ಬನದ ಹುಣ್ಣಿಮೆ, ಹುಣ್ಣಿಮೆ ದಿನ ಈ ವಸ್ತುಗಳನ್ನು ದೇವಸ್ಥಾನಕ್ಕೆ ಕೋಡಿ, ಗ್ರಹದೋಷ ಆರೋಗ್ಯ, ಆರ್ಥಿಕ ಸಮಸ್ಸೆ ನಿವಾರಣೆಗಾಗಿ!

Written by Anand raj

Published on:

ಜನವರು 2024 ಈ ತಿಂಗಳಲ್ಲಿ ಬರುವ ಹುಣ್ಣಿಮೆ ಬಗ್ಗೆ ಓದಿಷ್ಟು ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಈ ಹುಣ್ಣಿಮೆ ಅನ್ನು ಬನದ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಹುಣ್ಣಿಮೆ ದಿನವನ್ನು ತುಂಬಾ ಮಂಗಳಕರವಾದ ದಿನ ಎಂದು ಹೇಳಲಾಗುತ್ತದೆ. ಈ ದಿನ ನಾಗರ ಪೂಜೆ, ಸುಬ್ರಹ್ಮಣ್ಯ ಸ್ವಾಮಿ ಪೂಜೆಯನ್ನು ಮಾಡುತ್ತೇವೆ ಹಾಗು ವಿಷ್ಣುವನ್ನು ಸಹ ಆರಾಧನೆಯನ್ನು ಮಾಡುತ್ತೇವೆ. ಅದರಲ್ಲೂ ಪುಷ್ಯಾ ಮಾಸದಲ್ಲಿ ಬರುವ ಹುಣ್ಣಿಮೆ ಅನ್ನು ಬನದ ಹುಣ್ಣಿಮೆ ಎಂದು ಕರೆಯುತ್ತೇವೆ.

ಈ ಬನದ ಹುಣ್ಣಿಮೆ ದಿನ ಬನಶಂಕರಿ ದೇವಿಯನ್ನು ಆರಾಧನೆ ಮಾಡಲಾಗುತ್ತದೆ. ಹಾಗಾಗಿ ಈ ಹುಣ್ಣಿಮೆ ತುಂಬಾ ವಿಶೇಷ ಎಂದು ಹೇಳಬಹುದು. ಸಾಧ್ಯವಾದರೆ ನಿಮ್ಮ ಮನೆಯ ಹತ್ತಿರ ಇರುವ ಬನಶಂಕರಿ ದೇವಿ ದೇವಸ್ಥಾನ ಹತ್ತಿರ ಇದ್ದರೆ ಇದೆ ಹುಣ್ಣಿಮೆ ದಿನ ಕೆಲವು ವಸ್ತುಗಳನ್ನು ಮರೆಯದೆ ದೇವೀ ದೇವಸ್ಥಾನಕ್ಕೆ ಹೋಗೀ ಕೋಡಿ. ಬನಶಂಕರಿ ದೇವಿ ಗೆ ಈ ವಸ್ತುಗಳನ್ನು ಕೊಡುವುದರಿಂದ ಕೆಲವು ದೋಷಗಳು ನಿವಾರಣೆ ಆಗುತ್ತದೆ.

