ಖಾಲಿ ಹೊಟ್ಟೆಯಲ್ಲಿ ಏನೇ ಕುಡಿದರೂ ಅದು ನಮ್ಮ ಆರೋಗ್ಯಕ್ಕೆ ಹೆಚ್ಚಿನ ಲಾಭ ನೀಡುವುದು. ಇಂತಹ ಒಂದು ಪಾನೀಯವೆಂದರೆ ಅದು ಜೀರಿಗೆ ನೀರು. ಇದನ್ನು ಕುಡಿದರೆ ದೇಹವು ತಂಪಾಗಿರುತ್ತದೆ ಮತ್ತು ಇದು ದೇಹದಲ್ಲಿ ಉಷ್ಣತೆಯನ್ನು ಕಾಪಾಡಲು ನೆರವಾಗುವುದು.
ಆಯುರ್ವೇದದಲ್ಲಿ ಕೂಡ ಜಲಜೀರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರಲ್ಲಿ ಇರುವಂತಹ ದೇಹವನ್ನು ತಂಪಾಗಿಸುವ ಗುಣವೇ ಇದಕ್ಕೆ ಕಾರಣವಾಗಿದೆ. ಇದು ತೂಕ ಇಳಿಸಲು ಕೂಡ ತುಂಬಾ ನೆರವಾಗುವುದು.
ಜೀರಿಗೆ ಹೆಚ್ಚಾಗಿ ಏಶ್ಯಾದಲ್ಲಿ ಬಳಕೆಯಾಗುವಂತಹ ಸಾಂಬಾರವಾಗಿದ್ದು, ಇದರಲ್ಲಿರುವ ಪ್ರಮುಖ ಪೋಷಕಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ಗಳು ಆರೋಗ್ಯ ಕಾಪಾಡುವುದು. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿದೆ.
ಜೀರಿಗೆಯ ಪ್ರಯೋಜನಗಳು
ಜೀರಿಗೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಅದು ದೇಹವನ್ನು ತಂಪಾಗಿಡುತ್ತದೆ ಮತ್ತು ಕೆಲವೊಂದು ಅನಾರೋಗ್ಯವನ್ನು ದೂರವಿಡುವುದು. ಜೀರಿಗೆಯು ಆಹಾರದ ನಾರಿನಾಂಶವನ್ನು ಹೊಂದಿದ್ದು, ಜೀರ್ಣಕ್ರಿಯೆಗೆ ಇದು ಸಹಕಾರಿ ಮತ್ತು ಹಲವಾರು ಆರೋಗ್ಯ ಲಾಭಗಳನ್ನು ಇದು ನೀಡುವುದು. ಒಂದು ಲೋಟ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರಿಂದ ಆ ದಿನವು ತುಂಬಾ ಪರಿಣಾಮಕಾರಿ ಆಗಿರುತ್ತದೆ. ನೀವು ಆರೋಗ್ಯವಾಗಿಯೂ ಇರಬಹುದು. ಜೀರಿಗೆ ನೀರಿನಿಂದ ಸಿಗುವ ಕೆಲವು ಲಾಭಗಳ ಬಗ್ಗೆ ನೀವು ತಿಳಿಯಿರಿ.
ಜೀರ್ಣಕ್ರಿಯೆ ಸುಧಾರಿಸುವುದು
ಒಂದು ಲೋಟ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರಿಂದ ಜೀರ್ಣಕ್ರಿಯೆಯು ವೃದ್ಧಿಸುವುದು ಮತ್ತು ಹೊಟ್ಟೆಯ ಸಮಸ್ಯೆಯನ್ನು ಪರಿಣಾಮಕಾರಿ ಆಗಿ ನಿವಾರಣೆ ಮಾಡಬಹುದು. ಯಾಕೆಂದರೆ ಜೀರಿಗೆಯಲ್ಲಿ ಕೆಲವೊಂದು ಪ್ರಮುಖ ಸಾರಭೂತ ತೈಲಗಳು ಮತ್ತು ಪೋಷಕಾಂಶ ಗಳಾಗಿರುವಂತಹ ಮೆಗ್ನಿಶಿಯಂ, ಸೋಡಿಯಂ ಇದ್ದು, ಜೀರ್ಣಕ್ರಿಯೆಗೆ ಸಹಕಾರಿ ಆಗಿರುವುದು. ಜೀರಿಗೆಯು ದೇಹದಲ್ಲಿರುವ ವಿಷವನ್ನು ಹೊರಗೆ ಹಾಕುವುದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಾಗಿರುವಂತಹ ಅಸಿಡಿಟಿ, ಹೊಟ್ಟೆಯ ಗ್ಯಾಸ್ ಮತ್ತು ವಾಕರಿಕೆ ನಿವಾರಣೆ ಮಾಡುವುದು.
ಪ್ರತಿರೋಧಕ ಶಕ್ತಿ ವೃದ್ಧಿ
ಕಬ್ಬಿನಾಂಶ ಮತ್ತು ಆಹಾರದ ನಾರಿನಾಂಶವನ್ನು ಹೊಂದಿರುವಂತಹ ಜೀರಿಗೆಯು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದರ ಜತೆಗೆ ಪ್ರತಿರೋಧಕ ಶಕ್ತಿ ವೃದ್ಧಿಸುವುದು. ಜೀರಿಗೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಎ ಮತ್ತು ಸಿ ಇದೆ. ಇವುಗಳು ಆಂಟಿಆಕ್ಸಿಡೆಂಟ್ ಗಳಾಗಿ ಕೆಲಸ ಮಾಡಿ ಸೋಂಕು ವಿರುದ್ಧ ಹೋರಾಡುವುದು.
