ಈ 5 ಜನರ ಮನೆಯಲ್ಲಿ ಊಟ ಮಾಡಬಾರದು!

Written by Anand raj

Published on:

ಗರುಡ ಪುರಾಣದಲ್ಲಿ ಉತ್ತಮ ಜೀವನವನ್ನು ನಡೆಸಲು ಯಾವೆಲ್ಲಾ ವಿಷಯಗಳು ಅತ್ಯಗತ್ಯವೆಂದು ಹೇಳುವುದರ ಜೊತೆಗೆ ಪಾಪ ಕಾರ್ಯಗಳ ಬಗ್ಗೆಯೂ ಹೇಳಲಾಗಿದೆ. ಗರುಡ ಪುರಾಣದಲ್ಲಿ ಹೇಳಿರುವಂತೆ ನಾವು ಇಂತವರ ಮನೆಯಲ್ಲಿ ಊಟ ಮಾಡುವುದರಿಂದ ಅಥವಾ ಆಹಾರವನ್ನು ಸೇವಿಸುವುದರಿಂದ ಪಾಪದ ಪಾಲದಾರರಾಗುತ್ತೇವೆ.

ಗರುಡ ಪುರಾಣವು ಸನಾತನ ಧರ್ಮದಲ್ಲಿ ಬಹಳ ಮುಖ್ಯವಾದ ಪುರಾಣವಾಗಿದೆ ಮತ್ತು ಹಿಂದೂ ಧರ್ಮದ ಯಾವುದೇ ಕುಟುಂಬದಲ್ಲಿ ವ್ಯಕ್ತಿಯೋರ್ವ ಮರಣ ಹೊಂದಿದರೆ ಆ ಮನೆಯಲ್ಲಿ 12 ದಿನಗಳ ಕಾಲ ಗರುಡ ಪುರಾಣವನ್ನು ಪಠಿಸಲಾಗುತ್ತದೆ. ಗರುಡ ಪುರಾಣದಲ್ಲಿ, ಮಾನವನ ಜೀವನದಿಂದ ಸಾವಿನವರೆಗೆ ಸಂಬಂಧಿಸಿದ ಅನೇಕ ಪ್ರಮುಖ ರಹಸ್ಯಗಳನ್ನು ಬಹಿರಂಗಪಡಿಸಲಾಗಿದೆ. ಇದಲ್ಲದೇ ಈ ಪುರಾಣದಲ್ಲಿ ಉತ್ತಮ ಜೀವನ ನಡೆಸಲು ಏನೆಲ್ಲಾ ವಸ್ತುಗಳು ಬೇಕು ಎಂಬ ಮಾಹಿತಿಯನ್ನೂ ನೀಡಲಾಗಿದೆ. ಅಷ್ಟು ಮಾತ್ರವಲ್ಲ, ಕೆಲವೊಬ್ಬರ ಮನೆಯಲ್ಲೂ ಆಹಾರ ಸೇವಿಸಬಾರದು ಎಂಬುದನ್ನು ಹೇಳಲಾಗಿದೆ. ಅಲ್ಲದೆ, ನೀವು ಯಾವ ರೀತಿಯ ವ್ಯಕ್ತಿಗಳಿಂದ ದೂರವಿರಬೇಕು..? ಗರುಡ ಪುರಾಣದ ಪ್ರಕಾರ ಎಂತವರ ಮನೆಯಲ್ಲಿ ನಾವು ತಪ್ಪಿಯೂ ಆಹಾರವನ್ನು ಸೇವಿಸಬಾರದು..?

ಕಳ್ಳ ಅಥವಾ ಅಪರಾಧಿ

ಗರುಡ ಪುರಾಣದಲ್ಲಿ ಕಳ್ಳ ಅಥವಾ ಅಪರಾಧಿಗಳ ಮನೆಯಲ್ಲಿ ಆಹಾರವನ್ನು ಸೇವಿಸುವುದರಿಂದ ನೀವು ಸಹ ಆ ವ್ಯಕ್ತಿಯ ಪಾಪದಲ್ಲಿ ಪಾಲುದಾರರಾಗಬಹುದು ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ನಿಮ್ಮ ಆಲೋಚನೆಗಳೂ ಅವರಂತೆ ಕಲುಷಿತಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಅಂತಹವರ ಮನೆಯಲ್ಲಿ ಆಹಾರ ಸೇವಿಸುವುದನ್ನು ತಪ್ಪಿಸಬೇಕು.

​​ಬಡ್ಡಿಗಾರನ ಮನೆಯಲ್ಲಿ

ತಪ್ಪಾಗಿ ಗಳಿಸಿದ ಹಣವು ಯಾವಾಗಲೂ ಅಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಪರರ ಅಸಹಾಯಕತೆಯ ಲಾಭ ಪಡೆದು ದುಡಿದವರ ಮನೆಯಲ್ಲಿ ಅಪ್ಪಿತಪ್ಪಿಯೂ ಅನ್ನ ತಿನ್ನಬೇಡಿ. ಇದರಿಂದ ಆ ಪರರ ಮನೆಯ ಕಣ್ಣೀರು, ಶಾಪ ನಿಮ್ಮನ್ನು ಕೂಡ ಸುತ್ತುವರಿಯುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ. ಬಡ್ಡಿಗಾರನ ದುಡ್ಡು ನ್ಯಾಯಯುತವಾಗಿ ಸಂಪಾದಿಸಿದ ದುಡ್ಡಲ್ಲ. ಬದಲಾಗಿ, ಇತರರಿಗೆ ನೋವನ್ನು ನೀಡಿ ಸಂಪಾದಿಸಿದ ದುಡ್ಡು.

