ಮೈ ಅಂಗೈ ಅಂಗಾಲು ಬೆವರು, ಎಕ್ಸಸ್ಸಿವೆ ಸ್ವೇಟಿಂಗ್!

Written by Anand raj

Published on:

ಆರೋಗ್ಯದ ದೃಷ್ಟಿಯಿಂದ ಮೈ-ಕೈ ಬೆವರುವುದು ಒಳ್ಳೆಯದೇ, ಆದರೆ ಚೆನ್ನಾಗಿ ಬೆವೆತಾಗ ಬರುವ ದುರ್ವಾಸನೆ ಇದೆಯಲ್ಲಾ ಅದು ನಿಮಗಿರಲಿ, ಪಕ್ಕದಲ್ಲಿದ್ದವರಿಗೆ ನಿಮ್ಮ ಬಗ್ಗೆ ಅಸಹ್ಯ ಭಾವನೆ ಮೂಡಿಸುತ್ತದೆ.ಅಂಗೈಗಳು ಮತ್ತು ಪಾದಗಳು ಅತಿಯಾಗಿ ಬೆವರುತ್ತವೆ. ಬೆವರು ಗ್ರಂಥಿಗಳ ಅತಿ ಚಟುವಟಿಕೆ ಇದಕ್ಕೆ ಕಾರಣವಾಗಿದೆ. ಕೈಗಳು ಮತ್ತು ಕಾಲುಗಳಲ್ಲಿಯ ಬೆವರು ಗ್ರಂಥಿಗಳು ಸಿಂಪಥೆಟಿಕ್ ನರ್ವಸ್ ಸಿಸ್ಟಮ್‌ನೊಂದಿಗೆ ಸಂಪರ್ಕ ಹೊಂದಿದ್ದು,ವ್ಯಕ್ತಿ ಒತ್ತಡದಲ್ಲಿದ್ದಾಗ ಅಥವಾ ಉದ್ವೇಗಗೊಂಡಾಗ ಕ್ರಿಯಾಶೀಲಗೊಳ್ಳುತ್ತವೆ.

ಆದರೆ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸದೆ, ಯಾವುದೋ ಒಂದು ಡಿಯೊಡ್ರೆಂಟ್ ಉಪಯೋಗಿಸಿದರೆ ಮುಗಿಯಿತು ಎಂದು ನಿರ್ಲಕ್ಷ್ಯವಹಿಸುತ್ತಾರೆ. ಆದರೆ ನೀವು ಡಿಯೊಡ್ರೆಂಟ್ ಬಳಸುತ್ತಾ ಹೋದಂತೆ ಅಲರ್ಜಿ ಸೇರಿದಂತೆ, ಬೇರೆ ಬೇರೆ ಚರ್ಮದ ಕಾಯಿಲೆಗಳು ನಿಮ್ಮನ್ನು ಅಂಟಿಕೊಳ್ಳುತ್ತವೆ. ಆದರೆ ಬೆವರನ್ನು ತುಂಬಾ ಈಸಿಯಾಗಿ ಹೋಗಲಾಡಿಸಲು ಕೆಲವು ಮನೆಮದ್ದುಗಳು ಇದ್ದು, ಅವುಗಳನ್ನು ಹೀಗೆ ಬಳಸಿ ನೋಡಿ.

