ಜಂತುಹುಳ ಸಮಸ್ಸೆ ಕಾಡಿದ್ಯಾ? ಅತೀ ಸುಲಭದ ಮನೆಮದ್ದು!

Written by Anand raj

Published on:

ಮಕ್ಕಳಲ್ಲಿ ಹೆಚ್ಚಾಗಿ ಜಂತು ಹುಳುಗಳು ಕಂಡು ಬರುತ್ತದೆ ಜಂತು ಹುಳುವಿನ ಸಮಸ್ಯೆಯಿಂದ ರೋಗ ನಿರೋಧಕ ಶಕ್ತಿ ದಿನ ಕಳೆದಂತೆ ಕುಂಠಿತಗೊಳ್ಳುತ್ತದೆ ದೇಹದ ರಕ್ತದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾಗುವುದರ ಜೊತೆಗೆ ಕರುಳಿನ ಭಾಗದಲ್ಲಿ ವಿಪರೀತ ಹಾನಿಯಾಗುತ್ತದೆ.ತುಂಬಾ ಕಲುಷಿತ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಹೊಟ್ಟೆಯ ಹಾಗೂ ಕರುಳಿನ ಭಾಗದಲ್ಲಿ ಇಂತಹ ಹುಳುಗಳು ಸಾಮಾನ್ಯವಾಗಿ ಕಂಡು ಬರುತ್ತವೆ

ಇವುಗಳನ್ನು ಹಾಗೆ ಬಿಟ್ಟರೆ ನಾವು ಸೇವಿಸುವ ಆಹಾರದಲ್ಲಿ ಇರುವ ಪೌಷ್ಟಿಕ ಸತ್ವಗಳನ್ನು ಈ ಹುಳುಗಳು ಸೇವನೆ ಮಾಡಿ ನಮಗೆ ಪೌಷ್ಟಿಕಾಂಶದ ಕೊರತೆ ಎದುರಾಗುವಂತೆ ಮಾಡುತ್ತವೆ.ಹಾಗಾಗಿ ಆರು ತಿಂಗಳಿಗೊಮ್ಮೆ ಜಂತು ಹುಳು ನಿರೋಧಕ ಮಾತ್ರೆ ತೆಗೆದುಕೊಂಡರೂ ಸಹ ಸಮಸ್ಯೆ ಕಾಣಿಸುತ್ತದೆ ಈ ಸಮಸ್ಯೆಯಿಂದ ಹೊರಬರಲು ಮನೆಯಲ್ಲೇ ಇರುವ ಪದಾರ್ಥ ಗಳನ್ನು ಬಳಸಿ ಔಷಧಿ ತಯಾರಿಸಿಕೊಳ್ಳಬೇಕು .ನಾವು ಈ ಲೇಖನದ ಮೂಲಕ ಜಂತು ಹುಳು ಸಮಸ್ಯೆಗೆ ಪರಿಹಾರವನ್ನು ತಿಳಿದುಕೊಳ್ಳೋಣ.

ಜಂತು ಹುಳದ ಸಮಸ್ಯೆ ತುಂಬಾ ಜನರಲ್ಲಿ ಕಾಡುತ್ತದೆ ಅದರಲ್ಲೂ ಮಕ್ಕಳಿಗೆ ಜಾಸ್ತಿ ಇರುತ್ತದೆ ಇದರಿಂದ ಹೊಟ್ಟೆ ನೋವು ಕಂಡು ಬರುತ್ತದೆ ಹಾಗೂ ಮೋಷನ ಹೋಗೋ ಜಾಗದಲ್ಲಿ ತುರಿಕೆ ಕಂಡು ಬರುತ್ತದೆ ಈ ಜಂತು ಹುಳು ಸಮಸ್ಯೆಯ ನಿವಾರಣೆಗೆ ಮೂರರಿಂದ ನಾಲ್ಕು ಬೆಳ್ಳುಳ್ಳಿ ತೆಗೆದುಕೊಳ್ಳಬೇಕು ಅದನ್ನು ಸಿಪ್ಪೆ ಬಿಡಿಸಿ ಇಟ್ಟುಕೊಳ್ಳಬೇಕು ಹಾಗೆಯೇ ಒಂದು ಡ್ರಾಪ್ ನೀರನ್ನು ಸೇರಿಸಿ ಜಜ್ಜಿಕೊಳ್ಳಬೇಕು ಇದರಿಂದ ಬೆಳ್ಳುಳ್ಳಿ ರಸ ಸಿಗುತ್ತದೆ ಮತ್ತು ಬೆಳ್ಳುಳ್ಳಿಯನ್ನು ರಸ ತೆಗೆಯುವ ಹಾಗೆ ಜಜ್ಜಿ ಕೊಳ್ಳಬೇಕು ಬೆಳ್ಳುಳ್ಳಿಯಲ್ಲಿ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಇದೆ.