ತೂಕ ಇಳಿಸಲು ಸಹಕಾರಿ
ಖಾಲಿ ಹೊಟ್ಟೆಯಲ್ಲ ಜಲ ಜೀರ ಕುಡಿದರೆ ಅದರಿಂದ ತೂಕ ಇಳಿಸಲು ತುಂಬಾ ಸಹಕಾರಿ ಆಗಲಿದೆ. ಯಾಕೆಂದರೆ ಇದರಲ್ಲಿ ಆಹಾರದ ನಾರಿನಾಂಶವು ಹೆಚ್ಚಾಗಿದೆ ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿ ಆಗಲು ನೆರವಾಗುವುದು.
ಜೀರಗೆಯಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ. ಜೀರಿಗೆಯು ಚಯಾಪಚಯವನ್ನು ಹೆಚ್ಚಿಸಿ ಕ್ಯಾಲರಿ ದಹಿಸುವಂತೆ ಮಾಡುವುದು ಮತ್ತು ವೇಗವಾಗಿ ತೂಕ ಇಳಿಸಲು ಇದು ಸಹಕಾರಿ ಆಗಿರುವುದು.
ಉಸಿರಾಟದ ಸಮಸ್ಯೆ ನಿವಾರಿಸುವುದು
ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣ ಹೊಂದಿರುವಂತಹ ಜೀರಿಗೆಯು ಉಸಿರಾಟದ ಸಮಸ್ಯೆಗೆ ತುಂಬಾ ಪರಿಣಾಮಕಾರಿ ಮನೆ ಮದ್ದು ಆಗಿದೆ.
ಇದು ಅಸ್ತಮಾ ಮತ್ತು ಬ್ರಾಂಕೈಟಿಸ್ ಗೆ ಪರಿಣಾಮಕಾರಿ ಆಗಿರುವುದು. ಕಫಗಟ್ಟುವುದನ್ನು ನಿವಾರಿಸು ವಂತಹ ಅಂಶವು ಜೀರಿಗೆಯಲ್ಲಿದೆ ಮತ್ತು ಇದು ಉಸಿರಾಟದ ವ್ಯವಸ್ಥೆಯನ್ನು ಕಫ ನಿಲ್ಲುವುದನ್ನು ತಡೆಯುವುತ್ತದೆ.
ಸಾಮಾನ್ಯ ಶೀತ ವಿರುದ್ಧ ಹೋರಾಡುವುದು
ಜೀರಿಗೆಯಲ್ಲಿ ಇರುವಂತಹ ಕೆಲವೊಂದು ಸಾರಭೂತ ಎಣ್ಣೆಗಳು ವೈರಲ್ ಸೋಂಕಿನಿಂದಾಗಿ ಉಂಟಾಗುವ ಸಾಮಾನ್ಯ ಶೀತದಿಂದ ಕಾಪಾಡುವುದು. ಜೀರಿಗೆಯಲ್ಲಿ ಇರುವ ವಿಟಮಿನ್ ಸಿ ಪ್ರತಿರೋಧಕ ವ್ಯವಸ್ಥೆ ಬಲಪಡಿಸಲು ತುಂಬಾ ಪರಿಣಾಮಕಾರಿ ಮನೆಮದ್ದು ಆಗಿದೆ.
ಅಗತ್ಯವಿರುವ ಪದಾರ್ಥಗಳು
- 2 ಚಿಕ್ಕ ಚಮಚ ಜೀರಿಗೆ
- 1 ಕಪ್ ನೀರು
ತಯಾರಿಸುವ ವಿಧಾನ–*ಎರಡು ಚಿಕ್ಕ ಚಮಚ ಜೀರಿಗೆ ಬೀಜವನ್ನು ರಾತ್ರಿಯಿಡೀ ಒಂದು ಕಪ್ ನೀರಿನಲ್ಲಿ ನೆನೆಸಿಡಿ.
*ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಮಣ್ಣಿನ ಹಳದಿ ಬಣ್ಣಕ್ಕೆ ತಿರುಗಿರುವ ಈ ನೀರನ್ನು ಸೇವಿಸಿ
ಜೀರಿಗೆ, ನೀರು ಮತ್ತು ನಿಂಬೆ ಪಾನೀಯ ವಿಧಾನ
- ಅಗತ್ಯವಿರುವ ಪದಾರ್ಥಗಳು
- 1 ಚಿಕ್ಕ ಚಮಚ ಜೀರಿಗೆ
- ಅರ್ಧ ಲಿಂಬೆ
- 1 ಕಪ್ ನೀರು
ತಯಾರಿಸುವ ವಿಧಾನ
ಎರಡು ಚಿಕ್ಕ ಚಮಚ ಜೀರಿಗೆಯನ್ನು ಒಂದು ಕಪ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ.ಬೆಳಿಗ್ಗೆ, ನೀರನ್ನು ಸೋಸಿ ಈ ನೀರಿಗೆ ಅರ್ಧ ಲಿಂಬೆಯ ರಸವನ್ನು ಹಿಂಡಿ ಬೆರೆಸಿ.ಚೆನ್ನಾಗಿ ಬೆರೆಸಿ ಬೆಳಗ್ಗಿನ ಪ್ರಥಮ ಆಹಾರವಾಗಿ ಕುಡಿಯಿರಿ.ನಿಂಬೆ ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ ಮತ್ತು ದೇಹದಿಂದ ವಿಷವನ್ನು ಹೊರಹಾಕುವ ಆಂಟಿ ಆಕ್ಸಿಡೆಂಟ್ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ, ತನ್ಮೂಲಕ ಹೆಚ್ಚುವರಿ ಪ್ರಯೋಜನವನ್ನು ಪಡೆಯಬಹುದು.