ಆಪಲ್ ಸೈಡರ್ ವಿನೆಗರ್ ಹಚ್ಚಿ

ಆಪಲ್ ಸೈಡರ್ ವಿನೆಗರ್ ಆಮ್ಲೀಯ ಗುಣಗಳನ್ನು ಹೊಂದಿದ್ದು, ಇದು ನಿಮ್ಮ ಅಂಗೈ, ಕಾಲುಗಳು ಮತ್ತು ದೇಹದ ಇತರ ಭಾಗಗಳಲ್ಲಿನ ಯಾವುದೇ ಬ್ಯಾಕ್ಟೀರಿಯಾ ಕೊಲ್ಲಲು ಸಹಾಯ ಮಾಡುತ್ತದೆ. ಚಿಕಿತ್ಸೆಯ ಪರಿಣಾಮವೂ ಹಿತವಾಗಿರುತ್ತದೆ. ನೀವು ಆಪಲ್ ಸೈಡರ್ ವಿನೆಗರ್ ಅನ್ನು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ, ನಿಮ್ಮ ಪಾದಗಳನ್ನು ಅಥವಾ ಅಂಗೈಗಳನ್ನು ಅದರಲ್ಲಿ ನೆನೆಸಬಹುದು ಅಥವಾ ನಿಮ್ಮ ಕಂಕುಳಿಗೆ ಹಚ್ಚಿ, ಸುಮಾರು 15 ರಿಂದ 30 ನಿಮಿಷಗಳ ನಂತರ ತೊಳೆಯಿರಿ.

ಡಯಟ್ ಪ್ಲಾನ್ ಮಾಡಿ

ನಿಮ್ಮ ಆಹಾರಕ್ಕೂ, ಬೆವರುವುದಕ್ಕೂ ಪರಸ್ಪರ ಸಂಬಂಧವಿದೆ. ಕೆಲವು ಆಹಾರಗಳು ಕೂಡ ನಿಮ್ಮ ದೇಹವು ಇತರರಿಗಿಂತ ಹೆಚ್ಚು ಬೆವರು ಉತ್ಪಾದಿಸಲು ಕಾರಣವಾಗಬಹುದು. ನೀವು ಹೆಚ್ಚು ಬೆವರುತ್ತಿರುವುದು ಗಮನಕ್ಕೆ ಬಂದರೆ, ನಿಮ್ಮ ಆಹಾರದಲ್ಲಿ ಬೆವರು ಉಂಟುಮಾಡುವ ಆಹಾರವನ್ನು ಕಡಿಮೆ ಮಾಡಿಕೊಳ್ಳಿ. ಅಧಿಕ ಸೋಡಿಯಂ ಇರುವ ಆಹಾರವು ಉಪ್ಪನ್ನು ಹೆಚ್ಚುವರಿ ಮೂತ್ರ ಮತ್ತು ಬೆವರಿನ ರೂಪದಲ್ಲಿ ನಿರ್ವಿಷಗೊಳಿಸುತ್ತದೆ ಎಂದು ಹೇಳುತ್ತಾರೆ. ಆದರೆ ಕೊಬ್ಬಿನಂಶವುಳ್ಳ ಆಹಾರವು ಬ್ಯಾಕ್ಟೀರಿಯಾಗಳು ಬೆಚ್ಚಗಾಗಲು ಕಾರಣವಾಗುತ್ತದೆ. ಮಸಾಲೆಯುಕ್ತ ಆಹಾರವೂ ಒಳ್ಳೆಯದಲ್ಲ.

ಯಥೇಚ್ಛವಾಗಿ ನೀರು ಕುಡಿಯಿರಿ

ದಿನವಿಡೀ ಸಾಕಷ್ಟು ನೀರು ಕುಡಿಯುವುದರಿಂದ ಮತ್ತು ಹೆಚ್ಚು ನೀರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ದೇಹವು ತಂಪಾಗಿರುತ್ತದೆ ಮತ್ತು ಅತಿಯಾಗಿ ಬೆವರುವುದನ್ನು ತಡೆಯುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಸಾಕಷ್ಟು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಅತಿಯಾದ ಬೆವರುವುದನ್ನು ತಪ್ಪಿಸಲು ನಿಂಬೆ ನೀರು, ತಾಜಾ ಹಣ್ಣಿನ ರಸ ಮತ್ತು ತೆಂಗಿನ ನೀರನ್ನು ಕುಡಿಯಿರಿ.

