ಚಿಟಿಕೆ ಕಾಳುಮೆಣಸು ಪುಡಿ ಈ ತರ ಮಾಡಿ ಬಳಸಿದ್ರೆ ಈ ಸಮಸ್ಸೆಗಳಿಗೆ ಅದ್ಬುತ ಮನೆಮದ್ದು!

Written by Anand raj

Published on:

ಕಾಳು ಮೆಣಸು ಅಥವಾ ಕರಿಮೆಣಸು ಇದೊಂದು ಮಸಾಲೆ ಪದಾರ್ಥವಾಗಿದ್ದು, ಆಯುರ್ವೇದ ದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಕಾಳು ಮೆಣಸು ದೇಹಕ್ಕೆ ಉಷ್ಣವನ್ನುಂಟು ಮಾಡುವಂತಹದ್ದು. ಇನ್ನು ಈ ಮನೆಮದ್ದು ಮಾಡುವುದಕ್ಕೆ ಒಂದು ಲೋಟ ನೀರನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿಕೊಳ್ಳಿ. ಇದಕ್ಕೆ ನಾಲ್ಕು ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ನಂತರ ಇದನ್ನು ಶೋದಿಸಿ ಕುಡಿಯಬಹುದು. ಇದನ್ನು ಬಳಸುವುದರಿಂದ ದೇಹದಲ್ಲಿ ಬೇರೆ ಬೇರೆ ರೀತಿಯ ಅರೋಗ್ಯ ಸಮಸ್ಸೆಗಳನ್ನು ದೂರ ಇಡುವುದಕ್ಕೆ ಸಹಾಯ ಆಗುತ್ತದೇ.

ಶೀತ ಕೆಮ್ಮು ಗಂಟಲು ಕಿರಿಕಿರಿ ಸಮಸ್ಸೆ ಇರುವವರಿಗೆ ತುಂಬಾ ಒಳ್ಳೆಯದು. ಇನ್ನು ಈ ಒಂದು ಲೋಟ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಇರುವ ಟ್ಯಾಕ್ಸಿನ್ಸ್ ಅನ್ನು ಹೊರಗೆ ಹಾಕುವುದಕ್ಕೆ ತುಂಬಾ ಸಹಯ ಆಗುತ್ತದೆ. ದೇಹದಲ್ಲಿ ಇರುವ ಕಲ್ಮಶಗಳು ಹಾಗು ವಿಷಕಾರಿ ಅಂಶಗಳು ಹೊರಗೆ ಹೋಗುವುದರಿಂದ ದೇಹ ಅರೋಗ್ಯವಾಗಿ ಇರುವುದಕ್ಕೆ ಕೂಡ ತುಂಬಾನೇ ಸಹಾಯ ಆಗುತ್ತದೆ.

ಇನ್ನು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಈ ಕಾಳು ಮೇಣಸಿನ ನೀರನ್ನು ಕುಡಿಯಬಹುದು. ಅಷ್ಟೇ ಅಲ್ಲದೆ ದೇಹದಲ್ಲಿ ಇರುವ ಅನಗತ್ಯ ಕೊಬ್ಬನ್ನು ಕರಗಿಸುವುದರಿಂದ ದೇಹದಲ್ಲಿ ಇರುವ ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಇನ್ನು ದೇಹದಲ್ಲಿ ನಿರ್ಜಲಿಕರಣ ಆಗಬಾರದು ಎಂದರೆ ಈ ಕಾಳು ಮೆಣಸಿನ ನೀರನ್ನು ಕುಡಿಯಬಹುದು. ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೇ. ಇದನ್ನು ವಾರದಲ್ಲಿ ಒಂದು ಅಥವಾ ಎರಡು ಬಾರಿ ಕುಡಿದರೆ ಸಾಕಾಗುತ್ತದೆ.

Related Post

Leave a Comment