಿಲ್ಲ. 

ದಯಾ ಗುಣವನ್ನುಳ್ಳವರು–ನವೆಂಬರ್‌ನಲ್ಲಿ ಜನಿಸಿದವರು ಇತರರಿಗೆ ಒಳಿತನ್ನು ಮಾಡಲೆಂದೇ ಜನಿಸಿರುತ್ತಾರೆ ಎಂದು ಹೇಳಲಾಗುತ್ತದೆ. ದಯೆ, ಪರೋಪಕಾರದಂತ ಗುಣಗಳು ಇವರಲ್ಲಿ ಹೆಚ್ಚಿರುತ್ತದೆ. ಸಂಯಮದಿಂದ ಎಲ್ಲವನ್ನು ಗೆಲ್ಲುವ  ತಾಕತ್ತನ್ನು ಇವರು ಹೊಂದಿರುತ್ತಾರೆ. ನವೆಂಬರ್‌ನಲ್ಲಿ ಹುಟ್ಟಿದವರು ಸ್ವಾಭಿಮಾನಿಗಳು ಸಹ ಆಗಿರುತ್ತಾರೆ.

ಛಲವಾದಿಗಳು–ನವೆಂಬರ್‌ನಲ್ಲಿ ಜನಿಸಿದವರು ಸಾಧಿಸಬೇಕಂದು ಕೊಂಡದ್ದನ್ನು ಸಾಧಿಸದೆಯೇ ಬಿಡುವುದಿಲ್ಲ. ಪರಿಶ್ರಮ ಮತ್ತು ಛಲದಿಂದ ಸಮಸ್ಯೆಗಳನ್ನು ದಾಟಿ ಗುರಿಯನ್ನು ತಲುಪುತ್ತಾರೆ. ಪರಿಶ್ರಮದಿಂದ ಕಾರ್ಯ ನಿರ್ವಹಿಸುವ ಈ ವ್ಯಕ್ತಿಗಳು ಅಷ್ಟೇ ಬುದ್ಧಿವಂತರು ಸಹ ಆಗಿರುತ್ತಾರೆ.

ಇತರರಿಗಿಂತ ಭಿನ್ನ–ಪ್ರತಿ ತಿಂಗಳಿನಲ್ಲಿ ಜನಿಸಿದವರು ಒಬ್ಬರಿಗಿಂತ ಮತ್ತೊಬ್ಬರು ಭಿನ್ನವಾಗಿರುತ್ತಾರೆ. ಹಾಗೆಯೇ ನವೆಂಬರ್‌ನಲ್ಲಿ ಜನಿಸಿದವರು ಜಗತ್ತಿನ ಬಗ್ಗೆ ತಲೆಕೆಡಿಸಿಕೊಳ್ಳದೇ ತಮಗೆ ಹೇಗೆ ಬೇಕೋ ಹಾಗೆ ಇರುವವರು. ಈ ವ್ಯಕ್ತಿಗಳ ಕಾರ್ಯ ವೈಖರಿ ಭಿನ್ನವಾಗಿರುವ ಕಾರಣ, ಎಲ್ಲರನ್ನೂ ಪ್ರಭಾವಿತಗೊಳಿಸುತ್ತದೆ.

ನವೆಂಬರ್‌ನಲ್ಲಿ ಜನಿಸಿದ ಪ್ರಮುಖರು–ರಾಣಿ ಲಕ್ಷ್ಮೀಬಾಯಿ, ಅಮರ್ತ್ಯ ಸೇನ್, ಶಾರೂಖ್ ಖಾನ್, ಜವಹಾರ್ ಲಾಲ್ ನೆಹರು, ಇಂದಿರಾ ಗಾಂಧಿ, ವಿರಾಟ್ ಕೊಹ್ಲಿ, ಐಶ್ವರ್ಯಾ ರೈ, ಸಾನಿಯಾ ಮಿರ್ಜಾ, ಕಮಲ್ ಹಾಸನ್, ಯಾಮಿ ಗೌತಮ್, ಜೂಹಿ ಚಾವ್ಲಾ, ಸುಶ್ಮಿತಾ ಸೇನ್, ಜಿನತ್ ಅಮನ್, ಮುಲಾಯಮ್ ಸಿಂಗ್ ಯಾದವ್ ಮುಂತಾದವರು ಜನಿಸಿದ್ದು ನವೆಂಬರ್ ತಿಂಗಳಿನಲ್ಲಿಯೇ ಆಗಿದೆ. ಈ ಪ್ರಮುಖರು ಅವರವರ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿದವರು. 

Related Post

Leave a Comment