ಆಂಟಿ ಬ್ಯಾಕ್ಟೀರಿಯಲ್ ಗುಣ ಬೆಳ್ಳುಳ್ಳಿ ಯಲ್ಲಿ ಇರುತ್ತದೆ ಚಿಕ್ಕಮಕ್ಕಳಿಗೆ ಔಷಧಿ ಕೊಡುವಾಗ ರಸ ತೆಗೆದು ಕೊಡಬೇಕು .ಬೆಳ್ಳುಳ್ಳಿ ರಸ ತೆಗೆದು ಒಂದು ಬೌಲ್ ಗೆ ಹಾಕಬೇಕು ನಂತರ ಅದಕ್ಕೆ ಅಷ್ಟೇ ಪ್ರಮಾಣದ ಜೇನುತುಪ್ಪವನ್ನು ಹಾಕಬೇಕು ಶುದ್ದ ಜೇನುತುಪ್ಪವನ್ನು ಹಾಕಬೇಕು ನಂತರ ಬೆಳುಳ್ಳಿ ರಸ ಮತ್ತು ಜೇನು ತುಪ್ಪವನ್ನು ಮಿಕ್ಸ್ ಮಾಡಿಕೊಳ್ಳಬೇಕು ಜೇನುತುಪ್ಪವನ್ನು ದೇಹದ ತೂಕ ಕಡಿಮೆ ಮಾಡಲು ಬಳಸಲಾಗುತ್ತದೆ .

ಬೆಳುಳ್ಳಿಮತ್ತು ಜೇನುತುಪ್ಪದ ಮಿಶ್ರಣವನ್ನು ಚಿಕ್ಕ ಮಕ್ಕಳಿಗೆ ಒಂದು ಚಮಚ ಕೂಡಿಸಬೇಕು ಹೀಗೆ ಮಾಡಿ ಕುಡಿಸುದರಿಂದ ಹೊಟ್ಟೆಯಲ್ಲಿನ ಜಂತು ಹುಳ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಮಕ್ಕಳು ಮೋಷನ್ ಮಾಡುವಾಗ ಜಂತು ಹುಳು ಹೊರಬರುತ್ತದೆ ದೊಡ್ಡವರಿಗೆ ಬೆಳ್ಳುಳ್ಳಿ ರಸ ತೆಗೆಯುವ ಬದಲು ಅದರ ಜೊತೆ ಜೇನುತುಪ್ಪ ಬಳಸಿ ತಿನ್ನಬಹುದು ಹಾಗೆಯೇ ಇನ್ನೊಂದು ವಿಧಾನವೆಂದರೆ ಒಂದು ಲೋಟ ನೀರನ್ನು ಒಂದು ಬೌಲಗೆ ಹಾಕಬೇಕು ಮತ್ತು ಅದಕ್ಕೆ ಒಂದು ಚಮಚ ಕೊತ್ತಂಬರಿ ಯನ್ನು ಹಾಕಬೇಕು ನಂತರ ಕುದಿಸಬೇಕು.

ಕೊತ್ತುಂಬರಿ ಸಹ ನಮ್ಮ ದೇಹಕ್ಕೆ ತುಂಬಾ ಪ್ರಯೋಜನವುಳ್ಳ ಸಾಂಬಾರು ಪದಾರ್ಥ. ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳಲು ಕೊತ್ತುಂಬರಿಯಿಂದ ತುಂಬಾ ಪ್ರಯೋಜನವಾಗಿದೆ ಸರಿಯಾಗಿ ಕುದಿಯಬೇಕು ನಂತರ ಐ ದರಿಂದ ಆರು ಕಾಳು ಮೆಣಸನ್ನು ತೆಗೆದುಕೊಂಡು ಪೌಡರ್ ಮಾಡಿಕೊಂಡು ಕುದಿಯುವ ಕೊತ್ತುಂಬರಿ ನೀರಿನ್ನು ಒಂದು ಚಮಚ ಹಾಕಬೇಕು

ಬಿಸಿ ಇರುವಾಗ ಹಾಕಿದರೆ ಕಾಳು ಮೆಣಸಿನ ಸತ್ವ ಬಿಡುತ್ತದೆ ಹೀಗಾಗಿ ಸ್ವಲ್ಪ ಹೊತ್ತು ಹಾಗೆಯೇ ಬಿಡಬೇಕು .ಉಳಿದಿರುವ ಕೊತ್ತುಂಬರಿ ನೀರನ್ನು ಕುಡಿಯುವುದು ಉತ್ತಮ ದೇಹವನ್ನು ತಂಪಾಗೆ ಇಡುತ್ತದೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ತುಂಬಾ ಪ್ರಯೋಜನಕಾರಿಯಾಗಿದೆ ನಂತರ ಸಿದ್ದ ಮಾಡಿಕೊಂಡು ಕಷಾಯವನ್ನು ಕುಡಿಯುದರಿಂದ ಜಂತು ಹುಳು ಸಮಸ್ಯೆ ನಿವಾರಣೆಯಾಗುತ್ತದೆ ಈ ಮೂಲಕ ಮನೆಯಲ್ಲೇ ಜಂತು ಹುಳು ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದು.

Related Post

Leave a Comment