ಸೂರ್ಯ ಗ್ರಹಣದ ಹಿನ್ನಲೆಯಲ್ಲಿ ಉಪವಾಸ ಮಾಡುವುದು ಕಡ್ಡಾಯವಾಗಿದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ, ಸೂರ್ಯನ ಬೆಳಕು ಭಾಗಶಃವಾಗಿ ನಿರ್ಬಂಧಿತವಾಗುತ್ತದೆ. ಇದನ್ನೇ ಸೂರ್ಯಗ್ರಹಣವೆಂದು ಕರೆಯಲಾಗುತ್ತದೆ. ಇವು ಖಾಗೋಳವಾಗಿ ನಡಿಯುವುದಾದರು ಗರ್ಭಿಣಿಯರ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಯಾಕೆಂದ್ರೆ ಈ ಸಮಯದಲ್ಲಿ ಇವರು ಸೂಕ್ಷ್ಮವಾಗಿ ಇರುವುದಾಗಿ ಅಥವಾ ಜ್ಯೋತಿಷ್ಯದ ಪ್ರಕಾರ ನಾನಾ ರೀತಿಯ ಕಾರಣಗಳು ಇರುತ್ತವೆ. ಹಾಗಾದರೆ ಜ್ಯೋತಿಷ್ಯದ ಪ್ರಕಾರ ಗರ್ಭಿಣಿಯರು ಯಾವ ಕೆಲಸವನ್ನು ಮಾಡಬೇಕು ಮತ್ತು ಯಾವ ಕೆಲಸ ಮಾಡಬಾರದು ಮತ್ತು ರಾಶಿಯ ಅನುಸಾರವಾಗಿ ಯಾರಿಗೆ ಇಂದು ಒಳಿತು ಎಂಬುದು ತಿಳಿಯೋಣ.
ಸಾಮಾನ್ಯವಾಗಿ ಗರ್ಭಿಣಿಯರಿಗೆ ಗ್ರಹಣದ ಸಮಯದಲ್ಲಿ ಮನೆಯಲ್ಲಿಯೇ ಇರಲು ಹೇಳುತ್ತಾರೆ. ಯಾಕೆಂದ್ರೆ ಈ ಗ್ರಹಣದಲ್ಲಿ ನಕರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದತಹ ಪ್ರಕಾರ ಗರ್ಭಿಣಿಯರು ಆಹಾರಗಳನ್ನು ಸೇವಿಸಿದರೆ ಅದು ನಕರಾತ್ಮಕ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ.
ಸೂರ್ಯಗ್ರಹಣ ಅಕ್ಟೋಬರ್ 14 ರಾತ್ರಿ 11:29 ಕ್ಕೆ ಪ್ರಾರಂಭವಾಗಿ 11:37ಕ್ಕೆ ಕೊನೆಗೊಳ್ಳುತ್ತದೆ. ಭಾರತವಲ್ಲದೆ, ಯುರೋಪ್, ಆಫ್ರಿಕಾ ಖಂಡದ ಈಶಾನ್ಯ ಭಾಗ, ಏಷ್ಯಾದ ನೈಋತ್ಯ ಭಾಗ ಮತ್ತು ಅಟ್ಲಾಂಟಿಕ್‌ನಲ್ಲಿಯೂ ಇದನ್ನು ಕಾಣುತ್ತದೆ.
ಸೂತಕದ ಅವಧಿಯು ಸೂರ್ಯಗ್ರಹಣಕ್ಕೆ ಕೆಲವು ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಗ್ರಹಣ ಮುಗಿದ ನಂತರ ಸೂತಕ ಕೊನೆಗೊಳ್ಳುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂತಕದ ಅವಧಿಯಲ್ಲಿ ಯಾವುದೇ ಮಂಗಳಕರ ಅಥವಾ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ವಿಶೇಷವಾಗಿ ಗರ್ಭಿಣಿಯರು ಈ ಸಮಯದಲ್ಲಿ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಇದು ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ.
ಗರ್ಭಿಣಿಯರಿಗೆ ಈ ಸಮಯದಲ್ಲಿ ತುಂಬಾ ಸುಸ್ತಾಗುವ ಸಾಧ್ಯತೆ ಇರುತ್ತದೆ. ಯಾಕೆಂದರೆ ಈ ಗ್ರಹಣವು ತುಂಬಾ ನಕರಾತ್ಮಕತೆಯನ್ನು ಬೀರುತ್ತದೆ. ಹಾಗಾಗಿ ಈ ಸಮಯದಲ್ಲಿ ನೀವು ಒಂದಷ್ಟು ನಿಯಮಗಳನ್ನು ಫಾಲೋ ಮಾಡಲೇಬೇಕು.
