ನೆನೆಸಿಟ್ಟ ಬಾದಾಮಿಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಬಾದಾಮಿಯಲ್ಲಿ ಎರಡು ವಿಧಗಳಿವೆ ಒಂದು ಸಿಹಿ ಬಾದಾಮಿ ಮತ್ತು ಕಹಿ ಬಾದಾಮಿ. ಸಿಹಿ ಬಾದಾಮಿ ತಿನ್ನುವುದಕ್ಕೆ ಉಪಯೋಗ ಮಾಡಿದರೆ ಹಾಗೂ ಕಹಿ ಬಾದಾಮಿಯನ್ನು ಎಣ್ಣೆ ತೆಗೆಯಲು ಉಪಯೋಗಿಸುತ್ತಾರೆ.ಬಾದಾಮಿಯಲ್ಲಿ ಪ್ರೊಟೀನ್, ಒಮೇಗಾ ಕೊಬ್ಬಿನ ಆಮ್ಲ,ವಿಟಮಿನ್ ಇ, ಕ್ಯಾಲ್ಸಿಯಂ, ಫಾಸ್ಟರ್ಸ್ ಹಿರಿಕೊಳ್ಳುವ ಮತ್ತು ಹಿರಿಕೊಳ್ಳದ ನಾರಿನ ಅಂಶಗಳು ಪ್ರಮುಖವಾಗಿ ನೋಡಬಹುದು.
ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳು ಚರ್ಮದ ನೆರಿಗೆಗಳನ್ನು ನಿವಾರಣೆ ಮಾಡದೇ ಇರಬಹುದು ಅದರೆ ಬಾದಾಮಿಯಲ್ಲಿ ನೈಸರ್ಗಿಕ ಅಂಶಗಳು ನೆರಿಗೆಗಳನ್ನು ನೀವಾರಿಸುತ್ತದೆ.ಪ್ರತಿ ನಿತ್ಯ ಬೆಳಗ್ಗೆ ನೆನೆಸಿಟ್ಟ ಬಾದಾಮಿ ಸೇವನೆ ಮಾಡುವುದರಿಂದ ಚರ್ಮದಲ್ಲಿನ ನೆರಿಗೆ ಮತ್ತು ವಯಸ್ಸಾಗುವ ರೀತಿ ಕಾಣುವ ಲಕ್ಷಣಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.ಪ್ರಿಬಯೋಟಿಕ್ ಅಂಶವು ದೇಹದಲ್ಲಿ ಪ್ರತಿ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಪ್ರಿಬಯೋಟಿಕ್ ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಉತ್ಪಾದಿಸುವ ಮೂಲಕ ಹೊಟ್ಟೆಗೆ ಪರಿಣಾಮ ಬೀರುವ ರೋಗಗಳನ್ನು ತಡೆಗಟ್ಟುತ್ತಾದೆ.
ನೆನಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ದೇಹದಲ್ಲಿ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ.
ಗರ್ಭಿಣಿಯರು ನೆನೆಸಿಟ್ಟ ಬಾದಾಮಿಯನ್ನು ತಪ್ಪದೆ ಸೇವಿಸಿ. ಅದು ನಿಮಗೂ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದರಿಂದ ಪೋಷಕಾಂಶ ಮತ್ತು ಶಕ್ತಿ ಸಿಗುತ್ತದೆ.ಬಾದಾಮಿಯಲ್ಲಿ ಇರುವ ಪಾಲಿಕ್ ಆಮ್ಲವು ಯಾವುದೇ ರೀತಿಯ ಜನ್ಮ ವೈಪಲ್ಯವನ್ನು ತಡೆಗಟ್ಟುತ್ತದೆ.
ಪ್ರತಿನಿತ್ಯ 4-6 ನೆನಸಿಟ್ಟ ಬಾದಾಮಿ ಸೇವನೆ ಮಾಡಿದರೆ ಅದರಿಂದ ಮೆದುಳಿಗೆ ಶಕ್ತಿ ಸಿಗುತ್ತದೆ ಮತ್ತು ಮೆದುಳಿನ ನರ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಾಯಿಸಲು ಸಹಕಾರಿ ಆಗುತ್ತದೆ.ಬೆಳಗ್ಗೆ ನೆನಸಿಟ್ಟ ಬಾದಾಮಿ ತಿನ್ನುವುದರಿಂದ ಜ್ಞಾಪಕ ಶಕ್ತಿ ಮತ್ತು ಮೆದುಳಿನ ಕಾರ್ಯ ಕೂಡ ಸುಧಾರಿಸುತ್ತದೆ.
ನೆನಸಿಟ್ಟ ಬಾದಾಮಿ ತಿಂದರೆ ಮಲಬದ್ಧತೆ ನೀವಾಹರಣೆ ಮಾಡಬಹುದು.
ಹೊಟ್ಟೆಯ ಸುತ್ತಲೂ ಇರುವ ಕೊಬ್ಬನ್ನು ಕರಗಿಸುವುದಕ್ಕೆ ನೆನಸಿಟ್ಟ ಬಾದಾಮಿ ತಿನ್ನುವುದರಿಂದ ಬೇಗನೆ ತೂಕ ಕಳೆದುಕೊಳ್ಳಬಹುದು.ನೆನಸಿಟ್ಟ ಬಾದಾಮಿ ಇಂದ ಆರೋಗ್ಯಕ್ಕೆ ಒಳ್ಳೆಯ ಲಾಭವಿದೆ. ಅದರಿಂದ ಪ್ರತಿದಿನ ನೆನಸಿಟ್ಟ ಬಾದಾಮಿಯನ್ನು ಸೇವಿಸಿ.