ನೆಲ್ಲಿಕಾಯಿಯನ್ನು ಔಷಧಿಗಳಲ್ಲಿ ಬಳಸಲಾಗುತ್ತದೆ ಮತ್ತು ಆಯುರ್ವೇದದಲ್ಲಿ ಮಹತ್ವವನ್ನು ಪಡೆದಿದೆ. ನೆಲ್ಲಿಕಾಯಿ ನಾಲಿಗೆಗೆ ಕೂಡ ರುಚಿಯಾಗಿರುತ್ತದೆ ಮತ್ತು ಅರೋಗ್ಯಕ್ಕೂ ಕೂಡ ಹಿತವಾಗಿ ಇರುತ್ತದೆ. ನಿಯಮಿತವಾಗಿ ನೆಲ್ಲಿಕಾಯಿ ರಸವನ್ನು ಸೇವನೆ ಮಾಡುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ ಹಾಗೂ ಇದರಲ್ಲಿ ಇರುವಂತಹ ವಿಟಮಿನ್ ಸಿ ಕಣ್ಣಿನ ಸ್ನಾಯುಗಳನ್ನು ಬಲಪಡಿಸುವುದರ ಜೊತೆಗೆ ಕಣ್ಣಿನ ದೃಷ್ಟಿಯನ್ನು ಕೂಡ ಉತ್ತಮಗೊಳಿಸುತ್ತದೆ.
ನೆಲ್ಲಿಕಾಯಿ ಕೂದಲಿಗೂ ಕೂಡ ಬಹಳ ಒಳ್ಳೆಯದು. ಈಗಿರುವ ಒತ್ತಡ ಪರಿಸ್ಥಿತಿ ನಿರಂತರ ದುಡಿಮೆ ಆಹಾರ ಪದ್ಧತಿಯಲ್ಲಿ ಏರುಪೇರು,ಪೌಷ್ಟಿಕ ಅಂಶದ ಕೊರತೆಯಿಂದ ದೇಹ ನಿಶಕ್ತಿಯಿಂದ ಕೂಡಿರುತ್ತದೆ. ಒಮ್ಮೆ ಕೂದಲಿನ ಸೌಂದರ್ಯ ಹಾಳಾದರೆ ನೈಜ ರೂಪಕ್ಕೆ ತರುವುದು ತುಂಬಾ ಕಷ್ಟ. ಕೂದಲಿನ ಬೆಳವಣಿಗೆಗೆ ಮುಖ್ಯ ಕಾರಣವಾಗಿರುವ ಜೀವಕೋಶಗಳನ್ನು ಈ ನೆಲ್ಲಿಕಾಯಿ ವದಗಿಸುತ್ತದೆ. ನಿಯಮಿತವಾಗಿ ನೆಲ್ಲಿಕಾಯಿ ಸೇವನೆ ಮಾಡುವುದರಿಂದ ನಿಮ್ಮ ಕೂದಲು ಧನಾತ್ಮಕವಾಗಿ ಬೆಳವಣಿಗೆ ಆಗುತ್ತದೆ ಹಾಗೂ ಕೂದಲು ಉದುರುವುದು ಕೂಡ ತಡೆಗಟ್ಟುತ್ತದೆ.
ಇನ್ನು ಸಕ್ಕರೆ ಕಾಯಿಲೆ ಇದ್ದವರು ಕೂಡ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದು ಬಹಳ ಒಳ್ಳೆಯದು. ನಿಯಮಿತವಾಗಿ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಇನ್ಸೂಲಿನ್ ಮಟ್ಟವು ನಿಯಮಿತಗೊಳಿಸುವಲ್ಲಿ ಸಹಕರಿಸುತ್ತದೆ. ನೆಲ್ಲಿಕಾಯಿ ಸೇವನೆ ಮಾಡುವುದರಿಂದ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ ಮತ್ತು ಹೃದಯಗಳ ನರಗಳ ಆರೋಗ್ಯವನ್ನು ಹೆಚ್ಚಿಸಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಬರುವುದನ್ನು ತಡೆಯುತ್ತದೆ.ಬೆಟ್ಟದ ನೆಲ್ಲಿಕಾಯಿ ರಸವನ್ನು ಮತ್ತು ಜೇನುತುಪ್ಪ ಬೆರೆಸಿ ಸೇವನೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ. ಈ ರೀತಿ ಮಾಡಿದರೆ ಮುಖದಲ್ಲಿ ಮೊಡವೆ ಕೂಡ ಕಂಡು ಬರುವುದಿಲ್ಲ ಹಾಗೂ ಮುಖದಲ್ಲಿ ಕಾಂತಿ ಕೂಡ ಹೆಚ್ಚಾಗುತ್ತದೆ.