ಸ್ನಾನ ಮಾಡುವುದು
ಗರ್ಭಿಣಿಯರು ಗ್ರಹಣ ಹಿಡಿಯುವ ಸಮಯದಲ್ಲಿ ಸ್ನಾನ ಮಾಡಬೇಕು ಮತ್ತು ಗ್ರಹಣ ಮುಗಿದ ನಂತರ ಕೂಡ ಸ್ನಾನ ಮಾಡಬೇಕು. ಏಕೆಂದರೆ ಈ ಸಮಯದಲ್ಲಿ ದುಷ್ಟ ಶಕ್ತಿಯು ಅಂಟಿಕೊಳ್ಳಬಹುದು ಹಾಗಾಗಿ ಇದರ ನಕರಾತ್ಮಕ ಶಕ್ತಿಯು ಅಂಟದೇ ಇರಲಿ ಎಂಬ ಕಾರಣಕ್ಕಾಗಿ ಜಳಕವು ಕಡ್ಡಾಯ.
ಆಹಾರ ಸೇವಿಸುವುದು ತಪ್ಪಿಸಿ
ಗರ್ಭಿಣಿಯರು ಸೂರ್ಯಗ್ರಹಣದ ಸಮಯದಲ್ಲಿ ಆಹಾರ ಸೇವಿಸುವುದನ್ನು ತಪ್ಪಿಸಬೇಕು. ಸೂರ್ಯಗ್ರಹಣಕ್ಕೂ ಮುನ್ನ ಮತ್ತು ಸೂರ್ಯಗ್ರಹಣದ ನಂತರ ಆಹಾರವನ್ನು ತೆಗೆದುಕೊಳ್ಳಬಹುದು.
ಮಂತ್ರಗಳನ್ನು ಪಠಿಸಿ
ನಿಮ್ಮಿಷ್ಟ ದೇವರನ್ನು ಜಪಿಸಿ ಅಥವಾ ಇನ್ನಬ್ಬರ ಮೂಲಕ ದೇವರ ಕಥೆಯನ್ನಾದರೂ ಕೇಳಿ. ಈ ಸಮಯದಲ್ಲಿ ನಿಮಗೆ ಸುಸ್ತಾಗುವುದು, ವಾಂತಿ ಬರುವುದು ಹೇಗೆ ಅಸ್ವಸ್ಥಗಳಾಗುತ್ತದ್ದರೆ ಮಂತ್ರಗಳನ್ನು ಜಪಿಸಲು ಅಸಾಧ್ಯ. ಅಂತಹ ಗರ್ಭಿಣಿಯರು ದೇವರ ಮಂತ್ರಗಳನ್ನು ರೆಡಿಯೋ, ಮೊಬೈಲ್ ಮೂಲಕ ಕೇಳಿಸಬಹುದು ಅಥವಾ ಇನ್ನೊಬ್ಬರು ಮಂತ್ರಗಳನ್ನು ಹೇಳುವುದನ್ನೂ ಕೂಡ ಕೇಳಿಸಿಕೊಳ್ಳಬಹುದು. ಒಟ್ಟನಲ್ಲಿ ನಕರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಮಂತ್ರಗಳನ್ನು ಜಪಿಸಲೇಬೇಕು.
ಕಿರಣಗಳು ತಾಗದಂತೆ ರಕ್ಷಣೆ ಮಾಡಿ
ಕಿಟಕಿ ಮತ್ತು ಬಾಗಿಲುಗಳನ್ನು ತೆರೆದಿಡಬೇಡಿ. ಎಲ್ವವೂ ಮುಚ್ಚಿಡಿ. ಏಕೆಂದರೆ ಸೂರ್ಯನ ಕಿರಣಗಳು ಯಾವುದೇ ಕಾರಣಕ್ಕೂ ಗರ್ಭಿಣಿಯರಿಗೆ ತಾಗಬಾರದು. ಹೀಗಾಗಿ ಕೇವಲ ಮುಕ್ಕಾಲು ಗಂಟೆಗಳ ಕಾಲ ಇರುವ ಈ ಗ್ರಹಣದ ಸಮಯದಲ್ಲಿ ಆದಷ್ಟು ಸೂರ್ಯದ ಕಿರಣಗಳು ತಾಗದಂತೆ ಇರಿ. ಜ್ಯೋತಿಷ್ಯ ಮತ್ತು ವೈಜ್ಞಾನಿಕವಾಗಿ ಸಾಭೀತಾಗಿದೆ.