ದೈನಂದಿನ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೇ ಅಪಾರ ಪ್ರಮಾಣದಲ್ಲಿ ಅರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದರೆ ತರಕಾರಿ ಬೀಜಗಳು ಬಹಳ ಪ್ರಯೋಜನವನ್ನು ನೀಡುತ್ತವೇ. ಬೇಸಿಗೆಯಲ್ಲಿ ಎಲ್ಲರಿಗು ಇಷ್ಟ ಆಗುವ ಹಣ್ಣು ಎಂದರೆ ಅದು ಕಲ್ಲಂಗಡಿ ಹಣ್ಣು.ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಹಾಗೂ ಬೇಸಿಗೆಯಲ್ಲಿ ದೇಹಕ್ಕೆ ತಂಪನ್ನು ನೀಡುವ ಈ ಹಣ್ಣಿಗೆ ಯಾವ ಪರಿಚಯದ ಅಗತ್ಯ ಇರುವುದಿಲ್ಲ.ಇದು ಸಾಕಷ್ಟು ಪೌಷ್ಟಿಕ ಸತ್ವಗಳನ್ನು ಮತ್ತು ವಿಟಮಿನ್ ಗಳನ್ನು ಸಮೃದ್ಧವಾಗಿ ಒಳಗೊಂಡಿರುವ ಈ ಹಣ್ಣುಗಳಲ್ಲಿ ಬಹಳಷ್ಟು ಬೀಜವನ್ನು ಹೊಂದಿರುತ್ತದೆ.
ಅತಿಹೆಚ್ಚಿನ ನೀರಿನಂಶ ಇರುವ ಹಣ್ಣು ಎಂದರೆ ಕಲ್ಲಂಗಡಿ ಹಣ್ಣು. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ1, ಬಿ6, ವಿಟಮಿನ್ ಸಿ ಪೊಟ್ಯಾಶಿಯಂ ಹಾಗೂ ಮೆಗ್ನೀಷಿಯಂ ಇವೇ. ಸಾಮಾನ್ಯವಾಗಿ ಎಲ್ಲಾರು ಹಣ್ಣನ್ನು ಸೇವಿಸಿ ಬೀಜವನ್ನು ಎಸೆಯುತ್ತಾರೆ.ಅದರೆ ಕಲ್ಲಂಗಡಿ ಹಣ್ಣಿನ ಬೀಜದಲ್ಲಿ ಆರೋಗ್ಯ ಅಂಶಗಳಿವೆ.ಈ ಬೀಜದಲ್ಲಿ ಇರುವ ಉತ್ತಮ ಪ್ರಮಾಣದ ಮೆಗ್ನೀಷಿಯಂ ಹೃದಯವು ಸಹಜವಾಗಿ ಕಾರ್ಯ ನಿರ್ವಹಿಸಲು ನೇರವಾಗುತ್ತದೆ.
ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಗಳು ವೃದ್ಯಪ್ಯಾವನ್ನು ನಿದಾನವಾಗಿಸುತ್ತದೆ. ಮುಖದ ಮೇಲೆ ಇರುವ ಮೊಡವೆಗಳನ್ನು ನೀವಾರಿಸಲು ಈ ಬೀಜದಿಂದ ತೆಗೆದ ಎಣ್ಣೆ ಉತ್ತಮ. ಅಷ್ಟೇ ಅಲ್ಲದೇ ಚರ್ಮದ ಸೂಕ್ಷ್ಮ ರಂದ್ರದಲ್ಲಿ ಇರುವ ಕೊಳೆ ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ಈ ಎಣ್ಣೆಯಲ್ಲಿ ಇರುವ ಪ್ರೊಟೀನ್ ಮತ್ತು ಅಮೈನೋ ಆಮ್ಲಗಳು ಕೂದಲಿನ ಬುಡವನ್ನು ದೃಢಗೊಳಿಸುತ್ತವೆ.
ಈ ಬೀಜವನ್ನು ಉರಿದು ಪುಡಿ ಮಾಡಿ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಮೇಲನಿನ್ ಎನ್ನುವ ಬಣ್ಣದ ದ್ರವ್ಯವನ್ನು ಹೆಚ್ಚಿಸಿ ಕೂದಲ ಕಾಂತಿಯನ್ನು ಹೆಚ್ಚಿಸುತ್ತದೆ. ಇನ್ನು ಮುಕ್ಕಾಲು ಕಪ್ಪು ಬಿಸಿ ನೀರಿಗೆ ಈ ಕಲ್ಲಂಗಡಿ ಬೀಜದ ಪುಡಿಯನ್ನು ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ಸೇವನೆ ಮಾಡುವುದರಿಂದ ದೇಹದಲ್ಲಿ ಉರಿಯುತಾ ಮತ್ತು ಬಾವು ಕಡಿಮೆ ಆಗುತ್ತದೆ.
ಕಲ್ಲಂಗಡಿ ಹಣ್ಣು ದೇಹವನ್ನು ಹೆಚ್ಚು ಹೈಡ್ರಾಟ್ ಮಾಡುವುದಲ್ಲದೆ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಈ ಹಣ್ಣು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಸಹಾಯಮಾಡುತ್ತದೆ. ಕಲ್ಲಂಗಡಿ ಹಣ್ಣನ್ನು ತುಂಡುಗಳಾಗಿ ಕತ್ತರಿಸಿ ಅಗತ್ಯವಿದ್ದರೆ ಉಪ್ಪು ಪೆಪ್ಪರ್ ಪೌಡರ್ ಹಾಕಿಕೊಂಡು 2:00 ಅಥವಾ 4:00 ಗಂಟೆ ನಡುವೆ ಸೇವಿಸಿ.