ಅಕ್ಕಿ ನೀರು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸೌಂದರ್ಯ ವರ್ಧಕ ಅಂದರೆ ತಪ್ಪಾಗದು. ಹಲವು ಸೆಲಿಬ್ರಿಟಿಗಳು, ಸೋಶಿಯಲ್ ಮೀಡಿಯಾ ಇನ್ಪ್ಲೂಯನ್ಸರ್ ಈ ಅಕ್ಕಿ ತೊಳೆದ ನೀರಿನ ಪ್ರಯೋಜನಗಳನ್ನು ವಿಡಿಯೋ ಮಾಡಿ ಹಾಕುತ್ತಿದ್ದಾರೆ. ತೊಳೆದ ಅಕ್ಕಿ ನೀರು (Rice Water) ನಿಮ್ಮ ತ್ವಚೆಯ, ಕೂದಲಿನ ಸೌಂದರ್ಯಕ್ಕೆ ಹೆಚ್ಚು ಪರಿಣಾಮಕಾರಿ ಎಂತೆಲ್ಲಾ ಹೇಳುತ್ತಿದ್ದಾರೆ. ಆದರೆ ಹೇಗೆ ಉತ್ತಮವಾಗಿದೆ ಅಂತ ಮಾತ್ರ ಹೇಳಿಲ್ಲ. ಹಾಗಾದರೆ ಅಕ್ಕಿ ನೀರು ನಿಮ್ಮ ಕೂದಲ ಬೆಳವಣಿಗೆಗೆ ಹೇಗೆ ಸಹಕಾರಿ ಅಂತ ನಾವು ಹೇಳ್ತೀವಿ ಕೇಳಿ. ನಿಮ್ಮ ಕೂದಲ ಅಥವಾ ಚರ್ಮದ ಆರೈಕೆಯಲ್ಲಿ ಅಕ್ಕಿ ನೆನೆಸಿದ ನೀರನ್ನು ಬಳಸಿ ನೋಡಿ ಉತ್ತಮ ಫಲಿತಾಂಶ (Good Results) ಸಿಗುತ್ತದೆ. ಹೀಗೆ ಪ್ರತಿದಿನ ಅಕ್ಕಿ ತೊಳೆದ ನೀರನ್ನು ನಿಮ್ಮ ದಿನಚರಿಯಲ್ಲಿ ಬಳಸುತ್ತಾ ಬಂದರೆ ನಿಮ್ಮ ಕೂದಲು ನೀಳವಾಗಿ, ಸದೃಢವಾಗಿ ಬೆಳೆಯುತ್ತದೆ ಎಂದು ನಂಬಲಾಗಿದೆ.
ಅಕ್ಕಿ ನೀರು ಕೂದಲಿನ ಬೆಳವಣಿಗೆಗೆ ಸಹಕಾರಿಯೇ?
ಪ್ರಾಚೀನ ಏಷ್ಯಾದ ಸಮುದಾಯಗಳು ಸೇರಿದಂತೆ ಶತಮಾನಗಳ ಹಿಂದಿನ ದಾಖಲೆಗಳ ಪ್ರಕಾರ ಜನರು ಅಕ್ಕಿ ನೀರಿನಿಂದ ತಮ್ಮ ಕೂದಲನ್ನು ತೊಳೆಯುತ್ತಿದ್ದರು. ನಿಮ್ಮ ಕೂದಲ ಬೆಳವಣಿಗೆ ಹೆಚ್ಚಾಗಿ ಅನುವಂಶಿಕವಾಗಿದ್ದು, ಅದರಂತೆ ಬೆಳೆಯುತ್ತದೆ. ಅದಾಗ್ಯೂ ಕೆಲವು ಕಾರಣಗಳಿಂದ ಕೂದಲು ಉದುರುತ್ತಿದ್ದರೆ ಇಂತಹ ಮನೆ ಮದ್ದುಗಳನ್ನು ನೀವು ಪ್ರಯತ್ನಿಸಬಹುದು. ಅಕ್ಕಿ ನೀರು ಒಂದು ಪರಿಣಾಮಕಾರಿ ಮದ್ದಾಗಿದ್ದು, ಕೂದಲ ಪೋಷಣೆಗೆ ಸಹಕರಿಸುತ್ತದೆ.
ಅಕ್ಕಿ ನೀರು ಅನೇಕ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ಗಳನ್ನು ಹೊಂದಿದೆ, ಇದು ಕೂದಲಿನ ಆರೋಗ್ಯ ಮತ್ತು ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಅಕ್ಕಿ ನೀರನ್ನು ನಿಯಮಿತವಾಗಿ ಬಳಸುವುದರಿಂದ ನೆತ್ತಿ ಮತ್ತು ಕೂದಲಿಗೆ ಜೀವಸತ್ವಗಳು ಮತ್ತು ಖನಿಜಗಳ ಪೂರೈಕೆಯನ್ನು ಒದಗಿಸುತ್ತದೆ. ಇದು ನಿಮ್ಮ ಒತ್ತಡ, ಕೂದಲಿನ ಬಣ್ಣ, ಹಾನಿಗೊಳಗಾದ ಕೂದಲ ಕಿರುಚೀಲಗಳನ್ನು ಮತ್ತೆ ಪುನಃಸ್ಥಾಪಿಸುತ್ತದೆ ಮತ್ತು ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲಿಗೆ ಶಾಂಪೂ ಹಚ್ಚಿದ ನಂತರ ನಿಮ್ಮ ಕೂದಲನ್ನು ತೊಳೆಯಲು ಅಕ್ಕಿ ನೀರನ್ನು ಬಳಸಿ. ಕೂದಲು ಕಾಂತಿಯುತವಾಗಿ ಮೃದುವಾಗುತ್ತದೆ.
