ಅಮಾವಾಸ್ಯೆ ದಿನ ಲಕ್ಷ್ಮಿ ಕುಬೇರ ಯಂತ್ರ ಪೂಜೆ ಸಾಲದ ಸಮಸ್ಸೆಗೆ ನಿವಾರಣೆಗಾಗಿ ಸಂಪೂರ್ಣ ಮಾಹಿತಿ ಸರಳ ವಿಧಾನ!

Written by Anand raj

Published on:

ಸಾಲದ ಸಮಸ್ಸೆಯಿಂದ ಆದಷ್ಟು ಬೇಗ ಮುಕ್ತಿಯನ್ನು ಪಡೆಯಬೇಕು. ಮನೆಯಲ್ಲಿ ಧಾನತ್ಮಕ ಶಕ್ತಿ ಹೆಚ್ಚಾಗಿರಬೇಕು ಅಂದರೆ ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಮತ್ತು ಕುಬೇರ ಯಂತ್ರ ಪೂಜೆ ಮಾಡುವುದರಿಂದ ಲಕ್ಷ್ಮೀಗೆ ಬೇಕಾಗಿರುವ ವಸ್ತುಗಳನ್ನು ಆ ದಿನ ಇಟ್ಟು ಪೂಜೆ ಆದ ತಕ್ಷಣ ಬಿರುವುನಲ್ಲಿ ಇಟ್ಟುಕೊಳ್ಳುವುದರಿಂದ ಆದಷ್ಟು ಬೇಗ ಇಂತಹ ಸಮಸ್ಸೆಗಳು ನಿವಾರಣೆ ಆಗುತ್ತದೆ.

2024 ಫೆಬ್ರವರಿ 9 ಶುಕ್ರವಾರ ಮೌನಿ ಅಮಾವಾಸ್ಯೆ ಮತ್ತು ಮಾಘ ಅಮಾವಾಸ್ಯೆ. ಈ ಸಮಯದಲ್ಲಿ ಸ್ನಾನಕ್ಕೆ ಅತ್ಯಂತ ಪ್ರಾಮುಖ್ಯತೆ ಕೊಡಲಾಗಿದೆ. ಹಾಗಾಗಿ ಸ್ನಾನ ಮಾಡುವ ನೀರಿಗೆ ಗಂಗಾ ಜಲ ಅಥವಾ ದೇವಸ್ಥಾನ ತೀರ್ಥ ಇದ್ದರೆ ಅದನ್ನು ಹಾಕಿಕೊಂಡು ಸ್ನಾನ ಮಾಡಿದರೆ ತುಂಬಾ ಒಳ್ಳೆಯದು. ಹಿಂದಿನ ದಿನ ಪೂಜೆ ಸಾಮಾನು ಮತ್ತು ದೇವರ ಮನೆಯನ್ನು ಕ್ಲೀನ್ ಮಾಡಿ ಇಟ್ಟುಕೊಳ್ಳಿ ಪೂಜೆಗೆ ಹೂವನ್ನು ತಂದು ಇಟ್ಟುಕೊಳ್ಳಿ. ಮಾವಿನ ತೋರಣ ಬಾಗಿಲಿಗೆ ಕಟ್ಟಿದರೆ ತುಂಬಾ ಒಳ್ಳೆಯದು.

ಲಕ್ಷ್ಮಿಗೆ ಪ್ರಿಯ ಆಗಿರುವ ವಸ್ತುಗಳನ್ನು ಒಂದು ಬೌಲ್ ನಲ್ಲಿ ಹಾಕಿ ಇಡಬೇಕು. 6 ಬಿಳಿ ಬಣ್ಣದ ಕವಡೆ,6 ಗೋಮಾತಿ ಚಕ್ರ,6 ಬೋಟ್ಟಲು ಆಡಿಕೆ,6 ತಾವರೆ ಬೀಜ,6 ಬಾದಾಮಿ,6 ಏಲಕ್ಕಿ ಕಾಯಿ ಮತ್ತು 6 ಲವಂಗ ಜೊತೆಗೆ ತಾಮ್ರ ಅಥವಾ ಬೆಳ್ಳಿಯ ನಾಣ್ಯ ಇಟ್ಟುಕೊಳ್ಳಿ.