ಆಲೂಗಡ್ಡೆ ರಸ ಹಚ್ಚಿ

ಪ್ರಕೃತಿಯಲ್ಲಿ ಕ್ಷಾರೀಯ ಗುಣಗಳನ್ನು ಹೊಂದಿರುವ ತರಕಾರಿಗಳ ಪೈಕಿ ಆಲೂಗಡ್ಡೆಯೂ ಒಂದು. ಇದು ದೇಹದ ಪಿಎಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ ಆಲೂಗಡ್ಡೆಯಲ್ಲಿರುವ ಕಡಿಮೆ ಆಮ್ಲೀಯ ಸಂಯುಕ್ತವು ಅತಿಯಾಗಿ ಬೆವರುವುದನ್ನು ತಡೆಯುತ್ತದೆ. ಬೇಕಾದರೆ ನೀವು ಬೆವರಿರುವ ಭಾಗದಲ್ಲಿ ಆಲೂಗೆಡ್ಡೆ ತುಂಡನ್ನು ಉಜ್ಜಬಹುದು, ನಂತರ ತಣ್ಣೀರಿನಿಂದ ತೊಳೆಯಬೇಕು. ಹಚ್ಚುವ ವಿಧಾನ: ನೀವು ಸ್ವಲ್ಪ ಆಲೂಗೆಡ್ಡೆ ರಸವನ್ನು ಹೊರತೆಗೆದು, ಅದನ್ನು ಹತ್ತಿ ಚೆಂಡು ಅಥವಾ ಬಟ್ಟೆಯಲ್ಲೆ ಅದ್ದಿ ಬೆವರಾದ ಭಾಗದ ಮೇಲೆ ಹಚ್ಚಬಹುದು.

ನಿಂಬೆ ರಸ ಹಚ್ಚಿ

ಸಿಟ್ರಸ್ ಆಮ್ಲ ಹೊಂದಿರುವ ನಿಂಬೆ ಬೆವರಿಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಹಾಗೆಯೇ ಅತಿಯಾಗಿ ಬೆವರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅರ್ಧ ನಿಂಬೆ ಹೋಳನ್ನು ತೆಗೆದುಕೊಂಡು ನಿಮ್ಮ ಕಂಕುಳಿಗೆ ಉಜ್ಜಬಹುದು ಅಥವಾ ಅಡಿಗೆ ಸೋಡಾಗೆ ಸ್ವಲ್ಪ ಪ್ರಮಾಣದ ನಿಂಬೆ ರಸವನ್ನು ಬೆರೆಸಿ ಕಾಟನ್ ಪ್ಯಾಡ್’ನಲ್ಲಿ ಹಚ್ಚಬಹುದು. ಅತಿಯಾಗಿ ಬೆವರುತ್ತಿದ್ದರೆ ಈ ಪರಿಹಾರಗಳು ನಿಮಗೆ ಖಂಡಿತ ಸಹಾಯ ಮಾಡುತ್ತವೆ.

ಹೈಪರ್ಹೈಡ್ರೋಸಿಸ್ ಅಸ್ವಸ್ಥತೆ ಇರುವವರು ಅತಿಯಾಗಿ ಬೆವರುತ್ತಾರೆ. ಈ ಸಮಸ್ಯೆ ಇರುವವರು ಅಸಾಮಾನ್ಯ ಸಂದರ್ಭಗಳಲ್ಲಿ, ಅಂದರೆ ತಂಪಾದ ವಾತಾವರಣದಲ್ಲಿಯೂ ಬೆವರುತ್ತಾರೆ. ಕೆಲವೊಮ್ಮೆ ಋತುಬಂಧ ಅಥವಾ ಹೈಪರ್ ಥೈರಾಯ್ಡ್’ನಂತಹ ಸಮಸ್ಯೆಗಳಿಂದಲೂ ಬೆವರು ಬರುತ್ತದೆ.

