ಹಿಂದೂ ಧರ್ಮದಲ್ಲಿ ಅನೇಕ ಸಂಪ್ರದಾಯಗಳಿಗೆ ಮತ್ತು ಪದ್ಧಿತಿಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಮಗುವೊಂದು ಜನಿಸಿದಾಗಿನಿಂದ ಹಿಡಿದು ಮರಣ ಹೊಂದುವವರೆಗೂ ಅನೇಕ ಸಂಪ್ರದಾಯಗಳಿವೆ. ಜನಿಸಿದಾಗ ನಾಮಕರಣ, ಮುಂಡನ ಸೇರಿದಂತೆ ಇನ್ನೂ ಅನೇಕ ಪದ್ಧತಿಗಳನ್ನು ರೂಢಿಯಲ್ಲಿಟ್ಟುಕೊಂಡಿದ್ದೇವೆ. ಆ ಮಗು ಬೆಳೆದು ದೊಡ್ಡವನಾಗುತ್ತಿದ್ದಂತೆ ವಿವಾಹ ಸೇರಿದಂತೆ ಇನ್ನಿತರ ಸಂಪ್ರದಾಯಗಳನ್ನು ಅಥವಾ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಓರ್ವ ವ್ಯಕ್ತಿಗೆ ಸಂಬಂಧಿಸಿದ ಆಚರಣೆಗಳನ್ನು ಮರಣ ಹೊಂದಿದೆ ಮೇಲೂ ಕೂಡ ಆತನ ಹೆಸರಿನಲ್ಲಿ ಆಚರಿಸಲಾಗುತ್ತದೆ.
ಧರ್ಮಗ್ರಂಥಗಳಲ್ಲಿನ ನಿಯಮ:ಹಿಂದೂ ಧರ್ಮವೆನ್ನುವುದು ಸಂಪ್ರದಾಯ, ಆಚರಣೆ ಹಾಗೂ ಪದ್ಧತಿಗಳ ತಳಹದಿ. ಹಿಂದೂ ಧರ್ಮದಲ್ಲಿನ ಪ್ರತಿಯೊಬ್ಬರು ಅವರ ಸಂಪ್ರದಾಯವನ್ನು ಅನುಸರಿಸುತ್ತಾರೆ. ಕೇವಲ ಪುರುಷರು ಮಾತ್ರವಲ್ಲ, ಮಹಿಳೆಯರಿಗೂ ಕೂಡ ಸಂಪ್ರದಾಯಗಳಿವೆ. ಕೆಲವೊಂದು ನಿಯಮಗಳಿವೆ. ಅದರಲ್ಲೂ ವಿವಾಹಿತ ಮಹಿಳೆಯರು ತಾವು ಪ್ರತಿನಿತ್ಯ ಯಾವುದೇ ಕೆಲಸಗಳನ್ನು ಮಾಡುವ ಮುನ್ನ ಅದು ಶುಭವೋ ಅಥವಾ ಅಶುಭವೋ ಎನ್ನುವುದರ ಕುರಿತು ಹೆಚ್ಚು ಗಮನ ಹರಿಸಬೇಕು. ಧರ್ಮಗ್ರಂಥಗಳ ಪ್ರಕಾರ, ಮಹಿಳೆಯರು ಕೆಲವೊಂದು ವಿಶೇಷ ದಿನಗಳಲ್ಲಿ ತಮ್ಮ ತಲೆಕೂದಲನ್ನು ತೊಳೆಯಬಾರದೆಂದು ಉಲ್ಲೇಖಿಸಲಾಗಿದೆ.