ಹುಣ್ಣಿಮೆ ತಿಥಿ ಪ್ರಾರಂಭ ಆಗುವುದು ಜನವರಿ 24 ಬುಧವಾರ ರಾತ್ರಿ 9:50 ನಿಮಿಷಕ್ಕೆ ಹುಣ್ಣಿಮೆ ತಿಥಿ ಪ್ರಾರಂಭವಾಗುತ್ತದೆ ಮತ್ತು ಜನವರು 25 ಗುರುವಾರ ರಾತ್ರಿ 11:20 ನಿಮಿಷಕ್ಕೆ ಹುಣ್ಣಿಮೆ ತಿಥಿ ಮುಕ್ತಾಯ ಆಗುತ್ತದೆ.ಈ ಬನದ ಹುಣ್ಣಿಮೆ ಅನ್ನು ಜನವರಿ 25ನೆ ತಾರೀಕು ಆಚರಣೆ ಮಾಡಬೇಕು. ಈ ಹುಣ್ಣಿಮೆ ಅನ್ನು ಪುಷ್ಯಾ ಹುಣ್ಣಿಮೆ ಎಂದು ಕರೆಯಲಾಗುತ್ತದೆ ಮತ್ತು ಪುಷ್ಟ ಪೌರ್ಣಮಿ ಎಂದು ಕರೆಯಲಾಗುತ್ತದೆ. ಪುಷ್ಯಾ ಮಾಸದಲ್ಲಿ ಬರುವ ಈ ಹುಣ್ಣಿಮೆ ಅನ್ನು ಪುಷ್ಯಾ ಪೌರ್ಣಮಿ ಎಂದು ಹೇಳಲಾಗುತ್ತದೆ. ಬನದ ಹುಣ್ಣಿಮೆ ದಿನ ಶಾಖಂಬರಿ ಅಲಂಕಾರವನ್ನು ಮಾಡಲಾಗುತ್ತದೆ. ಹಾಗಾಗಿ ಯಾರಿಗೆ ಎಷ್ಟು ಸಾಧ್ಯವೋ ಕೆಲವೋದಿಷ್ಟು ತರಕಾರಿಗಳನ್ನು ಹಿಂದಿನ ದಿನ ತೆಗೆದುಕೊಂಡು ಹೋಗೀ ಕೊಡುವುದು ತುಂಬಾ ಒಳ್ಳೆಯದು.

ಏಕೆಂದರೆ ಆ ದಿನ ದೇವಿಗೆ ತರಕಾರಿ ಅಲಂಕಾರವನ್ನು ಮಾಡಲಾಗುತ್ತದೆ. ಹಾಗಾಗಿ ತರಕಾರಿ ಕೊಡುವುದರಿಂದ ಕೆಲವು ದೋಷಗಳು ನಿವಾರಣೆ ಆಗುತ್ತದೆ. ಶುಕ್ರ ಚಂದ್ರ ದೋಷ ಇದ್ದರೆ ಅದು ಕೂಡ ನಿವಾರಣೆ ಆಗುತ್ತದೆ. ಸೌತೆಕಾಯಿ ಕುಂಬಳಕಾಯಿ ಬದನೇಕಾಯಿ ಮೂಲಂಗಿ ಈ ರೀತಿ ತರಕಾರಿಗಳನ್ನು ತೆಗೆದುಕೊಂಡು ಹೋಗೀ ಕೊಡುವುದರಿಂದ ಕೆಲವು ದೋಷಗಳು ನಿವಾರಣೆ ಆಗುತ್ತದೆ.

ಕುಂಬಳಕಾಯಿ ಮತ್ತು ಬಾಳೆಕಾಯಿ ಕೊಟ್ಟರೆ ತುಂಬಾ ಒಳ್ಳೆಯದು. ನಿಮಗೆ ಎಷ್ಟು ಸಾಧ್ಯವೋ ಅಷ್ಟನ್ನು ತೆಗೆದುಕೊಂಡು ದೇವರಿಗೆ ಹೋಗೀ ಕೊಡಬಹುದು. ಈ ದಿನ ಬನಶಂಕರಿ ಅಮ್ಮನವರ ರಥೋತ್ಸವ ಕೂಡ ನಡೆಯುತ್ತದೆ. ಹಾಗಾಗಿ ಸಾಧ್ಯವಾದಷ್ಟು ಈ ಬನದ ಹುಣ್ಣಿಮೆ ದಿನ ನಿಮಗೆ ಆದಷ್ಟು ತರಕಾರಿಗಳನ್ನು ತೆಗೆದುಕೊಂಡು ಹೋಗೀ ಕೋಡಿ. ಇದರ ಜೊತೆಗೆ ಅರಿಶಿನ ಕುಂಕುಮ ಅಥವಾ ಅರಿಶಿನ ಕೊಂಬನ್ನು ಸಹ ದೇವಸ್ಥಾನಕ್ಕೆ ಹೋಗೀ ಕೊಡಬಹುದು.

Related Post

Leave a Comment