ಪುರಾತನ ಕಾಲದಿಂದಲೂ ಆಯುರ್ವೇದವು ಭಾರತದಲ್ಲಿ ಪ್ರಮುಖ ಚಿಕಿತ್ಸ ಕ್ರಮವಾಗಿ ಬಳಸಲಾಗುತ್ತಿದೆ. ಆಯುರ್ವೇದದಿಂದ ಸಿಗುವಂತಹ ಲಾಭಗಳು ಬೇರೆ ಯಾವುದೇ ಚಿಕಿತ್ಸಾ ಕ್ರಮದಿಂದ ಸಿಗುವುದಿಲ್ಲ.
ಆಯುರ್ವೇದವು ಸಂಪೂರ್ಣ ದೇಹವನ್ನು ಪುನರ್ ಚೇತನಗೊಳಿಸುತ್ತದೆ. ಅಡಿಗೆಮನೆಯಲ್ಲಿ ಸಿಗುವಂತಹ ಕೆಲವು ಸಾಂಬಾರ್ ಪದಾರ್ಥಗಳನ್ನು ಬಳಸಿಕೊಂಡು ಮನೆ ಮದ್ದು ತಯಾರಿಸಿಕೊಂಡು ಹಲವಾರು ಕಾಯಿಲೆಗಳನ್ನು ಗುಣಪಡಿಸಬಹುದು.
ಹಾಲಿಗೆ ಬೆಳ್ಳುಳ್ಳಿ ಹಾಕಿ ಕುಡಿದರೆ ಹಲವಾರು ಆರೋಗ್ಯ ಲಾಭಗಳು ಇದೆ. ಒಂದು ಲೋಟ ಬಿಸಿ ಹಾಲಿಗೆ 3 ಚಮಚ ನೀರು ಬೆರೆಸಿ 5-6 ಬೆಳ್ಳುಳ್ಳಿ ಎಸಳುಗಳನ್ನು ರುಬ್ಬಿ ಅದರ ರಸವನ್ನು ಹಾಲಿಗೆ ಮಿಶ್ರಣ ಮಾಡಿ.
ಪ್ರತಿ ದಿನ ರಾತ್ರಿ ಊಟ ಆದ ಬಳಿಕ ಈ ಹಾಲನ್ನು ಕುಡಿಯಿರಿ. ಇದರಿಂದ ಅಸ್ತಮಾ ಸಮಸ್ಯೆ ದೂರವಾಗುತ್ತದೆ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ಎದೆಹಾಲು ಹೆಚ್ಚಳ ಮಾಡುತ್ತದೆ. ಗಂಟು ನೋವುಗಳನ್ನು ನಿವಾರಣೆ ಮಾಡುತ್ತದೆ.