ನಂತರ 9 ಒಂದೇ ರೀತಿ ಕಾಯಿನ್ ಅನ್ನು ಕುಬೇರ ಯಂತ್ರ ಪೂಜೆಗೆ ಇಟ್ಟುಕೊಳ್ಳಿ. ನೀವು ಕುಬೇರ ಯಂತ್ರವನ್ನು ತೆಗೆದುಕೊಂಡು ಬರಬಹುದು ಅಥವಾ ತಾಮ್ರದ ಕುಬೇರ ಯಂತ್ರವನ್ನು ನಂಬರ್ ಬರೆದು ಇಟ್ಟಿರುತ್ತಾರೆ. ನಂತರ ಶುಕ್ರವಾರ ಸಂಜೆ 5:30 ಕ್ಕೆ ಪೂಜೆಯನ್ನು ಮಾಡಿ. 7 ಗಂಟೆ ಒಳಗೆ ಪೂಜೆಯನ್ನು ಮುಗಿಸಬೇಕು.

ಕಳಸದ ಕೆಳಗೆ ಕುಬೇರ ರಂಗೋಲಿಯನ್ನು ಹಾಕು ಕಳಸವನ್ನು ಇಡಬೇಕು. ಕುಬೇರ ಯಂತ್ರಕ್ಕೆ ನಾಲ್ಕು ಮೂಲೆಗೂ ಅರಿಶಿನ ಕುಂಕುಮವನ್ನು ಹಚ್ಚಿ ಲಕ್ಷ್ಮಿ ವಿಗ್ರಹವನ್ನು ಇಡಬೇಕು. ಬಲಗಡೆ ಲಕ್ಷ್ಮಿ ಗೆ ಪ್ರಿಯವಾದ ವಸ್ತು ಇಡಬೇಕು ಮತ್ತು ಎಡ ಭಾಗಕ್ಕೆ ಕುಬೇರ ಯಂತ್ರವನ್ನು ಇಡಬೇಕು. ಕುಬೇರ ಯಂತ್ರ ಮೇಲೆ 9 ಕಾಯಿನ್ ಅನ್ನು ಇಟ್ಟು ಅರಿಶಿನ ಕುಂಕುಮವನ್ನು ಇಡಬೇಕು. ನಂತರ ಕೆಂಪು ಅಥವಾ ಹಳದಿ ಹೂವುಗಳನ್ನು ನೀಡಬೇಕು. ಲಕ್ಷ್ಮಿ ಮುಂದೆ ತುಪ್ಪದ ದೀಪವನ್ನೇ ಹಚ್ಚಬೇಕು.

ನೈವೇದ್ಯಕ್ಕೆ ಬೆಲ್ಲ ಹಾಲು ಸಿಹಿ ಪೊಂಗಲ್ ಅಥವಾ ಮೊಸರನ್ನ ಇಡಬಹುದು. ಪೂರ್ವ ಅಥವಾ ಉತ್ತರಭೀಮುಕವಾಗಿ ನಿಂತುಕೊಂಡು ಸಂಕಲ್ಪ ಮಾಡಬೇಕು. ಕಳಸ ಪೂಜೆ ಗಣಪತಿ ಪೂಜೆಯನ್ನು ಮಾಡಬೇಕು. ನಂತರ ಲಕ್ಷ್ಮಿ ಅಷ್ಟೋತ್ತರ ಹಾಗು ನಾರಾಯಣ ಸೂತ್ರವನ್ನು ಹೇಳಬೇಕು. ನಂತರ 108 ಬಾರಿ ಕುಬೇರ ಯಂತ್ರವನ್ನು ಹೇಳಿಕೊಳ್ಳಬೇಕು. ಮರೆಯದೆ ಕನಕದಾಸರ ಸೂತ್ರವನ್ನು ಹೇಳುವುದನ್ನು ಮರೆಯಬೇಡಿ. ತುಪ್ಪದ ದೀಪ ಹಚ್ಚಿ ದ ನಂತರ ಅದೇ ತಟ್ಟೆಯಲ್ಲಿ ಕೆಂಪು ನೀರು ಮಾಡಿ ಆರತಿ ಮಾಡಿದರೆ ಕುಬೇರ ಪೂಜೆ ಸಂಪೂರ್ಣ ಆಗುತ್ತದೆ.

Related Post

Leave a Comment