24 ಮಾರ್ಚ್ ಕೋಟ್ಯಧಿಶರಾಗಲು ಇಷ್ಟ ಇದ್ದರೆ ಹೋಳಿ ಅಗ್ನಿಯಲ್ಲಿ ಗುಪ್ತವಾಗಿ 1 ವಸ್ತು ಹಾಕಿರಿ!

Written by Anand raj

Published on:

ಪಾಲ್ಗುಣ ಮಾಸ ಬಂದರೆ ಹೋಳಿ ಹುಣ್ಣಿಮೆ ಹಬ್ಬದ ತಯಾರಿಗಳು ಶುರು ಆಗುತ್ತವೆ. ಹಿಂದೂ ಧರ್ಮದ ಪ್ರಕಾರ ಪಾಲ್ಗುಣ ಮಾಸದಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಏಕೆಂದರೆ ಇಲ್ಲಿ ಭದ್ರ ಕಾಲ ನಡೆಯುತ್ತಾ ಇರುತ್ತದೆ. ಇದರ ಅರ್ಥ ಬದ್ರಾ ದೇವಿ ಆಗಿರುತ್ತದೆ. ಇವರು ಶನಿ ಮಹಾರಾಜರ ತಂಗಿ ಆಗಿರುತ್ತಾರೆ ಮತ್ತು ಸೂರ್ಯ ದೇವರ ಮಗಳು ಕೂಡ ಹೌದು. ಇವರ ಸ್ವಭಾವ ಕೂಡ ಶನಿದೇವರ ರೀತಿ ಸ್ವಲ್ಪ ಕಠೋರವಾಗಿದೆ. ಇವರ ಕಾಲಚಕ್ರದಲ್ಲಿ ನೀವು ಏನಾದರೂ ಶುಭ ಕಾರ್ಯ ಮಾಡಿದರೆ ನಿಮಗೆ ಒಳ್ಳೆಯ ಫಲ ಸಿಗುವುದಿಲ್ಲ. ಆದರೆ ಹೋಳಿಯ ಕಾಮಣ್ಣನ ದಹನದ ನಂತರ ಎಲ್ಲಾ ರೀತಿಯ ಶುಭ ಮುಹೂರ್ತಗಳು ಪ್ರಾರಂಭ ಆಗುತ್ತದೆ.

ಈ ವರ್ಷದ ಪಂಚಾಂಗದ ಅನುಸಾರವಾಗಿ 24 ಮಾರ್ಚ್ ಭಾನುವಾರ ದಿನ ಕಾಮಣ್ಣನ ದಹನವನ್ನು ಮಾಡಲಾಗುತ್ತದೆ. ಕಾಮಣ್ಣನ ದಹನದ ಮುಹೂರ್ತ ಸಂಜೆ 7:19 ನಿಮಿಷದಿಂದ ರಾತ್ರಿ 9:10 ನಿಮಿಷದವರೆಗೆ ಇರುತ್ತದೆ.ಪಂಚಾಂಗದ ಅನುಸಾರವಾಗಿ ಮಾರನೇ ದಿನ ಮಾರ್ಚ್ 25 ಸೋಮವಾರ ಬಣ್ಣದ ಹಬ್ಬವನ್ನು ಆಚರಿಸಲಾಗುತ್ತದೆ. ಈ ಚಿಕ್ಕ ಉಪಾಯವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಸಮಸ್ಯೆಗಳನ್ನು ದೂರ ಮಾಡಬಹುದು. ಕಾಮಣ್ಣನನ್ನು ಸುಡುವ ಸಮಯದಲ್ಲಿ ಈ ಕೆಲವೊಂದು ಚಿಕ್ಕ ಉಪಾಯವನ್ನು ಮಾಡಬಹುದು.

ಹೊಳಿಯ ದಹನದ ಸಮಯದಲ್ಲಿ ಮನೆಯ ಸದಸ್ಯರು ಸೇರಿಕೊಂಡು ಹೋಳಿಯ ಪವಿತ್ರವಾದ ಅಗ್ನಿಯಲ್ಲಿ ಲವಂಗ, ಆಕಳ ತುಪ್ಪ ಕುಂಕುಮ ಬಟಾಷ ಇವುಗಳ ಜೊತೆಗೆ ಅಗ್ನಿಯ ಸುತ್ತಲೂ 11 ಬಾರಿ ಸುತ್ತು ಹಾಕಬೇಕು. ನಂತರ ಅದರಲ್ಲಿ ಒಣಗಿದ ತೆಂಗಿನಕಾಯಿಯನ್ನು ಹಾಕಬೇಕು.ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ದೂರವಾಗುತ್ತದೆ. ಕುಟುಂಬದ ಸದಸ್ಯರು ಎಲ್ಲಾ ಸೇರಿ ಹೋಳಿ ದೇವಿಯ ಆರಾಧನೆಯನ್ನು ಮಾಡಬೇಕು.ಇದರಿಂದ ಉತ್ತಮ ಫಲ ಸಿಗುತ್ತದೆ.