ಈ ಟಿಪ್ಸ್ ಫಾಲೋ ಮಾಡಿ

ಸಾಮಾನ್ಯ ಪ್ರಮಾಣದಲ್ಲಿ ಬೆವರುವುದು ಅತ್ಯಗತ್ಯ ದೈಹಿಕ ಪ್ರಕ್ರಿಯೆ. ಆದರೆ ಕಡಿಮೆ ಬೆವರುವುದು ಮತ್ತು ಹೆಚ್ಚು ಬೆವರುವುದು ಎರಡೂ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಏಕೆಂದರೆ ದೇಹ ಬಿಸಿಯಾದರೆ ಅಪಾಯ ಹೆಚ್ಚಾಗುತ್ತದೆ. ಅತಿಯಾಗಿ ಬೆವರುವುದು ಕೂಡ ದೈಹಿಕವಾಗಿ ಹಾನಿಯಾಗುವುದಕ್ಕಿಂತ ಮಾನಸಿಕವಾಗಿ ಹಾನಿಕಾರಕವಾಗಿದೆ. ಅತಿಯಾದ ಬೆವರಿನ ಸಮಸ್ಯೆಗೆ ಮನೆಮದ್ದಿನ ಜೊತೆಗೆ ಸಡಿಲ ಬಟ್ಟೆಗಳನ್ನು ಧರಿಸಿ. ಮೇಲೆ ಹೇಳಿದ ಹಾಗೆ ಕೆಲವು ಆಹಾರಗಳನ್ನು ಸೇವಿಸಬೇಡಿ. ದೇಹ ತಂಪಾಗಿರಿ. ಅಗತ್ಯವೆನಿಸದರೆ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳಿ.

ವಿಟಮಿನ್ ‘ಡಿ’

ಯಾವುದೇ ದೈಹಿಕ ಚಟುವಟಿಕೆ ಕೈಗೊಳ್ಳದಿದ್ದರೂ, ಹವಮಾನ ತಂಪಾಗಿದ್ದರೂ ಮೊದಲಿಗಿಂತ ಹೆಚ್ಚು ಬೆವರುತ್ತಿದ್ದರೆ ಇದು ಹೃದಯ ಸಮಸ್ಯೆಗಳ ಎಚ್ಚರಿಕೆಯ ಸಂಕೇತ. ಆಗ ನೀವು ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಆದರೆ ಹೃದಯದ ತೊಂದರೆಗಳನ್ನು ಅನುಭವಿಸು ತ್ತಿರುವ ಮಹಿಳೆಯರಿಗೆ ರಾತ್ರಿ ಬೆವರುವುದು ಸಾಮಾನ್ಯ ಲಕ್ಷಣವಾಗಿದೆ. ಬೆವರುವುದು ಆರೋಗ್ಯಕ್ಕೆ ಒಳ್ಳೆಯದು, ಇದು ಚರ್ಮದ ಕೆಳಗಿರುವ ಕೊಬ್ಬಿನ ಕೋಶಗಳಲ್ಲಿ ಹೂತು ಹೋಗಿರುವ ವಿಷವನ್ನು ಬಿಡುಗಡೆ ಮಾಡುತ್ತದೆ. ಆದರೂ ಅತಿಯಾದ ಬೆವರುವಿಕೆ ವಿಟಮಿನ್ ಡಿ ಕೊರತೆಯನ್ನು ಸೂಚಿಸುತ್ತದೆ. ವಿಟಮಿನ್ ‘ಡಿ’ರೋಗನಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಡಯಾಬಿಟಿಸ್ ಇರುವವರು

ಡಯಾಬಿಟಿಸ್ ಇರುವವರು ಸಹ ಅತಿಯಾಗಿ ಬೆವರು ಸುರಿಸುತ್ತಾರೆ. ಆದರೆ ಪಾದಗಳು ಸೇರಿದಂತೆ ಕೆಳ ದೇಹವು ಬೆವರುವ ಸಾಧ್ಯತೆ ಕಡಿಮೆ. ಡಯಾಬಿಟಿಸ್ ಇರುವವರಲ್ಲಿ ಅಸಾಮಾನ್ಯ ಬೆವರುವಿಕೆಗೆ ಸಾಮಾನ್ಯ ಕಾರಣವೆಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುವುದು.

Related Post

Leave a Comment