​​ಅಮಲು ಪದಾರ್ಥಗಳನ್ನು ಮಾರುವವರ ಮನೆಯಲ್ಲಿ

ಅಮಲು ಪದಾರ್ಥ ಮಾರುವ ವ್ಯಕ್ತಿಯಿಂದ ಎಷ್ಟೋ ಜನರ ಜೀವನ ಹಾಳಾಗಿದೆ. ಅಷ್ಟೇ ಅಲ್ಲ, ಇದು ಅವರ ಕುಟುಂಬಕ್ಕೆ ತೊಂದರೆಗಳನ್ನು ಉಂಟುಮಾಡುತ್ತದೆ. ಗರುಡ ಪುರಾಣದ ಪ್ರಕಾರ ಅಂತಹವರ ಮನೆಗೆ ಕಾಲಿಟ್ಟರೂ ಪಾಪ ನಮ್ಮನ್ನು ಹಿಂಬಾಲಿಸುತ್ತದೆ. ಅಂತಹವರ ಮನೆಯಲ್ಲಿ ಬಡಿಸುವ ಆಹಾರ ನಿಮ್ಮನ್ನು ಪಾಪದ ಸಂಗಾತಿಯನ್ನಾಗಿ ಮಾಡಬಹುದು. ಅಮಲು ಪದಾರ್ಥ ಮಾರುವವರು ಹಣಕ್ಕಾಗಿ ದೊಡ್ಡವರಿಂದ ಚಿಕ್ಕ ಮಕ್ಕಳವರೆಗೂ ವಯಸ್ಸಿನ ಅಂತರವಿಲ್ಲದೆ ಮಾರಾಟ ಮಾಡುತ್ತಾರೆ. ಇದು ಅವರ ಭವಿಷ್ಯಕ್ಕೆ ಮಾರಕ. ಅಂತಹ ಅಮಲು ಪದಾರ್ಥಗಳನ್ನು ಮಾರಾಟ ಮಾಡುವವರ ಮನೆಯಲ್ಲಿ ನಾವು ಎಂದಿಗೂ ಊಟವನ್ನು ಮಾಡಬಾರದು.

ಅನಾರೋಗ್ಯದ ವ್ಯಕ್ತಿ
ವ್ಯಕ್ತಿಯ ಮನೆಯಲ್ಲಿ ದೀರ್ಘಕಾಲದಿಂದ ರೋಗ ಹರಡುತ್ತಿದ್ದರೆ ಅಂತಹವರ ಮನೆಗೆ ಹೋಗುವುದನ್ನು ತಪ್ಪಿಸಿ. ಇಂಥವರ ಮನೆಗೆ ಹೋದರೆ ನಿಮಗೂ ಕೂಡ ಅನಾರೋಗ್ಯದ ಸೋಂಕುಗಳು ಹರಡಬಹುದು ಎಂದು ಗರುಡ ಪುರಾಣ ಹೇಳುತ್ತದೆ. ಇದರಿಂದ ನಿಮ್ಮ ಮನೆಯಲ್ಲೂ ರೋಗರುಜಿನಗಳ ಭೀತಿ ಎದುರಾಗಬಹುದು. ಅವರ ಮನೆಯಂತೆ ನಿಮ್ಮ ಮನೆಯಲ್ಲೂ ರೋಗ ರುಜಿನಗಳು ಹೆಚ್ಚಾಗಲು ಪ್ರಾರಂಭವಾಗಬಹುದು.

ಪಾವಿತ್ರ್ಯವಿಲ್ಲದ ಮಹಿಳೆ

ಗರುಡ ಪುರಾಣದ ಪ್ರಕಾರ ಚಾರಿತ್ರ್ಯವಿಲ್ಲದ ಹೆಣ್ಣಿನ ಮನೆಯಲ್ಲೂ ತಪ್ಪದೆ ಆಹಾರ ಸೇವಿಸಬಾರದು. ಕೆಟ್ಟ ಸ್ವಭಾವದವರ ಮನೆಗೆ ಕಾಲಿಡುವುದರಿಂದ ಸಮಾಜ ನಿಮ್ಮನ್ನು ಕೂಡ ಅದೇ ದೃಷ್ಟಿಯಿಂದ ನೋಡಲು ಆರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಪ್ಪಿತಪ್ಪಿಯೂ ಅಂಥಹ ಮಹಿಳೆಯ ಮನೆಯಿಂದ ನೀವು ಆಹಾರವನ್ನು ತೆಗೆದುಕೊಳ್ಳಬಾರದು. ಹಾಗೂ ಕೆಲವೊಮ್ಮೆ ಅವರ ಕೆಟ್ಟ ಗುಣಗಳು ಕೂಡ ನಿಮಗೆ ಬರುವ ಸಾಧ್ಯತೆಗಳಿರುತ್ತವೆ.

ಮುಂಗೋಪದ ವ್ಯಕ್ತಿ

ನಾವು ತಿನ್ನುವ ಆಹಾರದಂತೆ ನಮ್ಮ ಮನಸ್ಸಿನ ವರ್ತನೆಯೂ ಇರುತ್ತದೆ ಎನ್ನುವ ಹಿತನುಡಿಯನ್ನು ನೀವು ಸಾಕಷ್ಟು ಬಾರಿ ಇತರರ ಬಾಯಿಂದ ಕೇಳಿರಬಹುದು. ಆಹಾರ ಸೇವಿಸುವವನ ಮನಸ್ಸು ಕೂಡ ಹಾಗೆ ಆಗುತ್ತದೆ ಹಾಗಾಗಿ ಅತಿಯಾದ ಕೋಪಿಷ್ಟನ ಮನೆಯಲ್ಲೂ ಕೂಡ ನೀವು ಆಹಾರವನ್ನು ಸೇವಿಸಬಾರದು.

Related Post

Leave a Comment