ಅಕ್ಕಿ ನೀರು ಮಾಡುವುದು ಹೇಗೆ?
- ಕಪ್ ಅಕ್ಕಿಯನ್ನು ತೊಳೆದು ಒಣಗಿಸಿ.
- ತೊಳೆದ ಅಕ್ಕಿಯನ್ನು 1 ಕಪ್ ನೀರಿನೊಂದಿಗೆ ಜಾರ್ ಅಥವಾ ಇತರ ಗಾಳಿಯಾಡದ ಪಾತ್ರೆಯಲ್ಲಿ ಸೇರಿಸಿ. 24 ಗಂಟೆಗಳ ಕಾಲ ರೆಫ್ರಿಜರೇಟರ್ನಲ್ಲಿ ಇಡಿ.
- ನಂತರ ಅಕ್ಕಿಯಲ್ಲಿರುವ ನೀರನ್ನು ಬಸಿದು ಒಂದೆಡೆ ಸಂಗ್ರಹಿಸಿ.
- ಸ್ಪ್ರೇ ಬಾಟಲ್ ಅಥವಾ ಬೇರೆ ಯಾವುದಾದರು ಬಾಟಲಿಯಲ್ಲಿ ಅಕ್ಕಿ, ನೀರನ್ನು ಸಂಗ್ರಹಿಸಿ.
- ಹೀಗೆ ಸಂಗ್ರಹಿಸಿದ ನೀರನ್ನು ನೀವು ತಕ್ಷಣವೇ ಬಳಸಬಹುದು ಅಥವಾ ಸುಮಾರು 3 ದಿನಗಳ ಕಾಲ ಫ್ರಿಜ್ನಲ್ಲಿಟ್ಟು ಬಳಸಬಹುದು.
- ಒಣ ನೆತ್ತಿ ಮತ್ತು ಕೂದಲಿಗೆ ಈ ನೀರನ್ನು ಹಚ್ಚಿಕೊಳ್ಳಿ
- 20-30 ನಿಮಿಷಗಳ ಕಾಲ ಬಿಟ್ಟು ತೊಳೆಯಬಹುದು.
ಕೂದಲಿನ ಬೆಳವಣಿಗೆಗೆ ಅಕ್ಕಿ ನೀರನ್ನು ಹೇಗೆ ಬಳಸುವುದು?
ಅಕ್ಕಿಯ ಹುದುಗುವಿಕೆಯ (ಫರ್ಮೆಂಟೇಶನ್) ಪ್ರಕ್ರಿಯೆಯು ಪಿಟೆರಾವನ್ನು ಬಿಡುಗಡೆ ಮಾಡುತ್ತದೆ, ಇದು ಅಕ್ಕಿಯಿಂದ ಎಲ್ಲಾ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳನ್ನು (Minerals) ಒಳಗೊಂಡಿರುವ ಪ್ರಕ್ರಿಯೆಯ ಉಪ ಉತ್ಪನ್ನವಾಗಿದೆ. ತಿಂಗಳಿಗೆ 2, 3 ಬಾರಿ ಅಥವಾ ಕೂದಲು ಡ್ರೈ ಎನಿಸಿದಾಗ ಬಳಸಬಹುದು.
ಕೂದಲಿನ ಬೆಳವಣಿಗೆಗೆ ನೀವು ಸ್ವಂತ ತಯಾರಿಸಿದ ಅಕ್ಕಿ ನೀರನ್ನು ಬಳಸಲು ನಿಮಗೆ ಇಷ್ಟವಿಲ್ಲದಿದ್ದರೆ, ಮಾರುಕಟ್ಟೆಯಲ್ಲಿ (Markets) ವಿವಿಧ ಅಕ್ಕಿ ನೀರಿನಿಂದ ತಯಾರಾದ ಉತ್ಪನ್ನಗಳು ಇದ್ದು, ನೀವು ಅದನ್ನು ಬಳಸಬಹುದು. ವಿಯೊರಿ ಬ್ಯೂಟಿ, ಅಕ್ಕಿಯಿಂದ ಮಾಡಿದ ಶಾಂಪೂ , ಮಿಯೆಲ್ ಆರ್ಗಾನಿಕ್ಸ್ ಅಕ್ಕಿ ನೀರಿನ ಸಂಗ್ರಹವನ್ನು ಹೊಂದಿದೆ, ಶೈನ್ ಮಿಸ್ಟ್ ಸೇರಿ ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.