ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ರಾಶಿಗೆ ಯಾವುದು ಅದೃಷ್ಟ ಸಂಖ್ಯೆ ಮತ್ತು ನಾಲ್ಕು ಬಂದರೆ ದುರದೃಷ್ಟ!

Written by Anand raj

Published on:

ಪ್ರತಿಯೊಂದು ರಾಶಿಯವರೂ ತಮ್ಮದೇ ಆದ ಅದೃಷ್ಟದ ಸಂಖ್ಯೆಯನ್ನು ಹೊಂದಿರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದು ಸಂಖ್ಯೆಯೂ ತಮ್ಮದೇ ಆದ ವೈಬ್ರೇಷನ್‌ ಹೊಂದಿರುತ್ತವೆ. ಅದಕ್ಕೆ ಅನುಗುಣವಾಗಿಯೇ ವ್ಯಕ್ತಿಯೊಬ್ಬನ ಆಸೆ, ಆಕಾಂಕ್ಷೆ, ನಡೆ, ನುಡಿ, ಸ್ವಭಾವ, ಔದ್ಯೋಗಿಕ ಉನ್ನತಿ, ಕೌಟುಂಬಿಕ ಸೌಖ್ಯ ನಿರ್ಧರಿತವಾಗುತ್ತವೆ.

ಮೇಷ : ಮೇಷ ರಾಶಿಯ ಅಧಿಪತಿ ಕುಜ. ಇವರು ಸಾಹಸಮಯಿಗಳು, ಅಷ್ಟೇ ಚೈತನ್ಯಶೀಲರು. ಇವರ ಅದೃಷ್ಟದ ಸಂಖ್ಯೆ 6, 18, 41, 77 ಮತ್ತು 83. ಈ ಸಂಖ್ಯೆಗಳು ಇವರಿಗೆ ಶುಭವನ್ನು ತರುತ್ತವೆ.

ವೃಷಭ : ಪ್ರೇಮಮಯಿಗಳು, ಪ್ರಣಯಿಗಳು, ಖಚಿತ ನಿರ್ಣಯಗಳನ್ನು ಸುಲಭವಾಗಿ ತೆಗೆದುಕೊಳ್ಳ ಬಲ್ಲವರು. 5, 35, 50, 57 ಮತ್ತು 82 ಅದೃಷ್ಟದ ಸಂಖ್ಯೆಗಳು.

ಮಿಥುನ : ಉತ್ಸಾಹಿಗಳು. ಬುಧ ಇವರ ಅಧಿಪತಿ. ಅಧ್ಯಾತ್ಮ ವಿಕಸನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಅದೃಷ್ಟದ ಸಂಖ್ಯೆ 1, 10, 18, 35 ಮತ್ತು 86.

ಕಟಕ : ಸೂಕ್ಷ್ಮ ಮನಸ್ಥಿತಿಯುಳ್ಳವರು. ಬದುಕಿನ ಸೂಕ್ಷ್ಮತೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅದ್ಭುತ ಕಲ್ಪನಾಶಕ್ತಿವುಳ್ಳವರು. ಸೂರ್ಯ ಇವರ ಅಧಿಪತಿ. ಅದೃಷ್ಟ ಸಂಖ್ಯೆ 1, 21, 24, 58 ಮತ್ತು 66.

ಸಿಂಹ : ನಿಷ್ಠಾವಂತರು, ಪ್ರಾಮಾಣಿಕರು ಹಾಗೂ ಚೈತನ್ಯಶೀಲ ಉದ್ದಿಮೆದಾರರು. ಸೂರ್ಯ ಇವರ ಅಧಿಪತಿ. ಅದೃಷ್ಟದ ಸಂಖ್ಯೆ 6, 24, 39, 59 ಮತ್ತು 83.

ಕನ್ಯಾ : ಭೂತತ್ತ್ವ ರಾಶಿಯವರು. ಬುಧನ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಸ್ನೇಹಮಯಿಗಳು, ಎಲ್ಲರೊಡನೆ ಬೆರೆಯುವ ಸ್ವಭಾವದವರಾಗಿರುತ್ತಾರೆ. ಆದರೆ ಅಷ್ಟೇ ಭಾವನಾತ್ಮಕ ಜೀವಿಗಳು. ಅದೃಷ್ಟದ ಸಂಖ್ಯೆ : 16, 29, 79, 80 ಮತ್ತು 90.

ತುಲಾ : ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ಗುಣವುಳ್ಳವರು. ಸಹಜವಾಗಿಯೇ ಎಲ್ಲರೊಡನೆ ಬೆರೆಯುತ್ತಾರೆ. ಆಕರ್ಷಕ ಗುಣವನ್ನು ಹೊಂದಿರುತ್ತಾರೆ. ಅದೃಷ್ಟದ ಸಂಖ್ಯೆ 7, 20, 55, 77 ಮತ್ತು 86.

ವೃಶ್ಚಿಕ : ಮಂಗಳ ಮತ್ತು ಪ್ಲೂಟೋ ಪ್ರಭಾವಕ್ಕೆ ಹೆಚ್ಚು ಒಳಗಾಗಿರುತ್ತಾರೆ. ವೃಶ್ಚಿಕ ರಾಶಿಯವರ ನಡೆ ತುಂಬಾ ರಹಸ್ಯವಾದದ್ದು. ಇವರ ನಡೆಯನ್ನು ಪತ್ತೆ ಹಚ್ಚುವುದು ಕಷ್ಟ. ಸದಾ ಸರ್ವದಾ ಸ್ವತಂತ್ರವಾಗಿ ಬದುಕಬೇಕೆಂದು ಬಯಸುತ್ತಾರೆ. ಅದೃಷ್ಟದ ಸಂಖ್ಯೆಗಳು 27, 29, 45, 53 ಮತ್ತು 89.

ಧನು : ಸಾಹಸವಂತರು, ದೃಢ ನಿರ್ಧಾರವನ್ನು ಹೊಂದಿರುತ್ತಾರೆ. ಅದೃಷ್ಟದ ಸಂಖ್ಯೆ 6, 16, 23, 60 ಮತ್ತು 81.

ಮಕರ : ಶನಿ ಇವರ ಅಧಿಪತಿ. ಇಟ್ಟ ಗುರಿಯನ್ನು ಪಟ್ಟು ಬಿಡದೇ ಸಾಧಿಸುವ ಛಲವಂತರು. ಕರುಣಾಶಾಲಿಗಳು, ಕೆಲವೊಮ್ಮೆ ಕಠೋರವಾದಿಗಳಂತೆ ಕಾಣುತ್ತಾರೆ. ಅದೃಷ್ಟದ ಸಂಖ್ಯೆ : 3, 21, 66, 83, 84.

ಕುಂಭ : ಸಹನಶೀಲರು, ಹೆಚ್ಚು ತಾಳ್ಮೆಯ ಗುಣವನ್ನು ಹೊಂದಿರುತ್ತಾರೆ. ಸ್ನೇಹಮಯಿಗಳು. ಅದೃಷ್ಟದ ಸಂಖ್ಯೆ : 17, 40, 46, 61 ಮತ್ತು 76.

ಮೀನ : ನೆಪ್ಚೂನ್‌ ಗ್ರಹದ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಸೂಕ್ಷ್ಮ ನಿಗಾವುಳ್ಳವರು, ಮೃದು ಭಾಷಿಗಳು. ಅದೃಷ್ಟದ ಸಂಖ್ಯೆ : 8, 10, 27, 56 ಮತ್ತು 69.

Related Post

Leave a Comment