ವಾರದಲ್ಲಿನ ಕೆಲವು ದಿನಗಳಲ್ಲಿ ವಿವಾಹಿತ ಮಹಿಳೆಯರು ತಮ್ಮ ತಲೆಕೂದಲನ್ನು ತೊಳೆದುಕೊಳ್ಳಬಾರದು. ಒಂದು ವೇಳೆ ವಿವಾಹಿತ ಮಹಿಳೆಯರು ಈ ದಿನಗಳಲ್ಲಿ ತಮ್ಮ ತಲೆಕೂದಲನ್ನು ತೊಳೆಯುವುದರಿಂದ ಪತಿಯು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೇವಲ ಪತಿ ಮಾತ್ರ ಕೆಲಸ, ಕಾರ್ಯಗಳಲ್ಲಿ ಅಡೆತಡೆಗಳನ್ನು ಅನುಭವಿಸುವುದು ಮಾತ್ರವಲ್ಲ, ಆಕೆಯ ಮಕ್ಕಳು ಮತ್ತು ಕುಟುಂಬ ಕೂಡ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಯಾವ ದಿನ ವಿವಾಹಿತ ಮಹಿಳೆಯರು ತಲೆಕೂದಲನ್ನು ತೊಳೆಯಬಾರದು ಗೊತ್ತಾ..? ಒಂದು ವೇಳೆ ನೀವೂ ಈ ದಿನಗಳಲ್ಲಿ ತಲೆಯನ್ನು ತೊಳೆಯುತ್ತಿದ್ದರೆ ಅಭ್ಯಾಸವನ್ನು ಇಲ್ಲಿಗೆ ನಿಲ್ಲಿಸಿ.
ಯಾವಾಗ ತಲೆಸ್ನಾನ ಮಾಡಬಾರದು
1) ಸೋಮವಾರ:ಸೋಮವಾರದಂದು ವಿವಾಹಿತ ಮಹಿಳೆಯರು ತಲೆ ಕೂದಲನ್ನು ತೊಳೆದುಕೊಳ್ಳುವುದರಿಂದ ಆಕೆಯ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆಕೆಯ ಮಕ್ಕಳು ಬಿಕ್ಕಟ್ಟಿನ ಜೀವನವನ್ನು ಎದುರಿಸಬೇಕಾಗುತ್ತದೆ. ಆಕೆಯು ಮಾಡಿದ ಚಿಕ್ಕ ಕೆಲಸದಿಂದ ಸಂಪೂರ್ಣ ಕುಟುಂಬವು ಆರ್ಥಿಕ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಆದ್ದರಿಂದ ಮಹಿಳೆಯರು ಸೋಮವಾರದಂದು ಎಂದಿಗೂ ತಲೆಕೂದಲನ್ನು ತೊಳೆದುಕೊಳ್ಳಬಾರದು.
2) ಬುಧವಾರ:ಬುಧವಾರದಂದು ಕನ್ಯೆಯರು ತಲೆಕೂದಲನ್ನು ತೊಳೆಯಬಾರದು. ಒಂದು ವೇಳೆ ನಿಮ್ಮ ಮನೆಯಲ್ಲಿ ಹೆಣ್ಣುಮಗಳು ಬುಧವಾರ ಈ ತಲೆಕೂದಲನ್ನು ತೊಳೆಯುತ್ತಿದ್ದರೆ ಇಂದೇ ಅದನ್ನು ಮಾಡಬಾರದಂದು ತಿಳಿ ಹೇಳಿ. ಕನ್ಯೆಯರು ಬುಧವಾರ ತಲೆ ಕೂದಲನ್ನು ತೊಳೆದುಕೊಳ್ಳುವುದರಿಂದ ಆಕೆಯ ಸಹೋದರನ ಮೇಲೆ ಋಣಾತ್ಮಕ ಪ್ರಭಾವ ಉಂಟಾಗುತ್ತದೆ. ಊಹಿಸಲು ಸಾಧ್ಯವಾಗದಷ್ಟು ದೊಡ್ಡ ಸಮಸ್ಯೆಯನ್ನು ನಿಮ್ಮ ಸಹೋದರ ಅನುಭವಿಸಬೇಕಾದಿತು. ಆದ್ದರಿಂದ ಕನ್ಯೆಯರು ಸಾಧ್ಯವಾದಷ್ಟು ಬುಧವಾರ ತಲೆ ಕೂದಲು ತೊಳೆದುಕೊಳ್ಳುವುದನ್ನು ತಪ್ಪಿಸಬೇಕು.
