ಬಾಳೆ ದಿಂಡು ಯಾವೆಲ್ಲಾ ರೋಗಗಳಿಗೆ ರಾಮಬಾಣ ಗೊತ್ತೇ!

Written by Anand raj

Published on:

ಬಾಳೆ ದಿಂಡಿನಿಂದ ಕೂಡ ಅರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗುವುದರಿಂದ ಬಾಳೆಯ ಉತ್ಪನ್ನಗಳು ಹೆಚ್ಚು ಉಪಯುಕ್ತವಾಗಿದೆ.ಕೆಲವೊಮ್ಮೆ ಮಳೆ ಗಾಳಿಗೆ ಬಾಳೆ ಮರ ಮುರಿದು ಬೀಳುತ್ತದೆ.ಇಂತಹ ಸಂದರ್ಭದಲ್ಲಿ ಅದನ್ನು ವ್ಯರ್ಥ ಮಾಡಬೇಡಿ.ಏಕೆಂದರೆ ಬಾಳೆಯ ಪ್ರತಿಯೊಂದು ಭಾಗವು ಉಪಯುಕ್ತವಾಗಿದೆ.ಬಾಳೆ ದಿಂಡು ಅನೇಕ ಪ್ರಯೋಜನಗಳನ್ನು ನೀಡುತ್ತದೆ.ಇದನ್ನು ಪಲ್ಯ ಕೋಸಂಬರಿ ಚೆಟ್ನಿ ರೂಪದಲ್ಲಿ ಸೇವಿಸಬಹುದು.ವರ್ಷದಲ್ಲಿ ಎರಡು ಬಾರಿ ಬಾಳೆ ದಿಂಡು ಸೇವನೆ ಮಾಡಬೇಕು.

ದೇಹದಲ್ಲಿ ಜೀರ್ಣ ಕ್ರಿಯೆ ಉತ್ತಮವಾಗಬೇಕು ಎಂದರೆ ನರಿನಾಂಶ ಇರುವ ಆಹಾರಗಳು ಹೆಚ್ಚು ಸಹಾಯ ಮಾಡುತ್ತವೆ.ಬಾಳೆ ದಿಂಡು ಉಪಯೋಗದಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ನರಿನಾಂಶ ಸಿಗುತ್ತದೆ.ಇದು ಹೊಟ್ಟೆ ಉಬ್ಬರದ ಸಮಸ್ಸೆ ನೀವಾರಿಸುತ್ತದೆ.ಇದರಲ್ಲಿ ಇರುವ ನರಿನಾಂಶ ಹೊಟ್ಟೆಯಲ್ಲಿ ಇರುವ ಅನುಪಯುಕ್ತ ವಸ್ತುಗಳನ್ನು ಕಲ್ಮಶಗಳನ್ನು ಹೊರಹಾಕಲು ನೇರವಾಗುತ್ತದೆ.

ಕೆಲವೊಮ್ಮೆ ಜಂಕ್ ಫುಡ್ ಗಳನ್ನು ಸೇವಿಸಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.ಇಂತಹ ಸಮಯದಲ್ಲಿ ಬಾಳೆ ದಿಂಡು ಉಪಯೋಗ ಮಾಡಿ.ಜೀರ್ಣ ಅಗಾದ ಪದಾರ್ಥಗಳನ್ನು ದೇಹದಿಂದ ಇದು ಹೊರ ಹೋಗುವಂತೆ ಮಾಡುತ್ತದೆ.ಅಷ್ಟೇ ಅಲ್ಲದೆ ಸಾಕ್ರಾಮಿಕ ರೋಗದ ಭೀತಿ ಮತ್ತು ಮಳೆಗಾಲ ಹತ್ತಿರದಲ್ಲಿ ಇರುವ ಕಾರಣ ಶೀತ ಜ್ವರದ ಭಯ ಇದ್ದೆ ಇರುತ್ತದೆ.ಇದರಿಂದ ಪರಾಗಲು ದೇಹವನ್ನು ಸದೃಢಗೊಳಿಸಬೇಕು.ರೋಗ ನಿರೋಧಕ ಶಕ್ತಿಯು ಉತ್ತಮವಾಗಿ ಇದ್ದರೆ ರೋಗದ ಭಯದಿಂದ ಮುಕ್ತವಾಗಿರಬಹುದು.ಇದಕ್ಕೆ ಬಾಳೆ ದಿಂಡು ಸಹಾಯ ಮಾಡುತ್ತದೆ.ಮಕ್ಕಳಿಗೂ ಕೂಡ ಇದು ಉತ್ತಮವಾಗಿದೆ.

ಇನ್ನು ಬಾಳೆ ದಿಂಡಿನ ರಸ ಕುಡಿಯಬಹುದು.ದಿನಕ್ಕೆ ಒಂದು ಬಾರಿ ಹತ್ತು ದಿನಗಳ ಕಾಲ ಕುಡಿದರೆ ಇದು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಬಲ ಗೊಳಿಸುತ್ತದೆ. ಬಾಳೆ ದಿಂಡು ಹೆಚ್ಚು ಫೈಬರ್ ಮತ್ತು ನೀರಿನಂಶ ಹೊಂದಿರುವ ಕಾರಣ ಮೂತ್ರ ಪಿಂಡದ ಕಲ್ಲುಗಳ ನಿವಾರಣೆಗೆ ಉತ್ತಮ ಮದ್ದಗಿದೆ.

Related Post

Leave a Comment