ಹೋಳಿ ಹುಣ್ಣಿಮೆ ಕಾಮಣ್ಣನ ದಿನ ಮುಂಜಾನೆ ನಿಮ್ಮ ಜೇಬಿನಲ್ಲಿ ಕಪ್ಪು ಬಟ್ಟೆಯಲ್ಲಿ ಕಪ್ಪು ಎಳ್ಳುಗಳನ್ನು ಹಾಕಿ ಕಟ್ಟಿಕೊಂಡು ಇಟ್ಟುಕೊಳ್ಳಬೇಕು.ಹೋಳಿ ದಹನ ಮಾಡುವ ಸಮಯದಲ್ಲಿ ಆ ಸಮಯದಲ್ಲಿ ಚಿಕ್ಕ ಚೀಲವನ್ನು ಬೆಂಕಿಯಲ್ಲಿ ಹಾಕಬೇಕು.ಆಗ ನಿಮ್ಮ ಮೇಲೆ ಇರುವ ಕೆಟ್ಟ ದೃಷ್ಟಿಗಳು ಮತ್ತು ಕೆಟ್ಟ ದೋಷಗಳು ನಾಶವಾಗುತ್ತವೆ. ಭಗವಂತನಾದ ನರಸಿಂಹಸ್ವಾಮಿಯ ಕೃಪೆಯಿಂದ ನಿಮ್ಮ ಮೇಲೆ ಅಂಟಿಕೊಂಡಿರುವ ಕೆಟ್ಟ ದೃಷ್ಟಿಗಳು ನಾಶವಾಗುತ್ತವೆ. ಹಾಗಾಗಿ ನಿಮ್ಮ ಮೇಲೆ ಯಾರು ಕೆಟ್ಟದ್ದನ್ನು ಮಾಡಲು ಸಾಧ್ಯ ಆಗುವುದಿಲ್ಲ.

ಒಂದು ವೇಳೆ ನಿಮ್ಮ ಜೀವನದಲ್ಲಿ ಶತ್ರು ಕಾಟ ಹೆಚ್ಚಾಗಿದ್ದಾರೆ ಹೋಳಿ ದಹನದ ಪೂಜೆಯ ಸಮಯದ ಮೊದಲು ನೀವು ಗೋಮತಿ ಚಕ್ರಗಳನ್ನು ಮನೆಗೆ ತೆಗೆದುಕೊಂಡು ಬಂದು ಇಟ್ಟುಕೊಳ್ಳಿ.ಮೊದಲು 7 ಬಾರಿ ಅಗ್ನಿ ಸುತ್ತ ಸುತ್ತಬೇಕು.ಪೂಜೆಯ ನಂತರ ಆ ಬೆಂಕಿಯಲ್ಲಿ ಈ ಗೋಮತಿ ಚಕ್ರಗಳನ್ನು ಹಾಕಬೇಕು.ಈ ರೀತಿ ಮಾಡಿದರೆ ನಿಮ್ಮ ಅಂಟಿಕೊಂಡಿರುವ ಕೆಟ್ಟ ದೃಷ್ಟಿಗಳು ಅರೋಗ್ಯ ದೃಷ್ಟಿಗಳು ದೂರ ಆಗುತ್ತದೆ.

ಇನ್ನು ಬಿಸಿನೆಸ್ ನಲ್ಲಿ ಸಮಸ್ಸೆಗಳು ಹೆಚ್ಚಾಗಿದ್ದಾರೆ ಹೋಳಿ ದಹನದ ಪೂಜೆಯ ನಂತರ ಅಲ್ಲಿರುವ ಬೂದಿಯನ್ನು ಸ್ವಲ್ಪ ಮನೆಗೆ ತೆಗೆದುಕೊಂಡು ಬರಬೇಕು.ಒಂದು ವೇಳೆ ನೀವು ಏನಾದರು ಬಿಸಿನೆಸ್ ಅಥವಾ ವ್ಯಾಪಾರದ ಸ್ಥಳದಲ್ಲಿ ಇಡುವುದಾದರೆ ಚಿಕ್ಕ ಬಟ್ಟೆಯಲ್ಲಿ ಉಪ್ಪು ಹಾಕಿ ಅದರಲ್ಲಿ ಈ ಬೂದಿಯನ್ನು ಹಾಕಿ ಕಟ್ಟಿ ಇಡಬಹುದು.ಮನೆಯಲ್ಲಿ ಇರುವ ತುಳಸಿ ಕಟ್ಟೆ ಹತ್ತಿರ ಮಣ್ಣಿನಲ್ಲಿ ಬೂದಿ ಹಾಕಿ ಮುಚ್ಚಬೇಕು.ಈ ರೀತಿ ಮಾಡಿದರೆ ಮನೆಯ ಮೇಲೆ ಇರುವ ಕೆಟ್ಟ ದೋಷಗಳು ಬಿಸಿನೆಸ್ ನಲ್ಲಿ ಇರುವ ದೋಷಗಳು ದೂರ ಆಗುತ್ತವೆ.

Related Post

Leave a Comment