ಮಂಗಳವಾರ ಕ್ಷೌರ ಮಾಡಿಸಬಾರದೆಂದು ಹೇಗೆ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆಯೋ ಹಾಗೇ ಬುಧವಾರದಂದು ಕನ್ಯೆಯರು ತಲೆ ಕೂದಲನ್ನು ತೊಳೆದುಕೊಳ್ಳಬಾರದು. ಸಹೋದರನಿಗಾಗುವ ಸಮಸ್ಯೆಯನ್ನು ಅಥವಾ ತೊಂದರೆಯನ್ನು ತಪ್ಪಿಸಲು ಆ ಮನೆಯ ಕನ್ಯೆಯರು ಬುಧವಾರ ತಲೆಸ್ನಾನ ಮಾಡಬಾರದು.
3) ಗುರುವಾರ:ಗುರುವಾರದಂದು ವಿವಾಹಿತ ಮಹಿಳೆಯರು ತನ್ನ ತಲೆಕೂದಲನ್ನು ತೊಳೆಯಬಾರದು. ಒಂದು ವೇಳೆ ವಿವಾಹಿತ ಮಹಿಳೆಯರು ಗುರುವಾರದಂದು ತಲೆ ಸ್ನಾನ ಮಾಡಿದರೆ ಆಕೆಯ ಗಂಡನ ಅಥವಾ ಪತಿಯ ಆಯಸ್ಸು ಕಡಿಮೆಯಾಗುತ್ತದೆ. ವಿವಾಹಿತ ಮಹಿಳೆಯರು ಮರೆತೂ ಕೂಡ ಈ ಕೆಲಸವನ್ನು ಮಾಡಬಾರದು. ಗುರುವಾರದಂದು ವಿವಾಹಿತ ಮಹಿಳೆಯರು ತಲೆ ಸ್ನಾನ ಮಾಡುವುದು ಮಾತ್ರವಲ್ಲ, ತಮ್ಮ ಉಗುರುಗಳನ್ನು ಮತ್ತು ತಲೆ ಕೂದಲನ್ನು ಕೂಡ ಕತ್ತರಿಸಬಾರದು. ಹಾಗೂ ಗುರುವಾರದಂದು ಮನೆಯನ್ನು ಒರೆಸಬಾರದು. ಕೇವಲ ಮನೆಯನ್ನು ಗುಡಿಸಿ, ಕಸವನ್ನು ಹೊರ ಹಾಕಬೇಕು. ಗುರುವಾರದಂದು ಒಬ್ಬರು ಬಟ್ಟೆ ಇತ್ಯಾದಿಗಳನ್ನು ತೊಳೆಯಬಾರದು.
ಒಂದು ವೇಳೆ ನೀವು ಗುರುವಾರದಂದು ತಲೆ ಸ್ನಾನ ಮಾಡುವುದರಿಂದ, ಮನೆಯನ್ನು ಒರೆಸುವುದರಿಂದ, ಕೂದಲು ಮತ್ತು ಉಗುರನ್ನು ಕತ್ತರಿಸುವುದರಿಂದ ಆಕೆಯ ಕುಟುಂಬವು ದೊಡ್ಡ ಅನಾಹುತವನ್ನು ಅನುಭವಿಸಬೇಕಾಗುತ್ತದೆ.
ಮಹಿಳೆಯರನ್ನು ಗೌರವಿಸಿದ ಮನೆಯು ಎಂದಿಗೂ ಯಾವುದೇ ಸಮಸ್ಯೆಗಳನ್ನು ಎದುರಿಸಲಾರದು. ವಿವಾಹಿತ ಮಹಿಳೆಯರೂ ಕೂಡ ಈ ಮೇಲಿನ ದಿನಗಳಲ್ಲಿ ತಲೆ ಕೂದಲನ್ನು ತೊಳೆದುಕೊಳ್ಳದಿರುವುದೇ ಉತ್ತಮ. ಇದು ನಿಮ್ಮ ಕುಟುಂಬಕ್ಕೆ ಒಳಿತನ್ನೇ ಮಾಡುವುದು.