ಮನೆಯಲ್ಲಿ ಆಂಜನೇಯ ಸ್ವಾಮಿ ಫೋಟೋ ಇಟ್ಟು ಪೂಜೆ ಮಾಡಬಹುದಾ?

Written by Anand raj

Published on:

ಮನೆಯಲ್ಲಿ ಆಂಜನೇಯ ಫೋಟೋ ಇಟ್ಟು ಪೂಜೆ ಮಾಡಬಹುದು. ಸಾಮಾನ್ಯವಾಗಿ ಎಲ್ಲಾ ಹಿಂದೂಗಳ ಮನೆಯಲ್ಲಿ ಆಂಜನೇಯನ ಫೋಟೋ ಇದ್ದೆ ಇರುತ್ತದೆ. ಅದರೆ ಪ್ರತಿ ಮಂಗಳವಾರ ಮತ್ತು ಶನಿವಾರ ಆಂಜನೇಯನನ್ನು ಕಟ್ಟುನಿಟ್ಟಾದ ನಿಯಮಗಳೊಂದಿಗೆ ಪೂಜೆ ಮಾಡಲಾಗುತ್ತದೆ. ಮನೆಯಲ್ಲಿ ಆಂಜನೇಯ ದೇವರ ಫೋಟೋ ಎಲ್ಲಿ ಹಾಕಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಆಂಜನೇಯ ದೇವರನ್ನು ಯಾರು ಅತ್ಯಂತ ಶ್ರದ್ಧೆಯಿಂದ ಪೂಜೆ ಮಾಡುತ್ತಾರೋ ಅವರಿಗೆ ಆರೋಗ್ಯ ವೃದ್ಧಿ ಜೊತೆ ಶಕ್ತಿಯನ್ನು ನೀಡುತ್ತಾನೆ ಎಂಬ ಬಲವಾದ ನಂಬಿಕೆ ಇದೆ. ಒಮ್ಮೆ ನೀವು ವಾಯುಪುತ್ರನ ಕೃಪೆಗೆ ಪಾತ್ರರಾದ್ರೆ ನಿಮ್ಮ ದೈಹಿಕ ನೋವುಗಳು ದೂರವಾಗುತ್ತವೆ.

ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ ಪೂಜಾ ಕೊಠಡಿ ಇರುತ್ತದೆ. ಆದರೆ ಪೂಜೆಯ ವೇಳೆ ಕೆಲವರು ತಮ್ಮ ಇಚ್ಛೆಯ ಅನುಸಾರವಾಗಿ ದೇವರ ಚಿತ್ರಗಳನ್ನು ಇರಿಸುತ್ತಾರೆ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೊರ ಹೋಗದೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಪೂಜೆಯ ಸಮಯದಲ್ಲಿ ಆಂಜನೇಯ ದೇವರ ಫೋಟೋ ಇರಿಸಬೇಕಾದ್ರೆ ಎಚ್ಚರವಾಗಿರಬೇಕು. ವಾಸ್ತು ಶಾಸ್ತ್ರದಲ್ಲಿ ಫೋಟೋಗಳ ಇರಿಸುವಿಕೆ ಬಗ್ಗೆ ಹೇಳಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಹನುಮಂತನು ಫೋಟೋದಲ್ಲಿ ಕುಳಿತಿರುವ ಸ್ಥಿತಿಯಲ್ಲಿರಬೇಕು. ಪೂಜಾ ಕೋಣೆಯಲ್ಲಿ ಆಂಜನೇಯ ಫೋಟೋ ವಾಸ್ತು ಪ್ರಕಾರವೇ ಇರಿಸಬೇಕು.

ಆದರೆ ಅನೇಕರು ಆಂಜನೇಯನ ಫೋಟೋವನ್ನು ಪೂಜಾ ಕೋಣೆಯಲ್ಲಿ ಹಾಕುವ ಬದಲು ಮಲಗುವ ಕೋಣೆಯಲ್ಲಿ ಹಾಕುತ್ತಾರೆ. ಇದರಿಂದ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಮನೆಯಲ್ಲಿ ಹಲವು ಸಮಸ್ಯೆಗಳಿದ್ದರೆ ಹನುಮಂತನ ಪಂಚಮುಖಿ ಆಂಜನೇಯ ಸ್ವಾಮಿ ಫೋಟೋವನ್ನು ಮನೆಯ ಮುಂಬಾಗಿಲ ಬಳಿ ಇಟ್ಟರೆ ಕೆಟ್ಟ ಶಕ್ತಿಗಳು ಮಾಯವಾಗಿ ಶುಭಕಾರ್ಯಗಳು ನಡೆಯುತ್ತವೆ.

Related Post

Leave a Comment